Amrutadhare ;ಮಲ್ಲಿಯನ್ನು ಸಾಯಿಸಲು ಮುಂದಾದ ಜೈ ದೇವ್ ,ತಮ್ಮನ ದುರಹಂಕಾರಕ್ಕೆ ಉತ್ತರ ಕೊಡ್ತಾನಾ ಗೌತಮ್..?

By ಪೂರ್ವ

ಗೌತಮ್ ದಿವಾನ್ ಮನೆಯಲ್ಲಿ ಇದೀಗ ಹಬ್ಬದ ಸಂಭ್ರಮ ಮನೆ ಮಾಡಿದೆ. ಮನೆಯಲ್ಲಿ ತುಂಬಿದ ಗರ್ಭಿಣಿಗೆ ಸೀಮಂತ ಶಾಸ್ತ್ರ ಮಾಡುವ ಆಲೋಚನೆ ಎಲ್ಲರಿಗೂ ಮೂಡಿದೆ. ಮಲ್ಲಿಯ ತಾತಾ ಮಲ್ಲಿಗೆ ಸೀಮಂತ ಶಾಸ್ತ್ರ ಮಾಡಲೇಬೇಕೆಂದು ಹೇಳುತ್ತಾರೆ. ಹಾಗೆಯೇ ತವರು ಮನೆಯಿಂದಲೇ ಸೀಮಂತ ಶಾಸ್ತ್ರ ಮಾಡುತ್ತೇವೆ ಎಂದು ಹೇಳುತ್ತಾರೆ. ನಿಮಗೂ ಒಂದು ಮಾತು ಹೇಳಿ ಬಿಡೋಣ ಎಂದು ಈ ವಿಚಾರವನ್ನು ಪ್ರಸ್ತಾಪ ಮಾಡುತ್ತಿದ್ದೇನೆ ಎಂದಾಗ ಭೂಮಿಕಾಗೆ ಬಹಳ ಖುಷಿಯಾಗುತ್ತದೆ

ಹಾಗೆಯೇ ನಿಮ್ಮ ಮನೆಯಲ್ಲಿ ಸೀಮಂತಶಾಸ್ತ್ರ ಆಗುವುದು ಬೇಡ ಸೀಮಂತ ಶಾಸ್ತ್ರವನ್ನು ನಾವೇ ನಮ್ಮ ಮನೆಯಲ್ಲಿ ಮಾಡುತ್ತೇವೆ ಈ ಬಗ್ಗೆ ಗೌತಮ ಅವರ ಬಳಿ ನಾನು ಮಾತನಾಡುತ್ತೇನೆ ಎಂದು ಭೂಮಿಕ ಹೇಳುತ್ತಾಳೆ. ಆ ಪ್ರಕಾರವಾಗಿ ಸೀಮಂತ ಶಾಸ್ತ್ರಕ್ಕೆ ಬಹಳ ಅದ್ದೂರಿಯಾಗಿ ತಯಾರಿ ಕೂಡ ನಡೆಯುತ್ತದೆ. ಮಲ್ಲಿಯ ಖುಷಿಗೆ ಪಾರವೇ ಇರುವುದಿಲ್ಲ. ಈ ಕಡೆ ಈ ಸೀಮಂತ ಶಾಸ್ತ್ರ ನಡೆಯಲೇಬಾರದು ಎಂದು ಶಕುಂತಲಾ ದೇವಿ ಪಣ ತೊಟ್ಟಿರುತ್ತಾಳೆ. ಹೇಗಾದರೂ ಮಾಡಿ ಈ ಸೀಮಂತ ಶಾಸ್ತ್ರವನ್ನು ತಡೆಯಲೇಬೇಕೆಂದು ಅಂದುಕೊಂಡು ಇರುತ್ತಾಳೆ.

