Amrutadhare ; ಭೂಮಿಕಾ ಒಳ್ಳೆತನ ಆಕೆಗೆ ಮುಳುವಾಗುತ್ತಾ? ಪಾರ್ಥ ಅಪೇಕ್ಷ ಪ್ರೀತಿಗೆ ಭೂಮಿಕಾ ಅಡ್ಡಿ ಆಗುತ್ತಾಳ?
ಭೂಮಿಕಾ ಒಳ್ಳೆತನವನ್ನು ಶಕುಂತಲಾ ದೇವಿ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾಳೆ. ಆಕೆಗೆ ಹೇಗೆ ಬೇಕು ಹಾಗೆಯೇ ಭೂಮಿಕಾಳನ್ನ ಆಡಿಸುತ್ತಿದ್ದಾಳೆ. ಅಪ್ಪಿ ಹಾಗೂ ಪಾರ್ಥನ ಒಟ್ಟಿಗೆ ಮದುವೆ ಮಾಡಬೇಕು ಅವರಿಬ್ಬರ ಪ್ರೀತಿನ ಎಲ್ಲರೂ ಒಪ್ಪಿಕೊಳ್ಳುವ ಹಾಗೆ ಆಗಬೇಕು ಎನ್ನುವುದು ಭೂಮಿಕಾ ಆಶಯವಾಗಿತ್ತು ಆದರೆ ಇದೀಗ ಆಗುತ್ತಿರುವುದೇ ಬೇರೆ ಭೂಮಿಕಾ ಜೊತೆ ಶಕುಂತಲಾ ದೇವಿ ಒಂದು ಮಾತನ್ನು ತೆಗೆದುಕೊಳ್ಳುತ್ತಾಳೆ
ಪಾರ್ಥ ಹಾಗೂ ಅಪ್ಪಿ ಯಾವತ್ತೂ ಮದುವೆಯಾಗಬಾರದು ಪಾರ್ಥನ ಮದುವೆ ಮಾಡಲು ನಾನು ಸಾಕಷ್ಟು ಕನಸನ್ನು ಕಂಡಿದ್ದೇನೆ. ಪಾರ್ಥನ ಮದುವೆ ಹೀಗೆ ಆಗಬೇಕು ಎನ್ನುವ ಆಲೋಚನೆ ನನಗಿದೆ. ಆದರೆ ಇದೀಗ ಪಾರ್ಥ ಅಪೇಕ್ಷನನ್ನು ಮದುವೆ ಆಗಬೇಕು ಎಂದುಕೊಂಡಿದ್ದಾನೆ. ಆದರೆ ನನಗೆ ಅದೆಲ್ಲ ಇಷ್ಟ ಆಗುತ್ತಿಲ್ಲ. ನನ್ನ ಯಾರು ಮಕ್ಕಳು ನಾನು ಹೇಳಿದ ಹಾಗೆ ಯಾರು ಕೇಳಿಲ್ಲ. ಪಾರ್ಥನಿಗೆ ಆದರೂ ನಾನು ಮದುವೆ ಮಾಡಬೇಕು ನಾನು ಅಂದುಕೊಂಡಿರುವ ಹುಡುಗಿಯನ್ನು ನಾನು ಮನೆ ಸೊಸೆ ಮಾಡಿಕೊಳ್ಳಬೇಕು ಎಂದು ತನ್ನ ಮನದಲ್ಲಿರುವ ಆಸೆ ಹೊರ ಹಾಕುತ್ತಾಳೆ.

