Amruthadhaare ; ಆ ಕರೆಗೆ ಬೆಚ್ಚಿ ಬಿದ್ದ ಗೌತಮ್ ದಿವಾನ್, ಅಪಾಯದಿಂದ ಪಾರು ಮಾಡುತ್ತಾಳಾ ಭೂಮಿಕಾ ?

By ಪೂರ್ವ

ಭೂಮಿಕಾ ತನ್ನ ಮಗಳು ಎಂದು ಬೆಳೆದಿದ್ದ ಅಪ್ಪಿ ಇದೀಗ ಭೂಮಿಕಾ ಗೆ ಎದುರು ನಿಂತು ನಾತಾನದುವಷ್ಟರ ಮಟ್ಟಿಗೆ ಬೆಳೆದು ನಿಂತಿರುವಾಗ ಭೂಮಿಕಾ ತಾನೇ ಏನು ಮಾಡಲು ಸಾಧ್ಯ. ಆಕೆ ತಪ್ಪು ಮಾಡಿದಾಗ ಎರಡೂ ಏಟು ಕೆನ್ನೆಗೆ ಹೊಡೆದು ಹಾಗಲ್ಲ ಹೀಗೆ.ನೀನು ಮಾಡುತ್ತಿರುವುದು ಸರಿಯಲ್ಲ. ಇನ್ನೆಂದೂ ಈ ಥರದ ತಪ್ಪು ಮಾಡಬೇಡ ಎಂದು ಬುದ್ದಿ ಹೇಳಬಹುದು. ಆದರೆ ಅಪ್ಪಿ ಗೆ ಆಕೆ ಮಾಡಿದ ತಪ್ಪು ಮನವರಿಕೆ ಆಗುವ ಹಾಗೆಯೇ ಕಾಣಿಸುತ್ತಿಲ್ಲ. ಪಾರ್ಥ ಕೂಡ ಅಪ್ಪಿ ಗೆ ಸಮಾಧಾನ ಮಾಡಲು ಬಂದರೆ ಇನ್ನೂ ಯಾಕೆ ಅಕ್ಕನ ಪರ ಮಾತನಾಡುತ್ತಿಲ್ಲ ಅಂದುಕೊಂಡೆ ಆದರೆ ಈಗ ನೀನು ಮಾತಾನಾಡಿಬಿಟ್ಟೆಯಲ್ಲ ಸಮಾಧಾನ ಆಯಿತಾ ನಿನಗೆ ಎಂದು ಗಂಡನಿಗೆ ಎದುರು ಉತ್ತರ ಕೊಡುತ್ತಾಳೆ.

ಅಪ್ಪಿ ಗೆ ತಾನು ಬೆಳೆದು ಬಂದ ಹಾದಿ ಏನು? ತನ್ನ ತಂದೆ ಅದೆಷ್ಟು ಕಷ್ಟಪಟ್ಟು ನಮ್ಮನ್ನೆಲ್ಲ ಸಾಕಿ ಸಲಹಿದ್ದಾರೆ. ಮಿಡಲ್ ಕ್ಲಾಸ್ ಜೀವನ ಅದೆಷ್ಟು ಕಷ್ಟ ಇರುತ್ತದೆ ಆದರೆ ಅದ್ಯಾವ ಕಷ್ಟವನ್ನು ತನ್ನ ಮಕ್ಕಳಿಗೆ ತೋರಿಸದ ಹಾಗೆ ಸದಾಶಿವ ಮಕ್ಕಳನ್ನು ಬೆಳೆಸಿದ್ದಾರೆ. ಶಿಕ್ಷಕರಾಗಿ ಕಾರ್ಯ ನಿರ್ವಹಿಸಿ ಸದಾಶಿವ ಯಾವತ್ತೂ ಮಕ್ಕಳಿಗೆ ಯಾರನ್ನು ಡಿಪೆಂಡ್ ಆಗಬಾರದು. ಇಂಡಿಪೆಂಡೆಂಟ್ ಆಗಿರಬೇಕು ಎಂದು ಮಾರ್ಗದರ್ಶನ ಮಾಡುತ್ತಿದ್ದರು. ಆದರೆ ಅದೆಲ್ಲ ಮರೆತ ಅಪ್ಪಿ ಶ್ರೀಮಂತ ಮನೆಯ ಸೊಸೆ ಎನ್ನುವ ದುರಹಂಕಾರದಲ್ಲಿ ನಡೆದುಕೊಳ್ಳುತ್ತಿದ್ದಾಳೆ. ಭೂಮಿಕಾ ಕೂಡ ಶ್ರೀಮಂತ ಮನೆಯ ಸೊಸೆಯೇ ಆದರೆ ಆಕೆಗೆ ತಾನು ಬೆಳೆದು ಬಂದ ಹಾದಿ ನೆನಪಿದೆ. ತನ್ನ ತಂದೆ ಹಾಕಿಕೊಟ್ಟ ದಾರಿ ಕೂಡ ನೆನಪಿದೆ. ಆದರೆ ಅಪ್ಪಿಗೆ ದಿನೇ ದಿನೇ ದುರಂಕಾರ ಹೆಚ್ಚಾಗುತ್ತಿದೆಯೇ ಹೊರತು ಕಡಿಮೆ ಮಾತ್ರ ಆಗುತ್ತಿಲ್ಲ.

