Amrutadhare ; ಪಾರ್ಥನಿಗಾಗಿ ಅಪ್ಪಿ ಮಾಡಿದ ಊಟ ಸವಿದ ಗೌತಮ್ ? ಮುಂದೇನಾಯ್ತು ಗೊತ್ತಾ?
ಕೊನೆಗೂ ಭೂಮಿಕಾ ತಂತ್ರ ಫಲಿಸಿದೆ ತನ್ನ ತಂಗಿ ಹಾಗೂ ಪಾರ್ಥ ಇಬ್ಬರು ಒಟ್ಟಿಗೆ ಇರಬೇಕು ಪ್ರೀತಿಸಿ ಮದುವೆಯಾದ ನವ ಜೋಡಿ ಮುನಿಸು ಮಾಡಿಕೊಳ್ಳಬಾರದು ಸದಾ ಪ್ರೀತಿಯಿಂದ ಜೀವನವನ್ನು ಸಾಗಿಸಬೇಕು ಎಂದು ಭೂಮಿಕಾ ಅಂದುಕೊಂಡಿರುತ್ತಾಳೆ. ಇನ್ನು ಭೂಮಿಕಾ ಮೇಲೆ ಅಪೇಕ್ಷಗೆ ಬಹಳ ನೋವಿದೆ ನನ್ನ ಅಕ್ಕ ನನ್ನ ಪ್ರೀತಿಗೆ ಬೆಲೆಯನ್ನ ಕೊಡಲಿಲ್ಲ ಆಕೆಯ ಬಳಿ ನಾನು ನನ್ನ ಪ್ರೀತಿಯ ಬಗ್ಗೆ ಹೇಳಬೇಕೆಂದು ಅದೆಷ್ಟು ಬಾರಿ ಅಂದುಕೊಂಡಿದ್ದೇನೆ, ಆದರೆ ಕೊನೆಗೂ ದೊಡ್ಡ ಮನಸ್ಸು ಮಾಡಿ ಅಕ್ಕನ ಬಳಿ ತನ್ನ ಪ್ರೀತಿ ವಿಚಾರವನ್ನು ಹೇಳಿದೆ ಆದರೆ ಅಕ್ಕ ಮಾತ್ರ ನನ್ನ ಹಾಗೂ ಪಾರ್ಥ ಪ್ರೀತಿಗೆ ಒಪ್ಪಿಗೆಯನ್ನು ನೀಡಲಿಲ್ಲ ಎನ್ನುವುದೇ ಆಕೆಗೆ ಇರುವ ನೋವು.
ಭೂಮಿಕಾಗೆ ಬಹಳಷ್ಟು ಅಡೆತಡೆಗಳು ಇದ್ದವು ಒಂದು ಕಡೆ ತನ್ನ ತಂದೆಯ ಮಾತು ಉಳಿಸಿಕೊಳ್ಳಲು ಭೂಮಿಕಾಹರ ಸಾಹಸ ಪಡುತ್ತಿದ್ದಳು. ಇನ್ನೊಂದು ಕಡೆ ಪಾರ್ಥ ಹಾಗೂ ಅಪ್ಪಿ ಒಂದಾದರೆ ಬಹಳ ಒಳ್ಳೆಯದು ಅಂದುಕೊಂಡಿದ್ದಳು. ಆದರೆ ಶಕುಂತಲಾ ದೇವಿಯ ಆಟಕ್ಕೆ ನಾಟಕಕ್ಕೆ ಭೂಮಿಕಾ ಬಲಿಯಾದಳು ಎಂದು ಹೇಳಿದರೆ ತಪ್ಪಾಗದು. ಭೂಮಿಕಾಗೆ ಬಹಳ ಪ್ರೀತಿ. ತನ್ನ ತಂಗಿಯನ್ನು ಚಿಕ್ಕ ವಯಸ್ಸಿನಿಂದಲೂ ಕೂಡ ಆಡಿಸಿ ಬೆಳೆಸಿ ಮುದ್ದಿಸಿ ಇದೀಗ ಇಷ್ಟು ದೊಡ್ಡವಳಾಗಿದ್ದಾಳೆ ಆದರೆ ಅಕ್ಕನ ಮನಸ್ಸನ್ನು ಸ್ವಲ್ಪ ಕೂಡ ಅಪ್ಪಿ ಅರ್ಥ ಮಾಡಿಕೊಂಡ ಹಾಗೆ ಕಾಣಿಸುತ್ತಿಲ್ಲ ಪಾರ್ಥ ತನ್ನ ಅತ್ತಿಗೆ ಏನು ಯೋಚನೆ ಇಲ್ಲದೆ ಈ ರೀತಿ ಮಾಡುವವರಲ್ಲ ಎಂದು ಆತನಿಗೆ ತಿಳಿದಿದೆ.

