'ಮಂಗಳಗೌರಿ ಮದುವೆ' ಧಾರಾವಾಹಿಯಿಂದ ಹೊರಬಂದ ನಟಿ ಸೌಂದರ್ಯ: ಅಸಲಿ ಕಾರಣವೇನು?

ಕನ್ನಡ ಕಿರುತೆರೆಯ ಖ್ಯಾತ ಧಾರಾವಾಹಿಗಳಲ್ಲಿ 'ಮಂಗಳಗೌರಿ ಮದುವೆ' ಧಾರಾವಾಹಿ ಕೂಡ ಒಂದು. ಕನ್ನಡ ಪ್ರೇಕ್ಷಕರ ನೆಚ್ಚಿನ ಧಾರಾವಾಹಿಗಳಲ್ಲಿ ಒಂದಾಗಿದ್ದ ಮಂಗಳ ಗೌರಿ ಮದುವೆ ಯಿಂದ ನಟಿ ರಾಧಿಕಾ ಶ್ರಾವಂತ್ ಹೊರಬಂದಿದ್ದಾರೆ. ರಾಧಿಕ ಎನ್ನುವುದಕ್ಕಿಂತ ಸೌಂದರ್ಯ ಎಂದರೆ ಎಲ್ಲರಿಗೂ ಗೊತ್ತಾಗುತ್ತೆ.

Recommended Video

ಗಿಡ ನೆಟ್ಟು ವಿಶ್ವ ಪರಿಸರ ದಿನದ ಶುಭಾಶಯ ಹೇಳಿದ ಕಿಚ್ಚ ಸುದೀಪ್ | Sudeep | FILMIBEAT KANNADA

ಧಾರಾವಾಹಿಯಲ್ಲಿ ಸೌಂದರ್ಯ ಪಾತ್ರದ ಮೂಲಕ ಕನ್ನಡಿಗರ ಮನೆ ಮಾತಾಗಿದ್ದ ರಾಧಿಕಾ ಈಗ ಧಾರಾವಾಹಿಯಲ್ಲಿ ನಟಿಸುತ್ತಿಲ್ಲ ಎಂದು ಹೇಳಿಕೊಂಡಿದ್ದಾರೆ. ಲಾಕ್ ಡೌನ್ ಹಿನ್ನಲೆ ಸುಮಾರು ಒಂದೂವರೆ ತಿಂಗಳಿಂದ ಚಿತ್ರೀಕರಣ ಸ್ಥಗಿತವಾಗಿತ್ತು. ಸದ್ಯ ಧಾರಾವಾಹಿ ಚಿತ್ರೀಕರಣ ಪ್ರಾರಂಭವಾಗಿ ಒಂದು ವಾರ ಆಗಿದೆ. ಆದರೆ ಆಗಲೆ ಸೌಂದರ್ಯ ಸೀರಿಯಲ್ ನಿಂದ ಹೊರ ಬರುವುದಾಗಿ ಹೇಳಿ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ್ದಾರೆ. ಮುಂದೆ ಓದಿ..

ವಿಲನ್ ಆಗಿದ್ದ ಸೌಂದರ್ಯ

ವಿಲನ್ ಆಗಿದ್ದ ಸೌಂದರ್ಯ

'ಮಂಗಳಗೌರಿ ಮದುವೆ' ಧಾರಾವಾಹಿಯಲ್ಲಿ ನಟಿ ರಾಧಿಕಾ ಸೌಂದರ್ಯ ಎನ್ನುವ ವಿಲನ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಅದ್ಭುತವಾಗಿ ಅಭಿನಯಿಸುತ್ತಿದ್ದ ಸೌಂದರ್ಯ ಕಿರುತೆರೆ ವೀಕ್ಷಕರ ನೆಚ್ಚಿನ ನಟಿಯಾಗಿದ್ದರು. ಸೌಂದರ್ಯ ಮತ್ತು ಆಕೆಯ ಜೊತೆಯಲ್ಲಿಯೆ ಇರುವ ವಲ್ಲಿ ಎನ್ನುವ ಪಾತ್ರ ಈ ಎರಡೂ ಪಾತ್ರಗಳು ವಿಲನ್ ಮತ್ತು ಕಾಮಿಡಿ ಮಿಶ್ರಿತವಾಗಿತ್ತು. ಇಬ್ಬರು ವೀಕ್ಷಕರ ನೆಚ್ಚಿನ ಜೋಡಿಯಾಗಿ ಖ್ಯಾತಿ ಗಳಿಸತ್ತು.