kannada serial amruthadhare written 16th September

ಇನ್ನು ಮಲ್ಲಿಯನ್ನ ಭೂಮಿಕಾ ಬಹಳ ಚೆನ್ನಾಗಿ ರೆಡಿ ಮಾಡುತ್ತಿರುತ್ತಾಳೆ, ಅಲ್ಲಿಗೆ ಬಂದ ಅಪ್ಪಿ ಭೂಮಿಕ ಬಳಿ ಹೇಳುತ್ತಾಳೆ. ಅಕ್ಕ ನಾನೇ ಮಲ್ಲಿಯವರನ್ನ ಚೆನ್ನಾಗಿ ರೆಡಿ ಮಾಡುತ್ತೇನೆ ನೀನು ಏನಾದರೂ ಕೆಲಸ ಇದ್ದರೆ ನೋಡಿಕೋ ಎಂದು ಹೇಳುತ್ತಾಳೆ ಇದನ್ನು ಕೇಳಿದ ಭೂಮಿಗಾಗಿ ಮನೆಗೆ ಬಂದ ಅತಿಥಿಗಳನ್ನ ನೋಡಿಕೊಳ್ಳಲು ಭೂಮಿಕಾ ಹೋಗುತ್ತಾಳೆ ಹಾಗೆ ಭೂಮಿಕಾ ಬಂದ ಅತಿಥಿಗಳಿಗೆ ಜ್ಯೂಸ್ ಅನ್ನ ಕೊಡುತ್ತಾಳೆ ಆಗ ಕೆಲವರು ಭೂಮಿಕಳನ್ನು ನೋಡಿ ಕೊಂಕು ಮಾತನಾಡುತ್ತಾರೆ. ಗರ್ಭಿಣಿಯಾಗಿದ್ದು ನೀನು ಎಂದು ಅಂದುಕೊಂಡೆವು ಭೂಮಿಕಾ ನೀನು ಯಾವಾಗ ವಿಶೇಷ ಸುದ್ದಿಯನ್ನು ಕೊಡುತ್ತೀಯಾ ಮದುವೆಯಾಗಿ ಇಷ್ಟು ಸಮಯ ಆಯ್ತಲ್ಲ ಅದಕ್ಕೆ ಕೇಳಿದೆವು. ಭೂಮಿಕಾ ನೀನು ಹಾಗೂ ಗೌತಮ್ ಯಾಕೆ ಡಾಕ್ಟರ್ ಬಳಿ ಹೋಗಿ ಟೆಸ್ಟ್ ಮಾಡಿಸಿಕೊಳ್ಳಬಾರದು ಎಂದು ಹೇಳುತ್ತಾರೆ

ಊರವರ ಮಾತಿಗೆ ನೊಂದ ಭೂಮಿಕಾ

ಇದನ್ನು ಕೇಳಿದ ಭೂಮಿಕಾ ಮೌನವಾಗಿರುತ್ತಾಳೆ. ಅಲ್ಲಿ ಇದ್ದ ಅಪರ್ಣ ಭೂಮಿಕಾಗೆ ಅವಮಾನವಾಗುವುದನ್ನು ನೋಡಿ ಬಹಳ ಬೇಸರ ಮಾಡಿಕೊಳ್ಳುತ್ತಾಳೆ ಭೂಮಿಕಾ ಬಹಳ ನೋವಿನಿಂದಲೇ ರೂಮ್ನಲ್ಲಿ ಕುಳಿತಿರುವಾಗ ಗೌತಮ ಬರುತ್ತಾನೆ. ಇದೇನಾಯ್ತು ಭೂಮಿಕಾ ಯಾಕೆ ಅಳುತ್ತಿದ್ದೀರ?. ನೀವು ಯಾಕೆ ಇಷ್ಟು ಬೇಸರ ಮಾಡಿಕೊಂಡಿದ್ದೀರಿ ಎಂದು ಕೇಳುತ್ತಾನೆ. ಇದನ್ನು ಕೇಳಿದ ಭೂಮಿಕಾ ಗೆ ಬಹಳ ನೋವು ಆಗುತ್ತದೆ. ಸುಮ್ಮನೆ ಕುಳಿತುಕೊಳ್ಳುತ್ತಾನೆ.

