Amruthadhaare ; ಗೌತಮ್ ಎದುರಲ್ಲಿಯೇ ಇರುವ ತಾಯಿ? ಅಮ್ಮನ ಗುರುತು ಮಗನಿಗೆ ಸಿಗದಾಯಿತೇ?

By ಪೂರ್ವ

ಸುಧಾಗೆ ಗೌತಮ್ ದಿವಾನ್ ಎಂದರೆ ಯಾರು ಗೊತ್ತಿಲ್ಲ. ಅಂತಹದರಲ್ಲಿ ಆಕೆಗೆ ಯಾರೋ ಗೌತಮ್ ದಿವಾನ್ ಮನೆಯಲ್ಲಿ ಕೆಲಸ ಪಡೆಯಲು ಹುನ್ನಾರವನ್ನು ರೂಪಿಸುತ್ತಾರೆ .ಸುಧಾಗೆ ತನ್ನ ತಾಯಿ ಎಂದರೆ ಬಹಳ ಪ್ರೀತಿ. ತನ್ನ ತಾಯಿಯ ಜೊತೆ ಒಂದು ದಿನವೂ ಖುಷಿಯಲ್ಲಿ ಮಾತಾನಾಡಿದ ದಿನಗಳೇ ಇಲ್ಲ. ಯಾಕೆಂದರೆ ಆಕೆಯ ಅಣ್ಣ ಕಳೆದು ಹೋದ ಬಳಿಕ ತಾಯಿ ಮೌನಿ ಆಗಿ ಬಿಡುತ್ತಾರೆ. ತಾಯಿಗೆ ಅಣ್ಣನೆ ಪ್ರಪಂಚ ಆಗಿರುತ್ತಾನೆ.ಆದರೆ ಅಣ್ಣ ಕಳೆದು ಹೋದ ಬಳಿಕ ಆಕೆಯ ತಾಯಿ ಯಾರ ಜೊತೆಯೂ ಮಾತನಾಡದೆ ಮಲಗಿದಲ್ಲೇ ಇರುತ್ತಾರೆ.

ಆದರೆ ಗುಂಡು ಎಂದು ಕನವರಿಸುತ್ತಾ ಇರುತ್ತಾಳೆ.ಸುಧಾಗೆ ಗುಂಡು ಅಂದರೆ ಯಾರು ಎನ್ನುವುದು ಗೊತ್ತಿಲ್ಲ. ತನ್ನ ತಾಯಿ ಬಳಿ ಗುಂಡು ಎಂದು ನೀನು ಯಾರನ್ನು ಕರೆಯುತ್ತಿಯಮ್ಮಾ ಎಂದು ಕೇಳಿದರು ಆಕೆಯ ಕಡೆಯಿಂದ ಉತ್ತರ ಇರುವುದಿಲ್ಲ. ಇನ್ನು ಸುಧಾ ಇರುವ ಏರಿಯಾದ ಬಳಿಗೆ ಗೌತಮ್ ದಿವಾನ್
ಬಂದಾಗ ಆತನಿಗೆ ಸುಸ್ತು ಆಗಿ ಅಲ್ಲಿಯೇ ಕಾರನ್ನು ಸೈಡ್ ಹಾಕುತ್ತಾನೆ. ಆತನಿಗೆ ಗೊತ್ತಿಲ್ಲದ ಹಾಗೆ ಪ್ರಜ್ಞೆ ತಪ್ಪಿ ಕಾರಿನ ಹಾರ್ನ್ ಬಳಿ ಬೀಳುತ್ತಾನೆ.

