Amruthadhaare: ಜೈ ದೇವ್ ಕುತಂತ್ರಕ್ಕೆ ಬಲಿಯಾಗುತ್ತಾ ಅಪೇಕ್ಷಾ-ಪಾರ್ಥ ಪ್ರೀತಿ?

By Poorva

ಅಪೇಕ್ಷಾ ಹಾಗೂ ಪಾರ್ಥನನ್ನು ಹೇಗಾದರೂ ಮಾಡಿ ದೂರ ಮಾಡಬೇಕು, ನಾನು ಅಪೇಕ್ಷೆಳನ್ನು ಹೇಗಾದರೂ ಮಾಡಿ ಪಡೆದುಕೊಳ್ಳಬೇಕು ಎನ್ನುವುದ ಜೈದೇವ್ ಆಲೋಚನೆ. ತನ್ನ ತಾಯಿ ಶಕುಂತಲಾ ದೇವಿಯ ಜೊತೆ ಮದುವೆಯ ಬಗ್ಗೆ ಮಾತುಕತೆಯ ಮಾಡುತ್ತಾನೆ . ಮೊದಲನೆಯದಾಗಿ ಅಪೇಕ್ಷಾಳನ್ನು ಪಾರ್ಥನ ಜೊತೆ ನೋಡಿದ ಜೈದೇವ್‌ಗೆ ಶಾಕ್ ಆಗಿದೆ.

ನಾನು ಪ್ರೀತಿ ಮಾಡುತ್ತಿದ್ದ ಹುಡುಗಿಯನ್ನು ಪಾರ್ಥ ಪಟಾಯಿಸಿಬಿಟ್ಟಿದ್ದಾನೆ ಎಂದು ಪಾರ್ಥನ ಬಗ್ಗೆ ಆಕ್ರೋಶ ವ್ಯಕ್ತಪಡಿಸುತ್ತಾನೆ. ಜೈ ದೇವ್ ಹೇಗಾದರೂ ಮಾಡಿ ಅಪೇಕ್ಷಾ ನನ್ನವಳಾಗಿ ಮಾಡಿಕೊಳ್ಳಬೇಕು. ಅದಕ್ಕೆ ನಾನು ಏನು ಬೇಕಾದರೂ ಮಾಡುತ್ತೇನೆ ಎಂದು ಕೊಳ್ಳುತ್ತಾನೆ.

kannada serial Amruthadhare written update 8th February

ಜೈದೇವ್ ಆಸೆಗೆ ಶಕುಂತಲಾ ದೇವಿ ಒಪ್ಪುವುದಿಲ್ಲ. ಹೌದು ಶಕುಂತಲಾ ದೇವಿಗೆ ಭೂಮಿಕಾಳ ಫ್ಯಾಮಿಲಿ ಕಂಡರೆ ಬಹಳ ಕೋಪ. ಮಹಿಮಾ, ಜೀವನನ್ನು ಪ್ರೀತಿ ಮಾಡಿದ್ದಾಳೆ ಎನ್ನುವ ಕಾರಣಕ್ಕೋಸ್ಕರ ಮಾತ್ರ ಶಕುಂತಲಾ ದೇವಿ ಆ ಮದುವೆಗೆ ಒಪ್ಪಿದ್ದಳು. ಇಲ್ಲವಾದರೆ ಖಂಡಿತ ಒಪ್ಪುತ್ತಿರಲಿಲ್ಲ.

ನನಗೆ ಈ ಮದುವೆ ನಿಜವಾಗಿಯೂ ಇಷ್ಟವಿಲ್ಲ, ಮಹಿಮಾಗಳಿಂದಾಗಿ ನಾನು ಎಷ್ಟೆಲ್ಲಾ ಕಷ್ಟ ಪಡಬೇಕಾಯಿತು. ಹಾಗೆಯೇ ಭೂಮಿಕಾ ಮದ್ವೆಯಾಗದೇ ಜೀವ ಮಹಿಮಳನ್ನು ಮದುವೆ ಆಗಲು ಒಪ್ಪುವುದು ಇಲ್ಲ. ಇದರಿಂದ ಆಗಿ ಭುಮಿಕಾಳನ್ನು ಗೌತಮ್‌ಗೆ ತಂದುಕೊಳ್ಳಬೇಕಾಯಿತು ಎಂದು ಜೈ ದೇವ್‌ಗೆ ಹೇಳುತ್ತಾಳೆ. ಹಾಗೆಯೇ ಆ ಕುಟುಂಬದಿಂದ ಹೆಣ್ಣನ್ನು ಖಂಡಿತವಾಗಿಯೂ ನಾನು ತರುವುದು ಇಲ್ಲ ಖಡಾ ಖಂಡಿತವಾಗಿ ಶಕುಂತಲಾ ದೇವಿ ಹೇಳಿದ್ದಾಳೆ. ಈಗ ಜೈ ದೇವ್‌ಗೆ ಏನು ಮಾಡಬೇಕು ಎಂದು ತಿಳಿಯದೇ ಕಂಗೆಟ್ಟಿದ್ದಾನೆ.

