Amruthadhare; ಮಲ್ಲಿ ಜೊತೆ ನಾಟಕವಾಡುತ್ತಿರುವ ಜೈ ದೇವ್ , ಭೂಮಿಕಾ ಕಂಡು ಬೆಚ್ಚಿ ಬಿದ್ದ ಪ್ರೇಯಸಿ..!
ಜೈ ದೇವ್ ಆಟಕ್ಕೆ ಹೇಗಾದರೂ ಫುಲ್ ಸ್ಟಾಪ್ ಇಡಲೇ ಬೇಕೆಂದು ಭೂಮಿಕ ಹಾಗೂ ಗೌತಮ್ ಅಂದುಕೊಳ್ಳುತ್ತಾರೆ. ಕಾರು ಡೆಲಿವರಿ ಮಾಡಬೇಕಾದರೆ ಆ ಹುಡುಗಿಯೊಂದಿಗೆ ನಿಮ್ಮ ತಮ್ಮ ಇದ್ದರೂ ನೀವು ಯಾಕೆ ಅವರ ಬಳಿ ಏನು ಪ್ರಶ್ನೆ ಮಾಡಲೇ ಇಲ್ಲ ಎಂದು ಗೌತಮ್‌ಗೆ ಭೂಮಿಕಾ ಪ್ರಶ್ನೆ ಮಾಡುತ್ತಾಳೆ. ನೇರವಾಗಿ ಜೈ ದೇವ್ ಬಳಿ ಪ್ರಶ್ನೆ ಮಾಡಬಹುದಾಗಿತ್ತು. ಯಾಕೆ ಹೀಗೆ ಮಾಡಿದೆ ಎಂದು ಜಯದೇವ್ ಬಳಿ ಪ್ರಶ್ನೆ ಕೇಳಿ ಆತನ ಬಂಡವಾಳವನ್ನ ಎಲ್ಲರಿಗೂ ಬಯಲಿಗೆಳೆಯ ಬಹುದಾಗಿತ್ತು ಎಂಂದು ಗೌತಮ್‌ಗೆ ಭೂಮಿಕಾ ಹೇಳುತ್ತಾಳೆ.
ಇದಕ್ಕೆ ನನ್ನ ತಂದೆ ಕಟ್ಟಿ ಬೆಳಿಸಿದ ಸಾಮ್ರಾಜ್ಯ ಒಡೆದು ಹೋಗುತ್ತದೆ ಎನ್ನುವ ಭಯ ನನಗೆ, ನನ್ನ ತಂದೆ ಎಲ್ಲರೂ ಒಟ್ಟಾಗಿ ಇರಬೇಕು ಎಂದು ನನ್ನ ಜೊತೆ ಪ್ರಮಾಣವನ್ನು ತೆಗೆದುಕೊಂಡಿದ್ದಾರೆ ಇದರಿಂದಾಗಿ ನನ್ನ ತಾಯಿ ಹಾಗೂ ಅವರ ಮೂವರು ಮಕ್ಕಳನ್ನು ನಾನೇ ನೋಡಿಕೊಳ್ಳಬೇಕಾದ ಪರಿಸ್ಥಿತಿ ಬಂದಿದೆ. ಆದರೆ ಇದೀಗ ಅವರೆಲ್ಲರೂ ಬೆಳೆದು ದೊಡ್ಡವರಾಗಿದ್ದಾರೆ. ಒಂದು ವೇಳೆ ಜಯದೇವ್ ಬಳಿ ನಾನು ಪ್ರಶ್ನೆ ಮಾಡಿದ್ದರೆ ಆಗ ಜೈದೇವ ಕೊಡುತ್ತಿದ್ದ ಉತ್ತರ ನನಗೆ ಬಹಳ ನೋವಾಗುತ್ತಿತ್ತು ಹೀಗಾಗಿ ನಾನು ಜೈದೇವ್ ಬಳಿ ಏನು ಹೇಳಲು ಹೋಗಿಲ್ಲ. ಆಕೆಯ ಜೊತೆ ಇರುವ ಹುಡುಗಿ ಯಾರು ಏನು ಎತ್ತ ಎಂಬುದು ನಾವು ತಿಳಿದುಕೊಳ್ಳಬೇಕು ಎಂದು ಗೌತಮ್ ಭೂಮಿಕಾಗೆ ಹೇಳುತ್ತಾನೆ. ಇನ್ನು ಮಲ್ಲಿ ಜೈದೇವ್ ಬಳಿ ಬರುತ್ತಾಳೆ. ಗಂಡನನ್ನು ನೋಡಿ ಬಹಳ ಖುಷಿಯಿಂದ ಆತನ ಹತ್ತಿರ ಬಂದು ಕುಳಿತುಕೊಳ್ಳುತ್ತಾಳೆ. ನನಗೆ ತುಂಬಾ ಬಯಕೆಯಾಗುತ್ತಿದೆ ನನ್ನ ಆಸೆಯನ್ನೇಲ್ಲ ನೀವು ಈಡೇರಿಸುತ್ತಿರಾ? ಎಂದು ಕೇಳಿದಾಗ ಜೈ ದೇವ್ ಆಯಿತು ನಿನ್ನ ಬಯಕೆಯನ್ನು ನನ್ನ ಬಳಿ ಹೇಳಿ ನಾನು ಅದೆಲ್ಲವನ್ನೂ ಈಡೇರಿಸುವ ಪ್ರಯತ್ನ ಪಡುತ್ತೇನೆ ಎಂದು ಹೇಳುತ್ತಾನೆ. ಇದನ್ನು ಕೇಳಿದ ಮಲ್ಲಿ ಮಾತ್ರ ಬಹಳ ಖುಷಿಯಾಗಿ ಇರುತ್ತಾಳೆ.

