Amruthadhaare ; ಜೈದೇವ್ ಅಹಂಕಾರಕ್ಕೆ ಕೊಡಲಿ ಏಟು ಹಾಕಿದ ಭೂಮಿಕಾ,ಗೌತಮ್ ಗೆ ನಿಜ ವಿಚಾರ ತಿಳಿದರೆ ಏನಾಗುತ್ತೆ ಗೊತ್ತಾ?

By ಪೂರ್ವ

ಭೂಮಿಕಾಗೆ ಜೈ ದೇವ್ ಮಾಡುತ್ತಿರುವ ಅನಾಚಾರವೆಲ್ಲ ತಿಳಿಯಿತು. ಮಲ್ಲಿಯನ್ನು ಸಾಯಿಸಲು ಮಾಡಿದ ಜೈ ದೇವ್ ಪ್ರಯತ್ನ ಭೂಮಿಕಾಗೆ ತಿಳಿದಿದೆ. ಜೈ ದೇವ್ ಕುತಂತ್ರ ಭೂಮಿಕಾ ಬ್ರೇಕ್ ಹಾಕುವ ಎಲ್ಲಾ ಲಕ್ಷಣ ಕಾಣಿಸುತ್ತಿದೆ. ಭೂಮಿಕಾ ಗೆ ಜೈ ದೇವ್ ಮೇಲೆ ಬಹಳ ಅನುಮಾನ ಇತ್ತು. ಆದರೆ ಜಯದೇವ್ ನನ್ನು ಸಾಕ್ಷಿ ಸಮೇತವಾಗಿ ಹಿಡಿದು ಹಾಕಬೇಕು ಎನ್ನುವುದು ಭೂಮಿಕಾ ನಿಲುವು ಯಾಕೆಂದರೆ ಗೌತಮ್ ಬಳಿ ಇದೆಲ್ಲ ಹೇಳಬೇಕಾದರೆ ಅವರಿಗೆ ಸಾಕ್ಷಿ ಸಮೇತವಾಗಿ ವಿವರಿಸಬೇಕು ಇಲ್ಲವಾದರೆ ಜೈ ದೇವ್ನ ಕುತಂತ್ರಕ್ಕೆ ಬ್ರೇಕ್ ಹಾಕಲು ಸಾಧ್ಯವೇ ಇಲ್ಲ. ಮಲ್ಲಿ ತನ್ನ ಮಗುವನ್ನು ಕಳೆದುಕೊಂಡು ಬಹಳ ಜೋರಾಗಿ ಅಳುತ್ತಿರುತ್ತಾಳೆ

ಆಕೆಗೆ 9 ತಿಂಗಳು ಮಗುವನ್ನ ಹೊಟ್ಟೆಯಲ್ಲಿ ಹೊತ್ತುಕೊಂಡಿದ್ದು ಇದೀಗ ಮಗು ಇಲ್ಲ ಎಂದು ಯೋಚನೆ ಮಾಡುವಾಗ ಆಕೆಗೆ ಬಹಳ ಬೇಸರವಾಗುತ್ತದೆ ಏನು ಮಾಡಬೇಕೆಂದು ತಿಳಿಯದೆ ದಿಕ್ಕು ತೋಚದಾಗುತ್ತದೆ. ಹಾಗಿರಬೇಕಾದರೆ ಜಯದೇವ್ ಮಲ್ಲಿಯನ್ನ ಸಮಾಧಾನ ಮಾಡಲು ಬರುತ್ತಾರೆ. ಆಗ ಮಲ್ಲಿ ಜಯದೇವ್ ಬಳಿ ಹೇಳುತ್ತಾಳೆ. ನಿಮಗೆ ಇದೀಗ ನೋವು ಆಗಿರಬಹುದು ಅಲ್ಲ. ಎಂದು ಹೇಳಿದಾಗ ಜಯದೇವ್ ಹೇಳುತ್ತಾನೆ ಮಲ್ಲಿ ನಿನಗಿಂತ ನನಗೆ ಯಾರು ಹೆಚ್ಚಲ್ಲ ನೀನು ಹಾಗೆಲ್ಲ ಅಂದುಕೊಳ್ಳಬೇಡ ನನಗೆ ನೀನೆ ಮುಖ್ಯ ಎಂದು ಹೇಳುತ್ತಾನೆ. ಆಗ ಸಡನ್ ಆಗಿ ಮಲ್ಲಿ ಹೇಳುತ್ತಾಳೆ ಹಾಗಾದರೆ ದಿಯಾ ಬೇಡ್ವಾ ಎಂದು ಕೇಳುತ್ತಾಳೆ.