kannada-serial-amruthadhare-written-16th-september

ಕೋಪದಲ್ಲಿರುವ ಜೈ ದೇವ್

ಇನ್ನು ಜೈ ದೇವ್ ಬಹಳ ಕೋಪದಿಂದ ಅತ್ತಿಂದ ಇತ್ತ ಇತ್ತಿಂದ ಅತ್ತ ಹೋಗುತ್ತಿರುತ್ತಾನೆ. ಇದನ್ನು ನೋಡಿದ ಆತನ ಮಾವ ಪ್ರಶ್ನೆ ಮಾಡುತ್ತಾನೆ. ಯಾಕೆ ಜೈ ಏನಾಯಿತು. ನೀನು ಅತ್ತಿಂದ ಇತ್ತ ಹೋಗುತ್ತಿದ್ದಿಯಾ ಅಲ್ವಾ ಏನಾದರು ಆಯಿತಾ ? ಯಾಕೆ ಇಷ್ಟು ಕೋಪದಲ್ಲಿ ಇದ್ದೀಯಾ ಎಂದೆಲ್ಲ ಕೇಳುತ್ತಾನೆ. ಇದನ್ನು ಕೇಳಿದ ಜೈ ದೇವ್ ಗೆ ಬಹಳ ಸಿಟ್ಟು ಬರುತ್ತದೆ. ನನ್ನನ್ನು ಎನು ಅಂದುಕೊಂಡಿದ್ದಾಳೆ ಆ ಮಲ್ಲಿ. ಆಕೆ ಹೇಳಿದ ಹಾಗೆಲ್ಲ ನಾನು ಕುಣಿಯಬೇಕು. ನನ್ನನ್ನು ಒಂದು ಬೊಂಬೆಯ ಹಾಗೆ ಮಾಡಿ ಹಾಕಿದ್ದಾಳೆ ಎಂದು ಹೇಳುತ್ತಾನೆ.

ಜೈ ದೇವ್ ಗೆ ಬುದ್ದಿ ಹೇಳಿದ ಮಾವ

ನಾನು ಬೇರೆ ಮದುವೆ ಆಗಿ ಚೆನ್ನಾಗಿ ಇರುತ್ತಿದೆ. ಮಲ್ಲಿ ಜೊತೆ ಇರಲು ಆಗದೆ ಒದ್ದಾಟ ಮಾಡುತ್ತಿದ್ದೇನೆ. ನಿನಗೆ ಏನು ಅನ್ನಿಸುತ್ತಿಲ್ಲ ಅಲ್ವಾ ಎಂದೆಲ್ಲ ಹೇಳುತ್ತಾನೆ. ಇದನ್ನು ಕೇಳಿದ ಜೈ ದೇವ್ ಮಾವ ಗೆ ನಗು ಬರುತ್ತದೆ. ನೀನು ಇದೆಲ್ಲವನ್ನೂ ಮೊದಲೇ ಅರ್ಥ ಮಾಡಿಕೊಂಡು ಇದ್ದರೆ ಹೀಗೆಲ್ಲ ಆಗುತ್ತಿರಲಿಲ್ಲ. ಈಗ ನೀನು ಅನುಭವಿಸು ಎಂದು ಕೊಂಚ ಜೋರಾಗಿಯೇ ಹೇಳುತ್ತಾರೆ. ಜೈ ದೇವ್ ಎನು ಮಾತನಾಡದೆ ತೆಪ್ಪಗೆ ಇರುತ್ತಾನೆ. ಬಳಿಕ ಬಹಳ ಕೋಪದಿಂದ ನನ್ನದು ತಪ್ಪಾಯಿತು. ಆದರೆ ನಾನು ಮಲ್ಲಿಯನ್ನು ಮಾತ್ರ ಸುಮ್ಮನೆ ಬಿಡುವುದು ಇಲ್ಲ.ಖಂಡಿತವಾಗಿಯೂ ನಾನು ಆಕೆಯನ್ನು ಸಾಯಿಸದೆ ಇರಲಾರೇನು ಎಂದು ಹೇಳುತ್ತಾನೆ. ಇದನ್ನು ಕೇಳಿದ ಜೈ ದೇವ್ ಮಾವನಿಗೆ ಶಾಕ್ ಆಗುತ್ತದೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X