kannada-serial-amruthadhare-written-15th-november

ಇದೆಲ್ಲ ನೋಡಿದ ಸೀರಿಯಲ್ ಪ್ರೇಮಿಗಳಿಗೆ ಬಹಳಷ್ಟು ಕಿರಿ ಕಿರಿ ಆಗುತ್ತಿದೆ. ಅಪ್ಪಿ ಯಾಕಿಷ್ಟು ಓವರ್ ಆಗಿ ಆಡುತ್ತಿದ್ದಾಳೆ.ಭೂಮಿಕಾ ಅದೆಷ್ಟು ಒಳ್ಳೆಯವಳು ಆದರೆ ಅಪ್ಪಿ ಯಾಕೆ ಹೀಗೆಲ್ಲ ನಡೆದುಕೊಳ್ಳುತ್ತಾಳೆ ಎಂದು ಅಭಿಮಾನಿಗಳು ಅಪ್ಪಿ ಬಾಯಲ್ಲಿ ಬರುವ ಕೆಲವು ಮಾತುಗಳನ್ನು ಕೇಳಿ ಬಹಳಷ್ಟು ಕಿರಿ ಕಿರಿ ಗೊಂಡಿದ್ದಾರೆ. ಇನ್ನೂ ಕೆಲವರು ಭೂಮಿಕಾ ತಂಗಿಗೆ ಇಷ್ಟೊಂದು ದುರಹಂಕಾರ ಎಂದು ಕಾಮೆಂಟ್ ಮಾಡುತ್ತಿದ್ದಾರೆ.ಇಂತಹ ಮಕ್ಕಳು ಹುಟ್ಟುವುದಕ್ಕಿಂತ ಬಂಜೆ ಆಗಿರುವುದು ಒಳ್ಳೆಯದು ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ.

ಗೌತಮ್ ಗೆ ಕರೆ ಮಾಡಿದ ಸಂಚುಕೋರರು

ಭೂಮಿಕಾ ಮನೆಯಲ್ಲಿ ಎಂದಿನಂತೆ ದೀಪಾವಳಿ ಹಬ್ಬ ಎಲ್ಲಾ ಸಡಗರ ಸಂಭ್ರಮದಿಂದ ನಡೆಯಿತು.ಆದರೆ ಗೌತಮ್ ದಿವಾನ್ ಮನೆ ಒಡೆಯಲು ಬಹಳ ದೊಡ್ಡ ಸಂಚು ರೂಪಿಸಲಾಗುತ್ತಿದೆ. ಗೌತಮ್ ದಿವಾನ್ ಮನೆಗೆ ಬಂದು ಬಾಂಬ್ ಇಟ್ಟು ಹೋಗಿದ್ದಾರೆ ಆದರೆ ಈ ವಿಚಾರವನ್ನು ಮೊದಲಿಗೆ ಗೌತಮ್ ಗೆ ಕರೆ ಮಾಡಿ ಬೆದರಿಕೆ ಹಾಕಿ ಹೇಳುತ್ತಾರೆ ನಿಮ್ಮ ಮನೆಯಲ್ಲಿ ಬಾಂಬ್ ಇಡಲಾಗಿದೆ ನಿಮ್ಮ ಕುಟುಂಬವನ್ನು ಹೇಗೆ ಕಾಪಾಡಿಕೊಳ್ಳುತ್ತಿಯಾ ನಾವು ನೋಡುತ್ತೇವೆ ಎಂದು ಹೇಳುತ್ತಾರೆ. ಇದನ್ನು ಕೇಳಿದ ಗೌತಮ್ ಗೆ ಆಕಾಶವೇ ಕಳಚಿ ಬಿದ್ದ ಹಾಗೆ ಆಗುತ್ತದೆ.

ಸಂಚುಕೋರರ ಮಾತು ಕೇಳಿ ದಂಗಾದ ಭೂಮಿಕಾ

ಗೌತಮ್ ಮನೆಯಲ್ಲಿ ಎಲ್ಲರೂ ಅವರ ಪಾಡಿಗೆ ಖುಷಿಯಿಂದ ಇರುತ್ತಾರೆ ಆದರೆ ಆಗ ಫೋನ್ ರಿಂಗ್ ಆಗುತ್ತದೆ. ಭೂಮಿಕಾ ಆ ದಾರಿಯಲ್ಲಿ ಹೋಗುತ್ತ ಇದ್ದದರಿಂದ ಫೋನ್ ಅನ್ನು ಸ್ವೀಕಾರ ಮಾಡಿ ಮಾತನಾಡುತ್ತಾಳೆ ಆದರೆ ಫೋನ್ ನಲ್ಲಿ ಮಾತನಾಡುವವರು ಮಾತ್ರ ದರೋಡೆಕೋರರು ಆಗಿರುತ್ತಾರೆ. ಗೌತಮ್ ದಿವಾನ್ ಮನೆಯಲ್ಲಿ ಬಾಂಬ್ ಇಟ್ಟಿರುವ ಬಗ್ಗೆ ಭೂಮಿಕಾ ಗೆ ಮಾಹಿತಿ ಸಿಗುತ್ತದೆ. ಆಕೆಗೆ ಏನು ಮಾಡುವುದು ಎಂದು ತಿಳಿಯದೇ ದಂಗಾಗಿ ಹೋಗುತ್ತಾಳೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X