Amruthadhare ; ಅಪೇಕ್ಷ ಪ್ರೀತಿಗೆ ಸದಾಶಿವ ಆಕ್ಷೇಪ, ಪಾರ್ಥನನ್ನು ಮರೆತುಬಿಡು ಎಂದ ತಂದೆ..!

By Poorva

ಅಪೇಕ್ಷ ಗೆ ಪಾರ್ಥನ ಬಿಟ್ಟಿರಲು ಆಗುವುದಿಲ್ಲ. ಹಾಗೆಯೇ ಪಾರ್ಥ ಗೆ ಅಪ್ಪಿ ನ ಬಿಟ್ಟಿರಲು ಆಗುತ್ತಿಲ್ಲ. ಇಬ್ಬರು ಪರಸ್ಪರ ಬಹಳ ಪ್ರೀತಿ ಮಾಡುತ್ತಿದ್ದಾರೆ ಇದನ್ನು ಅರ್ಥ ಮಾಡಿಕೊಳ್ಳದ ಸದಾಶಿವ ಅವರಿಬ್ಬರನ್ನು ದೂರ ಮಾಡುವ ನಿರ್ಧಾರ ಮಾಡಿದ್ದಾರೆ. ಅಪ್ಪಿ ಪಾರ್ಥನನ್ನು ಇಷ್ಟ ಪಡುತ್ತಿರುವ ವಿಚಾರವನ್ನು ಸದಾಶಿವ ಮನೆಯವರ ಬಳಿ ಎಲ್ಲಿಯೂ ಹೇಳಿಕೊಂಡೆ ಇಲ್ಲ. ಆದರೆ ಅಲ್ಲಿಗೆ ಹೇಗಾದರೂ ಮಾಡಿ ನನ್ನ ತಂದೆಯನ್ನು ಮದುವೆಗೆ ಒಪ್ಪಿಸಬೇಕು. ನಮ್ಮಿಬ್ಬರ ಪ್ರೀತಿಯನ್ನು ಅಪ್ಪ ಒಪ್ಪಿಕೊಳ್ಳಲು ಬೇಕು ಎಂದು ತಂದೆಯ ಬೆಡ್ ರೂಮ್ ಬಳಿ ಬರುತ್ತಾಳೆ.

ತಂದೆಯ ಬಳಿ ಬಂದ ಅಪ್ಪಿ ಅಪ್ಪನ ಕಾಲಿನ ಬಳಿ ಬಂದು ಕುಳಿತುಕೊಳ್ಳುತ್ತಾರೆ. ಅಪ್ಪಿಯನ್ನು ನೋಡಿದ ಸದಾಶಿವ ಕೊಂಚ ಸಮಾಧಾನ ಮಾಡುವ ಪ್ರಯತ್ನ ಮಾಡುತ್ತಾರೆ. ಆದರೆ ಅಪ್ಪಿ ನನಗೆ ನೀನು ಪ್ರೀತಿ ಮಾಡುತ್ತಿರುವ ವಿಚಾರ ಬಹಳ ಬೇಸರ ತರಿಸಿದೆ. ಜೀವ ಹಾಗೂ ಮಹಿಮಾ ಪ್ರೀತಿ ಮಾಡಿ ಮದುವೆ ಆದರು. ಪ್ರೀತಿಯ ಬಗ್ಗೆ ನನಗೆ ಗೌರವ ಇದೆ. ಆದ ಕಾರಣ ಪ್ರೀತಿಯನ್ನು ನಾನು ಯಾವತ್ತೂ ದ್ವೇಷ ಮಾಡುವುದು ಇಲ್ಲ. ನಿನ್ನ ಪ್ರೀತಿಯನ್ನು ಯಾಕೆ ಒಪ್ಪಿಕೊಳ್ಳುತ್ತಿಲ್ಲ ಎಂದರೆ ನೀನು ಸೆಲೆಕ್ಟ್ ಮಾಡಿರುವ ಹುಡುಗ ನನಗೆ ಅಷ್ಟು ಇಷ್ಟ ಆಗಿಲ್ಲ ಎನ್ನುತ್ತಾರೆ.

