Amruthadhaare ; ಹಳ್ಳ ಹಿಡಿಯುತ್ತಿದೆಯಾ ಧಾರವಾಹಿ, ವಿಲನ್ ಕೆಟ್ಟ ಕೆಲಸವನ್ನೇ ತೋರಿಸ್ತಾರಲ್ಲ ಎಂದು ನೆಟ್ಟಿಗರು ಗರಂ!
ಅಮೃತಧಾರೆ ಧಾರವಾಹಿ ನೋಡಲು ಅಭಿಮಾನಿಗಳು ಹೆಚ್ಚಾಗಿ ಕಾತರರಾಗಿರುತ್ತಾರೆ. ಇದರಲ್ಲಿ ಹೀರೋ ಹಿರೋಯಿನ್ ನಟನೆ ನೋಡಲು ಅನೇಕ ಜನರು ಮುಗಿಬಿದ್ದು ನೋಡುತ್ತಾರೆ. ಭೂಮಿಕಾ ಹಾಗೂ ಗೌತಮ್ ಈಗಾಗಲೇ ಮದುವೆಯ ಆನಿವರ್ಸರೀಯನ್ನು ಬಹಳ ಅದ್ಭುತವಾಗಿಯೇ ಆಚರಣೆ ಮಾಡಿಕೊಂಡಿದ್ದಾರೆ. ಅಮ್ಮ ಇಲ್ಲ ಎಂದು ಗೌತಮ್ ಅಂದುಕೊಂಡರೆ ಇದೀಗ ಶಕುಂತಲಾ ದೇವಿ ಗೌತಮ್ ತಂಗಿ ಬದುಕಿ ಇರಬೇಕು ಅಲ್ವಾ ಎಂದು ಆಲೋಚನೆ ಮಾಡುತ್ತಿರುತ್ತಾಳೆ.
ಶಕುಂತಲಾ ದೇವಿಗೆ ಗೌತಮ್ ತಂಗಿ ಹಾಗೂ ಆಕೆಯ ಅಮ್ಮನನ್ನು ನಿರ್ನಾಮ ಮಾಡುವವರೆಗೆ ಆಕೆಗೆ ಸಮಾಧಾನ ಇಲ್ಲ. ತನ್ನ ಮಗ ಜೈ ದೇವ್ ನ ಸಹಾಯ ತೆಗೆದುಕೊಂಡು ಗೌತಮ್ ತಂಗಿ ಹುಡುಕಾಟ ಶುರು ಮಾಡುತ್ತಾರೆ. ಈಗಾಗಲೇ ಪ್ರೊಮೊದಲ್ಲಿ ತೋರಿಸಿದ ಹಾಗೆಯೇ ಗೌತಮ್ ತಂಗಿಯನ್ನು ಒಂದು ಹುಡುಗಿ ಹುಡುಕಿಕೊಂಡು ಕಾಲೋನಿಗೆ ಹೋಗುತ್ತಾಳೆ. ಸುಧಾ ಪಕ್ಕದ ಮನೆಯ ಹೆಂಗಸಿನ ಬಳಿ ನಿಮ್ಮ ಮನೆಯ ಪಕ್ಕದ ಮನೆಯವರ ಫೋಟೋ ಇದೆಯಾ ಎಂದು ಕೇಳಿದಾಗ ಪಕ್ಕದ ಮನೆಯ ಹೆಂಗಸು ಸುಧಾ ಫೋಟೋವನ್ನು ಆ ಹುಡುಗಿಗೆ ಕೊಡುತ್ತಾರೆ.

ಇದನ್ನು ನೋಡಿದ ಅನೇಕ ಜನರು ಡೈರೆಕ್ಟರ್ ಮೇಲೆ ಕೋಪಗೊಂಡಿದ್ದಾರೆ. ಪಕ್ಕದ ಮನೆಯವರ ಬಳಿ ನಮ್ಮ ಫೋಟೋ ಇರುತ್ತಾ ಎಂದು ಡೈರೆಕ್ಟರ್ ಬಳಿ ಪ್ರಶ್ನೆ ಮಾಡಿದ್ದಾರೆ. ಈ ಧಾರವಾಹಿ ಬಹಳ ಉತ್ತಮವಾಗಿಯೇ ಮೂಡಿ ಬರುತ್ತಿತ್ತು. ಆದರೆ ಇದೀಗ ಈ ಧಾರಾವಾಹಿಯನ್ನು ಕೂಡ ಎಲ್ಲಾ ಧಾರಾವಾಹಿಯ ಹಾಗೆ ಹಳ್ಳ ಹಿಡಿಸಬೇಕು ಎಂದು ಅಂದುಕೊಂಡು ಇದ್ದೀರಾ ಎಂದು ಕೋಪ ವ್ಯಕ್ತಪಡಿಸಿದ್ದಾರೆ. ಶಕುಂತಲಾ ದೇವಿ ಗೆ ಗೌತಮ್ ತಂಗಿ ಸುಧಾ ಎನ್ನುವ ವಿಚಾರ ತಿಳಿದೆ ಹೋಯಿತು. ಆದರೆ ಗೌತಮ್ ಗೆ ಮಾತ್ರ ಆತನ ತಂಗಿ ತಾಯಿ ಬದುಕಿದ್ದಾರೆ ಎನ್ನುವ ವಿಚಾರ ತಿಳಿಯುತ್ತಿಲ್ಲ.
