Amruthadhare ; ಜೈ ದೇವ್ ಅಸಲಿಯತ್ತು ಆನಂದ್ ಮುಂದೆ ಬಯಲು ಆನಂದ್ ನ ಮೇಲೆ ಕಿಡಿಕಾರಿದ ಜೈ ದೇವ್ ಗೆ ವಾರ್ನಿಂಗ್

By ಪೂರ್ವ

ಜೈದೇವ್ ಅಸಲೀಯತ್ತು ಆನಂದ್ ಗೆ ಈಗಾಗಲೇ ತಿಳಿದು ಹೋಗಿದೆ ಮೊದಲಿಗೆ ಗೌತಮ್ ಹಾಗೂ ಆನಂದ್ ಜಯದೇವ್ ಕಳುಹಿಸಿದ ಒಬ್ಬ ಗುಂಡನನ್ನು ಹಿಡಿದು ಆತನ ಬಳಿ ಎಲ್ಲಾ ವಿಚಾರಣೆ ನಡೆಸುತ್ತಾರೆ. ಆದರೆ ಮೊದಲು ಆತ ಯಾವ ವಿಚಾರವನ್ನು ಕೂಡ ಇಬ್ಬರ ಬಳಿ ಕೂಡ ಹೇಳಿಕೊಂಡಿರಲಿಲ್ಲ ತದನಂತರ ಗೌತಮ್ ಎಲ್ಲಾ ತರದಲ್ಲೂ ವಿಚಾರಣೆ ಮಾಡಿ ಕೊನೆಗೆ ಕೊಂಚ ಸುಸ್ತಾಗುತ್ತದೆ.

ಆತ ಆನಂದ್ ಜೊತೆ ಇನ್ನು ಮೇಲೆ ನೀನೆ ಈತನನ್ನು ಹ್ಯಾಂಡಲ್ ಮಾಡಬೇಕು ಪಾರ್ಥ ಹಾಗೂ ಅಪ್ಪಿ ಬದುಕಲಿ ಆಟ ಆಡಲು ಹೊರಟ ಆ ವ್ಯಕ್ತಿ ಯಾರು ಎನ್ನುವುದು ನನಗೆ ತಿಳಿಯಬೇಕು ಅದನ್ನು ನಾವು ಖಂಡಿತವಾಗಿಯೂ ಪತ್ತೆ ಹಚ್ಚಬೇಕು ಇಲ್ಲವಾದರೆ ನಮಗೆ ಆ ಕೆಟ್ಟ ಕೆಲಸ ಯಾರು ಮಾಡಿದ್ದಾರೆ ಎನ್ನುವುದು ಕೂಡ ತಿಳಿಯುವುದಿಲ್ಲ ಎಂದು ಹೇಳುತ್ತಾರೆ ಇದನ್ನು ಕೇಳಿದ ಆನಂದ ಆಯಿತು ಎಂದು ಹೇಳುತ್ತಾನೆ ಅಲ್ಲಿಂದ ಗೌತಮ್ ಹೊರಟು ಹೋಗುತ್ತಾನೆ ಇನ್ನು ಗೂಂಡಾ ಬಳಿ ಆನಂದ್ ಹೇಳುತ್ತಾನೆ.

