Amrutadhare ; ಭೂಮಿಕಾ ಇಲ್ಲದೆ ಚಡಪಡಿಸುತ್ತಿರುವ ಗೌತಮ್,ಡುಮ್ಮಾ ಸರ್ ಮಾತಿಗೆ ಕಳೆದುಹೋದ ಭೂಮಿಕಾ..!

By ಪೂರ್ವ

ಭೂಮಿಕಾ ಮನೆಯಲ್ಲಿ ಇಲ್ಲದೆ ಚಡಪಡಿಸುತ್ತಿದ್ದಾನೆ ಗೌತಮ್. ಗೌತಮ್ ಗೆ ಭೂಮಿಕಾ ಎಂದರೆ ಆತನ ಪ್ರಾಣ. ಅಷ್ಟು ತನ್ನ ಹೆಂಡತಿಯನ್ನು ಪ್ರೀತಿ ಮಾಡುತ್ತಾನೆ. ಇವರಿಬ್ಬರ ಪ್ರೀತಿ ನೋಡಿದ ಅಭಿಮಾನಿಗಳು ಬಹಳ ಖುಷಿ ಪಟ್ಟಿದ್ದಾರೆ. ಅದ್ಬುತ ವಾದ ಜೋಡಿ ಎಂದು ಬಣ್ಣಿಸುತ್ತಿದ್ಧಾರೆ. ಇದೀಗ ಭೂಮಿಕಾ ಳನ್ನು ತವರು ಮನೆಗೆ ಕಳುಹಿಸಿ ಕೊಡಬೇಕು ಎಂದು ಆಕೆಯ ತಾಯಿ ಮಂದಾಕಿನಿ ಅವರು ತನ್ನ ಅಳಿಯ ಗೌತಮ್ ಗೆ ಕರೆ ಮಾಡಿ ನನ್ನ ಮಗಳು ವರ್ಷದ 11 ತಿಂಗಳು ನಿಮ್ಮ ಜೊತೆಯೇ ಇರುತ್ತಾರೆ.ವರ್ಷದಲ್ಲಿ ಒಂದು ತಿಂಗಳು ನಮ್ಮ ಜೊತೆ ಇರಲಿ ಆಕೆ ಎಂದು ಕೇಳಿಕೊಂಡಿದ್ದಾರೆ.

ಆದರೆ ಭೂಮಿಕಾ ಗೆ ತವರು ಮನೆಗೆ ಹೋಗಲು ಮನಸ್ಸಿಲ್ಲ . ತನ್ನ ಗಂಡನ ಜೊತೆಗೆ ಹಾಯಾಗಿರುವ ಭೂಮಿಕಾ ಗೆ ಗೌತಮ್ ನನ್ನು ಬಿಟ್ಟಿರಲು ಬಹಳ ಕಷ್ಟ ಪಡಬೇಕಾಗುತ್ತೆ. ಇತ್ತ ಗೌತಮ್ ರಾತ್ರಿ ಅದು ಹೇಗಾದರೂ ನಿದ್ದೆ ಹೋಗಿದ್ದಾನೆ. ಆದರೆ ಬೆಳಗ್ಗೆ ಎದ್ದು ನೋಡಿದಾಗ ಭೂಮಿಕಾ ಇಲ್ಲ ಅಲ್ವಾ, ನನ್ನ ಬಟ್ಟೆ ನನ್ನ ವಾಚ್ ಎಂದೆಲ್ಲ ಹುಡುಕಾಡಲು ಪ್ರಾರಂಭ ಮಾಡಿದ್ದಾನೆ. ಭೂಮಿಕಾ ಇರುತ್ತಿದ್ದರೆ ಎಷ್ಟು ಚೆನ್ನಾಗಿ ಇತ್ತು. ನನ್ನ ಬಟ್ಟೆಯಿಂದ ಹಿಡಿದು ಊಟ ಮಾಡುವವರೆಗೆ ಅವರು ನೋಡಿಕೊಳ್ಳುತ್ತಿದ್ದರು ಆದರೆ ಇದೀಗ ನನ್ನ ಯಾವ ವಸ್ತುಗಳು ಎಲ್ಲಿವೆ ಎನ್ನುವ ವಿಚಾರವೇ ನನಗೆ ತಿಳಿದಿಲ್ಲ ಅದಕ್ಕೆ ಎಂದು ಬೇಸರ ಪಟ್ಟುಕೊಳ್ಳುತ್ತಾನೆ