ಪಾರ್ಥ ಅಪೇಕ್ಷ ಳನ್ನು ಪ್ರೀತಿ ಮಾಡುತ್ತಿರುವ ವಿಚಾರವನ್ನು ಮೊದಲು ಹೇಳಿದ್ದೆ ಭೂಮಿಕಾಗೆ . ಆಗ ಭೂಮಿಕಾ ಬಹಳ ಖುಷಿಯಿಂದ ಒಪ್ಪಿಗೆಯನ್ನು ಸೂಚಿಸಿದ್ದಳು. ಆದರೆ ಅದಾದ ಬಳಿಕ ಪಾರ್ಥ ಹಾಗೂ ಅಪ್ಪಿ ಮದುವೆ ನಡೆಯುವುದು ಬೇಡ ಎಂದು ಹೇಳಿದ್ದಳು ಅದಕ್ಕೆ ಕಾರಣ ಕೂಡ ಬಹಳಷ್ಟಿದೆ . ಆದ ಕಾರಣ ಪಾರ್ಥ ಏನು ಮಾತನಾಡದೆ ಸುಮ್ಮನೆ ಇರುತ್ತಾನೆ. ಆದರೆ ಅಪ್ಪಿ ಗೆ ಅಕ್ಕ ಯಾಕೆ ಮದುವೆ ಗೆ ಒಪ್ಪಿಗೆ ನೀಡುತ್ತಿಲ್ಲ. ಆಕೆಯ ಮನದಲ್ಲಿ ಏನಾದರು ನಡೆಯುತ್ತಾ ಇರಬಹುದಾ ಎನ್ನುವುದು ಅಲ್ಲಿಗೆ ಹೊಳೆಯಲೇ ಇಲ್ಲ. ಇತ್ತ ಭೂಮಿಕಾ ಹಾಗೂ ಗೌತಮ್ ಬಹಳ ಹತ್ತಿರ ಇರುವ ಹಾಗೆ ನಟನೆಯನ್ನು ಮಾಡುತ್ತಾರೆ ನಾವಿಬ್ಬರು ಬಹಳ ಪ್ರೀತಿಯಿಂದ ಅನ್ಯೋನ್ಯವಾಗಿದ್ದರೆ ಅಭಿಮಾನದಲ್ಲಿ ಕೂಡ ಅದೇ ಭಾವನೆ ಬರಬಹುದು ತನ್ನ ಗಂಡನ ಜೊತೆ ಖುಷಿಯಾಗಿರಬೇಕು ಆತನನ್ನು ಚೆನ್ನಾಗಿ ನೋಡಬೇಕು. ಎನ್ನುವ ಭಾವನೆ ಆಕೆಗೆ ಮೂಡುತ್ತದೆ ಎಂದು ಭೂಮಿಕ ಅಂದುಕೊಳ್ಳುತ್ತಿರುತ್ತಾಳೆ.