Kannada serial amruthadhare written 9th july

ಒಬ್ಬ ಮಗಳನ್ನು ಆ ಮನೆಗೆ ಕಳುಹಿಸಿದ್ದೇನೆ ಈಗ ನೀನು ಆ ಮನೆಯ ಸೊಸೆ ಆಗುವುದು ಸರಿ ಬರುವುದು ಇಲ್ಲ. ಆದ ಕಾರಣ ನನಗೆ ಈ ಸಂಬಂಧ ಇಷ್ಟ ಇಲ್ಲ. ನೀನು ಆತನನ್ನು ಮರೆತು ಬಿಡುವುದೇ ಒಳ್ಳೆಯದು ಎಂದು ಹೇಳುತ್ತಾರೆ. ಇದನ್ನು ಕೇಳಿದ ಅಪ್ಪಿಗೆ ಬಹಳ ನೋವು ಆಗುತ್ತದೆ. ಎನು ಮಾಡಬೇಕು ತಿಳಿಯದೇ ಬಹಳ ಅಳುತ್ತಾಳೆ. ಇನ್ನೂ ಭೂಮಿಕಾ ತವರು ಮನೆಗೆ ಹೋಗಿದ್ದಾಳೆ ಎಂದು ಆನಂದ್ ಹಾಗೂ ಗೌತಮ್ ಸೇರಿ ಎಣ್ಣೆ ಪಾರ್ಟಿ ಮಾಡುತ್ತಿದ್ದಾರೆ. ಎಣ್ಣೆ ಪಾರ್ಟಿ ಮಾಡುತ್ತಿದ್ದ ವೇಳೆ ಆನಂದ್ ಗೆ ಅಪರ್ಣಾ ಕರೆ ಮಾಡುತ್ತಾಳೆ. ಆಕೆಯ ಕರೆ ನೋಡಿಯೇ ಬಹಳ ಭಯಗೊಂಡು ಇರುತ್ತಾನೆ. ಅಪರ್ಣಾಗೆ ಕೊಂಚ ಮೆತ್ತಗೆ ಹೆದರಿ ನಾನು ಹಾಗೂ ಗೌತಮ್ ಪಾರ್ಟಿ ಮಾಡುತ್ತಿದ್ದೇವೆ ಎಂದಾಗ ಅಪರ್ಣಾ ಮೆತ್ತಗೆ ಹೇಳುತ್ತಾಳೆ.

ಗಂಡನಿಗೆ ಸ್ವಲ್ಪ ಕುಡಿಯುವಂತೆ ತಾಕೀತು ಮಾಡಿದ ಅಪರ್ಣಾ

ಸ್ವಲ್ಪ ಕಡಿಮೆಯೇ ಕುಡಿದು ಮನೆಗೆ ಬನ್ನಿ ಎಂದು ಹೇಳಿದರೆ ಇತ್ತ ಗೌತಮ್ ಹಾಗೂ ಭೂಮಿಕಾ ಫೋನ್ ನಲ್ಲಿ ಮಾತನಾಡುತ್ತಿರುತ್ತಾರೆ. ಗೌತಮ್ ಎಣ್ಣೆ ಪಾರ್ಟಿ ಮಾಡುತ್ತಿರುವ ವಿಚಾರವನ್ನು ಭೂಮಿಕಾ ಬಳಿ ಹೇಳಿದಾಗ ಭೂಮಿಕಾ ಖುಷಿಯಿಂದ ನಿಮಗೆ ಏನಾದರೂ ಸೈಡ್ ಡಿಶ್ ತೆಗೆದುಕೊಂಡು ಬರಲಿ ಹೇಳುತ್ತೇನೆ ಎಂದು ಹೇಳಿ ಕರೆ ಕಟ್ ಮಾಡಿ ಮಲಗಲು ಹೋದರೆ ಭೂಮಿಕಾ ಗೆ ನಿದ್ದೆಯೇ ಬರುತ್ತಿಲ್ಲ. ಇತ್ತ ಗೌತಮ್ ಪರಿಸ್ಥಿತಿ ಕೂಡ ಅದೇ. ಭೂಮಿಕಾ ನೆನಪಿನಲ್ಲಿ ಗೌತಮ್ ದಿನ ದೂಡುವ ಪರಿಸ್ಥಿತಿ ಬಂದು ಬಿಟ್ಟಿದೆ. ಇನ್ನೂ ಭಯದಲ್ಲಿ ಗೌತಮ್ ಮಲಗುತ್ತಾನೆ.

