Amruthadhaare: ಅಜ್ಜಿ ಮಾತು ಕೇಳಿ ಗೌತಮ್ ಸಿಡಿಮಿಡಿ: ಭೂಮಿಕಾಳನ್ನೂ ತರಾಟೆಗೆ ತೆಗೆದುಕೊಂಡ ಗೌತಮ್
ಅಮೃತಧಾರೆ ಧಾರಾವಾಹಿ ಅದ್ಭುತವಾಗಿ ಮೂಡಿ ಬರುತ್ತಿದೆ. ಇದೀಗ ಭೂಮಿಕಾಗೆ ಕುಡಿದ ಮತ್ತು ಇಳಿದು ಹೋಗಿದೆ. ಆನಂದ್ ಹಾಗೂ ಅಪರ್ಣ ಜ್ಯೂಸ್‌ನಲ್ಲಿ ಆಲ್ಕೋಹಾಲ್ ಮಿಕ್ಸ್ ಮಾಡಿ ಭೂಮಿಕಾಗೆ ಕುಡಿಸಿ ಬಿಡುತ್ತಾರೆ. ಆ ಬಳಿಕ ಗೌತಮ್ ಪಟ್ಟ ಪಾಡು ಹೇಳತ್ತೀರದು.
ಅಷ್ಟರಮಟ್ಟಿಗೆ ಗೌತಮ್ ಕಷ್ಟಪಟ್ಟಿದ್ದಾನೆ. ನನ್ನ ಹೆಂಡತಿ ಕುಡಿದಿದ್ದಾಳೆ ಎಂದು ಯಾರಿಗೂ ತಿಳಿಯಬಾರದು ಎಂದುಕೊಂಡಿರುತ್ತಾನೆ. ಇನ್ನು ಐಸ್ ಕ್ರೀಮ್ ತಿನ್ನುವ ವೇಳೆ ಕೂಡ ಮಹಿಮಾ ಹಾಗೆ ಭೂಮಿಕಾ ತಮ್ಮ ತಂಗಿ ಸಿಗುತ್ತಾರೆ. ಅವರು ಮನೆಯಲ್ಲಿ ಮುಂದಿನ ತಿಂಗಳು ಪೂಜೆ ಇದೆ ಎಂದಾದಾಗ ಭೂಮಿಕಾ ಮೆತ್ತಗೆ ಹೇಳುತ್ತಾಳೆ.

ನಾವು ಆಗ ಹನಿಮೂನ್‌ಗೆ ಹೋಗಿರುತ್ತೇವೆ ಎಂದು ಹೇಳುತ್ತಾಳೆ. ಇದನ್ನು ಕೇಳಿದ ಮಹಿಮಾ ಹಾಗೂ ಜೀವನಿಗೆ ಬಹಳ ಖುಷಿಯಾಗುತ್ತದೆ. ಇದನ್ನು ಮನೆಯಲ್ಲಿ ಕೂಡ ಹೇಳುತ್ತಾರೆ. ಹಾಗೆಯೇ ಭೂಮಿಕಾ ತಾಯಿ ಅಜ್ಜಿಗೆ ಕಾಲ್ ಮಾಡಿ ಎಲ್ಲಾ ವಿಚಾರವನ್ನು ಹೇಳಿರುತ್ತಾರೆ. ಇನ್ನು ಭೂಮಿಕಾ ಕುಡಿದ ಮತ್ತಿನಲ್ಲಿ ಏನೇನು ಬಡಬಡಾಯಿಸಿರುತ್ತಾಳೆ.
ಭೂಮಿಕಾಳನ್ನು ಸಹಿಸಿಕೊಂಡ ಗೌತಮ್
ಎಲ್ಲವನ್ನು ಸಹಿಸಿಕೊಂಡು ಗೌತಮ್, ಚಾಪೆ ಹಾಕಿ ನೆಲದಲ್ಲಿ ಮಲಗುತ್ತಾನೆ. ಮರುದಿನ ಎದ್ದ ಕೂಡಲೇ ಭೂಮಿಕಾಗೆ ಕುಡಿದ ಮತ್ತು ಇಳಿದಿರುತ್ತದೆ. ಗೌತಮ್‌ನನ್ನು ಚಾಪೆಯಲ್ಲಿ ನೋಡಿ ಬಹಳ ದುಃಖವಾಗುತ್ತದೆ .ಇದೇನು ಗೌತಮ್ ಅವರೇ ಚಾಪೆಯಲ್ಲಿ ಮಲಗಿದ್ದೀರಾ ಎಂದೆಲ್ಲಾ ಪ್ರಶ್ನೆಯ ಮೇಲೆ ಪ್ರಶ್ನೆ ಮಾಡುತ್ತಾಳೆ. ಆ ವೇಳೆ ಗೌತಮ್ ಮಾತ್ರ ಏನು ಹೇಳದೆ ಸುಮ್ಮನೆ ಇರುತ್ತಾನೆ.
ಮೊಮ್ಮಗನನ್ನು ಬೇಕು ಅಂತ ಪೀಡಿಸುತ್ತಿರುವ ಅಜ್ಜಿ
ಇನ್ನು ಇಬ್ಬರು ಮಹಡಿ ಮೇಲಿಂದ ಕೆಳಗಿಳಿದು ಬಂದಾಗ ಅಜ್ಜಿ ಬಹಳ ಖುಷಿಯಲ್ಲಿ ಇರುತ್ತಾರೆ. ಬೇಗ ಹನಿಮೂನು ಮುಗಿಸಿಕೊಂಡು ಬನ್ನಿ, ನನಗೆ ಮೊಮ್ಮಗನ ಜೊತೆ ಆಟ ಆಡಬೇಕೆಂದು ಮನಸ್ಸಾಗಿದೆ ಎಂದೆಲ್ಲಾ ಹೇಳುತ್ತಾಳೆ. ಇದನ್ನೆಲ್ಲ ಕೇಳಿದ ಗೌತಮ್ ಮಾತ್ರ ಭೂಮಿಕಾ ಮುಖ ನೋಡಿ ಸಿಡಿಮಿಡಿಗೊಳ್ಳುತ್ತಾನೆ. ಇನ್ನೂ ಗೌತಮ್ ರೂಮಿನೊಳಗೆ ಕೋಪದಿಂದ ಬರುತ್ತಾನೆ.
ಗೌತಮ್ ಕೋಪ ನೋಡಿ ಹೌಹಾರಿದ ಭೂಮಿಕಾ
ಗೌತಮ್ ನನ್ನು ಫಾಲೋ ಮಾಡಿಕೊಂಡು ಭೂಮಿಕಾ ಬರುತ್ತಾಳೆ . ಗೌತಮ್ ಮಾತ್ರ ಭೂಮಿಕಾಳನ್ನು ತರಾಟೆಗೆ ತೆಗೆದುಕೊಳ್ಳುತ್ತಾನೆ.


Click it and Unblock the Notifications











