Amruthadhare ; ಅತ್ತೆಯ ಮಾತಿನಿಂದ ನೊಂದಿರುವ ಭೂಮಿಕಾ, ಸುಳ್ಳು ಹೇಳಿ ಅಣ್ಣನ ಎದುರು ಸಿಕ್ಕಿಬಿದ್ದ ಪಾರ್ಥ?
ಭೂಮಿಕಾಳನ್ನು ಕಟುವಾದ ಮಾತುಗಳಿಂದ ಎಷ್ಟೇ ನಿಂದನೆ ಮಾಡಿ ಮಾತನಾಡಿದರು ಭೂಮಿಕಾ ಮಾತ್ರ ಅದ್ಯಾವುದನ್ನೂ ತಲೆಗೆ ಹಾಕಿಕೊಳ್ಳುವುದು ಇಲ್ಲ. ಇತ್ತ ಶಕುಂತಲಾ ದೇವಿ ಭೂಮಿಕಾ ಬಳಿ ಬಂದು ಅಪ್ಪಿ ಹಾಗೂ ಪಾರ್ಥ ಇಬ್ಬರು ಒಬ್ಬರನ್ನೊಬ್ಬರು ಪ್ರೀತಿ ಮಾಡುತ್ತಿದ್ದಾರೆ ಇದಕ್ಕೆ ನಿನ್ನ ಕುಮ್ಮಕ್ಕು ಇದೆ. ಇದೀಗ ನಿನ್ನ ತಂದೆ ನನ್ನ ಮಗನಿಗೆ ಕೊಡಬಾರದ ಹಿಂಸೆ ಕೊಡುತ್ತಿದ್ದಾರೆ. ಕಾರಣ ಪಾರ್ಥ ಅಪೇಕ್ಷ ಳನ್ನು ಪ್ರೀತಿ ಮಾಡುತ್ತಿದ್ದಾನೆ ಎನ್ನುವ ಕಾರಣ. ಪಾರ್ಥ ಇದೀಗ ಒಂದು ಶಾಲೆಯಲ್ಲಿ ಟೀಚರ್ ಆಗಿ ಸೇರಿಕೊಂಡಿದ್ದಾನೆ.
ಅಪ್ಪಿಯನ್ನು ಪಡೆಯಲು ಪಾರ್ಥ ಸರ್ಕಸ್ ಮಾಡುವ ಹಾಗೆ ಆಗಿದೆ. ದಡ್ಡ ಮಕ್ಕಳಿಗೆ ಪಾಠ ಮಾಡಿ ಅವರನ್ನು ಪಾಸ್ ಮಾಡುವ ಹಾಗೆ ಮಾಡಬೇಕು, ಹಾಗೆಯೇ ಅವರಿಗೆ ಒಳ್ಳೆಯ ಬುದ್ದಿ ಕೂಡ ಕಲಿಸಬೇಕು ಎಂದು ನಿನ್ನ ತಂದೆಯವರು ಆತನಿಗೆ ಹೇಳಿದ್ದಾರೆ. ಇದನ್ನು ಕೇಳಿದ ಪಾರ್ಥ ಮನೆಯಲ್ಲಿ ಎಲ್ಲರ ಬಳಿಯೂ ಸೋಲೋ ಟ್ರಿಪ್ ಹೋಗುತ್ತಿದ್ದೇನೆ ಎಂದು ಸುಳ್ಳು ಹೇಳಿ ಶಾಲೆಯಲ್ಲಿ ಸಾಮಾನ್ಯರಂತೆ ಇದ್ದಾನೆ ಇದೆಲ್ಲ ಆಗಿದ್ದು ನಿಮ್ಮಿಂದ. ಅಪ್ಪಿ ಈ ಮನೆಯ ಸೊಸೆ ಆಗುವುದು ನನಗೆ ಸ್ವಲ್ಪ ಕೂಡ ಇಷ್ಟ ಇಲ್ಲ ಎಂದು ಹೇಳಿ ಅಲ್ಲಿಂದ ಹೋಗುತ್ತಾಳೆ.

