Amruthadhare ; ಭೂಮಿ ಮೇಲೆ ಕೋಪ ಮಾಡಿಕೊಂಡ ಮಲ್ಲಿ, ಜೈ ದೇವ್ ಕುತಂತ್ರಕ್ಕೆ ಬಲಿಯಾಗುತ್ತಾಳ ಮಲ್ಲಿ?

By ಪೂರ್ವ

ಭೂಮಿಕಾ ಮಲ್ಲಿಯನ್ನು ಬಹಳ ಜಾಗರೂಕತೆಯಿಂದ ನೋಡಿಕೊಂಡಿರುತ್ತಾಳೆ. ಮಲ್ಲಿಗೆ ಈ ಸಮಯದಲ್ಲಿ ಏನು ಆಗಬಾರದು ಬಹಳ ನಿಗ ಕೂಡ ವಹಿಸಿರುತ್ತಾಳೆ. ಆದರೆ ಇದು ಮಲ್ಲಿಗೆ ಕೂಡ ತಿಳಿದಿದೆ ಇನ್ನು ಜೈದೇವ್ ಮಲ್ಲಿಯ ಜೀವ ತೆಗೆಯಬೇಕು ಹೇಗಾದರೂ ಮಾಡಿ ಮಲ್ಲಿಯನ್ನು ನನ್ನ ಜೀವನದಿಂದ ಹೊರಗೆ ಹಾಕಬೇಕು ಎಂದು ಅಂದುಕೊಂಡಿರುತ್ತಾರೆ. ಆದರೆ ಇದಕ್ಕೆಲ್ಲಾ ಗೌತಮ್ ಹಾಗೂ ಭೂಮಿಕಾ ಆಸ್ಪದ ಕೊಡುವುದಿಲ್ಲ ಎಂದು ಗೊತ್ತಿದ್ದರೂ ಕೂಡ ಜೈದೇವ್ ಮಲ್ಲಿ ಜೀವಕ್ಕೆ ಕುತ್ತು ತರಲು ಪ್ಲಾನ್ ಮಾಡುತ್ತಾನೆ ಇನ್ನು ಭೂಮಿಕಗೆ ಮಲ್ಲಿ ಎಂದರೆ ಬಹಳ ಪ್ರೀತಿ ಮಲ್ಲಿ ಜೀವನ ಹಾಳಾಗಬಾರದು ಆಕೆ ಯಾರನ್ನ ಕೂಡ ನಂಬಬಾರದು ಹಾಗೆ ಬಹಳ ಖುಷಿಯಿಂದ ಇರಬೇಕು ಎಂದು ಅಂದುಕೊಂಡಿರುತ್ತಾಳೆ.

ಆದರೆ ಇದೀಗ ಜೈ ದೇವ್ ಭೂಮಿಕ ಬಗೆಯು ಕೂಡ ಮಲ್ಲಿಗೆ ಹೇಳಿ ಆಕೆಯ ತಲೆಯನ್ನು ಕೆಡಿಸಿಬಿಟ್ಟಿದ್ದಾನೆ. ದಿಯಾ ಹಾಗೂ ಜೈದೇವ್ ಒಬ್ಬರಿಗೊಬ್ಬರು ಬಹಳ ಪ್ರೀತಿ ಮಾಡುತ್ತಿರುತ್ತಾರೆ ಎಂದು ತಿಳಿದಿದ್ದರೂ ಕೂಡ ದಿಯಾ ಆತನ ಬಾಳಿನಲ್ಲಿ ಎಂಟ್ರಿ ಕೊಟ್ಟಿದ್ದಾಳೆ ಈ ವಿಚಾರ ಗೌತಮ್ಗೆ ಕೂಡ ಗೊತ್ತಿದೆ. ಆದರೆ ಅದೆಷ್ಟೇ ಬಾರಿ ಗೌತಮ್ ದಿಯಾಗೆ ಎಚ್ಚರಿಕೆ ನೀಡಿದರೂ ಕೂಡ ಅದನ್ನು ಸೈಡ್ ಗೆ ಹಾಕಿ ಅವರಿಬ್ಬರೂ ಕೂಡ ಕದ್ದು ಭೇಟಿ ಮಾಡುತ್ತಿದ್ದರು. ಇದೀಗ ಗೌತಮ್ ಅದಕ್ಕೆ ಕೂಡ ಬ್ರೇಕ್ ಹಾಕಿದ್ದಾನೆ.

