Amruthadhare: ಬ್ಯೂಟಿಗಾಗಿ ಹೊಟ್ಟೆಯಲ್ಲಿರುವ ಮಗುವನ್ನು ಕೊಲ್ಲಲು ಹೊರಟ ಮಹಿಮಾ!

By Poorva

ಮಹಿಮಾ ಮಗುವೇ ಹುಟ್ಟಿಲ್ಲ ಆಕೆ ಗರ್ಭಿಣಿ ಎಂದು ತಿಳಿದ ತಕ್ಷಣ ಗೌತಮ್ ದಿವಾನ್ ಗೆ ಸ್ವರ್ಗವೇ ಧರೆಗೆ ಇಳಿದು ಬಂದಂತೆ ಆಗುತ್ತದೆ. ತನ್ನ ಪುಟ್ಟ ತಂಗಿ ಮಹಿಮಗೆ ಇನ್ನೊಂದು ಪುಟ್ಟ ಮಗು ಬರುತ್ತಿದೆ ಎಂದು ಗೌತಮ್ ಬಹಳ ಖುಷಿಯಲ್ಲಿ ದಿನ ಕಳೆಯುತ್ತಿದ್ದಾನೆ. ಆದರೆ ಅವರ ಖುಷಿ ಇನ್ನು ಸ್ವಲ್ಪ ದಿನಗಳ ಕಾಲ ಎಂದು ಅನ್ನಿಸುತ್ತಿದೆ.

ಮಹಿಮಾ ಜಗತ್ತು ಕಾಣದ ಪುಟ್ಟ ಮಗುವನ್ನು ಈ ಲೋಕದಿಂದಲೇ ದೂರ ಮಾಡುವ ನಿರ್ಧಾರ ಮಾಡಿದ್ದಾಳೆ, ತನ್ನ ಅಕ್ಕನ ಮಾತನ್ನು ಕೇಳಿ ಮಹಿಮಾ ತಪ್ಪು ನಿರ್ಧಾರ ತೆಗೆದುಕೊಂಡಿದ್ದಾಳೆ. ಅಕ್ಕ ಮಹಿಮಾ ಮನೆಗೆ ಬರುತ್ತಾಳೆ. ಆಕೆಯನ್ನು ನೋಡಿದ ಮನೆ ಮಂದಿ ಬಹಳ ಖುಷಿಯಾಗಿ ಆಕೆಯನ್ನು ಸ್ವಾಗತ ಮಾಡುತ್ತಾರೆ. ಬಳಿಕ ಮಹಿಮಾ ಜೊತೆ ಮಾತನಾಡಲು ಕಳುಹಿಸುತ್ತಾರೆ.

kannada serial amruthadhare written upadate 15th January

ತಂಗಿಯನ್ನು ನೋಡಿದ ಆಕೆಯ ಅಕ್ಕ, ಮಹಿಮಾ ನೀನು ಕೊಂಚ ದಪ್ಪ ಆದ ಹಾಗೆ ಕಾಣುತ್ತೀಯಾ ಎನ್ನುತ್ತಾಳೆ. ಮಹಿಮಾಗೆ ಕೊಂಚ ಶಾಕ್ ಆಗುತ್ತದೆ. ಯಾಕೆಂದರೆ ಆಕೆ ಮಾಡೆಲ್ ಆಗಿರುವುದರಿಂದ ದಪ್ಪ ಆದರೆ ಆಕೆಯ ಕೆರಿಯರ್‌ಗೆ ಎಲ್ಲಿ ಹೊಡೆತ ಬೀಳುತ್ತದೆಯೋ? ಎಂದುಕೊಂಡು ಮನದಲ್ಲೇ ಕೊಂಚ ಭಯಪಡುತ್ತಾಳೆ.