ಭೂಮಿಕಾ ತನ್ನ ತಂದೆಯ ಬಗ್ಗೆ ಈ ರೀತಿ ಅತ್ತೆ ಯಾಕೆ ಮಾತನಾಡುತ್ತಿದ್ದಾರೆ. ಖಂಡಿತವಾಗಿಯೂ ನನ್ನ ತಂದೆ ಈ ರೀತಿ ಮಾತನಾಡಲು , ನಡೆದುಕೊಳ್ಳಲು ಸಾಧ್ಯ ಇಲ್ಲ ಯಾವುದಕ್ಕೂ ಅಮ್ಮನ ಬಳಿ ಕೇಳೋಣ ಎಂದು ತನ್ನ ತಾಯಿಗೆ ಕರೆ ಮಾಡುತ್ತಾಳೆ. ಇನ್ನೂ ಆಕೆಯ ತಾಯಿಗೆ ಏನು ತಿಳಿದೇ ಇರುವುದಿಲ್ಲ . ಅಪೇಕ್ಷ ಹಾಗೂ ನಿನ್ನ ತಂದೆ ಮಾತ್ರ ಏನು ಮಾತನಾಡುತ್ತಲೇ ಇಲ್ಲ ನನ್ನ ಬಳಿ ಏನು ಶೇರ್ ಕೂಡ ಮಾಡಿಕೊಳ್ಳುವುದು ಇಲ್ಲ ಎಂದು ಹೇಳುತ್ತಾಳೆ.
ಭೂಮಿಕಾ ಮಾತಿಗೆ ಅಪ್ಪಿ ನೀರಸ ಪ್ರತಿಕ್ರಿಯೆ
ಅಪೇಕ್ಷ ಗೆ ಮಿಸ್ ಇಂಡಿಯಾ ಕಾಂಪಿಟಿಷನ್ ಗೆ ಮಹಿಮಾ ಹೇಳಿದ್ದಳು ಆದರೆ ಅಪ್ಪಿ ಈ ಬಾರಿ ಕಾಂಪಿಟೇಶನ್ ನಲ್ಲಿ ಭಾಗಿಯಾಗುತ್ತಿಲ್ಲಅದಕ್ಕೆ ಬಹಳ ಬೇಸರ ಆಗಿದೆ ಎಂದಾಗ ಅಪ್ಪಿ ಎದುರುಗಡೆ ಬರುತ್ತಾಳೆ. ಭೂಮಿಕಾ ಫೋನ್ ಅನ್ನು ಅಪ್ಪಿಗೆ ಕೊಡುತ್ತಾಳೆ. ಆಕೆಯ ತಾಯಿ, ಭೂಮಿಕಾ ಅಪ್ಪಿಯ ಬಳಿ ಯಾಕೆ ಹೀಗೆಲ್ಲ ಮಾಡುತ್ತಿದ್ದಿಯಾ ನೀನು ಎಂದು ಕೇಳಿದಾಗ ಅಪ್ಪಿ ಏನು ಮಾತನಾಡದೆ ಏನಿಲ್ಲ ಅಕ್ಕ ತಲೆ ನೋವು ನನಗೆ ಅದಕ್ಕೆ ಈ ಕಾಂಪಿಟಿಷನ್ ಅನ್ನು ಕೈ ಬಿಟ್ಟೆ ಎಂದು ಹೇಳಿ ಫೋನ್ ಕಟ್ ಮಾಡುತ್ತಾಳೆ.