ಭೂಮಿಕಾ ಗೆ ಗೌತಮ್ ನೆನಪು ಕಾಡುತ್ತಿದೆ

ಇತ್ತ ಭೂಮಿಕಾ ಆನಂದ್ ಗೆ ಕರೆ ಮಾಡಿ ಆನಂದ್ ಅವರೇ ನೀವು ತಪ್ಪು ತಿಳಿಲಿಲ್ಲ ಎಂದಾದರೆ ಗೌತಮ್ ರೂಮ್ ಗೆ ಹೋಗಿ ಅವರು ಗೊರಕೆ ಹೊಡೆಯುವ ಆಡಿಯೋ ಮಾಡಿ ನನಗೆ ಕಳುಹಿಸಿ ನಾನು.ಆ ಅವರ ಗೊರಕೆ ಸೌಂಡ್ ಕೇಳಿ ಮಲಗುತ್ತೇನೆ ಎಂದಾಗ ಆಯಿತು ಎಂದು ಹೇಳಿದ ಆನಂದ್ ಗೌತಮ್ ರೂಮ್ ಗೆ ಹೋಗಿ ಆತ ಗೊರಕೆ ಹೊಡೆಯುತ್ತಿರುವ ಆಡಿಯೋ ರೆಕಾರ್ಡ್ ಮಾಡಿ ಭೂಮಿಕಾ ಗೆ ಕಳುಹಿಸುತ್ತಾರೆ. ಆ ಆಡಿಯೋ ಕೇಳಿಕೊಂಡು ಭೂಮಿಕಾ ಕೂಡ ನಿದ್ದೆಗೆ ಜಾರುತ್ತಾಳೆ.

Kannada serial amruthadhare written 9th july

ಅಪ್ಪಿ ಪ್ರೀತಿಯನ್ನು ಮನೆಯವರ ಮುಂದೆ ಹೇಳುತ್ತಾಳ ಭೂಮಿಕಾ

ಭೂಮಿಕಾ ಹಾಗೂ ಗೌತಮ್ ಒಬ್ಬರನ್ನೊಬ್ಬರು ಬಿಟ್ಟಿರಲು ಆಗದೆ ಈ ಒಂದು ದಿನವನ್ನು ಅದು ಹೇಗೋ ಕಳೆದಿದ್ದಾರೆ ಇನ್ನೂ ಪಾರ್ಥ ಹಾಗೂ ಅಪ್ಪಿ ಲವ್ ಸ್ಟೋರಿ ಭೂಮಿಕಾ ಗೆ ತಿಳಿದಿದೆ. ಆದರೆ ಈ ವಿಚಾರ ತಂದೆಗೆ ತಿಳಿದಿದೆ ಎನ್ನುವ ವಿಚಾರವನ್ನು ಅಪ್ಪಿ ಅಕ್ಕನ ಬಳಿ ಹೇಳುತ್ತಾಳ ಎಂಬುವುದನ್ನು ಕಾದು ನೋಡಬೇಕಿದೆ.

More from Filmibeat

English summary
kannada serial amrutadhare written 9th july
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X