Amruthdhare: ಸತ್ಯ ತಿಳಿದ ಗೌತಮ್ ಯಾರ ಪರ ವಹಿಸುತ್ತಾನೆ? ಹೆಂಡ್ತಿನಾ? ತಾಯಿನಾ?
ಅಮೃತಧಾರೆ ಧಾರಾವಾಹಿಯ ಪ್ರೋಮೋವೊಂದು ಹರಿದಾಡುತ್ತಿದೆ. ಅಪೇಕ್ಷಾ ಹಾಗೂ ಜೈ ದೇವ್ ಮದುವೆ ನಡೆಯುವ ಮುನ್ನವೇ ಈ ಪ್ರೋಮೋವನ್ನು ಜೀ ವಾಹಿಸಿ ಹರಿಬಿಟ್ಟಿದೆ. ಪ್ರೋಮೋ ನೋಡಿದವರು ಹುಬ್ಬೇರಿಸಿದ್ದಾರೆ. ಅಷ್ಟರ ಮಟ್ಟಿಗೆ ಅದು ಗಮನ ಸೆಳೆಯುತ್ತಿದೆ.
ಇದೀಗ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದಾರೆ ಕಾಂತಾರ ಬೆಡಗಿ ಸಪ್ತಮಿ ಗೌಡ. ಹೌದು ಈ ಧಾರಾವಾಹಿಯ ಕಥಾ ಹಂದರ ಜನರಿಗೆ ವಿವರಣೆ ನೀಡಲು ಬಂದಿದ್ದಾರೆ. ಹಾಗೆಯೇ ಸಪ್ತಮಿ ಗೌಡ ಕಿರುತೆರೆ ಎಂಟ್ರಿಯನ್ನು ಕಂಡು ಅಭಿಮಾನಿಗಳು ಬಹಳ ಖುಷಿ ಪಟ್ಟಿದ್ದಾರೆ. ತಾನು ಹೇಗಾದರೂ ಮಾಡಿ ಅಪೇಕ್ಷಾಳನ್ನು ಪಡೆದುಕೊಳ್ಳಬೇಕು ಎಂದು ಯೋಚನೆ ಮಾಡುತ್ತಾ ಇರುತ್ತಾನೆ ಜೈ ದೇವ್. ಆದರೆ ಅಪೇಕ್ಷಾಗೆ ಪಾರ್ಥ ಅಂದರೆ ಜೀವ. ಆದರೆ ಅದನ್ನು ಹೇಳುವ ಅವಕಾಶವನ್ನು ಯಾರು ಆ ಪ್ರೇಮಿಗಳಿಗೆ ನೀಡಲೇ ಇಲ್ಲ.

ಸಮಯ ಬಂದಾಗ ಎಲ್ಲವನ್ನೂ ವಿವರವಾಗಿ ಹೇಳುವ ಯೋಚನೆ ಇಬ್ಬರೂ ಮಾಡಿದ್ದಾರೆ. ಆದರೆ ಜೈ ದೇವ್ ಅಮ್ಮನಿಗೆ ಬೆದರಿಕೆವೊಡ್ಡಿ ನಾನು ಅಪೇಕ್ಷಳನ್ನು ಪ್ರೀತಿ ಮಾಡುತ್ತಿದ್ದೇನೆ, ದಯವಿಟ್ಟು ಆಕೆ ನನ್ನ ಜೊತೆ ಜೀವನ ಸಂಗಾತಿ ಆಗಲು ಒಪ್ಪಿಗೆ ಕೊಡಿ ಎಂದು ನಾಟಕವಾಡಿ ಕೊನೆಗೆ ಅದು ಹೇಗೋ ಆ ಶಕುಂತಲಾ ದೇವಿಯನ್ನು ಒಪ್ಪಿಸಿದ್ದಾನೆ. ಶಕುಂತಲಾ ದೇವಿ ಗೌತಮ್ ಹಾಗೂ ಭೂಮಿಕಾಳನ್ನು ಒಪ್ಪಿಸಿದ್ದಾಳೆ. ಭೂಮಿಕಾ ಬಹಳ ಖುಷಿಗೊಂಡು ಜೈ ದೇವ್ ರೂಮ್‌ಗೆ ಬರುತ್ತಾಳೆ.
ಜೈ ದೇವ್ ತಂತ್ರಕ್ಕೆ ಭೂಮಿಕಾ ಪ್ರತಿ ತಂತ್ರ
ಇನ್ನು ಜೈ ದೇವ್, ಅಪೇಕ್ಷಾಳನ್ನು ಇಷ್ಟ ಪಡುತ್ತಾ ಇರುವುದು ಕೇಳಿ ಭೂಮಿಕಾಗೆ ಬಹಳ ಖುಷಿ ಆಗುತ್ತದೆ. ನನ್ನ ತಂಗಿ ಕೂಡ ಇದೇ ಮನೆಗೆ ಸೊಸೆ ಆಗುತ್ತಾ ಇದ್ದಾಳೆ ಎನ್ನುವ ಖುಷಿಯಲ್ಲಿ ಭೂಮಿಕಾ ತೇಲಾಡುತ್ತ ಇರುತ್ತಾಳೆ. ಇನ್ನು ಇತ್ತ ಮಲ್ಲಿಗೆ ಜೈ ದೇವ್ ನ ಮದುವೆ ಎಂದು ತಿಳಿದು ತಲೆ ಕೆಟ್ಟು ಹೋಗಿ ಬಿಡುತ್ತದೆ. ಯಾಕೆಂದರೆ ಮಲ್ಲಿ ಜೊತೆ ಪ್ರೀತಿಯ ನಾಟಕ ಆಡಿದ ಜೈದೇವ ಆಕೆಯ ಜೀವನದ ಜೊತೆ ಚೆಲ್ಲಾಟ ಆಡುತ್ತಿದ್ದಾನೆ. ಆದರೆ ಈ ವಿಚಾರ ಯಾರಿಗೂ ತಿಳಿದಿಲ್ಲ.