ಧಾರಾವಾಹಿಯಿಂದ ಹೊರಬಂದ ಕಾರಣ ಬಿಚ್ಚಿಟ್ಟ ನಟಿ

ಧಾರಾವಾಹಿಯಿಂದ ಹೊರಬಂದ ಕಾರಣ ಬಿಚ್ಚಿಟ್ಟ ನಟಿ

ನಟಿ ರಾಧಿಕಾ ಧಾರಾವಾಹಿಯಿಂದ ಹೊರಬಂದ ಕಾರಣವನ್ನು ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದಾರೆ."ನಮಸ್ತೆ, ಇವತ್ತು ನನ್ನ ಜೀವನದಲ್ಲಿ ತುಂಬ ಬೇಸರವಾದ ದಿನ. ಮಂಗಳ ಗೌರಿ ಮದುವೆ ಒಂದು ಅದ್ಭುತ ಧಾರಾವಾಹಿಯಿಂದ ಹೊರಬಂದ ದಿನ. ಸೌಂದರ್ಯ ಎನ್ನುವ ಪಾತ್ರದಿಂದ ಮುಕ್ತಿ ಹೊಂದಿದ ದಿನ. ವಯಕ್ತಿಕ ಕಾರಣದಿಂದ ಧಾರಾವಾಹಿಯಿಂದ ಹೊರಬರುತ್ತಿದ್ದೀನಿ" ಎಂದು ಹೇಳಿದ್ದಾರೆ.

ಹೊಸ ರೂಪದಲ್ಲಿ ನಿಮ್ಮ ಮುಂದೆ ಬರುವೆ

ಹೊಸ ರೂಪದಲ್ಲಿ ನಿಮ್ಮ ಮುಂದೆ ಬರುವೆ

"ಸೌಂದರ್ಯ ಒಂದು ಪಾತ್ರಮಾತ್ರವಲ್ಲ. ಇದು ಒಂದು ನವರಸಗಳ ದರ್ಶನ. ಆ ನವರಸಗಳನ್ನು ಒಂದೇ ಪಾತ್ರದಲ್ಲಿ ಅಭಿನಯಿಸಿ ನಿಮ್ಮಲ್ಲರ ಪ್ರೀತಿ ಸಂಪಾದಿಸಿ ನನಗೆ ನನ್ನ ಶಕ್ತಿಯ ಪರಿಚಯವಾಯಿತು. ಕೆಲವು ವಾರಗಳ ಹಿಂದೆ ನನ್ನ ಕನಸಾಗಿದ್ದ ಸೌಂದರ್ಯ ಪಾತ್ರ ಇಂದಿನಿಂದ ನನ್ನ ಪಾಲಿಗೆ ನೆನಪಾಗಿ ಉಳಿಯುತ್ತೆ. ಮತ್ತೆ ಬರುವೆ. ನಿಮ್ಮೆಲ್ಲರ ಮುಂದೆ. ಹೊಸ ರೂಪದಲ್ಲಿ, ಹೊಸ ಹೆಸರಿನಲ್ಲಿ, ಹೊಸ ನಾನಾಗಿ ಬರುವೆ. ಇಂತಿ ನಿಮ್ಮ ಸೌಂದರ್ಯ" ಎಂದು ಬರೆದುಕೊಂಡಿದ್ದಾರೆ.

ಸಿನಿಮಾದಲ್ಲಿಯೂ ಅಭಿನಯಿಸಿದ್ದಾರೆ ರಾಧಿಕಾ

ಸಿನಿಮಾದಲ್ಲಿಯೂ ಅಭಿನಯಿಸಿದ್ದಾರೆ ರಾಧಿಕಾ

ರಾಧಿಕಾ ಧಾರಾವಾಹಿ ಮಾತ್ರವಲ್ಲದೆ ಸಿನಿಮಾದಲ್ಲಿಯೂ ಅಭಿನಯಿಸಿದ್ದಾರೆ. ಈ ಮೊದಲು ಪುಟ್ಟಮಲ್ಲಿ ಧಾರಾವಾಹಿಯಲ್ಲಿ ಕಾಣಿಸಿಕೊಂಡಿದ್ದರು. ಕಿರುತೆರೆ ಮಾತ್ರವಲ್ಲದೆ ಸಿನಿಮಾದಲ್ಲಿಯೂ ನಟಿಸಿದ್ದಾರೆ. ವಿನಯ್ ರಾಜ್ ಕುಮಾರ್ ಅಭಿನಯದ ಗ್ರಾಮಾಯಣ ಸಿನಿಮಾದಲ್ಲಿ ರಾಧಿಕಾ ಕಾಣಿಸಿಕೊಂಡಿದ್ದಾರೆ. ಸದ್ಯ ಧಾರಾವಾಹಿಯಿಂದ ಬಂದಿರುವ ರಾಧಿಕಾ ನಿಮ್ಮೆಲ್ಲರ ಮುಂದೆ ಹೊಸ ರೂಪದಲ್ಲಿ ಬರುತ್ತೇನೆ ಎಂದು ಹೇಳಿದ್ದಾರೆ.

English summary
Kannada Serial Artist Radhika Shravanth quit from Mangalagowri serial.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X