Bhagya Lakshmi ; ಭಾಗ್ಯ ತಲೆ ನೋವಾದ ತನ್ವಿ ವರ್ತನೆ, ತಾಂಡವ ಏನ್ಮಾಡ್ತಾನೆ ?
ತನ್ವಿ ವರ್ತನೆಯಿಂದ ಭಾಗ್ಯಗೆ ಬಹಳ ಬೇಸರವಾಗುತ್ತದೆ. ಆಕೆಗೆ ತನ್ನ ಮಗಳು ತನ್ನ ಜೊತೆ ಸುಳ್ಳು ಹೇಳುತ್ತಾಳೆ ಎಂದು ಅಂದುಕೊಂಡೆ ಇರುವುದಿಲ್ಲ. ಭಾಗ್ಯ ಅದೆಷ್ಟೇ ತನ್ನ ಮಗಳನ್ನು ಚೆನ್ನಾಗಿ ನೋಡಿಕೊಂಡರು ತನ್ವಿಗೆ ಆಸೆಗಳು ಹೆಚ್ಚಾಗುತ್ತಿವೆ ವಿನಃ ತನ್ನ ತಾಯಿಯನ್ನು ಅರ್ಥ ಮಾಡಿಕೊಳ್ಳಲೇ ಇಲ್ಲ. ಭಾಗ್ಯಗೆ ಯಾರ ಸಹಾಯವು ಇಲ್ಲದೆ ಸ್ವಂತ ಬ್ಯುಸಿನೆಸ್ ಶುರು ಮಾಡಿದ್ದಾಳೆ. ಕುಟುಂಬವನ್ನು ಚೆನ್ನಾಗಿ ಸಾಕಬೇಕು ಹಾಗೆ ಕುಟುಂಬ ಎಂದ ಮೇಲೆ ಸಾಕಷ್ಟು ಏರುಪೇರುಗಳು ಇದ್ದದ್ದು ಆದರೆ ಅದೆಲ್ಲವನ್ನ ದಾಟಿ ಹೊಸ ಬ್ಯುಸಿನೆಸ್ ಜೊತೆಗೆ ಹೊಸದಾದ ಹುಮ್ಮಸ್ಸು ಆಕೆಯ ಜೊತೆಗೆ ಇದೆ.
ಎಲ್ಲರ ಜೊತೆಗೆ ಬಹಳಷ್ಟು ಖುಷಿಯಲ್ಲಿರುತ್ತಾಳೆ. ಇದೀಗ ಭಾಗ್ಯ ಗೆ ಆರ್ಡರ್ ಗಳು ಸಿಗುತ್ತಿದೆ. ಅನೇಕ ಜನರು ಫೋನ್ ಮೇಲೆ ಫೋನ್ ಮಾಡಿ ಭಾಗ್ಯ ಮಾಡುತ್ತಿರುವ ಟಿಫನ್ ಊಟಕ್ಕೆ ಬಹಳಷ್ಟು ಬೇಡಿಕೆ ಹೆಚ್ಚಾಗುತ್ತಿದೆ ಫೋನ್ ಮಾಡಿ ಎಲ್ಲರೂ ಕೂಡ ನಮಗೆ ಈ ದಿನ ಟಿಫನ್ ಬೇಕು ಎಂದು ಜನರು ಭಾಗ್ಯ ಜೊತೆ ಹೇಳುತ್ತಿರುತ್ತಾರೆ. ಭಾಗ್ಯ ಬಹಳಷ್ಟು ಕೆಲಸ ಮಾಡುತ್ತಾಳೆ. ರುಚಿ ರುಚಿಯಾದ ಅಡುಗೆಯನ್ನು ಮಾಡುತ್ತಾಳೆ. ಜನರಿಗೆ ಇನ್ನೇನು ಸರ್ವ್ ಮಾಡಬೇಕು ಎನ್ನುವಷ್ಟರಲ್ಲಿ ತನ್ವಿ ಕಾಲ್ ಬರುತ್ತದೆ.

