Amruthadhaare ; ಬದುಕಿರೋ ಹೆತ್ತಮ್ಮನಿಗೆ ಗೌತಮ್ ತಿಥಿ ಮಾಡುವಾಗ್ಲೇ ಮನೆಗೆ ಬಂದ 'ಭಾಗ್ಯ' ಲಕ್ಷ್ಮಿ..!
ಗೌತಮ್ ತಾಯಿ ಬಹಳ ದೊಡ್ಡ ಗಂಡಾಂತರದಿಂದ ಪಾರಾಗಿದ್ದಾರೆ. ತಾಯಿಗೆ ಹುಷಾರಿಲ್ಲ ಎಂದು ಮನೆಯ ಹಿಂಭಾಗದಿಂದ ಹೊರ ಬಂದು ಆಸ್ಪತ್ರೆಗೆ ಹೋಗಿದ್ದೆ ತಡ ಸುಧಾ ಮನೆ ಕಿಡಿಗೇಡಿಗಳಿಂದ ಸುಟ್ಟು ಕರಕಲಾಗಿ ಹೋಗಿದೆ. ಸುಧಾಗೆ ಮನೆಯಲ್ಲಿ ಇರಲು ನೆಲೆಯು ಇಲ್ಲದೆ ಪರದಾಡುವಂತಹ ಸ್ಥಿತಿ ಬಂದೊದಗಿದೆ ಎಂದು ಹೇಳಿದರೆ ತಪ್ಪಾಗದು. ಇದೀಗ ಸುಧಾ ತಾಯಿ ಅನಾರೋಗ್ಯದಿಂದ ಗುಣಮುಖರಾಗಿದ್ದಾರೆ. ಸುಧಾ ತಾಯಿ ಹುಷಾರಾದ ಖುಷಿಯಲ್ಲಿದ್ದರೆ ಇತ್ತ ಕಡೆ ಆಸ್ಪತ್ರೆಗೆ ದುಡ್ಡು ಕಟ್ಟಲು ದುಡ್ಡು ಹೊಂದಿಸಲಾಗದ ಸ್ಥಿತಿಯಲ್ಲಿ ಇರುತ್ತಾಳೆ.
ಕೈಯಲ್ಲಿ ಇರುವುದು ಕೇವಲ 40000 ಆದರೆ ಅಲ್ಲಿ ಕಟ್ಟಬೇಕಾದ ಹಣ 44000. ಆದರೆ ನಾಲಕ್ಕು ಸಾವಿರ ಹಣ ಹೇಗೆ ಹೊಂದಿಸುವುದು ಎಂದು ಯೋಚನೆ ಮಾಡಿದಾಗ ಆಕೆಗೆ ನೆನಪಾಗಿದ್ದು ಒಂದೇ ಹೆಸರು ಅದು ಬೇರೆ ಯಾರದ್ದು ಅಲ್ಲ ಭೂಮಿಕಾ ಅವರದ್ದು. ಭೂಮಿಕಾ ಅತ್ತಿಗೆ ಆಸ್ಪತ್ರೆಗೆ ಖರ್ಚು ಎಷ್ಟು ಹೇಳು ನಾನೇ ಎಲ್ಲಾ ಹಣ ಪೇ ಮಾಡುತ್ತೇನೆ ಎಂದು ಹೇಳಿದ್ದರು ನಾನೇ ಬೇಡ ಅಂದಿದ್ದೆ ಇದೀಗ ಅವರ ಬಳಿ. ಇದೀಗ ಅವರ ಬಳಿ ಹಣ ಕೇಳಬೇಕು ಎಂದು ಭೂಮಿಕಾ ಗೆ ಕರೆ ಮಾಡುತ್ತಾಳೆ.