kannada serial Amruthadhare written update 8th February

ಜೈದೇವ್ ಆತ್ಮಹತ್ಯೆಗೆ ಯತ್ನ

ಅಮ್ಮ ಒಪ್ಪದೇ ಇದ್ದಿದ್ದನ್ನು ಕಂಡು ಜೈ ದೇವ್ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧಾರ ಮಾಡುತ್ತಾನೆ. ಇದನ್ನು ನೋಡಿದ ಶಕುಂತಲಾ ದೇವಿ ಗಾಬರಿಗೊಂಡು ಸರಿ ಆಯಿತು, ನಾನು ಈ ಬಗ್ಗೆ ಗೌತಮ್ ಹಾಗೂ ಭೂಮಿಕಾ ಬಳಿ ಮಾತನಾಡುತ್ತೇನೆ ಎಂದು ಹೇಳುತ್ತಾಳೆ. ಇದನ್ನು ಕೇಳಿದ ಜೈದೇವ್, ಸುಮ್ಮನಾಗುತ್ತಾನೆ. ಹಾಗೆಯೇ ಅಣ್ಣ ಹಾಗೂ ಅತ್ತಿಗೆ ಜೊತೆ ಬೇಗ ಮಾತನಾಡಬೇಕಾಗಿ ತಾಯಿಯ ಬಳಿ ಹೇಳುತ್ತಾನೆ. ಜೈ ದೇವ್ ಕುತಂತ್ರ ಅರ್ಥವಾಗದೇ ಇಬ್ಬರು ಪ್ರೇಮಿಗಳು ಪ್ರೇಮಲೋಕದಲ್ಲಿ ಹಾರಾಡುತ್ತಿದ್ದಾರೆ.

ಪಾರ್ಥ- ಅಪೇಕ್ಷಾ ಪ್ರೀತಿ ಮೇಲೆ ಜೈ ದೇವ್ ಕಣ್ಣು

ಅಪೇಕ್ಷಾ- ಪಾರ್ಥ ಪ್ರೀತಿಗೆ ಜೈದೇವ್ ಅಡ್ಡಿಯಾಗುವ ಎಲ್ಲಾ ಸಾಧ್ಯತೆಗಳಿವೆ. ಇನ್ನು ಗೌತಮ್ ಹಾಗೂ ಭೂಮಿಕಾ ಬಳಿ ಬಂದ ಶಕುಂತಲಾ ದೇವಿ ನಿಮ್ಮಿಬ್ಬರಲ್ಲೂ ಒಂದು ವಿಚಾರವನ್ನು ಹೇಳಲು ನಾನು ಇಲ್ಲಿಗೆ ಬಂದಿದ್ದೇನೆ ಎಂದು ಹೇಳುತ್ತಾಳೆ. ಇದನ್ನು ಕೇಳಿದ ಭೂಮಿಕಾ ಹಾಗೂ ಗೌತಮ್ ಏನು ಎಂದು ಕೇಳಿದಾಗ ಶಕುಂತಲಾ ದೇವಿ ಜೈದೇವನ ಮದುವೆ ಬಗ್ಗೆ ಮಾತನಾಡುತ್ತಾಳೆ.

ಶಕುಂತಲಾ ಮಾತು ಕೇಳಿ ಗೌತಮ್ ಹಾಗೂ ಭೂಮಿಕಾಗೆ ಖುಷಿ ಆಗುತ್ತದೆ. ಹಾಗೆಯೇ ಹುಡುಗಿಯನ್ನು ಹುಡುಕಿದರೆ ಆಯಿತು ಎಂದು ಸುಮ್ಮನೆ ಆಗುತ್ತಾರೆ . ಆದರೆ ಶಕುಂತಲಾ ದೇವಿ ಮಾತು ಮುಂದುವರೆಸಿ ನಾನು ಹುಡುಗಿಯನ್ನು ಈಗಾಗಲೇ ಹುಡುಕಿದ್ದೇನೆ. ಇದಕ್ಕೆ ನಿಮ್ಮ ಸಮ್ಮತಿ ಬೇಕು ಎಂದು ಕೇಳುತ್ತಾಳೆ. ಇದನ್ನು ಕೇಳಿ ಇಬ್ಬರಿಗೂ ಆಶ್ಚರ್ಯ ಆಗುತ್ತದೆ .

ಭೂಮಿಕಾ ಫುಲ್ ಖುಷ್

ಹುಡುಗಿ ಯಾರು ಎಂದು ಕೇಳಿದಾಗ ಭೂಮಿಕಾ ತಂಗಿ ಅಪೇಕ್ಷಾ ಎಂದು ಶಕುಂತಲಾ ಹೇಳುತ್ತಾಳೆ. ಭೂಮಿಕಾಗೆ ಸಂತಸ ಆದರೂ ಗೌತಮ್ ಸುಮ್ಮನಾಗುತ್ತಾನೆ. ಆದರೆ ಇದಕ್ಕೆ ಭೂಮಿಕಾ ತಂದೆ ತಾಯಿಯ ಒಪ್ಪಿಗೆ ಬೇಕಾಗಿದೆ. ನೀಚ ಜೈ ದೇವ್ ಈಗಾಗಲೇ ಮನೆಯ ಕೆಲಸದಾಕೆಯನ್ನು ವಂಚಿಸುತ್ತಾ ಇರುತ್ತಾನೆ. ಈ ವಿಚಾರ ಭೂಮಿಕಾಗೆ ತಿಳಿದರೆ ಮಾತ್ರ ಜೈ ದೇವ್ ಆಟಕ್ಕೆ ಬ್ರೇಕ್ ಹಾಕಬಹುದು.

More from Filmibeat

English summary
Amruthadhare kannada serial today update.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X