ಭೂಮಿಕಾ ಗೆ ಇದೀಗ ಏನು ಮಾಡಬೇಕು ತಿಳಿಯದೇ ಅತ್ತೆಯ ಮಾತಿಗೆ ಆಯಿತು ಎಂದು ಪ್ರಾಮಿಸ್ ಮಾಡುತ್ತಾಳೆ. ಆದರೆ ಅತ್ತೆಗೆ ಏನು ಹೇಳಲಾಗದೆ ತನ್ನ ದುಃಖವನ್ನು ಮನದಲ್ಲಿಯೇ ಇಟ್ಟುಕೊಳ್ಳುತ್ತಾಳೆ. ಇನ್ನೂ ಭೂಮಿಕಾ ಮನೆಗೆ ಅಪ್ಪಿ ಬಂದಾಗ ಕೂಡ ಭೂಮಿಕಾ ಆಕೆಯ ಮಾತನ್ನು ಕೇಳಲು ರೆಡಿ ಇಲ್ಲ. ಮಿಸ್ ಇಂಡಿಯಾ ಕಾಂಪಿಟೇಶನ್‌ಗೆ ನೀನು ಪಾರ್ಟಿಸಿಪೇಟ್ ಮಾಡಬೇಕು ಎಂದು ಹೇಳಿ ಆಕೆಯನ್ನು ಮನೆಯಿಂದ ಕಳುಹಿಸುತ್ತಾಳೆ. ಆದರೆ ಆಕೆಯ ಉದ್ದೇಶ ಒಂದೇ ಅಪ್ಪಿ ಏನಾದರು ಒಂದು ಸಾಧನೆ ಮಾಡಬೇಕು . ಆಕೆಗೆ ಕೂಡ ಇಂತಹ ಮನೆಗೆ ಬರಲು ಯೋಗ್ಯತೆ ಇದೆ ಎನ್ನುವುದು ಈ ಮನೆಯವರಿಗೆ ಅರಿವಾಗಬೇಕು ಎಂದು ಆಲೋಚನೆ ಮಾಡುತ್ತಿರುತ್ತಾಳೆ. ಇನ್ನೂ ಪಾರ್ಥ ನ ಮದುವೆಯ ಸುದ್ದಿ ಎಲ್ಲರೂ ಮಾತನಾಡುತ್ತಿರಬೇಕಾದರೆ, ಭೂಮಿಕಾಗೆ ಬಹಳ ದೊಡ್ಡ ತಲೆ ನೋವಾಗಿ ಪರಿಣಮಿಸುತ್ತದೆ.
ಗೌತಮ್ ಮಾತಿಗೆ ಸುಮ್ಮನಾದ ಭೂಮಿಕಾ
ಎನು ಮಾಡಬೇಕು, ಎನು ಮಾತನಾಡಬೇಕು ಎಂದು ತಿಳಿಯ.ದೇ ತಡಕಾಡುತ್ತಾರೆ. ಇನ್ನೂ ಗೌತಮ್ ಭೂಮಿಕಾ ಮುಖ ನೋಡಿ ಯಾಕೆ ಭೂಮಿಕಾ ಅವರೇ ನೀವು ಟೆನ್ಶನ್ ನಲ್ಲಿ ಇದ್ದ ಹಾಗೆ ಇದೆ. ಎನು ಅಂತ ನಮ್ಮ ಜೊತೆ ಹೇಳಿ ಎಂದು ಹೇಳುತ್ತಾರೆ. ಇದನ್ನು ಕೇಳಿದ ಭೂಮಿಕಾ ಏನಿಲ್ಲ ಎಂದು ಹೇಳುತ್ತಾಳೆ.. ಗೌತಮ್ ತನ್ನ ತಾಯಿಯ ಜೊತೆ ಅಮ್ಮ ನಿನಗೆ ಎಂಥ ಹುಡುಗಿ ಬೇಕು ಹೇಳಮ್ಮ ಎಂದಾಗ ಶಕುಂತಲಾ ದೇವಿ ಹೇಳುತ್ತಾಳೆ. ನನಗೆ ನಮ್ಮ ಅಂತಸ್ತಿಗೆ ಸರಿ ಸಮನಾಗಿರುವ ಹುಡುಗಿಯನ್ನು ಸೊಸೆ ಮಾಡಿಕೊಳ್ಳಬೇಕು ಎಂದು ನನ್ನ ಆಸೆ ಎಂದಾಗ ಗೌತಮ್ ಹೇಳುತ್ತಾನೆ

ಮನೆಯಲ್ಲಿ ಶಕುಂತಲಾ ದೇವಿದ್ದೆ ಕಾರುಬಾರು
ಸರಿ ಅಮ್ಮ ನಿನ್ನ ಇಷ್ಟ ಪ್ರಕಾರವಾಗಿಯೆ ನೆರವೇರಲಿ ಎಂದು ಹೇಳಿ ಅಲ್ಲಿಂದ ಹೋಗುತ್ತಾನೆ. ಇನ್ನೂ ಲಕ್ಷ್ಮೀ ಕಾಂತ ಅಕ್ಕನ ಬಳಿಗೆ ಬಂದು ಕೇಳುತ್ತಾನೆ. ಏನಕ್ಕೆ ಇದು ವಿಚಿತ್ರ ಭೂಮಿಕಾ ಪಾರ್ಥ ಮದುವೆ ಬಗ್ಗೆ ಒಂದು ಮಾತು ಹೇಳುತ್ತಿಲ್ಲ ಯಾಕೆ ಎಂದೆಲ್ಲ ಹೇಳಿದಾಗ ಶಕುಂತಲಾ ದೇವಿ ನಾನು ಭೂಮಿಕಾ ಒಳ್ಳೇತನವನ್ನು ಬಳಸಿಕೊಂಡು ಆಟ ಆಡಲು ಶುರು ಮಾಡುತ್ತೇನೆ ಇನ್ನೂ ಮುಂದೆ ಎಂದು ಹೇಳಿದಾಗ ಲಕ್ಷ್ಮೀ ಕಾಂತ್ ಗೆ ಬಹಳ ಖುಷಿ ಆಗುತ್ತದೆ. ಈ ಕಡೆ ಪಾರ್ಥ ಸದಾಶಿವ ಹೇಳಿದ ಷರತ್ತಿನ ಪ್ರಕಾರ ಕೆಲಸ ಮಾಡುತ್ತಿದ್ದಾನೆ. ಆತನಿಗೆ ಮನೆಯಲ್ಲಿ ಆಗುತ್ತಿರುವ ಯಾವ ವಿಚಾರವೂ ಆತನಿಗೆ ತಿಳಿದಿಲ್ಲ.


Click it and Unblock the Notifications











