Amruthadhaare ; ಗೌತಮ್ ಮನಸ್ಸನ್ನು ಡೈವರ್ಟ್ ಮಾಡಿದ ಮಲತಾಯಿ, ಬಾಂಬ್ ಇಟ್ಟವರು ಯಾರು ?
ಗೌತಮ್ ಗೆ ಒಂದು ಕಡೆ ತನ್ನ ತಂಗಿ ಹಾಗೂ ತಾಯಿಯನ್ನು ಹುಡುಕುವ ಕೆಲಸ ಮತ್ತೊಂದು ಕಡೆ ತನ್ನ ಮನೆಗೆ ಯಾರು ಬಾಂಬಿಟ್ಟಿದ್ದಾರೆ ಎನ್ನುವ ವಿಚಾರವನ್ನು ಹುಡುಕಾಡುವ ಕೆಲಸ. ಇದೀಗ ಎರಡು ಕೆಲಸವನ್ನ ಗೌತಮಿ ಒಬ್ಬರೇ ನಿಭಾಯಿಸುತ್ತಿದ್ದಾರೆ ಗೌತಮ್ಗೆ ತನ್ನ ಮಲತಾಯಿಂದ ಯಾವುದೇ ರೀತಿಯ ಸಹಾಯ ಆಗುತ್ತಿಲ್ಲ. ಮಲತಾಯಿ ಆತನನ್ನು ಇನ್ನಷ್ಟು ಕುಗ್ಗಿಸುವುದೇ ಹೊರತು ಆಕೆ, ಆತ್ಮಸ್ಥೈರ್ಯವನ್ನ ತುಂಬುವ ಕೆಲಸವನ್ನೇ ಮಾಡುವುದಿಲ್ಲ. ಇತ್ತೀಚಿನ ದಿನಗಳಲ್ಲಿ ಗೌತಮ್ ತಾಯಿ ಹಾಗೂ ಗೌತಮ್ ತಂಗಿ ಇಬ್ಬರೂ ಬದುಕಿದ್ದಾರೇ ಎನ್ನುವ ವಿಚಾರ ಆಕೆಯ ಮನಸ್ಸಿನಲ್ಲಿ ಬಹಳಷ್ಟು ಸಂಶಯವನ್ನು ಮೂಡಿದೆ.
ಶಕುಂತಲಾ ದೇವಿ ತನ್ನ ತಮ್ಮನ ಜೊತೆ ಸೇರಿಕೊಂಡು ಹೇಗಾದರೂ ಮಾಡಿ ಗೌತಮ್ ದಿವಾನ ತಾಯಿ ಹಾಗೂ ತಂಗಿಯನ್ನ ಹುಡುಕಾಟ ಮಾಡಬೇಕು ಇಲ್ಲವಾದರೆ ಮುಂದೊಂದು ದಿನ ನಮಗೆ ಬಹಳ ಕಷ್ಟಗಳು ಬರಲು ಶುರುವಾಗುತ್ತದೆ ಎಂದು ಅಂದುಕೊಳ್ಳುತ್ತಾಳೆ ಶಕುಂತಲಾ ದೇವಿಗೆ ಗೌತಮ್ ದಿವಾನ್ ಆಸ್ತಿಯ ಮೇಲೆ ಕಣ್ಣು ಆಕೆಗೆ ಯಾರು ಏನೇ ಆದರೂ ತಾನು ಹಾಗೂ ತನ್ನ ಮಕ್ಕಳು ಚೆನ್ನಾಗಿರಬೇಕು ಎನ್ನುವುದೊಂದೇ ಆಕೆಯ ಮನಸ್ಸಲ್ಲಿರುವುದು ಆದರೆ ಗೌತಮ್ಗೆ ತನ್ನ ತಾಯಿ ಹಾಗೂ ತಂಗಿ ಜೀವಂತವಾಗಿದ್ದಾರೆ ಎಂದು ತಿಳಿದು ಬಹಳ ಖುಷಿಯಾಗುತ್ತದೆ.

