Amruthadhare ;ಜೈ ದೇವ್ ಗೆ ಸರಿಯಾದ ಪಾಠ ಕಲಿಸಲು ಮುಂದಾದ ಗೌತಮ್, ಗೌತಮ್ ನಡೆಗೆ ಮನೆ ಮಂದಿ ಅಚ್ಚರಿ!

By ಪೂರ್ವ

ಆನಂದ್ ಅಪರ್ಣ ಬಳಿ ಜೈದೇವ್ ಬಗ್ಗೆ ಎಲ್ಲಾ ವಿಚಾರವನ್ನು ಹೇಳುತ್ತಾನೆ. ನನ್ನನ್ನು ಆ ದೇವರು ಬದುಕಿಸಿದ್ದಾನೆ ಎಂದು ನನಗೆ ಅನ್ನಿಸುತ್ತದೆ ಅಪರ್ಣ ಎಂದು ಆನಂದ್ ಹೇಳುತ್ತಾನೆ. ಇದನೆಲ್ಲ ಕೇಳಿದ ಅಪರ್ಣಗೆ ಅದ್ಯಾಕೋ ಜಯದೇವ್ ಮೇಲೆ ಬಹಳ ಅನುಮಾನ ಹುಟ್ಟುತ್ತದೆ.

ನಿಮಗೆ ಎಲ್ಲಾ ವಿಚಾರ ತಿಳಿದಿತ್ತು ಆತ ನೀವು ಎಲ್ಲ ವಿಚಾರವನ್ನ ಗೌತಮ್ ಬಳಿ ಹೇಳಿಬಿಡುತ್ತೀರಿ ಎನ್ನುವ ಆತಂಕ ಕೂಡ ಆತನಿಗೆ ಇದ್ದಿರಬಹುದು ಅದಕ್ಕಾಗಿ ನಿಮ್ಮನ್ನ ಕೊಲ್ಲಿಸುವ ಪ್ಲಾನ್ ಆತ ಮಾಡಿಸಿರಬಹುದು, ಜೈದೇವ್ ನಿಮ್ಮ ಮೇಲೆ ಅಟ್ಯಾಕ್ ಮಾಡಿಸಿದ್ದಾನೆ ಎಂದು ನನಗೆ ಅನ್ನಿಸುತ್ತಿದೆ. ಇದರಿಂದಾಗಿ ನನಗೆ ಬಹಳ ಭಯವಾಗುತ್ತಿದೆ. ಈಗಲೇ ಈ ರೀತಿ ಮಾಡಿಸಿದವನು ಇನ್ನು ಮುಂದೆ ನಿಮ್ಮ ಮೇಲೆ ಅಟ್ಯಾಕ್ ಮಾಡುವುದಿಲ್ಲ ಎನ್ನುವ ಗ್ಯಾರಂಟಿಯಾದರೂ ಏನು ಎಂದು ಅಪರ್ಣ ತಳಮಳಗೊಳ್ಳುತ್ತಾಳೆ. ಅಪರ್ಣ ಮಾತನ್ನು ಕೇಳಿದ ಗೌತಮ್‌ಗೆ ಏನು ಹೇಳಬೇಕು ಎಂದು ತಿಳಿಯದೆ ಸ್ತಬ್ದವಾಗಿ ನಿಂತಿರುತ್ತಾನೆ ಅಪರ್ಣ ಹೇಳುವುದರಲ್ಲಿ ಕೂಡ ಅರ್ಥ ಇತ್ತು. ಇನ್ನು ಗೌತಮ್ ಜೈದೇವ್ ವಿಚಾರದಲ್ಲಿ ಬಹಳ ಕಠೂರ ವಾದ ನಿರ್ಧಾರವನ್ನು ತೆಗೆದುಕೊಳ್ಳುತ್ತಾನೆ.

kannada serial amruthadhare written 4th September

ಜೈದೇವ್ ಈ ರೀತಿ ಮಾಡಿದ್ದು ಸರಿಯಲ್ಲ ಹಾಗೆಯೇ ತನ್ನ ಸ್ವಂತ ತಮ್ಮನ ಮೇಲೆ ಅಟ್ಯಾಕ್ ಮಾಡಿದಂತು ಗೌತಮ್‌ಗೆ ತಡೆದುಕೊಳ್ಳಲು ಆಗಲಿಲ್ಲ. ಆತ ನೇರವಾಗಿ ಬಂದು ಜೈ ದೇವನನ್ನು ಭೇಟಿ ಆಗುತ್ತಾನೆ. ನಾಜೂಕಾಗಿ ಜೈ ದೇವ ಬಳಿ ಮಾತನಾಡುತ್ತಾನೆ. ಜೈ ದೇವ ಕೂಡ ಗೌತಮ್‌ಗೆ ಯಾವ ವಿಚಾರ ಕೂಡ ತಿಳಿದಿಲ್ಲ ಎಂದುಕೊಂಡು ಪಾರ್ಥ ನ ಮೇಲೆ ಅಟ್ಯಾಕ್ ಮಾಡಿದವರನ್ನು ಸುಮ್ಮನೆ ಬಿಡಬಾರದು ಎಂದು ಹೇಳುತ್ತಾನೆ. ಇದನ್ನು ಕೇಳಿದ ಗೌತಮ್‌ಗೆ ಸಿಟ್ಟು ತಡೆಯಲು ಆಗದೆ ಆತನ ಕೆನ್ನೆಯ ಮೇಲೆ ಬಲವಾಗಿ ಹೊಡೆಯುತ್ತಾನೆ

