Amruthadhare ; ಅಪ್ಪಿ ಜೊತೆ ಮಾತನಾಡಲು ಒಪ್ಪದ ಭೂಮಿಕಾ..!

By ಪೂರ್ವ

ಭೂಮಿಕಾ ಗೆ ಅಪ್ಪಿ ಹಾಗೂ ಪಾರ್ಥ ಪ್ರೀತಿ ವಿಚಾರ ಈಗಾಗಲೇ ತಿಳಿದಿದೆ. ಆದರೆ ಭೂಮಿಕಾ ಅಪ್ಪಿ ಹಾಗೂ ಪಾರ್ಥ ವಿಚಾರ ತನಗೆ ತಿಳಿದಿದೆ ಎನ್ನುವುದನ್ನು ಅಪೇಕ್ಷ ಮುಂದೆ ಮುಚ್ಚಿಡುತ್ತಾಳೆ. ಆಕೆಗೆ ಬಹಳ ಭಯ ಆಗುತ್ತದೆ. ಹಾಗೆಯೇ ಅಪ್ಪಿ ಗೆ ಪಾರ್ಥ ಮೇಲೆ ಪ್ರೀತಿ ಇದೆ. ಆದರೆ ಆ ಪ್ರೀತಿ ಇದೀಗ ಅಪ್ಪಿ ಉಳಿಸಿಕೊಳ್ಳಬೇಕಾಗಿದೆ.

ಆಕೆ ತನ್ನ ಅಕ್ಕನ ಮನೆಗೆ ಓಡೋಡಿ ಬರುತ್ತಾಳೆ. ಅಕ್ಕನ ಜೊತೆ ನನ್ನ ಪ್ರೀತಿ ಹೇಳಿಕೊಂಡರೆ ಖಂಡಿತವಾಗಿಯೂ ಅಕ್ಕ ನನಗೆ ಸಹಾಯ ಮಾಡುತ್ತಾಳೆ ಎನ್ನುವ ಭರವಸೆ ಆಕೆಗೆ ಇರುತ್ತದೆ. ಇನ್ನೂ ಪಾರ್ಥ ಮನೆಯಲ್ಲಿ ಆತುರದಿಂದ ಹೆಣ್ಣು ನೋಡುವ ಶಾಸ್ತ್ರವನ್ನು ಇಟ್ಟುಕೊಂಡಿದ್ದರು. ಭೂಮಿಕಾ ಶಕುಂತಲಾ ದೇವಿ ಮಾತಿಗೆ ಕಟ್ಟು ಬಿದ್ದು ಎನು ಹೇಳುತ್ತಿರಲಿಲ್ಲ. ಅಪ್ಪಿ ನೋಡಿದ ಭೂಮಿಕಾ ನೋಡಿಯೂ ನೋಡದ ಹಾಗೆ ಮುಖ ತಿರುಗಿಸುತ್ತಾರೆ. ಇನ್ನೂ ಅಕ್ಕನ ಬಳಿಗೆ ಬಂದ ಅಪ್ಪಿ ಕೊಂಚ ಜೋರಾಗಿ ಹೇಳುತ್ತಾಳೆ. ಅಕ್ಕ ಒಂದು ಹತ್ತು ನಿಮಿಷ ಬಾ ನಾನು ನಿನ್ನ ಜೊತೆ ಮಾತನಾಡಬೇಕಾಗಿತ್ತು. ದಯವಿಟ್ಟು ಸ್ವಲ್ಪ ಈಚೆ ಬಾ ಎಂದು ಹೇಳುತ್ತಾಳೆ.

kannada-serial-amruthadhare-written-27th-july

ಅಪ್ಪಿ ಮಾತು ಕೇಳಿದ ಭೂಮಿಕಾ ಅಪ್ಪಿ ನನಗೆ ಇವತ್ತು ತುಂಬಾ ಕೆಲಸ ಇದೆ. ಅದಕ್ಕೆ ನನಗೆ ಇವತ್ತು ನಿನಗೆ ಮಾತನಾಡಲು ಆಗುತ್ತಿಲ್ಲ ಎಂದು ಹೇಳಿದಾಗ ಅಪ್ಪಿ ಅಕ್ಕನ ಬಳಿ ಅಕ್ಕ ದಯವಿಟ್ಟು ಇವತ್ತು ಒಂದು ದಿನ ನನ್ನ ಜೊತೆ ಮಾತನಾಡಲು ಬಾ ಎಂದು ಹೇಳುತ್ತಾಳೆ. ಅಪ್ಪಿ ಮಾತನಾಡುತ್ತಿರುವಾಗಲೆ ಶಕುಂತಲಾ ದೇವಿ ಬರುತ್ತಾಳೆ. ಭೂಮಿಕಾ ಇವತ್ತು ಪಾರ್ಥನಿಗೆ ಹೆಣ್ಣು ನೋಡುವ ಕಾರ್ಯಕ್ರಮ ಇದೆ. ನೀನು ಅಡುಗೆ ಎಲ್ಲಾ ಬೇಗ ಮಾಡಿ ಮುಗಿಸು ಎಂದು ಹೇಳಿ ಅಪೇಕ್ಷನನ್ನು ನೋಡುತ್ತಾಳೆ ಶಕುಂತಲಾ ದೇವಿ.