ಆದರೆ ಇದೀಗ ಸುಧಾ ಮನೆಗೆ ಆಗಮಿಸಿದ್ದಾಳೆ. ಆದರೆ ಆಕೆ ಗೌತಮ್ ಮನೆಗೆ ಬಂದಿರುವ ಉದ್ದೆಶವೇ ಬೇರೆಯಾಗಿದೆ. ಇನ್ನು ಭೂಮಿಕ ಬಳಿಗೆ ಗೌತಮ್ ಬರುತ್ತಾನೆ. ಆಕೆಯ ಜೊತೆ ಆರೋಗ್ಯದ ಬಗ್ಗೆ ವಿಚಾರಣೆಯನ್ನು ಕೂಡ ಮಾಡುತ್ತಾನೆ ಭೂಮಿಕ ಎಂದರೆ ಗೌತ ಬಹಳ ಪ್ರೀತಿ, ಆಕೆಯನ್ನ ಚೆನ್ನಾಗಿ ನೋಡಿಕೊಳ್ಳಲು ದಾಳನ್ನ ನೇಮಕ ಮಾಡಿರುತ್ತಾನೆ. ಹಾಗೆ ಇದೀಗ ಮನೆಗೆ ಯಾರು ಬಂದಿದ್ದಾರೆ ಎನ್ನುವುದು ಕೂಡ ತಿಳಿದುಕೊಳ್ಳಲು ಹರಸಾಹಸ ಪಡುತ್ತಿದ್ದಾನೆ ತನ್ನ ಮನೆಯವರ ಮೇಲೆ ಹಾಗೂ ತನ್ನ ಮೇಲೆ ಯಾರಿಗೆ ಇಷ್ಟೊಂದು ಬೇಸರವಿದೆ ಎನ್ನುವುದು ಗೊತ್ತಾಗುವುದಿಲ್ಲ ಇದೆಲ್ಲವನ್ನ ತನ್ನ ಹೆಂಡತಿಯ ಬಳಿ ಗೌತಮ್ ದಿವಾನ್ ಹೇಳಿಕೊಳ್ಳುತ್ತಾನೆ.
ಬಾಂಬ್ ಇಟ್ಟವರು ಯಾರು ಎಂಬ ಆಲೋಚನೆಯಲ್ಲಿ ಜೈ ದೇವ್
ಜೈ ದೇವ್ ಕೂಡ ಮಲ್ಲಿ ಜೊತೆ ಇದೇ ವಿಚಾರವನ್ನು ಮಾತನಾಡುತ್ತಿರುತ್ತಾನೆ. ಹೇಗಾದರೂ ಮಾಡಿ ನಮ್ಮ ಮನೆಯವರನ್ನ ಟಾರ್ಗೆಟ್ ಮಾಡುವ ಅವನು ಯಾರು ಎನ್ನುವುದು ನಾವು ನೋಡಲೇಬೇಕು ನಮ್ಮ ಮನೆಯ ವಿರುದ್ಧ ಯಾರು ಕತ್ತಿ ಮಸೆಯುತ್ತಿದ್ದಾರೆ ಎನ್ನುವುದು ಸ್ಪಷ್ಟವಾಗಬೇಕು ಎಂದು ಮಲ್ಲಿ ಜೊತೆ ಹೇಳುತ್ತಾನೆ. ಇತ್ತ ಅಪ್ಪಿ ಸುಧಾ ತನ್ನ ಮಾತು ಕೇಳಲಿಲ್ಲ ಎಂದು ಬಹಳ ಕೋಪ ಮಾಡಿಕೊಂಡಿರುತ್ತಾಳೆ. ಇದನ್ನು ನೋಡಿದ ಪಾರ್ಥ ಅಪ್ಪಿಗೆ ಸಮಾಧಾನ ಮಾಡುತ್ತಾರೆ ಹಾಗೆ ನೀನು ಮಾಡುತ್ತಿರುವ ಕೆಲಸಗಳು ಯಾವುದು ಕೂಡ ಸರಿಯಾಗಿಲ್ಲ ಈ ರೀತಿ ಮಾಡುವುದು ತಪ್ಪು. ಅಪೇಕ್ಷ ನೀನು ಮುಂಚಿನ ಹಾಗೆ ಎಲ್ಲರೊಂದಿಗೆ ಖುಷಿಯಿಂದ ಮಾತನಾಡಿಸುತ್ತಿಲ್ಲ ಎಲ್ಲರ ಜೊತೆ ಬೆರೆಯುತ್ತಿಲ್ಲ
ಅಪ್ಪಿಗೆ ಬುದ್ದಿ ಹೇಳಿದ ಪಾರ್ಥ