kannada-serial-amruthadhare-written-08th-november

ಕಾರಿನ ಹಾರ್ನ್ ಜೋರಾಗಿ ಹೊಡೆದುಕೊಳ್ಳುವುದನ್ನು ಕೇಳಿಸಿಕೊಂಡ ಸುಧಾ ಮಾತ್ರ ಗೌತಮ್ ದಿವಾನ್ ನ ಎಬ್ಬಿಸಲು ಪ್ರಯತ್ನ ಪಡುತ್ತಾಳೆ. ಕೊನೆಗೆ ಒಬ್ಬ ಹುಡುಗನ ಸಹಾಯ ತೆಗೆದುಕೊಂಡು ಗೌತಮ್ ನನ್ನು ಸರ್ ಸರ್ ಎಂದು ಕರೆಯುತ್ತಾಳೆ. ಕೊನೆಗೆ ಆಕೆ ನೀರನ್ನು ಗೌತಮ್ ಮುಖದ ಮೇಲೆ ಚುಮುಕಿಸುತ್ತಾಳೆ. ಗೌತಮ್ ಗೆ ಆಕೆಯನ್ನು ನೋಡಿ ಪದಗಳೇ ಬರುವುದಿಲ್ಲ. ಆಕೆ ಗೌತಮ್ ಆಪತ್ಕಾಲಕ್ಕೆ ಬಂದ ರಕ್ಷಕಿ ಎಂದು ಹೇಳಿದರೆ ತಪ್ಪಾಗದು. ಕೊನೆಗೆ ಗೌತಮ್ ಎಚ್ಚೆತ್ತುಕೊಂಡು ಮನೆಗೆ ಹೋಗಲು ರೆಡಿ ಆಗುತ್ತಾನೆ.ಆದರೆ ಸುಧಾ ಮಾತ್ರ ಸರ್ ಈ ಸ್ಥಿತಿಯಲ್ಲಿ ನೀವು ಮನೆಗೆ ಹೋಗುವುದು ಬೇಡ ಸ್ವಲ್ಪ ಇದ್ದು ಸುಧಾರಿಸಿ ಹೋಗಿ ಎಂದು ಮನೆಗೆ ಕರೆದುಕೊಂಡು ಬರುತ್ತಾಳೆ.

ತಂಗಿಯ ಮನೆಗೆ ಬಂದ ಗೌತಮ್ ದಿವಾನ್

ಇತ್ತ ಗೌತಮ್‌ಗೆ ತನ್ನ ತಾಯಿ ಹಾಗೂ ತಂಗಿಯ ಮನೆಗೆ ಬಂದಿದ್ದೇನೆ ಎನ್ನುವುದು ತಿಳಿಯುವುದಿಲ್ಲ. ಸುಧಾ ಗೌತಮ್ ಗೆ ತಿನ್ನಲು ತಿಂಡಿ ಕೊಡುತ್ತಾಳೆ. ಇದೆಲ್ಲವನ್ನೂ ನೋಡಿದ ಗೌತಮ್ ಯಾಕಮ್ಮ ನಿನಗೆ ತೊಂದರೆ ಎಂದು ಹೇಳಿದಾಗ ನೀವು ತುಂಬಾ ಸುಸ್ತಾಗಿದ್ದೀರಾ? ಏನಾಯಿತು ಎಂದು ಕೇಳುತ್ತಾಳೆ. ಆದ್ರೆ ಅದಕ್ಕೆ ಗೌತಮ್ ಉತ್ತರಿಸಲು ಹಿಂದೇಟು ಹಾಕುತ್ತಾನೆ. ಆ ನಂತರ ಆತನಿಗೆ ತಿನ್ನಲು ಚಿತ್ರಾನ್ನ ಕೊಡುತ್ತಾಳೆ. ಅದನ್ನು ತಿಂದು ಗೌತಮ್ ಕೊಂಚ ಸುಧಾರಿಸಿಕೊಳ್ಳುತ್ತಾನೆ