kannada serial amruthadhare written 21th August

ಈ ಘಟನೆಯ ಬಗ್ಗೆ ನೀನು ಬಾಯಿ ಬಿಟ್ಟರೆ ಏನು ಆಗುವುದಿಲ್ಲ . ಆದರೆ ನೀನು ಏನು ಮಾತನಾಡದಿದ್ದರೆ ಪೊಲೀಸರ ಬಳಿ ಹೇಳಿ ನಿನ್ನ ಬಾಯಿ ಬಿಡಿಸುತ್ತೇನೆ. ಇದು ನಿನಗೆ ಒಪ್ಪಿಗೆ ಆದರೆ ಸರಿ ಹಾಗೆಯೇ ಮಾಡುತ್ತೇನೆ ಎಂದು ಹೇಳುತ್ತಾನೆ. ಇದನ್ನು ಕೇಳಿದ ಗೂಂಡಾಗೆ ಕೊಂಚ ಭಯ ಆಗುತ್ತದೆ ಆತ ನಾನು ನಿಜ ಹೇಳುತ್ತೇನೆ ಎಂದು ಹೇಳುತ್ತಾನೆ ಹಾಗೆಯೇ ಆನಂದ್ ಪಕ್ಕ ನಿಂತಿದ್ದ ಗೂಂಡಾ ಗಳನ್ನು ಹೊರಗೆ ಕಳುಹಿಸುವಂತೆ ಹೇಳುತ್ತಾನೆ. ಅವರೆಲ್ಲರೂ ಹೊರಗಡೆ ಹೋದ ಬಳಿಕ ಆನಂದ್ ಜೊತೆ ಇದಕ್ಕೆ ಯಾರು ಕಾರಣ ಎಂಬುವುದನ್ನು ಆಯಾ ರೌಡಿ ಬಾಯಿ ಬಿಡುತ್ತಾನೆ.

ರೌಡಿಯ ಮಾತು ಕೇಳಿ ಆನಂದ್ ಶಾಕ್

ರೌಡಿಯ ಮಾತು ಕೇಳಿ ಆನಂದ್ ಶಾಕ್ ನಲ್ಲಿ ನಿಂತು ಬಿಡುತ್ತಾರೆ. ಆಗ ರೌಡಿ ಹೇಳಿದ್ದು ಬೇರೆ ಯಾರದ್ದು ಹೆಸರು ಅಲ್ಲ. ಆತ ಹೇಳಿದ್ದು ಜೈ ದೇವ್ ಹೆಸರು. ಜೈ ದೇವ್ ಅನೇಕ ಬಾರಿ ತಪ್ಪುಗಳನ್ನ ಮಾಡಿದ್ದಾನೆ. ಆದರೆ ಅದಕ್ಕೆ ವಾರ್ನಿಂಗ್ ಅನ್ನು ಆನಂದ್ ಪದೇ ಪದೇ ಮಾಡುತ್ತಿರುತ್ತಾನೆ. ಆದರೆ ಜೈದೇವ್ ಸುಧಾರಣೆ ಕಾಣುವ ಯಾವುದೇ ಲಕ್ಷಣಗಳು ಕೂಡ ಕಾಣಿಸುತ್ತಿಲ್ಲ ಆತನಿಗೆ ಆತ ಮಾಡಿದ್ದೆ ಸರಿ ಎಂದು ಆತನ ಯೋಚನೆ ಆದರೆ ಅದು ತಪ್ಪು ಎನ್ನುವುದನ್ನ ಆನಂದ್ ಜೈದೇವ್ ಗೆ ಹೇಳಬೇಕಾಗಿದೆ.

ಜೈ ದೇವ್ ಗೆ ಕೋಪದಲ್ಲೇ ಕಾಲ್ ಮಾಡಿದ ಆನಂದ್

ಆನಂದ್ ಗೆ ಮೊದಲಿಗೆ ಆ ರೌಡಿಯ ಮಾತು ಅಷ್ಟೊಂದು ನಂಬಲು ಅಸಾಧ್ಯವಾಗುತ್ತದೆ ಆದರೆ ಆತ ತನ್ನ ಮಕ್ಕಳ ಮೇಲೆ ಆಣೆ ಮಾಡಿ ಇದೆಲ್ಲ ಮಾಡಿಸಿದ್ದು ಜೈ ದೇವ್ ಸರ್ ರವರು ಅವರಿಗೆ. ಅವರಿಗೆ ಪಾರ್ಥ ಸರ್ ಹಾಗೂ ಆ ಹುಡುಗಿ ಮದುವೆ ಆಗುವುದು ಚೂರು ಕೂಡ ಇಷ್ಟ ಇರಲಿಲ್ಲ. ಆದ ಕಾರಣ ಆ ಹುಡುಗಿಯನ್ನು ಸಾಯಿಸಿ ಎಂದು ನಮಗೆ ಹೇಳಿದರು ಅದಕ್ಕೆ ಹಾಗೆ ಮಾಡಿದೆವು ಎಂದು ಹೇಳುತ್ತಾನೆ . ಇನ್ನೂ ಇದೆಲ್ಲವನ್ನೂ ಕೇಳಿದ ಆನಂದ್ ಕೂಡಲೇ ಜೈ ದೇವ್ ಗೆ ಕರೆ ಮಾಡಿ ನಿಮ್ಮ ಜೊತೆ ಕೊಂಚ ಮಾತನಾಡಬೇಕಾಗಿದೆ ಎಂದು ಹೇಳುತ್ತಾನೆ.