ಮಗು ತೆಗೆಸಲು ಅಕ್ಕನ ಸಂಚು

ಅಕ್ಕ ಆ ರೀತಿ ಹೇಳಿದ ಕೂಡಲೇ ಮಹಿಮಾ ಸರಿಯಾಗಿ ಹೇಳು ಅಕ್ಕ ನಾನು ದಪ್ಪ ಆಗಿದ್ದೀನಾ? ಎಂದು ಕೇಳಿದಾಗ ಆಕೆಯ ಅಕ್ಕ ಹೇಳುತ್ತಾಳೆ. ಗರ್ಭಿಣಿಯಾದ ಬಳಿಕ ಎಲ್ಲಾ ಹುಡುಗಿಯರು ಕೂಡ ದಪ್ಪ ಆಗುತ್ತಾರೆ ಎಂದು ಹೇಳಿದಾಗ ಮಹಿಮಾಗೆ ಮತ್ತಷ್ಟು ಆತಂಕವಾಗುತ್ತದೆ. ಏನು ಮಾಡಬೇಕು ಎಂದು ತಿಳಿಯದೇ, ಅಕ್ಕ ಹೋದ ಬಳಿಕ ತನ್ನ ಗೆಳೆಯನ ಬಳಿಗೆ ಹೋಗಿ ನಾನು ದಪ್ಪ ಕಾಣುತ್ತಿದ್ದೆನಾ? ಎಂದು ಮಹಿಮಾ ಕೇಳುತ್ತಾಳೆ.

kannada serial amruthadhare written upadate 15th January

ಗೆಳೆಯನ ಮಾತಿಗೆ ಮಹಿಮಾ ಕಂಗಾಲು

ಆತ ಕೂಡ ಮಹಿಮಾಳನ್ನು ನೋಡಿ ನೀನು ಈಗ ಸ್ವಲ್ಪ ದಪ್ಪ ಆಗಿದ್ದಿಯಾ, ಗರ್ಭಿಣಿಯಾದ ಕಾರಣ ಇದೆಲ್ಲ ಕಾಮನ್ . ಇನ್ನು ಸ್ವಲ್ಪ ದಿನ ಆದ ಬಳಿಕ ನಿನ್ನ ಬ್ಯೂಟಿ ಎಲ್ಲಾ ಹೋಗಿಬಿಡುತ್ತದೆ ಎನ್ನುತ್ತಾನೆ. ಆಗ ಮಹಿಮಾ ತನ್ನ ಗೆಳೆಯನ ಬಳಿ ನನಗೆ ಈ ಮಗು ಬೇಡ, ನಾನು ಈ ಮಗುವನ್ನು ತೆಗೆಯಬೇಕು ಎಂದು ನಿರ್ಧಾರ ಮಾಡಿದ್ದೇನೆ ಎಂದು ಹೇಳುತ್ತಾಳೆ. ಆತ ಹೇಳುತ್ತಾನೆ ಸರಿ ಹಾಗಾದರೆ ನಾನು ಅದಕ್ಕೆಲ್ಲ ತಯಾರಿ ಮಾಡಿಕೊಳ್ಳುತ್ತೇನೆ. ನನಗೆ ಡಾಕ್ಟರ್‌ಗಳು ಚೆನ್ನಾಗಿ ಪರಿಚಯ ಇದ್ದಾರೆ. ಅವರ ಬಳಿ ಹೇಳಿ ನಿನ್ನ ಮಗುವನ್ನು ತೆಗೆಸುತ್ತೇನೆ ಎಂದು ಹೇಳಿದಾಗ ಮಹಿಮಾ ಕೊಂಚ ರಿಲೀಫ್ ಆಗುತ್ತಾಳೆ.

ಮನೆಯವರ ಮಾತು ಮಹಿಮಾಗೆ ಕಿರಿಕಿರಿ

ಆ ಬಳಿಕ ಮನೆಗೆ ಬಂದ ಮಹಿಮಾ ತನ್ನ ಅತ್ತೆಯ ಬಳಿ ಕೂಡ ಪ್ರಶ್ನೆ ಮಾಡುತ್ತಾಳೆ. ಅತ್ತೆ ನಾನು ಇದೀಗ ದಪ್ಪ ಕಾಣುತ್ತಿದ್ದೀನಾ? ಅದಕ್ಕೆ ಮಹಿಮಾ ಈಗ ನೀನು ದಪ್ಪ ಆಗಿಲ್ಲ, ಇನ್ನು ಆರು ತಿಂಗಳು ಕಳೆದ ಬಳಿಕ ಕೊಂಚ ದಪ್ಪ ಆಗುತ್ತೀಯಾ, ಯಾಕೆಂದರೆ ಹೊಟ್ಟೆಯಲ್ಲಿ ಮಗು ಇರುತ್ತದೆ. ಅದರಿಂದಾಗಿ ನಮಗೆ ಹಸಿವು ಕೂಡ ಜಾಸ್ತಿಯಾಗುತ್ತದೆ. ಆದ ಕಾರಣ ತಿಂದು ನಾವು ದಪ್ಪ ಆಗುತ್ತೇವೆ ಎಂದು ಹೇಳಿದಾಗ ಅದನ್ನು ಸಹಿಸಿಕೊಳ್ಳಲು ಮಹಿಮಾಳಿಂದ ಆಗುವುದಿಲ್ಲ.