ಸುಧಾಗೆ ಕೃತಜ್ಞತೆ ಸಲ್ಲಿಸಿದ ಗೌತಮ್

ಗೌತಮ್ ಗೆ ಆತನ ತಂಗಿಯ ಮನೆಗೆ ತಾನು ಬಂದಿದ್ದೇನೆ ಎನ್ನುವುದು ಅರಿವಾಗದೆ ಕಷ್ಟ ಕಾಲದಲ್ಲಿ ಸಹಾಯ ಮಾಡಿದ ಸುಧಾಗೆ ಕೃತಜ್ಞತೆಯನ್ನು ಕೂಡ ಸಲ್ಲಿಸಿ ಅಲ್ಲಿಂದ ಹೋಗುತ್ತಾನೆ. ತನ್ನ ತಾಯಿಯ ಬಗ್ಗೆ ಬಹಳ ಕೊರಗುತ್ತಿರುವ ಗೌತಮ್ ಗೆ ಇದೀಗ ಅಮ್ಮ ಬದುಕಿದ್ದಾರೆ ಎನ್ನುವ ಸತ್ಯ ಖುಷಿ ನೀಡಿದೆ. ತನ್ನ ತಾಯಿಯನ್ನು ನೋಡುವ ತವಕ ಬಹಳಷ್ಟು ಹೆಚ್ಚಾಗುತ್ತಿದೆ. ಆದರೆ ಇದೆಲ್ಲ ವಿಚಾರವನ್ನು ಶಕುಂತಲಾ ದೇವಿಯಿಂದ ಗೌತಮ್ ಮುಚ್ಚಿಡುತ್ತಾನೆ. ತನ್ನ ತಾಯಿಯನ್ನು ಹುಡುಕುತ್ತಿರುವ ವಿಚಾರ ಆಕೆಗೆ ತಿಳಿದರೆ ಎಲ್ಲಿ ಶಕುಂತಲಾ ಅಮ್ಮನಿಗೆ ನೋವಾಗಿ ಬಿಡುತ್ತದೋ ಎನ್ನುವ ಸಂಕಟದಲ್ಲಿ ಇರುತ್ತಾನೆ. ತನ್ನ ತಾಯಿಯ ಹುಡುಕಾಟದ ಬಗ್ಗೆ ಭೂಮಿಕಾ ಗೆ ಹಾಗೂ ಆನಂದ್ ಗೆ ಮಾತ್ರ ಹೇಳಿರುವ ಗೌತಮ್ ವಿಷಯ ಬೇರೆ ಯಾರಿಗೂ ಗೊತ್ತಾಗದಂತೆ ನೋಡಿಕೊಂಡಿದ್ದಾನೆ.

ಸುಧಾಳ ಬಗ್ಗೆ ಗುಣಗಾನ ಮಾಡಿದ ಅಪರ್ಣಾ

ಇತ್ತ ಆನಂದ್ ಹಾಗೂ ಅಪರ್ಣಾ ಸುಧಾ ಬಗ್ಗೆ ಹೆಚ್ಚು ಹೆಚ್ಚು ತಿಳಿದುಕೊಳ್ಳಲು ಶುರು ಮಾಡುತ್ತಾರೆ. ಅವರಿಬ್ಬರಿಗೂ ಸುಧಾ ಗುಣ ಬಹಳ ಇಷ್ಟ ಆಗುತ್ತೆ. ಆಕೆ ಮಾಡುವ ಅಡುಗೆಯ ಬಗ್ಗೆಯೂ ಅಪರ್ಣಾ ಹಾಗೂ ಆನಂದ್ ಹಾಡಿ ಹೊಗಳುತ್ತಾರೆ. ಇನ್ನು ಪಾರ್ಥ ಕಾರಿನ ಬ್ರೇಕ್ ಫೇಲ್ ಆಗಿ ಆತನಿಗೆ ಅಪಾಯ ಆಗುವ ಎಲ್ಲ ಸಂದಿಗ್ಧ ಸ್ಥಿತಿ ಎದುರಾಗಿತ್ತು. ಆದರೆ ಇದಕ್ಕೆಲ್ಲ ಕಾರಣ ಜೈ ದೇವ್ . ಜೈ ದೇವ್ ಗೆ ಅದೆಷ್ಟೇ ಸಲ ಬುದ್ದಿ ಹೇಳಿದರು ಆತ ಮಾತ್ರ ಯಾರ ಮಾತನ್ನೂ ಕೇಳಲು ರೆಡಿ ಇರುವುದಿಲ್ಲ. ಆತ ಮಾಡಿದ್ದೆ ಸರಿ ಎನ್ನುವ ಹಾಗೆ ಮಾತನಾಡುತ್ತಾನೆ. ಆದರೆ ಇದೀಗ ಜೈ ದೇವ್ ಪಾರ್ಥ ಪ್ರಾಣ ತೆಗೆಯಲು ಹುನ್ನಾರ ನಡೆಸಿದ್ದಾನೆ. ಕಾರು ರಿಪೇರಿ ಮಾಡುವಾತ ಪಾರ್ಥ ಬಳಿ ನಿಮ್ಮ ಕಾರನ್ನು ಯಾರು ಬೇಕಂತಲೇ ಬ್ರೇಕ್ ಫೇಲ್ ಮಾಡಿಸಿದ್ದಾರೆ ಇದರಿಂದಾಗಿ ನೀವು ಅಪಾಯಕ್ಕೆ ತುತ್ತಾಗುತ್ತಿದ್ದಿದ್ದು ಜಾಗ್ರತೆಯಾಗಿ ಇರಿ ಎಂದು ಹೇಳುತ್ತಾನೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X