ಅಪೇಕ್ಷ ಜೊತೆ ನಾಟಕೀಯವಾಗಿ ಮಾತನಾಡಿದ ಶಕುಂತಲಾ

ಅಪೇಕ್ಷ ಹೇಗಿದ್ದೀಯಾ ಚೆನ್ನಾಗಿದ್ದಿಯಾ ನೀನೇನು ಇಲ್ಲಿ, ಮುಖ ಯಾಕೆ ಬಾಡಿ ಹೋಗಿದೆ ಎಂದು ಸುಮ್ಮನೆ ಕೇಳಿದಾಗ ಅಪ್ಪಿ ಹೇಳುತ್ತಾಳೆ, ಹಾಗೇನೂ ಇಲ್ಲ ನೀವು ತಲೆ ಕೆಡಿಸಿಕೊಳ್ಳಬೇಡಿ ಎಂದು ಹೇಳುತ್ತಾಳೆ ಇದನ್ನು ಕೇಳಿದ ಶಕುಂತಲಾ ದೇವಿ ಹೇಳುತ್ತಾರೆ. ಸರಿ ಅಪ್ಪಿ ಇವತ್ತು ನೀನು ಊಟ ಮಾಡಿಯೇ ಮನೆಗೆ ಹೋಗಬೇಕು ಎಂದು ಹೇಳಿ ಅಲ್ಲಿಂದ ಹೋಗುತ್ತಿರಬೇಕಾದರೆ ಲಕ್ಷ್ಮೀಕಾಂತ್ ಕೇಳುತ್ತಾನೆ ಯಾಕೆ ಹೀಗೆಲ್ಲ ಮಾತನಾಡುತ್ತಾ ಇದ್ದೀಯಾ? ಆಕೆ ಪಾರ್ಥನ ಮದುವೆ ಆಗಬೇಕೆಂದು ಬಂದಿದ್ದಾರೆ.

kannada-serial-amruthadhare-written-27th-july

ಅತ್ತೆಯ ಮಾತಿಗೆ ಭೂಮಿಕಾ ಸಪ್ಪೆ

ಆದರೆ ನೀನು ಆಕೆಯ ಬಳಿ ಊಟ ಮಾಡಿಕೊಂಡು ಹೋಗು ಎಂದು ಹೇಳಿದ್ದಿಯಾ ಎಂದು ಕೇಳಿದಾಗ ಶಕುಂತಲಾ ದೇವಿ ಅಣ್ಣನ ಬಳಿ ಅಣ್ಣ ನೀನು ಸುಮ್ಮನೇ ಬಾ ಎಂದು ಕರೆಯುತ್ತಾಳೆ. ಅವರೆಲ್ಲರೂ ಹೋದ ಬಳಿಕ ಅಪ್ಪಿ ಅಕ್ಕ ಐದು ನಿಮಿಷ ನಿನ್ನ ಬಳಿ ಮಾತನಾಡುತ್ತೇನೆ ಎಂದು ಹೇಳಿದಾಗ ಭೂಮಿಕಾ ಮಾತ್ರ ಆಕೆಯ ಮಾತನ್ನು ಕೇಳಿಸಿಕೊಳ್ಳಲೆ ಇಲ್ಲ. ಆಗ ಅಲ್ಲಿಗೆ ಮಲ್ಲಿ ಬರುತ್ತಾಳೆ. ಮಲ್ಲಿ ಅಲ್ಲಿಯ ಜೊತೆ ಬಹಳ ಪ್ರೀತಿಯಿಂದ ಮಾತನಾಡುತ್ತಾಳೆ.

ಭೂಮಿಕಾ ಹುಡುಗಿ ಮನೆಯವರು ಬಂದರು ಏನೋ ಅವರನ್ನು ವೆಲ್ ಕಮ್ ಮಾಡಬೇಕು ಎಂದು ಆಲೋಚನೆ ಮಾಡುತ್ತಾಳೆ ಹಾಗೆಯೇ ಮಲ್ಲಿ ಜೊತೆ ಹೇಳುತ್ತಾಳೆ. ಇದನ್ನು ಕೇಳಿದ ಮಲ್ಲಿ ಅಕ್ಕ ಇವತ್ತು ಪಾರ್ಥ ಗೆ ಹೆಣ್ಣು ನೋಡುವ ಶಾಸ್ತ್ರ ಅಷ್ಟೇ. ನೀವು ಯಾಕೆ ಇಷ್ಟು ಗಡಿ ಬಿಡಿ ಆಗುತ್ತಿದ್ದಿರಾ ಎಂದು ಹೇಳುತ್ತಾಳೆ.ಇನ್ನೂ ಅಪ್ಪಿ ಮಾತಿಗೆ ಉತ್ತರ ಕೊಡಲು ಆಗದೆ ಆತನ ಜೊತೆ ಮಾತನಾಡಲು ಆಗದೆ ತೊಳಲಾಡುತ್ತಿದ್ದಾರೆ ಭೂಮಿಕಾ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X