Amruthadhare ; ಸುಧಾಗೆ ಸಣ್ಣ ಉಡುಗೊರೆ ಕೊಡಲು ನಿರ್ಧರಿಸಿದ ಭೂಮಿಕಾ, ಗೌತಮ್ ಗೆ ಇನ್ನಾದರೂ ಅಮ್ಮ ಕಾಣಿಸ್ತಾಳಾ..?
ಮನೆಯಲ್ಲಿ ಗೌತಮ್ ಕಾಣಿಸಿಕೊಳ್ಳದೆ ಇರುವುದನ್ನು ನೋಡಿ ಆನಂದ್ ಹಾಗೂ ಭೂಮಿಕಾ ಇವರಿಬ್ಬರೂ ಬಹಳ ಗಾಬರಿಗೊಳ್ಳುತ್ತಾಳೆ.ತನ್ನ ಗಂಡ ಯಾವತ್ತೂ ಇಷ್ಟು ಲೇಟ್ ಆಗಿ ಮನೆಗೆ ಬರುತ್ತಿರಲಿಲ್ಲ ಅಂತಹದರಲ್ಲಿ ಇವತ್ತು ಇಷ್ಟು ರಾತ್ರಿ ಆದರೂ ಮನೆಗೆ ಬಂದಿಲ್ಲ ಎನ್ನುವ ಆತಂಕದಲ್ಲಿ ಇರುತ್ತಾಳೆ.ಅಷ್ಟರಲ್ಲಿ ಗೌತಮ್ ಮೆತ್ತಗೆ ನಡೆದುಕೊಂಡು ಮನೆಯ ಬಳಿಗೆ ಬರುತ್ತಾನೆ.
ಗೌತಮ್‌ನ ನೋಡಿದ ಕೂಡ ಭೂಮಿಕಾ ಓಡಿ ಬಂದು ಗೌತಮ್ ನನ್ನು ಬಿಗಿದಪ್ಪಿಕೊಂಡು ಅಳುತ್ತಾಳೆ.ಎಲ್ಲಿ ಹೋಗಿದ್ದೀರಿ ನೀವು ನಿಮಗಾಗಿ ನಾನು ಅದೆಷ್ಟು ಹುಡುಕಾಡಿದೆ ನಿಮ್ಮ ಫೋನ್ ಕೂಡ ನಾನು ಟ್ರೈ ಮಾಡಿದೆ.ಆದರೆ ಸ್ವಿಚ್ ಆಫ್ ಎಂದೆ ಬರುತ್ತಿದೆ.ಯಾಕೆ ಹೀಗೆ ಮಾಡಿದಿರಿ ಎಂದು ಜೋರಾಗಿ ಅಳುತ್ತಾಳೆ.ಆಗ ಗೌತಮ್ ನಡೆದ ವಿಚಾರವನ್ನೆಲ್ಲ ಭೂಮಿಕ ಬಳಿ ಹೇಳುತ್ತಾನೆ.ಭೂಮಿಕಾಗೆ ಬಹಳ ಬೇಸರವಾಗುತ್ತದೆ.ದೇವರ ಹಾಗೆ ಬಂದ ಆಕೆ ನಿಮ್ಮನ್ನು ರಕ್ಷಣೆ ಮಾಡಿದಳು ಇಲ್ಲವಾದರೆ ಅದೆಷ್ಟು ಕಷ್ಟ ಆಗುತ್ತಿತ್ತು ಎಂದು ಅಳುತ್ತಾಳೆ.ಅಷ್ಟರಲ್ಲಿ ಆನಂದ್ ಗೌತಮ್ ದಿವಾನ್ ಗೆ ಕರೆ ಮಾಡುತ್ತಾನೆ.

ಲೋ ಗೆಳೆಯ ನೀನು ಎಲ್ಲಿದ್ದಿಯಾ ಎಂದು ಆನಂದ್ ಎಂದಾಗ ಗೌತಮ ನಾನು ಮನೆಯಲ್ಲಿಯೇ ಇದ್ದೇನೆ ಎಂದು ಹೇಳುತ್ತಾನೆ. ಇದನ್ನು ಕೇಳಿದ ಆನಂದ್ ಸ್ವಲ್ಪ ನಿಟ್ಟುಸಿರು ಬಿಡುತ್ತಾನೆ. ಬಳಿಕ ತನ್ನ ಗೆಳೆಯನಿಗೆ ಬಹಳ ಬಯ್ಯುತ್ತಾನೆ. ಯಾಕೆ ಹೀಗೆಲ್ಲ ಮಾಡುತ್ತಿದ್ದಿಯಾ..? ನಿನಗೆ ಏನಾಯಿತು ಎಂದು ಗೌತಮ್ ಆನಂದ್ ಬಳಿ ಕೇಳಿದಾಗ ಗೆಳೆಯ ನಮಗೆ ನೀನು ಕಾಣಿಸದೆ ಇರುವುದನ್ನು ಕಂಡು ಅದೆಷ್ಟು ಬೇಸರ ಆಗಿದ ಗೊತ್ತಾ ಇದೀಗ ಮನಸ್ಸಿಗೆ ಸಮಾಧಾನ ಆಯಿತು ಎಂದು ಹೇಳಿ ಕುಶಲೋಪರಿ ಮಾತನಾಡಿ ಫೋನ್ ಇಡುತ್ತಾನೆ.