ಗಂಡನ ಮೇಲೆ ರೇಗಾಡಿದ ಮಹಿಮಾ

ರೂಮ್‌ಗೆ ಬಂದ ಕೂಡಲೇ ಆಕೆಯ ಗಂಡ ಕೂಡ ಅದೇ ಮಾತುಗಳನ್ನು ಹೇಳಿದಾಗ ಮಹಿಮಾ ನನ್ನನ್ನು ನೀನು ದಪ್ಪ ಆದ ಬಳಿಕ ಕೂಡ ಇದೇ ರೀತಿ ಪ್ರೀತಿ ಮಾಡುತ್ತೀಯಾ? ಎಂದು ಕೇಳಿದಾಗ ಆಕೆಯ ಗಂಡನಿಗೆ ಏನು ಹೇಳಬೇಕು ಎಂದು ಗೊತ್ತಾಗದೆ ಸುಮ್ಮನೆ ಇರುತ್ತಾನೆ. ಮತ್ತೊಂದು ಕಡೆ ಮಹಿಮಾ ಮಗು ಈ ಜಗತ್ತಿಗೆ ಕಾಲಿಡುವ ಮುನ್ನ ಗೌತಮ್ ಆ ಮಗುವಿಗೆ ಹೆಸರನ್ನು ಹುಡುಕುತ್ತಿರುತ್ತಾನೆ. ಆತ ಬಹಳ ಖುಷಿಯಿಂದ ಇರುತ್ತಾನೆ.

ಮನೆಯವರ ಬಳಿ ಸುಳ್ಳು ಹೇಳಿದ ಮಹಿಮಾ

ಇತ್ತ ಪಾರ್ಥ ಹಾಗೂ ಅಪೇಕ್ಷಾ ಪ್ರೀತಿಯಲ್ಲಿ ಬಿದ್ದಿದ್ದಾರೆ. ಪಾರ್ಥ ಬಟ್ಟೆಯ ಮೇಲೆ ಲಿಪ್ಸ್ಟಿಕ್ ಮಾರ್ಕ್ ಇದ್ದಿದ್ದನ್ನ ನೋಡಿ ಆ ಬಟ್ಟೆಯನ್ನ ತೊಳೆದು ನೀಟಾಗಿ ಇಟ್ಟಿರುತ್ತಾಳೆ. ಇದನ್ನು ನೋಡಿದ ಪಾರ್ಥಗೆ ಬಹಳ ಖುಷಿಯಾಗುತ್ತದೆ. ನನ್ನ ಫೆವರೇಟ್ ಬಟ್ಟೆ ಎಷ್ಟು ನೀಟಾಗಿ ಇಟ್ಟಿದ್ದಾರೆ ಎಂದು ಹೊಗಳುತ್ತಾ ಹೊರಬರಬೇಕಾದರೆ ಆತನ ಡ್ರೆಸ್ ಮೇಲೆ ಅಪೇಕ್ಷಾ ಸಾಂಬಾರ್ ಚೆಲ್ಲಿ ಬಿಡುತ್ತಾಳೆ. ಇದೀಗ ಇಬ್ಬರ ನಡುವೆ ಪ್ರೀತಿ ಚಿಗುರುತ್ತಿದೆ. ಮಹಿಮಾ ತನ್ನ ಮಗುವನ್ನು ತೆಗೆಯಲು ನಿರ್ಧಾರ ಮಾಡಿದ್ದಾಳೆ. ಅದಕ್ಕಾಗಿ ಎರಡು ದಿನ ನನಗೆ ಇಂಪಾರ್ಟೆಂಟ್ ಕೆಲಸ ಇದೆ ಎಂದು ಮನೆಯಿಂದ ಹೊರ ಹೋಗಲು ನೋಡಿದಾಗ ಮನೆ ಮಂದಿಯೆಲ್ಲ ಮಹಿಮಾಳನ್ನ ತಡೆಯುತ್ತಾರೆ. ಮಹಿಮಾಗೆ ವಿಪರೀತ ಸಿಟ್ಟು ಬರುತ್ತದೆ. ಅಣ್ಣ ಗೌತಮ್‌ಗೆ ಕರೆ ಮಾಡಿ ಕೇಳಿದಾಗ ಆತ ಮೌನಕ್ಕೆ ಶರಣಾಗುತ್ತಾನೆ.

More from Filmibeat

English summary
kannada serial amrutadhare today episode;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X