Amruthadhare ; ಕೋಮಾ ಗೆ ಜಾರಿದ ಆನಂದ್ , ಜೈ ದೇವ್ ಅಟ್ಟಹಾಸಕ್ಕೆ ಕೊನೆ ಎಂದು
ಜೈ ದೇವ್ ಮಾಡಿದ ಕುತಂತ್ರದಿಂದ ಆನಂದ್ ಗೆ ಇದೀಗ ಸಂಕಷ್ಟ ಎದುರಾಗಿದೆ. ಆನಂದ್ ಗೆ ಜೈ ದೇವ್ ಈ ರೀತಿ ಎಲ್ಲಾ ಕಾಟ ಕೊಡುತ್ತಾನೆ ಎಂದು ಅಂದುಕೊಂಡು ಇರುವುದಿಲ್ಲ ಆತ. ಆನಂದ್ ಗೌತಮ್ ಬಳಿ ನಿಜ ಹೇಳಬೇಕು ಅಂದುಕೊಂಡು ಇರುತ್ತಾನೆ. ಹಾಗೆಯೇ ಈ ನಿಜ ವಿಚಾರ ಎನು ಎಂಬುವುದನ್ನು ತನ್ನ ಗೆಳೆಯ ತಿಳಿದುಕೊಳ್ಳಬೇಕು ಎಂದು ಅಂದುಕೊಂಡು ಇರುತ್ತಾನೆ. ಇನ್ನೂ ಜೈ ದೇವ್ ಆ ತರ ಮಾಡಿರುವುದು ಅಪರ್ಣಾ ಗೆ ಕೂಡ ತಿಳಿದಿರುವುದಿಲ್ಲ.
ಆಕೆಯ ಬಳಿ ಆನಂದ್ ಹೇಳಿಕೊಂಡಿದ್ದರು ಅದನ್ನು ಗೌತಮ್ ಕಿವಿಗೆ ಹೇಗಾದರೂ ಮುಟ್ಟಿಸುತ್ತಿದ್ದಳು. ಆದರೆ ಆನಂದ್ ಅದನ್ನು ಯಾರ ಜೊತೆ ಹೇಳದೆ ತಪ್ಪನ್ನು ಮುಚ್ಚಿಡುವ ಕೆಲಸ ಮಾಡುತ್ತಿದ್ದ. ಆದರೆ ಇದೇ ಆನಂದ್ ಗೆ ಮುಳುವಾಗಿದೆ ಎಂದು ಹೇಳಿದರೆ ತಪ್ಪಾಗದು. ಇನ್ನೂ ಆನಂದ್ ತಲೆಗೆ ಗಂಭೀರವಾಗಿ ಗಾಯವಾಗಿದ್ದು ಆತನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆದರೆ ಗೌತಮ್ ತನ್ನ ಗೆಳೆಯನ ಸ್ಥಿತಿ ಕಂಡು ಆತಂಕಕ್ಕೆ ಒಳಗಾಗಿದ್ದಾನೆ. ಇದೇನಿದು, ಅಚಾತುರ್ಯ ನಡೆದು ಹೋಯಿತು.