kannada serial amruthadhare written 4th October

ಅದಕ್ಕೆ ಜೈದೇವ್ ಬಹಳ ಶಾಕ್ ಗೆ ಒಳಗಾಗುತ್ತಾನೆ. ಮಲ್ಲಿಯಾಗ ಬಹಳ ಬೇಸರದಿಂದ ಹೇಳ್ರಿ ನಿಮಗೆ ಬೇಡವಾ ಎಂದು ಕೇಳುತ್ತಾಳೆ ಇದನ್ನು ಕೇಳಿದ ಜಯದೇವ್ ಬಹಳ ಕೋಪದಿಂದ ನನಗೆ ಕೋಪ ಬರಿಸಬೇಡ ಮಲ್ಲಿ ನನಗೆ ಕೋಪ ಬಂದರೆ ಏನಾಗುವುದೆಂದು ನಿನಗೆ ತಿಳಿದಿದೆ. ಎಂದು ಬಹಳ ಜೋರಾಗಿ ಹೇಳುತ್ತಾನೆ ಇದನ್ನು ಕೇಳಿದ ಮಲ್ಲಿ ಹೇಳುತ್ತಾಳೆ. ನಾನು ಇದೀಗ ಮೊದಲಿನ ಮಲ್ಲಿಯಲ್ಲ ನಿಮ್ಮ ಮಾತುಗಳನ್ನು ಕೇಳಿಕೊಂಡು ಬಹಳ ಭಯದಿಂದ ಮೂಲೆಯಲ್ಲಿ ಸೇರಿಕೊಳ್ಳಲು ನಾನು ಇದೀಗ ಬದಲಾಗಿದ್ದೇನೆ. ಇನ್ನು ಮೇಲೆ ದಿಯಾ ಸಮಾಸಕ್ಕೆ ಹೋದರೆ ನಾನು ಏನು ಮಾಡುತ್ತೇನೆ ಎಂದು ನನಗೆ ಗೊತ್ತಿಲ್ಲ ಎಂದು ವಾರ್ನಿಂಗ್ ಮಾಡಿ ಬಿಡುತ್ತಾಳೆ.

ಜೈ ದೇವ್ ಬಣ್ಣ ಬಯಲು ಮಾಡಲು ಹೊರಟ ಭೂಮಿಕಾ

ಭೂಮಿಕಾಗೆ ಹೇಗಾದರೂ ಮಾಡಿ ಜೈ ದೇವ್ ಬಣ್ಣ ಬಯಲು ಮಾಡಬೇಕು ಆತನ ಅಹಂಕಾರಕ್ಕೆ ಬ್ರೇಕ್ ಹಾಕಬೇಕು ಎಂದು ಆಲೋಚನೆ ಮಾಡುತ್ತಿರುತ್ತಾಳೆ. ಹಾಗೆಯೇ ಅದಕ್ಕೆಲ್ಲ ಪ್ರೂಫ್ ಹುಡುಕುತ್ತಿರುತ್ತಾರೆ. ಹೀಗೆಲ್ಲ ಯಾಕೆ ಮಾಡುತ್ತಿದ್ದಾನೆ ಜೈ ದೇವ್ ಎನ್ನುವ ಪ್ರಶ್ನೆಗೆ ಉತ್ತರ ಸಿಗಬೇಕಾಗಿದೆ. ಜೈ ದೇವ್ ಮಲ್ಲಿಯನ್ನು ಸಾಯಿಸಲು ನೋಡಿದ, ಆನಂದ್ ನನ್ನು ಕೂಡ ಸಾಯಿಸಲು ಪ್ರಯತ್ನ ಪಟ್ಟ ಅದಾದ ಬಳಿಕ ಪಾರ್ಥ ನನ್ನು ಕೂಡ ಕೊಲ್ಲಲು ಎತ್ತಿದ ಆದರೆ ಅದು ಯಾವುದು ಕೂಡ ಸಾಧ್ಯವಾಗಲಿಲ್ಲ

ಮಲ್ಲಿಗೆ ಮೋಸ ಮಾಡಲು ಹೊರಟ ಭೂಮಿಕಾ

ಇದೀಗ ಜೈದೇವ್ ಪಾಪದ ಕೊಡ ತುಂಬಿದೆ ಎಂದು ಹೇಳಿದರು ಕೂಡ ತಪ್ಪಾಗದು. ಭೂಮಿಕಾ ಜೈ ದೇವ್ನ ವಿಚಾರವನ್ನು ಗೌತಮ್ ಬಳಿ ಹೇಳಲೇಬೇಕು ಎಂದ ನಿರ್ಧಾರವನ್ನು ಮಾಡಿದ್ದಾರೆ. ಇದಕ್ಕೆ ಎಲ್ಲರೂ ಕೂಡ ಸಾತ್ ನೀಡುತ್ತಿದ್ದಾರೆ ಗೌತಮ್ ದರ್ಪವನ್ನು ಇಳಿಸುವ ಕೆಲಸವನ್ನು ಮಾಡುತ್ತಿದ್ದಾರೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X