kannada-serial-amruthadhare-written-10th-july

ಇನ್ನೂ ಆ ಕೂಡಲೇ ಭೂಮಿಕಾ ಗೆ ಕರೆ ಮಾಡಿದ ಗೌತಮ್, ಭೂಮಿಕಾ ಅವರೇ ಏನು ಮಾಡುತ್ತಿದ್ದೀರಾ ಎಂದಾಗ ನಾನು ತರಕಾರಿ ಕಟ್ ಮಾಡುತ್ತಾ ಇದ್ದೆ ಎಂದು ನಗುತ್ತಾ ಹೇಳುತ್ತಾಳೆ. ಹಾಗೆಯೇ ಗೌತಮ್ ರೀ ಭೂಮಿಕಾ ಅವರೇ ನೀವು ಇಲ್ಲಿ ಇರುತ್ತಿದ್ದರೆ ಎಷ್ಟು ಚೆನ್ನಾಗಿ ಇರುತ್ತಿತ್ತು ಅಲ್ವಾ. ಎಲ್ಲರೂ ಖುಷಿಯಿಂದ ಇರಬಹುದಾಗಿತ್ತು ಎಂದು ಹೇಳುತ್ತಾನೆ

ಭೂಮಿಕಾಳನ್ನು ಮಿಸ್ ಮಾಡಿಕೊಳ್ಳುತ್ತಿರುವ ಗೌತಮ್

ನನಗೆ ನೀವಿಲ್ಲದೆ ಇಲ್ಲಿ ದಿನ ಕಳೆಯುವುದೇ ಬಹಳ ಕಷ್ಟವಾಗಿ ಬಿಟ್ಟಿದೆ ಎಂದು ಮನದಲ್ಲಿರುವ ದುಃಖವನ್ನು ಹೇಳಿಕೊಳ್ಳುತ್ತಾನೆ. ಇದನ್ನು ಕೇಳಿದ ಭೂಮಿಕಾ ಗೆ ಮಾತ್ರ ಜೋರಾಗಿಯೇ ನಗು ಬರುತ್ತಿರುತ್ತದೆ. ಕೊನೆಗೆ ಗೌತಮ್ ಮಿಸ್ ಯು ಭೂಮಿಕಾ ಎಂದು ಹೇಳಿ ಕರೆ ಕಟ್ ಮಾಡುತ್ತಾನೆ. ಭೂಮಿಕಾ ಗೆ ಸ್ವರ್ಗವೇ ಕೈಗೆ ಎಟಕಿದ ಅನುಭವ ಆಗುತ್ತದೆ. ಭೂಮಿಕಾ ಗೆ ಬಹಳ ಬೇಜಾರು ಖುಷಿ ಆಗುತ್ತದೆ .

kannada-serial-amruthadhare-written-10th-july

ನೋವಿನಲ್ಲಿರುವ ಪಾರ್ಥ

ನಾನು ಇಲ್ಲದೆ ಗೌತಮ್ ಅವರು ಅದೆಷ್ಟು ಪರದಾಡಿ ಇರಬಹುದು ಎಂದು ಭೂಮಿಕಾ ತನ್ನೊಳಗೆ ಬೇಸರವನ್ನು ಪಡುತ್ತಿರುತ್ತಾಳೆ. ಇನ್ನೂ ಪಾರ್ಥ ಮಾತ್ರ ಬಹಳ ನೋವಿನಲ್ಲಿ ಇರುತ್ತಾನೆ. ಆತನಿಗೆ ಅಪ್ಪಿಯೆ ಎಲ್ಲಾ. ಭೂಮಿಕಾ ಹಾಗೂ ಗೌತಮ್ ಮದುವೆ ಆದ ಬಳಿಕ ಪಾರ್ಥ ಮೇಲೆ ಅಪ್ಪಿಗೆ ಪ್ರೀತಿ ಆಗುತ್ತದೆ. ಆದರೆ ಅದನ್ನು ಯಾರ ಜೊತೆಯೂ ಹೇಳದೆ ಮುಚ್ಚಿಡುತ್ತಾರೆ. ಇಬ್ಬರು ಕದ್ದುಮುಚ್ಚಿ ಭೇಟಿ ಆಗುತ್ತಿರುವುದನ್ನು ಭೂಮಿಕಾ ಕಣ್ಣಾರೆ ನೋಡುತ್ತಾಳೆ. ಆಕೆ ಪಾರ್ಥ ಬಳಿ ಬಂದು ವಾರ್ನಿಂಗ್ ಮಾಡುತ್ತಾಳೆ