ಭೂಮಿಕಾ ಗೌತಮ್ ತಾಯಿ ವಿಚಾರಕ್ಕೆ ಬಹಳಷ್ಟು ನೊಂದುಕೊಂಡು ಇರುತ್ತಾಳೆ . ಸುಧಾ ಕಾಲ್ ಮಾಡುತ್ತಿರುವುದನ್ನು ನೋಡಿದ ಭೂಮಿಕಾ ಕೂಡಲೇ ಕರೆ ಸ್ವೀಕಾರ ಮಾಡಿ ಅಮ್ಮ ಹೇಗಿದ್ದಾರೆ ಚೆನ್ನಾಗಿದ್ದಾರ , ಡಿಸ್ಚಾರ್ಜ್ ಗೆ ಹಣ ಕೇಳಲು ಫೋನ್ ಮಾಡಿದ್ಯ ಎಂದು ಕೇಳಿದಾಗ ಸುಧಾ ಗೆ ಎನು ಹೇಳಬೇಕು ತಿಳಿಯದಾಗುತ್ತದೆ. ಕೊನೆಗೆ ಹೌದು ಎಂದು ಹೇಳುತ್ತಾಳೆ 4000 ಕೊಡಿ ಅದನ್ನು ನನ್ನ ಸಂಬಳದಲ್ಲಿ ಕಟ್ ಮಾಡಿಕೊಳ್ಳಿ ಎಂದು ಸುಧಾ ಹೇಳಿದಾಗ ಭೂಮಿಕಾ ಮರು ಮಾತನಾಡದೆ ಹಾಸ್ಪಿಟಲ್ ಹೆಸರು ಯಾವುದು ಎಂದು ಕೇಳಿ ನಾನೇ ಎಲ್ಲಾ ಹಣ ಪೇ ಮಾಡುತ್ತೇನೆ ಎಂದು ಹೇಳಿ ಫೋನ್ ಕಟ್ ಮಾಡುತ್ತಾಳೆ.
ಗೌತಮ್ ಗೆ ಸಮಾಧಾನ ಹೇಳಿದ ಶಕುಂತಲಾ
ಇತ್ತ ಗೌತಮ್ ತನ್ನ ತಾಯಿಯ ನೆನಪಿನಲ್ಲಿ ದಿನ ಕಳೆಯುತ್ತಿದ್ದಾನೆ. ಆತನಿಗೆ ತನ್ನ ತಾಯಿ ಸಿಕ್ಕೆ ಸಿಗುತ್ತಾಳೆ ಎನ್ನುವ ನಂಬಿಕೆ ಇತ್ತು ಆದರೆ ಇದೀಗ ಆ ನಂಬಿಕೆ ಹುಸಿ ಆಗಿರುವುದು ಮಾತ್ರ ಸತ್ಯ. ತಾಯಿ ತಂಗಿ ತಿಥಿ ಮಾಡಬೇಕು ಎಂದು ಗೌತಮ್ ಬಳಿ ಶಕುಂತಲಾ ದೇವಿ ಹೇಳಿದಾಗ ಗೌತಮ್ ಗೆ ಬಹಳಷ್ಟು ನೋವು ಆಗುತ್ತದೆ. ನೋವು ತುಂಬಿದ ಮಾತಿನಲ್ಲೆ ಆಯಿತು ಎನ್ನುವ ಒಪ್ಪಿಗೆಯು ಇತ್ತು. ಭಾಗ್ಯ ತಿಥಿಯನ್ನು ಹೇಗಾದರೂ ಮಾಡಿಸಬೇಕು ಎಂದು ಶಕುಂತಲಾ ದೇವಿ ಅಂದುಕೊಳ್ಳುತ್ತಾಳೆ.
ಗೌತಮ್ ಮನೆಗೆ ಬಂದ ಭಾಗ್ಯ
ಶಕುಂತಲಾ ದೇವಿಗೆ ಭಾಗ್ಯ ಎಂದರೆ ಸ್ವಲ್ಪವೂ ಇಷ್ಟ ಇಲ್ಲ. ಗೌತಮ್ ಗೆ ತಾಯಿ ಸಿಕ್ಕಿ ಬಿಟ್ಟರೆ ಎಲ್ಲಿ ನಮಗೆ ಆಸ್ತಿ ಸಿಗುವುದು ಇಲ್ವೋ ಎನ್ನುವ ಭಯ ಆತನನ್ನು ಕಾಡಿರುವುದು ಮಾತ್ರ ಸತ್ಯ. ಇದೀಗ ಭಾಗ್ಯ ತಿಥಿ ಮಾಡುವ ದಿನವೇ ಭಾಗ್ಯ ಗೌತಮ್ ಮನೆಗೆ ಕಾಲಿಡುವ ಲಕ್ಷಣ ಕಾಣುತ್ತಿದೆ. ಸುಧಾ ಇದ್ದ ಒಂದು ಸೂರನ್ನು ಕಳೆದುಕೊಂಡು ಬಿಟ್ಟಿದ್ದಾಳೆ. ಇದರಿಂದ ಗೌತಮ್ ದಿವಾನ್ ಮನೆಯ ಫಾರ್ಮ್ ಹೌಸ್ ಗೆ ಸುಧಾ ಬರಬೇಕು ಎಂದು ಅಂದುಕೊಳ್ಳುತ್ತಾಳೆ.


Click it and Unblock the Notifications