ತಂಗಿಯ ಮಾತಿನಿಂದ ಭೂಮಿಕಾ ಗೆ ಹೆಚ್ಚಿದ ಅನುಮಾನ
ಇದನ್ನು ನೋಡಿದ ಭೂಮಿಕಾ ಗೆ ಮನೆಯಲ್ಲಿ ಏನೋ ಸರಿ ಇಲ್ಲ ಎನ್ನುವುದು ಮಾತ್ರ ಖಾತ್ರಿ ಆಗುತ್ತದೆ. ಸ್ಟೂಡೆಂಟ್ ಗೆ ಸಹಾಯ ಮಾಡುವ ಉದ್ದೇಶದಿಂದ ಪಾರ್ಥ ಮಾತ್ರ ಹಣ ಕಲೆಕ್ಟ್ ಮಾಡುವ ಯೋಜನೆ ಮಾಡುತ್ತಾನೆ. ಮಕ್ಕಳ ಜೊತೆ ಓದಿಕೊಳ್ಳಲು ಹೇಳಿದ ಪಾರ್ಥ ಹಣ ಕಲೆಕ್ಟ್ ಮಾಡಲು ಹೋಗುತ್ತಾನೆ. ಇದನ್ನು ನೋಡಿದ ಆನಂದ್ ಹಾಗೂ ಗೌತಮ್ ಅರೆರೆ ಇದು ಪಾರ್ಥ ಅಲ್ವಾ . ಸೋಲೋ ಟ್ರಿಪ್ ಗೆ ಹೋಗುತ್ತೇನೆ ಎಂದು ಹೇಳಿ ಇಲ್ಲೇನು ಮಾಡುತ್ತಿದ್ದಾನೆ ಎಂದು ಯೋಚನೆ ಮಾಡುತ್ತಾರೆ. ಇನ್ನೂ ಗೌತಮ್ ಮರೆಯಲ್ಲಿ ನಿಲ್ಲುತ್ತಾನೆ ಪಾರ್ಥ ನ ಬಳಿಗೆ ಆನಂದ್ ನನ್ನು ಕಳುಹಿಸುತ್ತಾನೆ ಆತ ಹಣ ಕಲೆಕ್ಟ್ ಮಾಡುತ್ತಿರುವ ವಿಚಾರ ತಿಳಿದು ಆನಂದ್ ಕೂಡ ಹಣದ ಸಹಾಯ ಮಾಡುತ್ತಾನೆ.
ತಮ್ಮನ ಬಗ್ಗೆ ಹೆಮ್ಮೆಪಟ್ಟ ಗೌತಮ್
ಇನ್ನೂ ಗೌತಮ್ ಆನಂದ್ ಬಳಿ ಪಾರ್ಥ ತುಂಬಾ ಸ್ವಾಭಿಮಾನಿ ಆಗಿದ್ದಾನೆ ಆತ ತಾನೇ ದುಡಿದು ಸಂಪಾದನೆ ಮಾಡಬೇಕು ಎನ್ನುವ ಆಸೆ ಆತನಿಗೆ. ನಾನು ಅದೆಷ್ಟು ಬಾರಿ ಆತನನ್ನು ಆಫೀಸ್ ಗೆ ಕರೆದೆ ಆದರೆ ಆತ ಮಾತ್ರ ಆಫೀಸ್ ಗೆ ಬರಲು ಒಪ್ಪುವುದು ಇಲ್ಲ ಎಂದು ಹೇಳಿ ಅಲ್ಲಿಂದ ಹೋಗುತ್ತಾನೆ. ಇನ್ನೂ ಶಕುಂತಲಾ ದೇವಿಗೆ ಮಗನ ಜೀವನ ಹೀಗಾಗುತ್ತಿದೆಯಲ್ಲ ಎಂದು ಬಹಳ ಬೇಸರ ಮಾಡಿಕೊಂಡಿರುತ್ತಾಳೆ. ಇದಕ್ಕೆ ಆಕೆಯ ಅಣ್ಣ ಕೂಡ ಸ್ವಲ್ಪ ಸೊಪ್ಪು ಹಾಕುತ್ತಾನೆ. ಭೂಮಿಕಾ ಜೊತೆ ಕೊಂಚ ಜಾಗ್ರತೆಯಿಂದ ಈ ಕೇಸ್ ಹ್ಯಾಂಡಲ್ ಮಾಡಬೇಕು ಎನ್ನುವ ಮಾತನ್ನು ಶಕುಂತಲಾ ದೇವಿಗೆ ಹೇಳುತ್ತಾನೆ.


Click it and Unblock the Notifications











