Amruthadhaare: ಜೈ ದೇವ್ ಆಟಕ್ಕೆ ಫುಲ್ ಸ್ಟಾಪ್ ಇಡುತ್ತಾಳಾ ಭೂಮಿಕಾ?
ಅಪೇಕ್ಷಾ ಜೊತೆ ಭೂಮಿಕಾ ಮದುವೆ ಸಂಬಂಧದ ಮಾತನಾಡುತ್ತಾಳೆ. ಹಾಗೆಯೇ ಈ ಮದುವೆಯ ಬಗ್ಗೆ ಯಾವುದೇ ಒತ್ತಡ ಇಲ್ಲ. ನಿನಗೆ ಈ ಸಂಬಂಧ ಒಪ್ಪಿಗೆ ಆದರೆ ಮಾತ್ರ ಮುಂದಿನ ನಿರ್ಧಾರ ಎಂದು ಹೇಳುತ್ತಾರಳೆ. ಇದನ್ನು ಕೇಳಿದ ಅಪ್ಪಿ ಮಾತ್ರ ಒಳಗೊಳಗೇ ಖುಷಿ ಪಡುತ್ತಾಳೆ. ಆಕೆಗೆ ತಿಳಿದೇ ಇಲ್ಲ. ಜೈ ದೇವ್ ಜೊತೆ ತನ್ನ ಮದುವೆ ಎಂದು. ಆಕೆ ಪಾರ್ಥ ಜೊತೆ ಮದುವೆ ಆಗುವುದು ಎಂದುಕೊಂಡು ಬಹಳ ಖುಷಿ ಪಡುತ್ತಾಳೆ.
ಇನ್ನು ಭೂಮಿಕಾ ರೂಮ್‌ನಿಂದ ಹೊರಬಂದಾಗ ಜೀವ ಅಕ್ಕನ ಬಳಿ ಏನಾಯಿತು ಎಂದಾಗ ಅಪ್ಪಿಗೆ ಸ್ವಲ್ಪ ಸಮಯ ಕೊಟ್ಟಿದ್ದೇನೆ. ಆಕೆ ಸ್ವಲ್ಪ ಸಮಯದ ಬಳಿಕ ಆಕೆಯ ನಿರ್ಧಾರ ಹೇಳುತ್ತಾಳೆ. ಬಳಿಕ ಅಪ್ಪಿ ರೂಮ್‌ನಿಂದ ಬಹಳ ನಾಚಿಕೆಯಿಂದ ಹೊರಗೆ ಬರುತ್ತಾಳೆ. ನೀವು ಮಾಡುತ್ತಾ ಇರುವುದು ಎಲ್ಲ.. ನಮ್ಮ ಒಳ್ಳೆಯದಕ್ಕೆ. ಆದ ಕಾರಣ ನಾನು ಈ ಮದುವೆಗೆ ಒಪ್ಪಿಕೊಳ್ಳುತ್ತೇನೆ ಎನ್ನುತ್ತಾಳೆ. ಈ ಮಾತಿಗೆ ಭೂಮಿಕಾ ಮಾತ್ರ ಬಹಳ ಖುಷಿ ಪಡುತ್ತಾಳೆ.