ಭೂಮಿಕಾ ಮಾತಿನ ಪ್ರಕಾರ ನಡೆದುಕೊಳ್ಳುತ್ತಿರುವ ಗೌತಮ್
ಆ ಪ್ರಕಾರವಾಗಿ ಭೂಮಿಕಾ ಹಾಗೂ ಗೌತಮ್ ನಡೆದುಕೊಳ್ಳುತ್ತಿರುತ್ತಾರೆ. ಇದನ್ನು ನೋಡಿದ ಅಪ್ಪಿಗೆ ತನ್ನ ಗಂಡನ ಜೊತೆಗೆ ಕೂಡ ಇದೇ ರೀತಿ ಇರಬೇಕು ಎನ್ನುವ ಆಸೆ ಮೂಡುತ್ತದೆ ಇನ್ನು ಗೌತಮ್ ಗಾಗಿ ಬಹಳ ಪ್ರೀತಿಯಿಂದ ಭೂಮಿಕಾ ಊಟವನ್ನು ತಯಾರು ಮಾಡುತ್ತಿರುತ್ತಾಳೆ. ಇದನ್ನು ನೋಡಿದ ಅಪ್ಪಿ, ತಾನು ಕೂಡ ಪಾಠ ಅವರಿಗೆ ಒಳ್ಳೆಯ ಅಡುಗೆ ಮಾಡಿಕೊಟ್ಟರೆ ಹೇಗೆ ಎಂದು ಯೋಚಿಸಿ ಆಕೆಯೇ ಅಡುಗೆ ಮಾಡಲು ಹೊರಡುತ್ತಾಳೆ ಆಕೆ ಪಡುತ್ತಿರುವ ಕಷ್ಟವನ್ನ ನೋಡಿದ ಭೂಮಿಕ್ಕಾಗಿ ಬಹಳ ಬೇಸರವಾಗುತ್ತದೆ ಹಾಗೆಯೇ ನಾನು ನಿನಗೆ ಸಹಾಯ ಮಾಡಲಿ ಅಪ್ಪಿ ಎಂದು ಕೇಳುತ್ತಾಳೆ ಇದನ್ನು ಕೇಳಿದ ಅಪೇಕ್ಷ ನನಗೆ ಯಾರ ಸಹಾಯ ಏನು ಬೇಡ ನಾನೇ ಮಾಡುತ್ತೇನೆ ಎಂದು ಹೇಳುತ್ತಾಳೆ ಹಾಗೆ ಅಡುಗೆಯನ್ನು ಮಾಡಿ ಕ್ಯಾರಿಯರ್ ತೆಗೆದುಕೊಂಡು ಹೋಗುವವನ ಬಳಿ ಕೊಡುತ್ತಾಳೆ.

ಗಂಡನಿಗಾಗಿ ಬಗೆ ಬಗೆಯ ಅಡುಗೆ ಮಾಡಿದ ಅಪ್ಪಿ
ಆ ಬಳಿಕ ಆತನ ಬಳಿ ಹೇಳುತ್ತಾಳೆ ಅಪ್ಪಿ, ಊಟ ಮಾಡಿ ಆದ ಬಳಿಕ ಊಟ ಹೇಗಿದೆ ಅನ್ನೋದನ್ನ ಅವರು ಹೇಳಲಿ ಎಂದು ಅಪ್ಪಿ ಹೇಳಿ ಕಳಿಸುತ್ತಾಳೆ. ಇದನ್ನೆಲ್ಲ ನೋಡಿದ ಭೂಮಿಕಾಗೆ ಬಹಳ ಖುಷಿಯಾಗುತ್ತದೆ. ಆಫೀಸ್ ನಲ್ಲಿ ಅಪ್ಪಿಯ ಅಡುಗೆ ಹಾಗೂ ಭೂಮಿಕಾ ಮಾಡಿದ ವಿವಿಧ ಖಾದ್ಯಗಳು ಪಾರ್ಥ ಹಾಗೂ ಗೌತಮ್ ಕೈ ಸೇರಿದೆ. ಇದನ್ನು ನೋಡಿದ ಗೌತಮ್ ಅಪ್ಪಿ ಮಾಡಿದ ಅಡುಗೆಯನ್ನು ನಾನು ತಿನ್ನುತ್ತೇನೆ ನೀನು ಭೂಮಿಕಾ ಅವರು ಮಾಡಿದ ಅಡುಗೆಯನ್ನು ಟೇಸ್ಟ್ ಮಾಡು ಎಂದು ಹೇಳುತ್ತಾನೆ ಇದನ್ನು ಕೇಳಿದ ಪಾರ್ಥ, ನನ್ನ ಹೆಂಡತಿ ಮಾಡಿದ ಅಡುಗೆಯನ್ನು ನಾನು ಸವಿಯಬೇಕು ಎಂದು ಹೇಳುತ್ತಾನೆ
ಅಣ್ಣನ ಮುಖ ನೋಡಿ ನಕ್ಕ ಪಾರ್ಥ
ಇದನ್ನು ಕೇಳಿದ ಗೌತಮ್ ಮಾತ್ರ ಕೇಳುವುದೇ ಇಲ್ಲ ಗೌತಮ್ ಅಪ್ಪಿ ಮಾಡಿದ ಅಡುಗೆಯನ್ನು ಟೇಸ್ಟ್ ಮಾಡಿದಾಗ ಬಹಳ ಕೆಟ್ಟದಾಗಿತ್ತು ಹಾಗೆಯೇ ಅದನ್ನು ತಿನ್ನಲು ಆಗಬೇಕು ಪ್ರಾರ್ಥನೆಗೆ ತಿನ್ನಲು ಗೌತಮ್ ಕೊಡಲೇ ಇಲ್ಲ.


Click it and Unblock the Notifications