ಬಾಲ್ಯದ ಗೆಳೆಯನಿಗೆ ಹೀಗೆ ಆಗಿ ಬಿಟ್ಟರೆ ಹೇಗೆ? ಅಪರ್ಣಾ ಗತಿ ಏನು ಹಾಗೆಯೇ ಆನಂದ್ ಇಬ್ಬರ ಮಕ್ಕಳ ಗತಿ ಏನು ಎನ್ನುವ ಆತಂಕದಲ್ಲಿ ಇರುತ್ತಾನೆ. ಮೊದಲೆಲ್ಲ ಡಾಕ್ಟರ್ ಆನಂದ್ ಬದುಕಿ ಬರುತ್ತಾರೆ ಎಂದು ಹೇಳುತ್ತಿದ್ದವರು ಆ ಬಳಿಕ ಆನಂದ್ ಅವರು ಕೋಮಾ ಗೆ ಹೋಗಿದ್ದಾರೆ ಎಂದು ಹೇಳಿದಾಗ ಅಪರ್ಣಾ ಗೆ ಮಾತ್ರ ಎನು ಮಾಡಬೇಕು ಎಂದು ತಿಳಿಯದೇ ಕಂಗಾಲಾಗಿ ಹೋಗಿದ್ದಾಳೆ. ಅಪರ್ಣಾ ಗೆ ಆನಂದ್ ಎಂದರೆ ಬಹಳ ಇಷ್ಟ ಆದರೆ ಆನಂದ್ ಗೆ ಹೀಗೆ ಆಗಿದ್ದನ್ನು ನೆನಪು ಮಾಡಿಕೊಂಡು ಅಪರ್ಣಾ ಜೋರಾಗಿ ಅಳುತ್ತಾಳೆ.
ಅಪರ್ಣಾ ಗೆ ಸಾಂತ್ವನ ಹೇಳುತ್ತಿರುವ ಭೂಮಿಕಾ
ಆಕೆಗೆ ಬಹಳ ಬೇಸರ ಆಗುತ್ತದೆ. ಇನ್ನೂ ಭೂಮಿಕಾಗೆ ಯಾವ ರೀತಿ ಅಪರ್ಣಾಗೆ ಸಮಾಧಾನ ಮಾಡಬೇಕು ಎನ್ನುವುದೇ ತಿಳಿಯದಾಗುತ್ತದೆ. ಆನಂದ್ ನೆನಪಿಸಿಕೊಂಡು ಗೌತಮ್ ದಿನೇ ದಿನೇ ಮರುಗುತ್ತಿದ್ದಾನೆ. ತನ್ನ ಏಳು ಬೀಳುಗಳಲ್ಲಿ ಇದ್ದವನು ಆನಂದ್ ಈಗ ಆತನಿಗೆ ಇಂತಹ ಸ್ಥಿತಿ ಬಂದಿದೆ ಎಂದು ಗೊತ್ತಾದಾಗ ಆತನಿಗೆ ಬಹಳ ಬೇಸರ ಆಗುತ್ತದೆ. ಇನ್ನೂ ಜೈ ದೇವ್ ಬಹಳ ಬೇಸರದಿಂದ ಇರುವ ಹಾಗೆ ನಾಟಕ ಮಾಡುತ್ತಾನೆ.

ಖುಷಿಯಿಂದ ಕಾಲ ಕಳೆಯುತ್ತಿರುವ ಜೈದೇವ್
ಆತ ಬಹಳ ಖುಷಿಯಿಂದ ದಿನ ಕಳೆಯುತ್ತಿರುತ್ತಾನೆ. ಆನಂದ್ ನನ್ನ ತಂಟೆಗೆ ಬಂದಿದ್ದೆ ಇದಕ್ಕೆಲ್ಲ ಕಾರಣ. ಆತ ನನಗೆ ಬಹಳ ಹಿಂಸೆ ಮಾಡಿದ್ದಾನೆ. ಆತ ಸಾಯಬೇಕು ಎಂದು ಪ್ಲಾನ್ ಮಾಡಿದ್ದೆ ಆದರೆ ಆತನಿಗೆ ಈ ಸ್ಥಿತಿ ಬಂದಿದೆ. ಹೇಗಾದರೂ ಮಾಡಿ ಅವನನ್ನು ಇಲ್ಲ ಎನ್ನಿಸಿ ಬಿಟ್ಟರೆ ಒಳ್ಳೆಯದಿತ್ತು. ಆತ ಸತ್ತು ಹೋದರೆ ನನಗೆ ಯಾವ ಬೇಸರ ಇಲ್ಲ. ನನ್ನ ಸತ್ಯ ತಿಳಿದಿದ್ದು ಆತನಿಗೆ ಒಬ್ಬನಿಗೆ ಮಾತ್ರ. ಆದ ಕಾರಣ ಆತನಿಗೆ ಈ ಗತಿ ಬಂತು ಎಂದು ಬಹಳ ಖುಷಿಯಿಂದ ಇರುತ್ತಾನೆ. ಇನ್ನೂ ಗೌತಮ್ ನನ್ನು ಕರೆದ ಡಾಕ್ಟರ್ ಹೇಳುತ್ತಾರೆ.