kannada-serial-amruthadhare-written-21th-august

ಜೈ ದೇವ್ ಗೆ ಕಪಾಳ ಮೋಕ್ಷ ಮಾಡಿದ ಆನಂದ್

ಇದನ್ನು ಕೇಳಿದ ಜೈ ದೇವ್ ಸರಿ ಆನಂದ್ ಬ್ರೋ ಎಂದು ಹೇಳಿ ಆತನ ಜೊತೆ ಮಾತನಾಡಲು ಆನಂದ್ ಕರೆದ ಸ್ಥಳಕ್ಕೆ ಅಮಾಯಕನ ಹಾಗೆ ಬರುತ್ತಾನೆ. ಜೈ ದೇವ್ ನನ್ನು ನೋಡಿ ಆನಂದ್ ಗೆ ಬಹಳ ಕೋಪ ಬರುತ್ತದೆ. ಆನಂದ್ ಜೈ ದೇವ್ ಕಪಾಳಕ್ಕೆ ಬಹಳ ಜೋರಾಗಿ ಹೊಡೆಯುತ್ತಾನೆ. ಯಾಕೆ ಎಂದು ಕೇಳಿದಾಗ ಆತ ಮಾಡಿದ ಘನ ಕಾರ್ಯದ ಬಗ್ಗೆ ಹೇಳುತ್ತಾನೆ. ಇದನ್ನು ಕೇಳಿದ ಜೈ ದೇವ್ ಗೆ ಶಾಕ್ ಆಗುತ್ತದೆ. ಆನಂದ್ ಹೇಳುತ್ತಾನೆ ಈ ವಿಚಾರ ನನಗೆ ಹೇಗೆ ಗೊತ್ತಾಯಿತು ಎಂದು ಅಂದುಕೊಂಡಿದ್ದೀಯಾ ಇದೆಲ್ಲವನ್ನ ನೀನು ಕಳುಹಿಸಿದ ರೌಡಿ ನಮ್ಮ ಜೊತೆ ಹೇಳಿದ್ದಾನೆ ನಾನು ಇದನ್ನೆಲ್ಲಾ ನಿನ್ನ ಅಣ್ಣನ ಜೊತೆ ಹೇಳಬಹುದು ಆದರೆ ನಾನು ಇದ್ಯಾವುದನ್ನು ಕೂಡ ಅಣ್ಣನ ಬಳಿ ಹೇಳುವುದಿಲ್ಲ ಯಾಕೆಂದರೆ ಆತನಿಗೆ ನನ್ನ ತಮ್ಮ ಇಂತವನು ಎಂದು ತಿಳಿದರೆ ಮಾತ್ರ ಖಂಡಿತವಾಗಿಯೂ ಬಹಳ ನೋವು ಆಗಬಹುದು . ಜೈ ದೇವ್ ಇದನ್ನು ನೀನು ವಾರ್ನಿಂಗ್ ಅಂತ ತಿಳಿದುಕೋ ಇನ್ನೂ ಮೇಲೆ ನೀನು ಏನಾದರೂ ಹೀಗೆ ಮಾಡಿದ್ದೆ ಆದರೆ ಮುಲಾಜೆ ಇಲ್ಲದೆ ಖಂಡಿತವಾಗಿ ನಿನ್ನ ಅಣ್ಣನ ಬಳಿ ಎಲ್ಲಾ ವಿಚಾರ ಹೇಳುತ್ತೇನೆ ಎಂದು ಆನಂದ್ ಹೇಳಿ ಅಲ್ಲಿಂದ ಹೊರಟು ಹೋಗುತ್ತಾನೆ .

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X