Amruthadhare: ಜೈ ದೇವ್ ಹೊಸ ನಾಟಕ: ಕ್ಷಮಿಸುತ್ತಾನಾ ಗೌತಮ್?
ಜೈ ದೇವ್ ಹೊಸ ಕುತಂತ್ರವನ್ನು ರೂಪಿಸಿದ್ದಾನೆ. ಹೇಗಾದರೂ ಮಾಡಿ ಭೂಮಿಕಾಳ ಬಳಿ ಸಹಾಯ ಕೇಳಬೇಕು, ಇದೀಗ ಭೂಮಿಕಾ ಒಬ್ಬಳೇ ನನಗೆ ದಾರಿ ಎಂದು ಜೈದೇವ್, ಭೂಮಿಕಾಳನ್ನು ಬಳಸಿಕೊಳ್ಳಲು ನೋಡುತ್ತಿದ್ದಾನೆ. ತನ್ನ ಅಣ್ಣನ ಮನ ಒಲಿಸಲು ತನ್ನ ಅತ್ತಿಗೆಯ ಕೈಯಿಂದ ಮಾತ್ರ ಸಾಧ್ಯ ಎಂದು ಜೈದೇವ್ ಅಂದುಕೊಂಡಿರುತ್ತಾನೆ.
ಜೈದೇವ್ ಒಳಗಿರುವ ಪಿತೂರಿ ಮಾತ್ರ ಬೇರೆ ಇದೆ . ಜೈ ದೇವನಿಗೆ ಇದೀಗ ಭೂಮಿಕಾ ತನ್ನನ್ನು ಸಿಕ್ಕಿಹಾಕಿಸಿದ್ದಕ್ಕೆ ಬಹಳ ಸಿಟ್ಟಿದೆ. ಆದರೂ ಇದೀಗ ಭೂಮಿಕಾ ಕಾಲು ಹಿಡಿದಿದ್ದಾನೆ. ಜೈದೇವ್ ಮಾಡ್ತಿರುವ ನಾಟಕವನ್ನು ನೋಡಿದ ಶಕುಂತಲಾ ದೇವಿಗೆ ಬಹಳ ಕೋಪ ಬರುತ್ತದೆ.

ಇದೇನಿದು ನಾನು ಏನು ಮಾಡಬೇಕೆಂದು ಅಂದುಕೊಂಡಿರುವೆ. ನೀನು ಏನು ಮಾಡುತ್ತಿರುವೆ ಎಂದು ಜೈದೇವ್ ಬಳಿ ಶಕುಂತಲಾ ದೇವಿ ಕೇಳುತ್ತಿರುತ್ತಾಳೆ. ಆದರೆ ಜೈದೇವ ಮಾತ್ರ ನಾನು ಆಕೆಯ ಬಳಿ ಮಾತನಾಡಿದ್ದೇನೆ ಅಷ್ಟೇ. ಆದರೆ ನನ್ನೊಳಗೆ ಬೇರೆ ಒಂದು ಪ್ಲ್ಯಾನ್ ಇದೆ ಎಂದಾಗ ಶಕುಂತಲಾ ದೇವಿ ಸುಮ್ಮನಾಗಳುತ್ತಾಳೆ.
ಜೈ ದೇವ್ ಪಿತೂರಿಗೆ ಭೂಮಿಕಾ ಬಲಿ
ಭೂಮಿಕಾಳನ್ನು ನಾವು ಕೆಲಸದವಳ ಹಾಗೆ ಮನೆಗೆ ತುಂಬಿಸಿಕೊಂಡಿದ್ದು. ನೀನು ಅವಳ ಕಾಲಿಗೆ ಬಿದ್ದು ಕ್ಷಮೆ ಕೇಳುವುದು ನನಗೆ ಇಷ್ಟವಾಗುವುದಿಲ್ಲ ಎಂದಾಗ ಜೈದೇವ್ ಮಾತ್ರ ಒಳಗೊಳಗೆ ನಗುತ್ತಿರುತ್ತಾನೆ. ಇನ್ನು ಭೂಮಿಕಾ ಮಾತ್ರ ಜಯದೇವ್ ಬಂದು ತನ್ನ ಕಾಲು ಹಿಡಿದಾಗ ಅಯ್ಯೋ ಏನು ಮಾಡುವುದಪ್ಪಾ ಎಂದು ಒಂದು ಕ್ಷಣ ಯೋಚನೆ ಮಾಡುತ್ತಾಳೆ.

ಅತ್ತಿಗೆಯ ಬಳಿ ಕ್ಷಮೆಯ ನಾಟಕ
ನೀವೇ ನನ್ನ ಅಣ್ಣನ ಜೊತೆ ಮಾತನಾಡಬೇಕು. ನಾನು ಮಾಡಿದ ತಪ್ಪಿನ ಅರಿವು ನನಗಿದೆ. ಅದಕ್ಕಾಗಿ ನಾನು ಯಾವ ಶಿಕ್ಷೆ ಬೇಕಾದರೂ ಅನುಭವಿಸಲು ತಯಾರಿದ್ದೇನೆ. ಆದರೆ ಇದೀಗ ನನಗೆ ನನ್ನ ಅಣ್ಣ ಮುಖ್ಯ. ಅಣ್ಣನ ಮಾತು ಕೇಳಿಕೊಂಡು ಸುಮ್ಮನೆ ಇರುತ್ತೇನೆ ಎಂದು ಜೈದೇವ್, ಭೂಮಿಕಾಗೆ ಹೇಳುತ್ತಾನೆ. ಇದನ್ನು ಕೇಳಿದ ಭೂಮಿಕಾ ಸರಿ ಆಯಿತು, ಎಂದು ಒಪ್ಪಿಕೊಂಡು ರೂಮಿನ ಒಳಗೆ ಹೋಗುತ್ತಾಳೆ. ಅಲ್ಲಿ ಗೌತಮ್ ಕುಳಿತುಕೊಂಡು ಯೋಚನೆ ಮಾಡುತ್ತಿರುತ್ತಾನೆ.
ಗೌತಮ್ ಮಾತಿಗೆ ದಂಗಾದ ಭೂಮಿಕಾ
ಭೂಮಿಕಾ, ಜೈದೇವ್ ಟಾಪಿಕ್ ತೆಗೆಯುವ ಮುನ್ನವೇ ಗೌತಮ್ ಹೇಳುತ್ತಾನೆ. ನೀನು ನನ್ನ ಬಳಿ ಜೈದೇವ್ ಬಗ್ಗೆ ಮಾತನಾಡಲು ಬಂದಿದ್ಯಾ? ಎನ್ನುತ್ತಾನೆ. ಇದನ್ನು ಕೇಳಿ ಆಕೆ ಶಾಕ್ ಆಗುತ್ತಾಳೆ. ಭೂಮಿಕಾ ಬಗ್ಗೆ ಗೌತಮ್‌ಗೆ ಇದೀಗ ಗೆಳೆತನ ಮೂಡಿದೆ . ಆದರೆ ಜೈದೇವ್ ಮಾತಿನಿಂದ ಭೂಮಿಕಾ ಹಾಗೂ ಗೌತಮ್ ಬೇರೆಯಾಗುವ ಎಲ್ಲಾ ಲಕ್ಷಣಗಳು ಕಾಣುತ್ತಿದೆ. ಅದಕ್ಕಾಗಿ ಜೈದೇವ್ ತನ್ನ ಮಾಸ್ಟರ್ ಮೈಂಡ್ ಯೂಸ್ ಮಾಡುತ್ತಿದ್ದಾನೆ.


Click it and Unblock the Notifications