kannada serial amruthadhare written 18th September

ಮನೆಯಲ್ಲಿ ಮಲ್ಲಿಯ ಸೀಮಂತ ಬಹಳ ಅದ್ದೂರಿಯಾಗಿ ನಡೆಯುವ ಸಂದರ್ಭದಲ್ಲಿ ಶಕುಂತಲಾ ದೇವಿ ಗೆಳತಿಯರು ಧಿಡೀರಾಗಿ ಮನೆಗೆ ಭೇಟಿಯನ್ನು ನೀಡುತ್ತಾರೆ. ಶಕುಂತಲಾ ದೇವಿ ಮನೆಯಲ್ಲಿ ಕಾರ್ಯಕ್ರಮ ನಡೆಯುತ್ತಿರುವುದನ್ನು ನೋಡಿ ಆಕೆಯ ಗೆಳತಿಯರು ಇದೇನು ಶಕುಂತಲಾ ನಮಗೆ ಒಂದು ಮಾತು ಹೇಳದೆ ನೀನು ಏನು ಕಾರ್ಯಕ್ರಮ ಮಾಡುತ್ತಿದ್ದಿಯಾ ಎಂದು ಹೇಳಿದಾಗ ಶಕುಂತಲಾ, ಹೌದು ನಮ್ಮ ಮನೆ ದೊಡ್ಡ ಸೊಸೆಯ ಸೀಮಂತ ಶಾಸ್ತ್ರ ನಡೆಯಲಿದೆ ಅದಕ್ಕಾಗಿ ಇಷ್ಟೊಂದು ತಯಾರಿ ಮಾಡಿದ್ದೇನೆ ಎಂದು ಹೇಳುತ್ತಾಳೆ ಹಾಗೆ ನಿಮ್ಮನ್ನೆಲ್ಲ ಕರೆಯಲು ಆಗಲಿಲ್ಲ ದಯವಿಟ್ಟು ಕ್ಷಮಿಸಿ ಎಂದು ಹೇಳುತ್ತಾಳೆ

ಶಕುಂತಲಾ ಮನೆಗೆ ಬಂದ ಗೆಳತಿಯರು

ಇದನ್ನು ಕೇಳಿದ ಗೆಳತಿಯರು ಇವತ್ತು ಯಾರ ಸೀಮಂತ ಎಂದಾಗ ಶಕುಂತಲಾ ಹೇಳುತ್ತಾಳೆ ಇವತ್ತು ಮಲ್ಲಿಯ ಸೀಮಂತ ಎಂದು ಹೇಳಿ ಮಾತು ಮುಗಿಸುವಷ್ಟರಲ್ಲಿ ಆಕೆಯ ಗೆಳತಿಯರು ಮಲ್ಲಿಯ ಸೀಮಂತವಾ ಸೀಮಂತಕ್ಕೆ ನೀನು ನಮ್ಮನ್ನ ಕರೆಯೋದಿಲ್ಲ ಬಿಡು. ಯಾಕೆಂದರೆ ನಿನಗೂ ಕೂಡ ಮುಜುಗರ ಎಂದು ಹೇಳಿದಾಗ ಅಲ್ಲಿಗೆ ಭೂಮಿಕಾ ಬಂದು ಎಲ್ಲರ ಯೋಗ ಕ್ಷೇಮವನ್ನು ವಿಚಾರಣೆ ಮಾಡುತ್ತಾಳೆ ಹಾಗೆಯೇ ಅತ್ತೆಯ ಬಳಿ ಮಲ್ಲಿಗೆ ಹಾಕಲು ಒಡವೆಗಳನ್ನು ಕೇಳುತ್ತಾಳೆ. ಇದನೆಲ್ಲ ನೋಡಿದ ಶಕುಂತಲಾ ಗೆಳತಿಯರು ಭೂಮಿಕನನ್ನು ನೋಡಿ ಹೇಳುತ್ತಾರೆ.