ಗೌತಮ್ ನೋಡಿ ಖುಷಿಪಟ್ಟ ಭೂಮಿಕಾ
ಇನ್ನು ಗೌತಮ್ ಗೆ ಭೂಮಿಕಾ ಏನು ಬೇಕು ಬೇಡ ಇವೆಲ್ಲವನ್ನೂ ಅರಿತುಕೊಂಡು ಇರುತ್ತಾಳೆ. ಆಕೆಗೆ ಗೌತಮ್ ಎಂದರೆ ಬಹಳ ಇಷ್ಟ. ಅಂತಹದರಲ್ಲಿ ಗೌತಮ್ ಗೆ ಏನೇ ತೊಂದರೆ ಆದರೂ ಭೂಮಿಕಾ ಇರುತ್ತಾಳೆ. ಇನ್ನೂ ಗೌತಮ್ ಗೆ ಯಾರು ಕಷ್ಟದ ಸಮಯದಲ್ಲಿ ಬಂದು ಸಹಾಯ ಮಾಡಿದರೋ ಅವರಿಗೆ ಸಣ್ಣ ಮಟ್ಟದ ಕಾಣಿಕೆಯನ್ನು ಕೊಡಬೇಕು ಎಂದು ಭೂಮಿಕಾ ಅಂದುಕೊಳ್ಳುತ್ತಾರೆ. ಅವರ ಸಣ್ಣ ಮಗುವಿಗೆ ಹಾಗೆಯೇ ಅವರಿಗೆ ಒಂದು ಸಣ್ಣ ಕಾಣಿಕೆಯನ್ನು ಭೂಮಿಕಾ ಗೌತಮ್ ಕೈಯಲ್ಲಿ ಕೊಡುತ್ತಾಳೆ. ಇದನ್ನು ಅವರಿಗೆ ಕೊಟ್ಟು ನಿಮ್ಮ ಋಣದ ಭಾರವನ್ನು ಕಮ್ಮಿ ಮಾಡಿಸಿ. ಇದು ಅವರಿಗೆ ನಾವು ಕೊಟ್ಟ ಸಣ್ಣ ಉಡುಗೊರೆ ಅಷ್ಟೇ ಎಂದು ಹೇಳುತ್ತಾಳೆ . ಇದನ್ನು ನೋಡಿ ಗೌತಮ್ ಗೆ ಫುಲ್ ಖುಷಿ ಆಗುತ್ತದೆ.
ಸುಧಾ ಮನೆಗೆ ಆಗಮಿಸಿದ ಗೌತಮ್
ಭೂಮಿಕಾ ಮಾತ್ರ ಮೆತ್ತಗೆ ತನ್ನ ಗಂಡನ ಬಳಿಗೆ ಬಂದು ಇದನ್ನು ಅವರಿಗೆ ತೆಗೆದುಕೊಂಡು ಹೋಗಿ ಎಂದು ಹೇಳುತ್ತಾಳೆ. ಗೌತಮ್ ಅದೆಲ್ಲವನ್ನೂ ತೆಗೆದುಕೊಂಡು ಸುಧಾ ಮನೆಗೆ ಹೋಗುತ್ತಾನೆ. ಆಗ ಆಕೆಯ ಮನೆಯಲ್ಲಿ ಯಾರು ಇಲ್ಲದೆ ಇರುವುದನ್ನು ಕಂಡು ಗೌತಮ್ ಹುಡುಕಾಡುತ್ತಾನೆ. ಕೊನೆಗೆ ಆ ಮನೆಯಿಂದ ಗುಂಡು, ಗುಂಡು ಎನ್ನುವ ಶಬ್ಧ ಕೇಳುತ್ತಿತ್ತು ವಿನಃ ಬೇರೆ ಯಾವುದೇ ರೆಸ್ಪಾನ್ಸ್ ಬರುತ್ತಿರಲಿಲ್ಲ. ಮುಂದೇನು ಕಾದು ನೋಡಬೇಕಿದೆ


Click it and Unblock the Notifications











