Amruthadhare ; ಹಳೆ ಚಾಳಿ ಮುಂದುವರೆಸಿದ ಜೈ ದೇವ್, ಜೈ ದೇವ್ ಬದಲಾಗುತ್ತಾನೆ ಎಂದುಕೊಂಡ ಅಭಿಮಾನಿಗಳಿಗೆ ಬೇಸರ

By ಪೂರ್ವ

ಅಪ್ಪಿ ಹಾಗೂ ಪಾರ್ಥ ನಡುವೆ ಮತ್ತೆ ಪ್ರೀತಿ ಅರಳಿದೆ. ಇಬ್ಬರು ಮದುವೆ ಆಗಿ ಈಗಾಗಲೇ ಪ್ರೀತಿ ಎಂಬ ಪದಕ್ಕೆ ಅರ್ಥ ತುಂಬಿದ್ದಾರೆ. ಆದರೆ ಇದೀಗ ಅಪ್ಪಿ ಹಾಗೂ ಪಾರ್ಥ ಪ್ರೀತಿ ಶುರುವಾಗಿ ಒಂದು ವರುಷಗಳೇ ಸಂದಿದೆ. ಅಪ್ಪಿ ಗೆ ಇದೀಗ ಪಾರ್ಥ ಸರ್ಪ್ರೈಸ್ ಗಿಫ್ಟನ್ನು ನೀಡಿದ್ದಾನೆ. ಪಾರ್ಥಗೆ ತನ್ನ ಹೆಂಡತಿ ಎಂದರೆ ಬಹಳ ಪ್ರೀತಿ. ಯಾವಾಗ ತಪ್ಪು ಮಾಡಿದರೂ ಆಕೆಯ ತಪ್ಪನ್ನು ಆಕೆಗೆ ತೋರ್ಪಡಿಸುವ ಕೆಲಸವನ್ನು ಮಾಡುತ್ತಾನೆ. ಇನ್ನು ಇದೆಲ್ಲವನ್ನು ನೋಡಿದ ಅಪ್ಪಿಗೆ ಬಹಳ ಕೋಪ ಬರುತ್ತದೆ .ಪಾರ್ಥ ಯಾವತ್ತೂ ಅಕ್ಕನ ಬಗ್ಗೆ ಮಾತನಾಡುತ್ತಾರೆ ಎನ್ನುವ ಆಲೋಚನೆ ಆಕೆಗೆ ಮೂಡುತ್ತದೆ.

ಆದರೆ ಇದೀಗ ಅಪ್ಪಿಗೆ ಪಾರ್ಥ ಸರ್ಪ್ರೈಸ್ ಗಿಫ್ಟನ್ನು ನೀಡಿದ್ದಾನೆ. ಮೊದಲ ಪ್ರೀತಿಯ ದಿನವನ್ನ ಹೆಂಡತಿಯ ಜೊತೆ ನೆನಪು ಮಾಡಿಕೊಳ್ಳುತ್ತಾನೆ. ಆಗ ಅಪ್ಪಿಗೆ ತನ್ನ ಗಂಡನ ಪ್ರೀತಿಯ ನೋಡಿ ಇನ್ನಷ್ಟು ಖುಷಿಯಾಗುತ್ತದೆ. ಇತ್ತ ಗೌತಮ್ ತನ್ನ ಕುಚಿಕು ಗೆಳೆಯನ ಜೊತೆಗೆ ಮಾತನಾಡುತ್ತಾ ಕಾರಿ ನಲ್ಲಿ ಹೋಗುತ್ತಿರುತ್ತಾನೆ. ಗೌತಮ್ ಆನಂದ್ ಬಳಿ ಬಹಳ ಖುಷಿಯಿಂದ ಸುಧಾ ಬಗ್ಗೆ ಹೊಗಳಿ ಮಾತನಾಡುತ್ತಾನೆ ಹಾಗೆಯೇ ಸುಧಾಳನ್ನ ಮನೆಗೆ ಕರೆದುಕೊಂಡು ಬಂದಿರುವುದು ನನಗೆ ಬಹಳ ಖುಷಿಯಾಗಿದೆ ಎಂದು ತನ್ನ ಗೆಳೆಯನ ಬಳಿ ಹೇಳುತ್ತಾನೆ.