ತಂಗಿಯನ್ನು ಓಡಿ ಬಂದು ತಬ್ಬಿಕೊಂಡು ಮುದ್ದಿಸುತ್ತಾಳೆ. ಇತ್ತ ಮಲ್ಲಿ ಏನೋ ಯೋಚನೆ ಮಾಡುತ್ತಾ ಇರುವಾಗ ಇದ್ದಕ್ಕಿದ್ದಂತೆ ವಾಂತಿ ಬರುತ್ತದೆ. ಹೊರಗೆ ಓಡಿ ಬಂದು ವಾಂತಿ ಮಾಡುತ್ತಾಳೆ. ಆಕೆಗೆ ಬಹಳ ಆಯಾಸ ಆಗುತ್ತದೆ. ಒಂದು ಕಡೆ ಕುಳಿತು ಕೊಂಡು ಯಾಕೆ ಹೀಗೆ ಆಗುತ್ತಿದೆ ಎಂದು ಯೋಚನೆ ಮಾಡುತ್ತಾ ಇರುತ್ತಾಳೆ. ಬಳಿಕ ಜೈ ದೇವ್ ನೆನೆದು ಭಯದಿಂದ ಕಂಗಾಲು ಆಗುತ್ತಾಳೆ..
ಆತಂಕದಲ್ಲಿರುವ ಮಲ್ಲಿ
ಅಯ್ಯೋ ನಾನು ಗರ್ಭಿಣಿ ಆಗಿದ್ದಿನಾ ಹೇಗೆ? ಏನು ಮಾಡುವುದು ಎಂದು ಯೋಚನೆ ಮಾಡುತ್ತಾ ಇರುತ್ತಾಳೆ. ಇನ್ನು ಭೂಮಿಕಾ ಹಾಗೂ ಗೌತಮ್ ಮನೆಗೆ ಬರುತ್ತಾರೆ. ಮನೆಯವರಿಗೆಲ್ಲ ಮದುವೆ ಬಗ್ಗೆ ಮಾತುಕತೆ ನಡೆಸಿಕೊಂಡು ಬಂದಿರುವುದನ್ನು ಹೇಳಿದ ಗೌತಮ್ ಮಾತ್ರ ಬಹಳ ಖುಷಿಯಲ್ಲಿರುತ್ತಾನೆ. ಹಾಗೆಯೇ ಭೂಮಿಕಾ, ಗೌತಮ್ ಮೊಗದಲ್ಲಿ ಇರುವ ಖುಷಿ ನೋಡಿ ಮತ್ತಷ್ಟು ಖುಷಿ ಪಡುತ್ತಾ ಇರುತ್ತಾಳೆ.
ಮನಬಿಚ್ಚಿ ಮಾತನಾಡುತ್ತಾ ಇರುವ ಭೂಮಿಕಾ
ಮೊದಲೆಲ್ಲ ನಾವಿಬ್ಬರೂ ಮದುವೆ ಎಂದರೆ ಉರಿದು ಬೀಳುತ್ತಾ ಇದ್ದೆವು. ಆದರೆ ಈಗ ಮದುವೆ ಎಂದರೆ ಬಹಳ ಖುಷಿ ಪಡುತ್ತಿದ್ದೇವೆ. ನಾವಿಬ್ಬರೂ ನಮ್ಮ ಮದುವೆಗೆ ಕೂಡ ಇಷ್ಟೊಂದು ಖುಷಿ ಪಟ್ಟಿರಲಿಲ್ಲ. ಆದರೆ ಅಪ್ಪಿ, ಜೈ ದೇವ್ ಮದುವೆ ಆಗುತ್ತಿದ್ದಾರೆ ಎಂದು ತಿಳಿದು ಮತ್ತಷ್ಟು ಖುಷಿ ಆಗುತ್ತಿದೆ ಎಂದು ಇಬ್ಬರು ಮಾತನಾಡುತ್ತಾ ಇರುತ್ತಾಳೆ . ಹಾಗೆಯೇ ಭೂಮಿಕಾ ರೂಮ್‌ನಿಂದ ಹೊರಗೆ ಬರುತ್ತಾ ಇರುವಾಗ ಮಲ್ಲಿ ವಾಂತಿ ಮಾಡುತ್ತಾ ಇರುವುದನ್ನು ನೋಡುತ್ತಾಳೆ.

ಮಲ್ಲಿ ಆರೋಗ್ಯ ವಿಚಾರಿಸಿದ ಭೂಮಿಕಾ
ಕೂಡಲೇ ಮಲ್ಲಿಗೆ ಏನಾಗಿದೆ ಹುಷಾರಾಗಿ ಇದ್ದೀಯಾ? ಯಾಕೆ ಹೀಗೆ ಆಗುತ್ತಿದೆ ನಿನಗೆ? ಎಂದು ಕೇಳುತ್ತಾಳೆ. ಆದರೆ ಮಲ್ಲಿ ಸರಿಯಾಗಿ ಏನು ಹೇಳುವುದಿಲ್ಲ. ಆ ಬಳಿಕ ಭೂಮಿಕಾ, ಮಲ್ಲಿ ಕೈ ಹಿಡಿದು ಎಳೆದಾಗ ಭೂಮಿಕಾಗೆ ಮಲ್ಲಿ ಗರ್ಭಿಣಿ ಎನ್ನುವ ವಿಚಾರ ತಿಳಿಯುತ್ತದೆ.


Click it and Unblock the Notifications











