Amruthadhare ; ಅಪಾಯದಿಂದ ಪಾರಾದ ಧನ್ಯ, ಆತಂಕದಲ್ಲಿ ದಿನ ದೂಡುತ್ತಿರುವ ಶಕುಂತಲಾ..!

By ಪೂರ್ವ

ಗೌತಮ್ ಗೆಳತಿ ಮಾನ್ಯ ಈಗಾಗಲೇ ಆಕ್ಸಿಡೆಂಟ್ ಆಗಿ ಸತ್ತು ಹೋಗಿದ್ದಾಳೆ. ಆದರೆ ಮಾನ್ಯ ಜಾಗಕ್ಕೆ ಇದೀಗ ಧನ್ಯ ಬಂದಿದ್ದಾಳೆ. ಮಾನ್ಯ, ಧನ್ಯ ಜೊತೆ ಎಲ್ಲ ವಿಚಾರವನ್ನು ಹೇಳಿಕೊಂಡಿದ್ದಳು. ಹಾಗೆಯೇ ಧನ್ಯಗೆ ಮಾನ್ಯ ಅಂದರೆ ಬಹಳ ಇಷ್ಟ. ಮಾನ್ಯ ಗೌತಮ್ ಬಗ್ಗೆ ಎಲ್ಲಾ ವಿಚಾರವನ್ನು ಕೂಡ ಹೇಳುತ್ತಾಳೆ. ಹಾಗೆಯೇ ಶಕುಂತಲಾ ದೇವಿ ಮಾಡುತ್ತಿರುವ ಕೆಲಸವನ್ನ ಕೂಡ ಮಾನ್ಯ ತನ್ನ ತಂಗಿ ಧನ್ಯ ಜೊತೆ ಹೇಳಿಕೊಂಡಿದ್ದಾಳೆ. ಮಾನ್ಯಾಗೆ ಅದಾಗಲೇ ಗೊತ್ತಾಗಿತ್ತು ತನ್ನನ್ನು ಖಂಡಿತವಾಗಿಯೂ ಶಕುಂತಲಾ ದೇವಿ ಕಡೆಯವರು ಸಾಯಿಸುತ್ತಾರೆ ಎನ್ನುವುದು. ಆದ ಕಾರಣ ಮಾನ್ಯ ಧನ್ಯ ಬಳಿ ಎಲ್ಲಾ ವಿಚಾರವನ್ನು ಹೇಳುತ್ತಾಳೆ. ಹಾಗೆಯೇ ಗೌತಮ್ ದಿವಾನ್ ತಂಗಿ ಹಾಗೂ ತಾಯಿ ಬದುಕಿರುವ ವಿಚಾರವನ್ನು ಕೂಡ ಹೇಳುತ್ತಾಳೆ

ಇದನ್ನು ಹೇಗಾದರೂ ಮಾಡಿ ಗೌತಮ್‌ಗೆ ಹೇಳಲೇಬೇಕು ಅಂದುಕೊಂಡಿರುತ್ತಾಳೆ. ಆದರೆ ವಿಧಿಯಾಟವೇ ಬೇರೆ ಇರುತ್ತದೆ. ಶಕುಂತಲಾ ದೇವಿ ಮಾಡಿದ ಪ್ಲಾನ್‌ಗೆ ತನ್ನ ಪ್ರಾಣವನ್ನು ಕಳೆದುಕೊಂಡಿದ್ದಾಳೆ ಮಾನ್ಯ. ಇದೀಗ ಮಾನ್ಯ ಹೇಗೆ ಸತ್ತಳು ಎನ್ನುವುದು ಕೂಡ ಧನ್ಯಗೆ ತಿಳಿದಿದೆ. ಪ್ರಿಪ್ಲ್ಯಾಂಡ್ ಆಗಿ ಮಾನ್ಯಳನ್ನ ಶಕುಂತಲಾ ದೇವಿ ಹಾಗೂ ಅವಳ ಟೀಮ್ ಸಾಯಿಸಿ ಬಿಡುತ್ತಾರೆ ಹಾಗೆಯೇ ನನ್ನ ಅಕ್ಕನ ಸಾವು ಸಂಚಿನಿಂದ ಗೆ ಆಕ್ಸಿಡೆಂಟ್ ಆಗಿಲ್ಲ ಆಕೆಯನ್ನು ಕೊಲೆ ಮಾಡಲಾಗಿದೆ ಎಂದು ಹೇಳುತ್ತಾಳೆ