ಭೂಮಿಕಾಗೆ ಜೈ ದೇವ್ ಮೇಲೆ ಅನುಮಾನ
ಅಂದಹಾಗೆ ಭೂಮಿಕಾಗೆ ಈ ಬಗ್ಗೆ ಕೊಂಚ ಅನುಮಾನ ವಿರುತ್ತದೆ. ಅದು ವಾಚ್ ಕಾರಣದಿಂದ. ಇನ್ನು ಅಪೇಕ್ಷಾ ಹಾಗೂ ಜೈ ದೇವ್ ಮದುವೆ ತಯಾರಿ ಭರದಿಂದ ಸಾಗುತ್ತದೆ. ಜೀವನದಲ್ಲಿ ಮದುವೆ ಅನ್ನುವುದೇ ಶುಭಾರಂಭ ಆಗಿರುತ್ತದೆ. ಆದರೆ ಜೈ ದೇವ್ ಮದುವೆ ಆಗುತ್ತಿರುವ ಅಪ್ಪಿ ಜೀವನ ಇಲ್ಲಿಗೆ ಎಂಡ್ ಆಗಿ ಬಿಡುತ್ತಾ? ಈ ಪ್ರಶ್ನೆ ಎಲ್ಲರಿಗೂ ಮೂಡದೇ ಇರದು. ಯಾಕೆಂದರೆ ಜೈ ದೇವ್, ಗೌತಮ್ ಥರ ಒಳ್ಳೆಯವನು ಅಲ್ಲ, ಆತ ಒಳ್ಳೆಯವನಾಗಿ ಮುಖವಾಡವನ್ನು ಹಾಕಿಕೊಂಡು ಇರುವವನು. ಆದರೆ ಇದಕ್ಕೆಲ್ಲ ಭೂಮಿಕಾ ಆಸ್ಪದ ಕೊಡುವುದು ಇಲ್ಲ. ತನ್ನ ತಂಗಿ ಜೀವನ ಯಾವತ್ತೂ ಹಾಳಾಗಬಾರದು ಎನ್ನುವುದು ಆಕೆಯ ಮಹದಾಸೆ.
ಮಲ್ಲಿನ ಮಂಟಪಕ್ಕೆ ಕರೆತಂದ ಭೂಮಿ
ಜೈದೇವ್ ಅಪೇಕ್ಷಾಗೆ ತಾಳಿ ಕಟ್ಟುವ ವೇಳೆ ಕೊನೆಯದಾಗಿ ಪಾರ್ಥನನ್ನು ಅಪ್ಪಿ ನೋಡುತ್ತಾಳೆ. ಆದರೆ ಪಾರ್ಥ ಏನು ಮಾಡುವ ಸ್ಥಿತಿಯಲ್ಲಿ ಇರುವುದು ಇಲ್ಲ. ಜೈ ದೇವ್ ಆಡಿದ ಆಟಕ್ಕೆ ಇತಿ ಶ್ರೀ ಹಾಡಿದ್ದಾರೆ ಭೂಮಿಕಾ. ಎಲ್ಲರ ಎದುರು ಜೈ ದೇವ್, ಮಲ್ಲಿ ಜೊತೆ ಆಡಿದ ಆಟ ರಿವೀಲ್ ಆಯಿತು. ಹಾಗೆಯೇ ಜೈ ದೇವ್ ಅಪ್ಪಿಗೆ ತಾಳಿ ಕಟ್ಟುವ ವೇಳೆ ಆತನ ಕುತ್ತಿಗೆಯ ಬಳಿ ಕತ್ತಿ ಇರುತ್ತದೆ. ಇದನ್ನು ನೋಡಿ ಜೈದೇವ್ ನಡುಗಿ ಹೋಗುತ್ತಾನೆ.
ಕೋಪದಿಂದ ಗುಡುಗಿದ ಶಕುಂತಲಾ
ಶಕುಂತಲಾ ದೇವಿ ಕೋಪದಿಂದ ಅರಚುತ್ತಾಳೆ. ಇದನ್ನು ಕೇಳಿಸಿಕೊಂಡ ಭೂಮಿಕಾ ಅದಕ್ಕೆ ಉತ್ತರವಾಗಿ ಮಲ್ಲಿಯನ್ನು ಕರೆದುಕೊಂಡು ಬರುತ್ತಾಳೆ. ಇವತ್ತು ಮದುವೆ ನಡೆದೇ ನಡೆಯುತ್ತದೆ. ಅದು ಅಪ್ಪಿ ಜೊತೆ ಅಲ್ಲ, ಮಲ್ಲಿಯ ಜೊತೆ ಎಂದು ನಡೆದ ವಿಚಾರವನ್ನು ಎಳೆ ಎಳೆಯಾಗಿ ಗೌತಮ್ ಮುಂದೆ ಬಿಚ್ಚಿ ಇಡುತ್ತಾಳೆ ಭೂಮಿಕಾ. ಇನ್ನು ವಿಚಾರ ತಿಳಿದ ಗೌತಮ್, ಹೆಂಡತಿ ಪರ ವಹಿಸುತ್ತಾನ? ಅಥವಾ ಅಮ್ಮನ ಪರ ನಿಲ್ಲುತ್ತಾನ? ಕಾದು ನೋಡಬೇಕಿದೆ.


Click it and Unblock the Notifications