ಹಾಗೆಯೇ ನಿನ್ನ ಅಕ್ಕನನ್ನು ನೋಡಿದರೆ ನಿನಗೆ ಆಗುತ್ತಲೇ ಇಲ್ಲ ನಿನ್ನ ಅಕ್ಕ ನಮ್ಮೆಲ್ಲರನ್ನ ಕಾಪಾಡಿದ್ದಾರೆ ಆದರೆ ಅವರಿಗೆ ಒಂದು ಕೃತಜ್ಞತೆಯನ್ನು ನೀನು ಸಲ್ಲಿಸಲಿಲ್ಲ ಅವರ ಜೊತೆ ಮಾತನಾಡಲಿಲ್ಲ ಅಕ್ಕ ನಿನಗೆ ಇಷ್ಟೊಂದು ಏಟಾಗಿದೆ. ನೀನು ಹೇಗಿದ್ದೀಯಾ ಎನ್ನುವುದನ್ನು ಕೂಡ ಹಾಕಿಯ ಜೊತೆ ನೀನು ಕೇಳಲಿಲ್ಲ. ಆದರೆ ನೀನು ಮಾಡಬೇಕಾದ ಕೆಲಸ ಒಂದೇ, ಭೂಮಿಕಾ ಅವರನ್ನ ಚೆನ್ನಾಗಿ ನೋಡಿಕೊಳ್ಳುವುದು ಎಂದು ಹೇಳಿದಾಗಲೇ ಅಪ್ಪಿಗೆ ಬಹಳ ಕೋಪ ಬರುತ್ತದೆ. ಆಕೆ ಪಾರ್ಥನ ಬಾಯನ್ನ ಮುಚ್ಚಿಸಿ ಬಿಡುತ್ತಾಳೆ. ಸುಧಾ ಮನೆಗೆ ಹೋಗುವ ಹೊತ್ತು ಆಕೆ ಭೂಮಿಕ ಜೊತೆ ಒಂದು ಮಾತನ್ನು ಹೇಳಿ ಮನೆಗೆ ಹೊರಡಲು ಅನ್ನುವಾಗುತ್ತಾಳೆ.
ಸುಧಾಗೆ ಆರ್ಥಿಕ ನೆರವು ನೀಡಲು ಮುಂದಾದ ಭೂಮಿಕಾ
ಆಗ ಭೂಮಿಕಾ ಸುಧಾ ನನ್ನ ರೂಮಿನ ಒಳಗೆ ಬರ ಮಾಡಿಕೊಂಡು ಬೆಡ್ ಮೇಲೆ ಊರಲು ಹೇಳುತ್ತಾಳೆ ಇದನ್ನು ನೋಡಿದ ಸುಧಾಗೆ ಬಹಳ ಶಾಕ್ ಆಗುತ್ತದೆ ಆಕೆ ಬೆಡ್ ಮೇಲೆ ಕೂತುಕೊಳ್ಳಲು ನಿರಾಕರಿಸುತ್ತಾಳೆ ಆ ಕೂಡಲೇ ಭೂಮಿಕಾ ಬೆಡ್ ಮೇಲೆ ಕೂರಿಸಿಬಿಡುತ್ತಾಳೆ ಬಳಿಕ ಆಕೆಗಿರುವ ಪ್ರಾಬ್ಲಮ್ ಬಗ್ಗೆ ಆಕೆಯ ಬಳಿ ಕೇಳಿದಾಗ ಆಕೆ ಯಾವುದು ಕೂಡ ಬಾಯಿ ಬಿಡುವುದಿಲ್ಲ. ಕೊನೆಗೆ ಒಂದು ಹಣದ ಗಂಟನ್ನು ಭೂಮಿಕಾ ಮೆತ್ತಗೆ ಸುಧಾಕೈಗೆ ನೀಡಿದಾಗ ಆಕೆ ಅದನ್ನು ತೆಗೆದುಕೊಳ್ಳಲು ನಿರಾಕರಿಸುತ್ತಾಳೆ. ಬಳಿಕ ಸುಧಾ ಹೇಳುತ್ತಾಳೆ ನನಗೆ ಅಂತಹ ದೊಡ್ಡ ಪ್ರಾಬ್ಲಮ್ ಬಂದಾಗ ನಾನು ನಿಮ್ಮ ಜೊತೆ ಹೇಳುತ್ತೇನೆ ಇದೀಗ ನನಗೆ ಹಣದ ಅವಶ್ಯಕತೆ ಇಲ್ಲ ನನಗೆ ಈ ಹಣ ಬೇಡ ಎಂದು ಹೇಳುತ್ತಾಳೆ. ಬಳಿಕ ಭೂಮಿಕಾ ಆಕೆಯನ್ನು ಒತ್ತಾಯ ಮಾಡುವುದಿಲ್ಲ ನಿನಗೆ ಯಾವಾಗ ಹಣ ಬೇಕು ಎಂದು ಅನಿಸುತ್ತದೆಯೋ ಆಗ ನನ್ನ ಬಳಿ ಬಂದು ಹಣವನ್ನು ಕೇಳು ಎಂದು ಹೇಳುತ್ತಾಳೆ.


Click it and Unblock the Notifications