kannada serial amruthadhare written 28th October

ಹಾಗೆಯೇ ಶಕುಂತಲಾ ದೇವಿಯನ್ನು ಧನ್ಯ ಮೀಟ್ ಮಾಡಲು ಬರುತ್ತಾಳೆ. ಆಗ ಶಕುಂತಲಾ ದೇವಿ ಇಲ್ಲದ ಕಂತೆ ಪುರಾಣವನ್ನ ಹೇಳುತ್ತಾಳೆ. ಆದರೆ ಇದ್ಯಾವುವುದನ್ನು ಕೂಡ ಧನ್ಯ ತಲೆಗೆ ಹಾಕಿಕೊಳ್ಳುವುದಿಲ್ಲ. ಬದಲಿಗೆ ನೀವು ಹೇಳುತ್ತಿರುವುದೆಲ್ಲ ಸುಳ್ಳು ಎನ್ನುವುದು ನನಗೆ ಗೊತ್ತಿದೆ. ನನ್ನ ಅಕ್ಕ ಎಂಥವಳು ಎನ್ನುವುದು ನನಗೆ ಗೊತ್ತಿದೆ. ಆದ ಕಾರಣ ನೀವು ಏನೇ ಹೇಳಿದರೂ ಕೂಡ ನಾನು ಅದನ್ನ ನಂಬುವ ಸ್ಥಿತಿಯಲ್ಲಿಲ್ಲ ನೀವು ಮಾಡಿರುವ ತಪ್ಪನ್ನು ಖಂಡಿತವಾಗಿಯೂ ನಾನು ಕ್ಷಮಿಸುವುದಿಲ್ಲ ಹಾಗೆ ನಿಮ್ಮ ಜೊತೆ ನಿಮ್ಮ ಮಾತಿಗೆ ಮರುಳಾಗಿ ನಾನು ನಿಮ್ಮ ಜೊತೆ ಕೈ ಜೋಡಿಸುವುದಿಲ್ಲ ಎಂದು ಧನ್ಯಾ ಹೇಳುತ್ತಾಳೆ.

ಶಕುಂತಲಾಗೆ ಶುರುವಾಗಿದೆ ಆತಂಕ

ಆ ನಂತರ ಗೌತಮ್ ದಿವಾನ್ ಬಳಿ ನಿಜ ವಿಚಾರವನ್ನು ಹೇಳಲು ಬಂದಾಗ ಆ ಮಾತನ್ನು ಕೇಳಲು ಕೂಡ ಅವರು ರೆಡಿ ಇರುವುದಿಲ್ಲ. ಹಾಗೆಯೇ ನೀವು ಯಾರು ಆಕೆಗೆ ನಿಜ ವಿಚಾರ ಹೇಳಲು ಬಿಡಲೇ ಇಲ್ಲ. ಕೊನೆಗೂ ಆಕೆ ತನ್ನ ಜೊತೆ ಎಲ್ಲಾ ವಿಚಾರವನ್ನು ಹೇಳಿ ನೀಡಲು ಹೇಗಾದರೂ ಮಾಡಿ ಗೌತಮ್ ಅವರಿಗೆ ತಲುಪಿಸು ಎಂದು ಹೇಳಿದ್ದಾಳೆ. ಈ ವಿಚಾರವನ್ನು ಶಕುಂತಲಾ ದೇವಿ ಬಳಿ ಧನ್ಯ ಹೇಳಿದಾಗ ಆಕೆಗೆ ಬಹಳ ಶಾಕ್ ಆಗುತ್ತದೆ. ಏನು ಮಾಡಬೇಕು ಎಂದು ತಿಳಿಯದೆ ಧನ್ಯನನ್ನ ಕಿಡ್ನಾಪ್ ಮಾಡಲು ಒಳಸಂಚನ್ನು ರೂಪಿಸಿರುತ್ತಾಳೆ ಶಕುಂತಲಾ ದೇವಿ. ಆದರೆ ಇದು ಪಾಪ ಧನ್ಯಗೆ ಗೊತ್ತೇ ಇರುವುದಿಲ್ಲ.

ಗೌತಮ್ ತಾಯಿ ತಂಗಿ ಇರುವುದಾದರೂ ಎಲ್ಲಿ?