kannada serial amruthadhare written 23th November

ಸುಧಾ ತನ್ನ ಹೆಂಡತಿಯನ್ನು ತುಂಬಾ ಚೆನ್ನಾಗಿ ನೋಡಿ ಕೊಳ್ಳುತ್ತಿದ್ದಾಳೆ ಆಕೆ ಮಾಡುವ ಕಾಫಿಯನ್ನು ಕುಡಿದರಂತು ಸ್ವರ್ಗ.ಅಷ್ಟು ಚೆನ್ನಾಗಿ ಅಡುಗೆ ಮಾಡುತ್ತಾಳೆ. ಮನೆಯಲ್ಲಿ ಎಲ್ಲಾ ಕೆಲಸ ಬಹಳ ಅಚ್ಚು ಕಟ್ಟಾಗಿ ಮಾಡುತ್ತಾಳೆ ಎಂದು ಗೌತಮ್ ಸುಧಾ ಗುಣಗಾನ ಮಾಡುತ್ತಾಳೆ. ಸುಧಾಗೆ ತಾನು ಮಾಡುತ್ತಿರುವುದು ಸರಿಯೋ ತಪ್ಪು ಎನ್ನುವ ಆಲೋಚನೆ ಆಕೆಗೆ ಮೂಡಿದೆ. ಈ ಮನೆಯಲ್ಲಿ ಎಲ್ಲರೂ ಕೂಡ ತುಂಬಾ ಒಳ್ಳೆಯವರು, ಇವರಿಗೆ ಮೋಸ ಮಾಡಲು ಅಂತು ನನ್ನಿಂದ ಸಾಧ್ಯವಿಲ್ಲ ಆದರೂ ನಾನು ಹಿಡಿದ ಕೆಲಸ ಮಾಡಲೇಬೇಕಾಗಿದೆ ಎನ್ನುತ್ತಾಳೆ

ಗೊಂದಲದಲ್ಲಿರುವ ಸುಧಾ ನಿರ್ಧಾರವೇನು?

ನನ್ನ ತಾಯಿ ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕು . ಅವರಿಗೆ ಟ್ರೀಟ್ ಮೆಂಟ್ ಕೊಡಬೇಕು. ನನಗೆ ಈ ದಾರಿ ಅಲ್ಲದೆ ಬೇರೆ ದಾರಿ ಯಾವುದು ಕಾಣಿಸುತ್ತಿಲ್ಲ ಎಂದು ಬಹಳ ನೋವಿನಿಂದ ಮನದಲ್ಲಿಯೇ ಹೇಳುತ್ತಾಳೆ. ಇತ್ತ ಜೈ ದೇವ್ ಹಳೆ ಚಾಳಿಯನ್ನು ಮುಂದುವರೆಸಿದ್ದಾನೆ. ಆತನಿಗೆ ದಿಯಾ ಮೇಲಿನ ಹುಚ್ಚು ಪ್ರೀತಿ ಇನ್ನೂ ಕೈ ಬಿಟ್ಟಿಲ್ಲ. ಮನೆಯಲ್ಲಿ ಮುದ್ದಾದ ಹೆಂಡತಿ ಇದ್ದರೂ ಆಕೆಯ ಜೊತೆ ಚೆನ್ನಾಗಿ ಬದುಕು ಸಾಗಿಸಿಕೊಂಡು ಹೋಗುವ ಬದಲು ದಿಯಾ ಹಿಂದೆ ಬಿದ್ದಿದ್ದಾನೆ. ದಿಯಾ ಜೈ ದೇವ್ ಗೆ ಕರೆ ಮಾಡಿ ಬಹಳ ಪ್ರೀತಿಯಿಂದ ಮಾತನಾಡುತ್ತಾಳೆ.

ಮಲ್ಲಿಯನ್ನು ನೋಡಿ ಟ್ರ್ಯಾಕ್ ಬದಲಾಯಿಸಿದ ಜೈದೇವ್

ಜೈ ದೇವ್ ಬಳಿ ನಾನು ಈಗಲೇ ನಿನ್ನ ಭೇಟಿ ಆಗಬೇಕು ಎಂದು ಜೈ ದೇವ್ ಆಗಾಗ ಕೇಳುತ್ತನೆ ಇರುತ್ತಾರೆ. ಆದರೆ ಜೈ ದೇವ್ ಮಾತ್ರ ಹಿಂದೇಟು ಹಾಕುತ್ತನೆ ಇರುತ್ತಾನೆ. ಅಷ್ಟರಲ್ಲಿ ಅಲ್ಲಿಗೆ ಮಲ್ಲಿ ಬರುವುದನ್ನು ನೋಡಿದ ಜೈ ದೇವ್ ಮೆತ್ತಗೆ ನಾಟವಾಡುತ್ತಾನೇ. ಆದರೆ ಮಲ್ಲಿಗೆ ಎನು ಅರ್ಥ ಆಗದೆ ಜೈ ದೇವ್ ಮುಖ ನೋಡುತ್ತಾಳೆ. ದಿಯಾಗೆ ಜೈದೇವ್ ಮಾತು ಕೇಳಿದೊಡನೆ ಆತನ ಹೆಂಡತಿ ಬಂದಿದ್ದಾಳೋ ಏನೋ ಎಂದು ಸುಮ್ಮನಾಗುತ್ತಾರೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X