ಆತಂಕದಲ್ಲಿರುವ ಗೌತಮ್
ಆನಂದ್ ಗೆ ಆಸ್ಪತ್ರೆಯಲ್ಲಿ ಇರುವ ಅಗತ್ಯ ಇಲ್ಲ. ಆತ ಈಗಾಗಲೇ ಕೋಮ ಗೆ ಹೋಗಿದ್ದಾರೆ. ಅವರಿಗೆ ಮನೆಯಲ್ಲಿ ಇರುವುದು ಉತ್ತಮ . ಮನೆಯ ವೆದರಿಗೆ ಅವರು ಬೇಗ ಚೇತರಿಕೆ ಮಾಡಿಕೊಳ್ಳಲುಬಹುದು ಎಂದು ಹೇಳುತ್ತಾರೆ. ಇದನ್ನು ಕೇಳಿದ ಗೌತಮ್ ಆಯಿತು ಎಂದು ಒಪ್ಪಿಗೆಯನ್ನು ಸೂಚಿಸುತ್ತಾನೆ.ಆನಂದ್ ನನ್ನು ನೇರವಾಗಿ ಮನೆಗೆ ಕರೆದುಕೊಂಡು ಹೋಗುತ್ತಾನೆ. ಇನ್ನು ಅಪರ್ಣ ಹಾಗೂ ಭೂಮಿಕಾ ಬಹಳ ಚಿಂತೆಯಲ್ಲಿ ಮನೆಯ ಸೋಫಾದ ಮೇಲೆ ಕುಳಿತಿರುತ್ತಾರೆ. ಅಪರ್ಣಾ ಗೆ ಬಹಳ ನೋವಾಗುತ್ತಿರುತ್ತದೆ..ತನ್ನ ಗಂಡನಿಗೆ ಇಂತಹ ಪರಿಸ್ಥಿತಿ ಬಂತು. ಆಕೆಗೆ ಎಂತಹ ಕಷ್ಟ ಕೊಟ್ಟು ಬಿಟ್ಟರು ಆ ದೇವರು ಎಂದು ಹೇಳುತ್ತಾರೆ.
ಇದನ್ನು ಕೇಳಿದ ಭೂಮಿಕಾ ಗೆ ಕೂಡ ಬಹಳ ಬೇಸರ ಆಗುತ್ತದೆ. ಇನ್ನೂ ಕುಡಿದು ತೂರಾಡುತ್ತಾ ಬಂದ ಜೈ ದೇವ್ ಮಾತ್ರ ನಾಟಕೀಯವಾಗಿ ಮಾತನಾಡಿ ತನ್ನದೇನು ತಪ್ಪಿಲ್ಲ ಎನ್ನುವ ಹಾಗೆ ಮಾತನಾಡುತ್ತಾನೆ. ಆನಂದ್ ಗೆ ಹೀಗೆ ಆಗಿದೆ ಎಂದು ತಿಳಿದು ಜೈ ದೇವ್ ಮನದಲ್ಲಿ ನಗುತ್ತಾ ಇರುತ್ತಾನೆ . ಗೊತ್ತಿರುವ ಹಾಗೆ ಮಾತನಾಡುತ್ತಾ ಇರುತ್ತಾನೆ. ಆದರೆ ಜೈದೇವ ಮಾತನ್ನ ಅಪರ್ಣ ಅಷ್ಟಾಗಿ ಕಿವಿಗೆ ಹಾಕಿ ಕೊಳ್ಳುವುದಿಲ್ಲ


Click it and Unblock the Notifications