kannada serial amruthadhare written 18th September

ಅತ್ತೆಯ ಗೆಳತಿಯರ ಮಾತಿಗೆ ಕುಗ್ಗಿದ ಭೂಮಿಕಾ

ತಪ್ಪು ತಿಳಿಯಬೇಡ ಭೂಮಿಕಾ. ನೀನು ಯಾವಾಗ ಹೀಗೆ ಶುಭ ಸುದ್ದಿ ನೀಡುತ್ತಿಯಾ. ನೀನು ಹಾಗೂ ಗೌತಮ್ ಬಹಳ ಲೇಟ್ ಆಗಿ ಮದುವೆ ಆಗಿದ್ದೀರಾ ಅದರಿಂದಾಗಿ ನೀವು ಆದಷ್ಟು ಬೇಗ ಮಕ್ಕಳ ಬಗ್ಗೆ ಪ್ಲಾನ್ ಮಾಡಬೇಕು ಎಲ್ಲವನ್ನ ಸರಿಪಡಿಸಿಕೋ ಎಂದು ಹೇಳುತ್ತಾರೆ. ಇದನ್ನು ಕೇಳಿದ ಭೂಮಿಕ್ಕಾಗಿ ಬಹಳ ನೋವಾಗುತ್ತದೆ ಆಕೆ ಏನು ಮಾತನಾಡದೆ ಸೀದಾ ಒಳಗಡೆ ಹೋಗುತ್ತಾಳೆ. ಇದೆಲ್ಲವನ್ನ ನೋಡಿದ ಅಪರ್ಣಗೆ ಬಹಳ ನೋವಾಗುತ್ತದೆ ಇತ್ತ ಶಕುಂತಲಾ ದೇವಿ ಮೊಗದಲ್ಲಿ ನಗು ಮೂಡುತ್ತದೆ.

ಮಲ್ಲಿಗೆ ಬುದ್ದಿ ಹೇಳಿದ ಭೂಮಿಕಾ

ಇನ್ನು ಮಲ್ಲಿ ಯ ಬಳಿ ಭೂಮಿಕಾ ಕೊಂಚ ಮಾತನಾಡುತ್ತಾಳೆ ಮಲ್ಲಿ ಸೀಮಂತ ಆದ ಬಳಿಕ ಜಯದೇವ್ ಜೊತೆ ಹೋಗಲು ಸಿದ್ಧತೆಯನ್ನು ಮಾಡಿಕೊಂಡಿರುತ್ತಾಳೆ. ಈ ವೇಳೆ ಭೂಮಿಕ ಮಲ್ಲಿಗೆ ಹೇಳುತ್ತಾಳೆ. ಮಲ್ಲಿ ನೀನು ಯಾವುದನ್ನು ಕೂಡ ಬ್ಲೈಂಡ್ ಆಗಿ ನಂಬಲು ಹೋಗಬೇಡ. ಎಲ್ಲವನ್ನ ಆಲೋಚನೆ ಮಾಡಿ ನಿರ್ಧಾರ ತೆಗೆದುಕೋ ಎಂದು ಭೂಮಿಕಾ ಹೇಳಿದಾಗ ಮಲ್ಲಿ ಗೆ ಕೋಪ ಬರುತ್ತದೆ. ಅಕ್ಕವರೆ ನೀವು ಈ ಮಾತು ಹೇಳಿರುವುದಕ್ಕೆ ನಾನು ಸುಮ್ಮನೆ ಇದ್ದೇನೆ. ಒಂದು ವೇಳೆ ಈ ಮಾತನ್ನು ಬೇರೆಯವರು ಹೇಳಿದರೆ ಅದರ ಕಥೆಯೇ ಬೇರೆ ಇರುತ್ತಿತ್ತು. ನೀವು ಹೇಳಲು ಹೊರಟಿರುವ ವಿಚಾರ ನನಗೆ ತಿಳಿದಿದೆ ಎಂದು ಕೋಪದಿಂದ ಹೇಳುತ್ತಾಳೆ

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X