ಅಪ್ಪಿ ಪಾರ್ಥನನ್ನ ಒಂದು ಮಾಡ್ತಾಳಾ ಭೂಮಿಕಾ..?

ಪಾರ್ಥ ನೀವಿಬ್ಬರೂ ಪ್ರೀತಿ ಮಾಡಿದ್ದು ಓಕೆ ನನಗೆ ನಿಮ್ಮ ಇಬ್ಬರ ಪ್ರೀತಿಯ ಬಗ್ಗೆ ಬಹಳ ರೆಸ್ಪೆಕ್ಟ್ ಇದೆ. ಆದರೆ ನೀವಿಬ್ಬರೂ ಮೈ ಮರೆತು ಇರುವುದು ಇದೆಯಲ್ಲ ಇದು ಸರಿಯಲ್ಲ. ಎಲ್ಲರಿಗೂ ಪ್ರೀತಿಯಾಗುತ್ತದೆ. ಪ್ರೀತಿಯಾದ ಬಳಿಕ ಇಬ್ಬರೂ ಮನೆಯವರ ಒಪ್ಪಿಗೆ ಪಡೆದು ಮದುವೆ ಆಗಬೇಕು ಎಂದು ಹೇಳುತ್ತಾಳೆ. ಹಾಗೆಯೇ ನೀವಿಬ್ಬರೂ ಹೆಚ್ಚಾಗಿ ಮೀಟ್ ಮಾಡಿ ಮಾತನಾಡಬಾರದು ಎಂದು ತಾಕೀತು ಮಾಡುತ್ತಾಳೆ. ಆದರೆ ಅದನ್ನು ಮೀರಿ ಭೇಟಿ ಆಗಿ ತಪ್ಪು ಮಾಡಿದ್ದಾನೆ ಪಾರ್ಥ. ಅದರ ಪ್ರತಿಫಲವಾಗಿ ಇದೀಗ ನರಕ ಅನುಭವಿಸುತ್ತಿದ್ದಾನೆ. ಅತ್ತಿಗೆಯ ಬಳಿ ಈ ವಿಚಾರ ಹೇಳಿಕೊಳ್ಳದೆ ಬಹಳ ನೋವಲ್ಲಿದ್ದಾನೆ ಪಾರ್ಥ. ಇನ್ನೂ ಅಪ್ಪಿ ಗೆ ಈಗಾಗಲೇ ಜೈ ದೇವ್ ಜೊತೆ ಮದುವೆ ನಿಗದಿ ಆಗಿತ್ತು. ಆದರೆ ಜೈ ದೇವ್ ಮೋಸದಾಟ ಸದಾಶಿವ ಕಣ್ಣೆದುರಲ್ಲಿ ಇರಬೇಕಾದರೆ ಆತನ ತಮ್ಮ ಪಾರ್ಥ ಗೆ ಹೇಗೆ ತನ್ನ ಮಗಳನ್ನು ಮದುವೆ ಮಾಡಿಕೊಡಲೀ ಆತ ಏನಾದರು ತಪ್ಪು ಕೆಲಸ ಮಾಡಿದ್ದಾನಾ ಎಂದು ಆಲೋಚನೆ ಮಾಡುತ್ತಿರುತ್ತಾರೆ. ಆದರೆ ಅಪ್ಪಿಗೆ ತನ್ನ ತಂದೆಯ ಬಳಿ ಮಾತನಾಡಿ ಮದುವೆಗೆ ಒಪ್ಪಿಸಬಹುದು ಎನ್ನುವ ಕನಸು ಮಾತ್ರ ಸದಾಶಿವ ಮಾತಿನಿಂದ ನುಚ್ಚು ನೂರಾಗಿದೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X