ಆದರೂ ಕೂಡ ಶಕುಂತಲಾ ದೇವಿಯ ಮಾತಿಗೆ ಕಟ್ಟುಬಿದ್ದು ಧನ್ಯ ಬರುತ್ತಾಳೆ. ಆಕೆಯ ಜೊತೆ ಎಲ್ಲ ವಿಚಾರವನ್ನು ಕೂಡ ಹೇಳುತ್ತಾಳೆ. ಜೊತೆಯಲ್ಲಿ ಶಾಕಿಂಗ್ ವಿಚಾರವನ್ನು ಕೂಡ ಶಕುಂತಲಾ ದೇವಿಗೆ ಹೇಳುತ್ತಾಳೆ. ಅದು ಬೇರೇನೂ ಅಲ್ಲ. ಬದಲಿಗೆ ಗೌತಮ ತಾಯಿ ಹಾಗೂ ಆತನ ತಂಗಿ ಬದುಕಿರುವ ಸತ್ಯ. ಇದನ್ನು ಕೇಳಿದ ಶಕುಂತಲಾ ದೇವಿಗೆ ಇನ್ನು ಆತಂಕ ಶುರುವಾಗುತ್ತದೆ. ಏನಪ್ಪಾ ಇಷ್ಟು ದಿನ ಇಲ್ಲದ ಗೌತಮ್ ತಾಯಿ ತಂಗಿ ಬದುಕಿದ್ದಾರ ಹಾಗಾದರೆ ಎಲ್ಲಿದ್ದಾರೆ ಎನ್ನುವ ಯೋಚನೆ ಆಕೆಗೆ ಶುರುವಾಗುತ್ತದೆ. ಆ ಕೂಡಲೇ ಧನ್ಯಳನ್ನ ಹಿಡಿಯಲು ರೌಡಿಗಳನ್ನು ಕರೆಸುತ್ತಾನೆ ಶಕುಂತಲಾ ದೇವಿ ತಮ್ಮ. ಆದರೆ ಶಕುಂತಲಾ ದೇವಿ ಮಾತ್ರ ಇದೆಲ್ಲವನ್ನು ನೋಡಿ ನಗುತ್ತಿದ್ದರೆ ಧನ್ಯ ಹೇಗಪ್ಪ ಈ ರೌಡಿಗಳಿಂದ ಪಾರಾಗುವುದು ಎಂದು ಅಂದುಕೊಂಡಿರುತ್ತಾಳೆ.

ಧನ್ಯ ಕಿಡ್ನಾಪ್ ಗೆ ಸಂಚು

ಈ ರೀತಿಯ ಗೋಮುಖ ವ್ಯಾಘ್ರನ ಕೈಗೆ ನಾನು ಸಿಕ್ಕಿಬಿದ್ದೆನಲ್ಲ ಎಂದು ಕೊಂಡಿರುತ್ತಾಳೆ. ಕೂಡಲೇ ಆ ರೌಡಿಗಳ ಕೈಯಿಂದ ತಪ್ಪಿಸಿಕೊಂಡು ಅಲ್ಲಿಂದ ಧನ್ಯ ಓಡಿ ಹೋಗುತ್ತಾಳೆ, ರೌಡಿಗಳ ಕೈಯಿಂದ ತಪ್ಪಿಸಿಕೊಂಡಿರುವ ಧನ್ಯ ಜೀವದಿಂದ ಪಾರಾಗುತ್ತಾಳೆ. ಹಾಗೆಯೇ ಇದೀಗ ಶಕುಂತಲಾ ದೇವಿಗೆ ಬಹಳ ದೊಡ್ಡ ಆಘಾತವೇ ಎದುರಾಗಿದೆ. ಇನ್ನು ಧನ್ಯ ಯಾವ ಕ್ಷಣದಲ್ಲಿ ಬೇಕಾದರೂ ಗೌತಮ್ ಬಳಿ ಎಲ್ಲ ವಿಚಾರವನ್ನು ಕೂಡ ಹೇಳಬಹುದು ಎನ್ನುವ ಆತಂಕದಲ್ಲಿ ಶಕುಂತಲಾ ಕಾಲ ಕಳೆಯುತ್ತಿರುತ್ತಾಳೆ. ಭೂಮಿಕಾ ಹಾಗೂ ಗೌತಮ್ ನಡುವೆ ಉತ್ತಮವಾದ ಸ್ನೇಹಾ ಹಾಗೆಯೇ ಪ್ರೀತಿ ಶುರುವಾಗಿದೆ. ಇವರಿಬ್ಬರ ಲವ್ ಸ್ಟೋರಿ ನೋಡುವುದೇ ಅಭಿಮಾನಿಗಳಿಗೆ ಬಹಳ ದೊಡ್ಡ ಖುಷಿ ಆಗಿದೆ ಎಂದು ಹೇಳಿದರೆ ತಪ್ಪಾಗಲಾರದು.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X