Amruthadhare ; ಗಂಡನ ಮಾತಿನಿಂದ ಶಾಕ್ ನಲ್ಲಿರುವ ಭೂಮಿಕಾ,ಅಪ್ಪನ ಮಾತಿಗೆ ಕಟ್ಟುಬಿದ್ದು ಮುಂದೇನು ಮಾಡುತ್ತಾಳೆ?
ಶಕುಂತಲಾ ದೇವಿ ಆಡುತ್ತಿರುವ ಆಟ ಒಂದಾ ಎರಡಾ. ಹೇಗಾದರೂ ಮಾಡಿ ಅಪ್ಪಿ ಮನದಲ್ಲಿ ಭೂಮಿಕಾ ಬಗ್ಗೆ ವಿಷದ ಬೀಜ ಬಿತ್ತಿ ಅವರಿಬ್ಬರನ್ನು ದೂರ ಮಾಡಬೇಕು ಹಾಗೆಯೇ ಭೂಮಿಕಾ ಸೊಕ್ಕನ್ನು ಅಡಗಿಸಬೇಕು ಎನ್ನುವುದು ಶಕುಂತಲಾ ದೇವಿ ಮನದಲ್ಲಿದೆ. ಈಗಾಗಲೇ ಪಾರ್ಥ ತನ್ನ ತಾಯಿಯ ಬಳಿ ಅಪ್ಪಿಯನ್ನು ಮದುವೆ ಆಗುತ್ತೇನೆ ಎಂದು ಹೇಳಿದಾಗ ನಾಟಕೀಯವಾಗಿ ಮಗನನ್ನು ತನ್ನೆಡೆಗೆ ಸೆಳೆದುಕೊಂಡು ಬಿಡುತ್ತಾಳೆ. ಇಷ್ಟರವರೆಗೆ ಭೂಮಿಕಾ ಪರವಾಗಿಯೇ ಇದ್ದ ಪಾರ್ಥ ನನ್ನ ಮಾತನ್ನು ಕೇಳುವ ಹಾಗೆ ಆಗುತ್ತಿದೆ ಅಲ್ವಾ ಎಂದು ಬಹಳ ಖುಷಿ ಪಡುತ್ತಾಳೆ.
ಆದರೆ ಈ ವಿಚಾರ ಯಾವುದು ಪಾರ್ಥ ಕೂಡ ಭೂಮಿಕಾ ಗಮನಕ್ಕೆ ತರುವುದು ಇಲ್ಲ. ಭೂಮಿಕಾ ಗೆ ಅತ್ತೆ ಆತ್ಮಹತ್ಯೆಯ ಬೆದರಿಕೆ ಬೇರೆ ಒಡ್ಡಿದ್ದರು. ಅದರ ಸಲುವಾಗಿ ಈ ಮದುವೆ ನಡೆಯಲು ಬಿಡುವುದು ಇಲ್ಲ ಎಂದು ಮಾತು ಬೇರೆ ಕೊಡುತ್ತಾಳೆ. ಆದರೆ ಭೂಮಿಕಾ ಗೆ ತಿಳಿಯದೇ ಒಳ ಸಂಚು ಮಾಡುತ್ತಿದ್ದಾಳೆ ಶಕುಂತಲಾ ದೇವಿ. ಗೌತಮ್ ನಲ್ಲಿಗೆ ಬಂದು ಅಪ್ಪಿಯನ್ನು ಈ ಮನೆಗೆ ಸೊಸೆಯಾಗಿ ತಂದುಕೊಳ್ಳುತ್ತೇನೆ ಇದಕ್ಕೆ ನೀನು ಸಮ್ಮತಿಯನ್ನು ನೀಡಬೇಕು ಎಂದು ಹೇಳುತ್ತಾಳೆ. ಇದನ್ನು ಕೇಳಿದ ಗೌತಮ್ ನನಗೆ ಸಂಪೂರ್ಣ ಒಪ್ಪಿಗೆ ಇದೆ ಎಂದು ಹೇಳಿ ರೂಮ್ ಗೆ ಬರುತ್ತಾನೆ. ಇನ್ನೂ ಶಕುಂತಲಾ ದೇವಿ ಭೂಮಿಕಾ ಗೆ ಈ ವಿಚಾರ ಹೇಳಬೇಡ ಎಂದು ಹೇಳಿರುತ್ತಾಳೆ. ಆ ಪ್ರಕಾರವಾಗಿ ಗೌತಮ್ ಭೂಮಿಕಾ ಬಳಿ ಏನು ಹೇಳುವುದು ಇಲ್ಲ . ಅದು ಬಿಟ್ಟು ಅಮ್ಮ ಹುಡುಗಿ ಮನೆಯವರಿಗೆ ನೋ ಎಂದು ಹೇಳಲು ಹೇಳಿದರು. ಯಾಕೆ ಏನು ಎನ್ನುವುದು ನಮಗೆ ತಿಳಿದಿಲ್ಲ. ಅಮ್ಮನಿಗೆ ಆ ಹುಡುಗಿ ಇಷ್ಟ ಆಗಿಲ್ಲ ಎಂದು ಅನ್ನಿಸುತ್ತದೆ , ಅಮ್ಮನ ಮನಸ್ಸಲ್ಲಿ ಬೇರೆ ಯಾರೋ ಹುಡುಗಿ ಇದ್ದಾಳೆ , ಆ ಹುಡುಗಿ ಮನೆಗೆ ನಾವು ಹೋಗುತ್ತಿದ್ದೇವೆ ಎಂದು ಹೇಳುತ್ತಾನೆ.