ಡೈರೆಕ್ಟರ್ ಮೇಲೆ ಮುನಿಸಿಕೊಂಡ ಫ್ಯಾನ್ಸ್
ಎಲ್ಲಾ ಧಾರಾವಾಹಿಯಲ್ಲಿ ಕೂಡ ಹೀರೋ ಗಳಿಗಿಂತ ವಿಲನ್ ಗಳ ಅಬ್ಬರವನ್ನು ಹೆಚ್ಚಾಗಿ ತೋರಿಸುತ್ತಿರಾ ಎಂದು ಬಹಳ ಬೇಸರದಿಂದ ಅಭಿಮಾನಿಗಳು ಡೈರೆಕ್ಟರ್ ಬಳಿ ಹೇಳುತ್ತಿದ್ದಾರೆ. ಹೀರೋಗಳಿಗಿಂತ ವಿಲನ್ ಗಳು ಮಾಡುವ ಕೆಲಸ ತೋರಿಸುತ್ತಿರುವುದಕ್ಕೆ ಡೈರೆಕ್ಟರ್ ಮೇಲೆ ಕೋಪಗೊಂಡ ಫ್ಯಾನ್ಸ್ ಬಹಳಷ್ಟು ಕೆಟ್ಟದಾಗಿ ಬಯ್ಯುತ್ತಿದ್ದಾರೆ. ಅಕ್ಕನ ಮೇಲೆ ಹಲ್ಲು ಮಸೆಯುತ್ತಿರುವ ಅಪ್ಪಿಗೆ ಅಕ್ಕನ ಬೆಲೆ ತಿಳಿಯುತ್ತಿಲ್ಲ. ಒಟ್ಟಿಗೆ ಹುಟ್ಟಿದರು ಆಕೆಯನ್ನು ಅರಿಯುವ ಕೆಲಸ ಮಾಡುತ್ತಿಲ್ಲ ಬೇರೆಯವರ ಮಾತಿಗೆ ಕಿವಿಗೊಟ್ಟು ಅಕ್ಕ ಎಂದು ನೋಡದೆ ಆಕೆಯ ವಿರುದ್ಧ ಕ್ಷುಲ್ಲಕವಾಗಿ ರೇಗಾಡುತ್ತಿರುತ್ತಾಳೆ.
ಸುಧಾ ಫೋಟೋ ನೋಡಿ ಶಾಕ್ ಆದ ಶಕುಂತಲಾ
ಸುಧಾ ಫೋಟೋವನ್ನು ನೋಡಿದ ಶಕುಂತಲಾ ಗೆ ಬಹಳಷ್ಟು ಶಾಕ್ ಆಗುತ್ತದೆ. ಆಕೆಗೆ ತನ್ನ ಮನೆಯಲ್ಲಿರುವ ಸುಧಾ ಗೌತಮ್ ತಂಗಿ ಎಂದು ತಿಳಿದು ಮೌನಕ್ಕೆ ಶರಣಾಗುತ್ತಾರೆ. ಎನು ಮಾಡುವುದು ಎಂದುಕೊಂಡು ಸುಮ್ಮನೆ ಯೋಚನೆ ಮಾಡುತ್ತಾ ಇರುತ್ತಾಳೆ. ಸುಧಾ ಜೊತೆ ಖಂಡಿತವಾಗಿಯೂ ಆಕೆಯ ತಾಯಿ ಇದ್ದೆ ಇರುತ್ತಾಳೆ. ಇವರಿಬ್ಬರನ್ನು ಹೇಗಾದರೂ ಮಾಡಿ ಸಾಯಿಸಬೇಕು ಎಂದು ಯೋಚನೆ ಮಾಡುತ್ತಿರುತ್ತಾಳೆ ಶಕುಂತಲಾ.


Click it and Unblock the Notifications