ಮನದಲ್ಲಿರುವ ಬಯಕೆಯನ್ನು ಹಂಚಿಕೊಂಡ ಮಲ್ಲಿ
ಇದೆಲ್ಲವನ್ನೂ ದೂರದಿಂದ ಗೌತಮ್ ಹಾಗೂ ಭೂಮಿಕಾ ನೋಡುತ್ತಿರುತ್ತಾರೆ. ಮಲ್ಲಿಗೆ ಇನ್ನೂ ಜೈದೇವ್ ಅಸಲಿ ಮುಖ ತಿಳಿದಿಲ್ಲ. ಜೈ ದೇವ್ ಬಹಳ ಒಳ್ಳೆಯವನು ಇದೀಗ ಅವನು ಬದಲಾಗಿದ್ದಾನೆ ನನ್ನನ್ನು ಬಹಳ ಪ್ರೀತಿ ಮಾಡುತ್ತಾನೆ ಎಂದೆಲ್ಲ ಮಲ್ಲಿ ಕನಸನ್ನ ಕಟ್ಟಿರುತ್ತಾಳೆ. ಆದರೆ ಜೈದೇವ್ ನ ಮಗುವಿಗೆ ತಾಯಿ ಆಗುತ್ತಿರುವ ಮಲ್ಲಿಯ ಮನಸ್ಸನ್ನು ಜೈದೇವ್ ಮುರಿದು ಹಾಕುವ ಎಲ್ಲಾ ಲಕ್ಷಣ ಕಾಣಿಸುತ್ತಿದೆ. ಮಲ್ಲಿಗೆ ಜೈದೇವ್ ನ ಇನ್ನೊಂದು ಮುಖ ಗೊತ್ತೇ ಆಗುತ್ತಿಲ್ಲ. ಆತನಿಗೆ ಇನ್ನೊಬ್ಬಾಕೆ ಜೊತೆ ಸಂಬಂಧ ಇರುವುದು ತಿಳಿದರೆ ಮಲ್ಲಿಗೆ ಬಹಳ ನೋವು ಆಗುತ್ತದೆ.
ತಮ್ಮನ ನಾಟಕ ಕಂಡ ನೋವುಂಡ ಗೌತಮ್
ಗರ್ಭಿಣಿ ಆಗಿರುವ ಈ ಸಂದರ್ಭದಲ್ಲಿ ಮಲ್ಲಿಗೆ ಈ ವಿಚಾರ ತಿಳಿದರೆ ಎಲ್ಲಿ ಆಕೆಯ ಆರೋಗ್ಯ ಕೆಡುತ್ತದೆ ಎನ್ನುವ ಭಯ ಭೂಮಿಕಾ ಹಾಗೂ ಗೌತಮ್ ಗೆ ಕಾಡುತ್ತದೆ. ಇನ್ನೂ ಮಲ್ಲಿ ತನ್ನ ಗಂಡನ ಬಳಿ ರೀ ನನಗೆ ಮಣ್ಣು ತಿನ್ನಬೇಕು ಎಂದು ಅನ್ನಿಸುತ್ತಿದೆ ಎಂದಾಗ ಮನದಲ್ಲಿಯೇ ಜೈ ದೇವ್ ಮಸಲತ್ತು ಮಾಡುತ್ತಿರುತ್ತಾನೆ. ನಿನಗೆ ಸದ್ಯದಲ್ಲೇ ನಾನು ಮಣ್ಣು ತಿನ್ನಿಸುತ್ತೇನೆ ಎಂದು ಮನದಲ್ಲಿಯೇ ಅಂದುಕೊಳ್ಳುತ್ತಾನೆ.

ಜೈ ದೇವ್ ಪ್ರೇಯಸಿಯ ಮನೆಗೆ ಹೋದ ಗೌತಮ್, ಭೂಮಿಕಾ
ಇದನ್ನೆಲ್ಲ ಕೇಳಿದ ಗೌತಮ್ ಮತ್ತು ಭೂಮಿಕಾ ಬಹಳ ನೋವಿನಿಂದ ಅಲ್ಲಿಂದ ಹೋಗುತ್ತಾರೆ. ಹಾಗೆಯೇ ಜೈ ದೇವ್ ಜೊತೆ ಇರುವ ಅಕ್ರಮ ಸಂಬಂಧ ಹೊಂದಿರುವ ಹುಡುಗಿಯ ಮನೆಗೆ ಇಬ್ಬರು ಹೋಗುತ್ತಾರೆ. ಜೈದೇವ್ ಪ್ರೀತಿಸುತ್ತಿರುವ ಹುಡುಗಿಯ ಮನೆಗೆ ಹೋದ ಸಂದರ್ಭದಲ್ಲಿ ಆ ಹುಡುಗಿಗೆ ಬಹಳ ಶಾಕ್ ಆಗುತ್ತದೆ.


Click it and Unblock the Notifications