ಅಮ್ಮನ ಮನೆಗೆ ಬಂದ ಭೂಮಿಕಾ
ಇದನ್ನು ಕೇಳಿದ ಭೂಮಿಕಾ ಏನು ಮಾತನಾಡದೆ ರೆಡಿ ಆಗುತ್ತಾಳೆ. ಭೂಮಿಕಾ ಗೆ ಅಪ್ಪಿಯನ್ನೂ ನಾವೆಲ್ಲರೂ ನೋಡಲು ಹೋಗುತ್ತಿದ್ದೇವೆ ಎಂದು ತಿಳಿದೆ ಇರುವುದಿಲ್ಲ. ಭೂಮಿಕಾಗೆ ತನ್ನ ಮನೆಯ ಬಳಿ ಬಂದಾಗ ಶಾಕ್ ಆಗುತ್ತದೆ. ಇಲ್ಲಿ ನಾವು ಯಾವ ಹುಡುಗಿ ನೋಡಲು ಬಂದಿದ್ದೇವೆ ಎಂದು ಗೌತಮ್ ಬಳಿ ಕೇಳುತ್ತಾಳೆ. ಇದನ್ನು ಕೇಳಿದ ಗೌತಮ್ ಇವತ್ತು ನಾವು ನಿಮ್ಮ ತಂಗಿಯನ್ನೇ ನಮ್ಮ ಮನೆಗೆ ತಂದುಕೊಳ್ಳಬೇಕು ಎಂದು ಎಂದುಕೊಂಡಿದ್ದೇವೆ ಎಂದು ಹೇಳುತ್ತಾನೆ.
ಸುದ್ದಿ ಕೇಳಿ ಖುಷಿಯಲ್ಲಿರುವ ಮಂದಾಕಿನಿ
ಇದನ್ನು ಕೇಳಿದ ಭೂಮಿಕಾ ಗೆ ಶಾಕ್ ಆಗುತ್ತದೆ. ಇನ್ನೂ ಗೌತಮ್ ಮನೆಯವರೆಲ್ಲರನ್ನು ಕಂಡ ಮಂದಾಕಿನಿ ಗೆ ಶಾಕ್ ಆಗುತ್ತದೆ. ಒಂದು ಮಾತು ಹೇಳದೆ ಮನೆಗೆ ಬಂದಿರುವುದನ್ನು ನೋಡಿ ಬಹಳ ತಳಮಳ ಆಗುತ್ತದೆ. ಇನ್ನೂ ಗೌತಮ್ ನೇರವಾಗಿಯೇ ಬಂದು ಅಪ್ಪಿಯನ್ನು ನಮ್ಮ ಮನೆಯ ಸೊಸೆಯಾಗಿ ಮಾಡಿಕೊಳ್ಳಬೇಕು ಎಂದುಕೊಂಡು ಇದ್ದೇವೆ. ಅಂದರೆ ಪಾರ್ಥ ಗೆ ಅಪ್ಪಿಯನ್ನು ತಂದುಕೊಳ್ಳಬೇಕು ಎಂದು ಡಿಸೈಡ್ ಮಾಡಿದ್ದೇವೆ ಎಂದಾಗ ಸದಾಶಿವ ಮಾತ್ರ ಎನು ರಿಯಾಕ್ಟ್ ಮಾಡುವುದು ಇಲ್ಲ ಆದರೆ ಮಂದಾಕಿನಿ ಗೆ ಬಹಳ ಖುಷಿ ಆಗುತ್ತದೆ.

ಅಪ್ಪಿ ಮಾತು ಭೂಮಿಕಾ ಮನಸ್ಸಿಗೆ ಘಾಸಿ
ಭೂಮಿಕಾ ಕೂಡ ಶಾಕ್ ನಲ್ಲಿ ಅಪ್ಪನ ಮುಖ ನೋಡುತ್ತಲೇ ಇರುತ್ತಾಳೆ ಆದರೆ ಆತ ಮಾತ್ರ ಸುಮ್ಮನೆ ಇರುತ್ತಾನೆ. ಇನ್ನೂ ಭೂಮಿಕಾ ನೇರವಾಗಿ ಅಪ್ಪಿ ಬಳಿ ಮಾತನಾಡಲು ಬರುತ್ತಾಳೆ ಆಕೆಗೆ ಅಪ್ಪ ಆಡಿದ ಮಾತುಗಳ ಬಗ್ಗೆ ಹೇಳಿ ಕನ್ವಿನ್ಸ್ ಮಾಡಲು ನೋಡುತ್ತಾಳೆ. ಆದರೆ ಅಪ್ಪಿ ಪಾರ್ಥ ನ ಬಿಟ್ಟು ನಾನು ಯಾರನ್ನೂ ಮದುವೆ ಆಗುವುದು ಇಲ್ಲ . ಅಪ್ಪನೇ ಕನ್ವಿನ್ಸ್ ಮಾಡು ಅಕ್ಕ. ನನ್ನ ನಿರ್ಧಾರ ಯಾವತ್ತೂ ಬದಲಾಗುವುದು ಇಲ್ಲ ಎಂದಾಗ ಭೂಮಿಕಾ ಗೆ ದಿಕ್ಕೇ ತೋಚದಂತಾಗಿದೆ


Click it and Unblock the Notifications