ಜೈ ದೇವ್ ಮೇಲೆ ಕೋಪಿಸಿಕೊಂಡ ಗೌತಮ್

ಹಾಗೆಯೇ ಪಾರ್ಥನನ್ನು ಸಾಯಿಸಲು ನೀನೆ ಏನೋ ಮಾಡಿದ್ದೀಯಾ ಎನ್ನುವುದು ಕೂಡ ನನಗೆ ತಿಳಿದಿದೆ. ಎಂದು ಹೇಳಿದಾಗ ಜೈದೇವ ಗೆ ಬಹಳ ಆತಂಕವಾಗುತ್ತದೆ. ಈ ವಿಚಾರವನ್ನು ಅಣ್ಣ ಮನೆಯವರ ಬಳಿ ಹೇಳಿಬಿಟ್ಟರೆ ಎನ್ನುವ ಭಯ ಕೂಡ ಆತನಿಗೆ ಇರುತ್ತದೆ. ಆತ ಏನು ಹೇಳದೆ ಸುಮ್ಮನಿರುತ್ತಾನೆ ಹಾಗೆಯೇ ಗೌತಮ್ ಹೇಳಿದ ಮಾತನ್ನು ಕೂಡ ಕೇಳಿಸಿಕೊಳ್ಳುತ್ತಿರುತ್ತಾನೆ. ಆಗ ಗೌತಮ್ ಇನ್ನು ಮೇಲೆ ಮನೆಯಲ್ಲಿ ಇದ್ದುಬಿಡು ಮಲ್ಲಿಯನ್ನ ಕೂಡ ಚೆನ್ನಾಗಿ ನೋಡಿಕೋ. ನೀನು ಆಫೀಸ್ನತ್ತ ಸ್ವಲ್ಪ ದಿನ ತಲೆ ಹಾಕಿ ಮಲಗಬೇಡ ಎಂದು ಹೇಳುತ್ತಾನೆ

kannada serial amruthadhare written 4th September

ಗೌತಮ್ ಮಾತಿಗೆ ಶಕುಂತಲಾ ಅಸಮಾಧಾನ

ಹಾಗೆ ಈ ವಿಚಾರವನ್ನ ಮನೆಯವರ ಬಳಿ ಕೂಡ ಗೌತಮ್ ಪ್ರಸ್ತಾಪ ಮಾಡುತ್ತಾನೆ. ಜೈದೇವ್ ಇನ್ನುಮೇಲೆ ಮನೆಯಲ್ಲಿ ಇರುತ್ತಾನೆ. ಆತನಿಗೆ ಇದೀಗ ರಜೆಯನ್ನು ಕೊಡಲಾಗಿದೆ ಆತ ಮನೆಯಲ್ಲಿ ಇದ್ದುಕೊಂಡು ತನ್ನ ಗರ್ಭಿಣಿ ಹೆಂಡತಿಯನ್ನು ಚೆನ್ನಾಗಿ ನೋಡಿಕೊಳ್ಳಲಿ ಎಂದು ಹೇಳುತ್ತಾನೆ ಇದನ್ನು ಕೇಳಿದ ಶಕುಂತಲಾ ಗೆ ಕೊಂಚ ಇರಿಸು ಮುರಿಸು ಆಗುತ್ತದೆ. ಜೈ ದೇವ್ ಮಾತ್ರ ಸುಮ್ಮನೆ ನಿಂತುಕೊಂಡಿರುತ್ತಾನೆ.

ಗಂಡನ ನಡುವಳಿಕೆಯನ್ನು ಪ್ರಶ್ನೆ ಮಾಡಿದ ಭೂಮಿಕಾ

ಇನ್ನೂ ಗೌತಮ್ ನಡವಳಿಕೆಯಿಂದ ಭೂಮಿಗೆ ಅನುಮಾನ ಶುರುವಾಗುತ್ತದೆ. ಇದೇನು ಗೌತಮ ಅವರು ಸಡನ್ನಾಗಿ ಈ ರೀತಿ ಆಲೋಚನೆ ಮಾಡುತ್ತಿದ್ದಾರೆ ಅವರು ಯಾವತ್ತು ಈ ರೀತಿಯಲ್ಲ ಆಲೋಚನೆ ಮಾಡಿದವರು ಅಲ್ಲ ಎಂದುಕೊಂಡು ಸುಮ್ಮನಾಗುತ್ತಾಳೆ ಹಾಗೆಯೇ ಗೌತಮ್ ರೂಮ್ ಗೆ ಬಂದ ಕೂಡಲೇ ಪ್ರಶ್ನೆ ಮಾಡುತ್ತಾಳೆ. ಆದರೆ ಗೌತಮ್ ಏನೇನೋ ಸಬೂಬು ಹೇಳಿ ಅಲ್ಲಿಂದ ಹೊರಟು ಹೋಗುತ್ತಾನೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X