ತನ್ವಿ ಮಾತು ಕೇಳಿದ ಭಾಗ್ಯಗೆ ಬಹಳಷ್ಟು ಶಾಕ್ ಆಗುತ್ತದೆ. ತನ್ವಿ ಗೆ ಬಹಳ ಸಲ ಭಾಗ್ಯ ಹೇಳಿದ್ದಳು. ತನ್ವಿ ಓದುವ ವಯಸ್ಸಲ್ಲಿ ಓದು. ರೆಸಾರ್ಟ್ ಎಂದೆಲ್ಲ ಹೋಗಬೇಡ ಇದರಿಂದ ನಿನಗೆ ಬಹಳ ಸಂಕಷ್ಟ ಎದುರಾದಿತು. ನಾನು ಮಾತ್ರ ಖಂಡಿತವಾಗಿಯೂ ನಿನ್ನನ್ನು ರೆಸಾರ್ಟ್ ಗೆ ಕರೆದುಕೊಂಡು ಹೋಗಲು ಬಿಡುವುದಿಲ್ಲ ಎಂದು ಹೇಳುತ್ತಾಳೆ. ಇದನ್ನೂ ಕೇಳಿದ ತನ್ವಿಗೆ ಬಹಳ ಕೋಪ ಬಂದಿತ್ತು. ಆದರೆ ಇದೀಗ ಆಕೆಗೆ ತನ್ನ ತಾಯಿಯ ಮಾತೆ ಸತ್ಯ ಎಂದು ಅನ್ನಿಸುತ್ತದೆ. ಅಮ್ಮ ಹೇಳಿದ ಹಾಗೆಯೇ ಕೇಳಿಕೊಂಡಿದ್ದರೆ ಖಂಡಿತವಾಗಿಯೂ ನನಗೆ ಇಂತಹ ಸ್ಥಿತಿ ಬರುತ್ತಿರಲಿಲ್ಲ ಎಂದು ಮನದಲ್ಲಿ ಅಂದುಕೊಳ್ಳುತ್ತಾಳೆ. ತನ್ವಿ ಆಪತ್ತಿನಲ್ಲಿ ಸಿಲುಕಿಕೊಂಡಿದ್ದಾಳೆ ಎಂದು ಭಾಗ್ಯ ಗೆ ತಿಳಿದ ಬಳಿಕ ಒಂದು ನಿಮಿಷವೂ ಆಕೆ ಸುಮ್ಮನಿರುವುದಿಲ್ಲ. ರೆಸಾರ್ಟ್ ನತ್ತ ಧಾವಿಸಿ ಬರುತ್ತಾಳೆ. ತಾನು ರೆಸಾರ್ಟ್ ಗೆ ಹೋಗಲು ಪರ್ಮಿಷನ್ ಕೊಟ್ಟಿಲ್ಲ. ಆದರೂ ಅದು ಹೇಗೆ ಪರ್ಮಿಷನ್ ಸಿಕ್ಕಿತು ಎನ್ನುವ ಆಲೋಚನೆಯಲ್ಲಿರುತ್ತಾಳೆ.
ಆಪತ್ತಿಗೆ ಸಿಲುಕಿದ ತನ್ವಿ ರಕ್ಷಿಸಿದ ಭಾಗ್ಯ
ಭಾಗ್ಯ ಗೆ ಬಹಳ ಬೇಸರವಾಗುತ್ತದೆ. ತನ್ವಿಗೆ ಅದೆಷ್ಟೇ ಬೇಡ ಎಂದು ಹೇಳಿದರು ಇದೀಗ ರೆಸಾರ್ಟ್ಗೆ ಹೋಗಿ ಆಪತ್ತಿಗೆ ಸಿಲುಕಿದ್ದಾಳೇ. ಆಕೆಯ ಜೊತೆಗೆ ತನ್ನ ಮೇಲೆ ಕೂಡ ಎಲ್ಲರೂ ಬ್ಲೇ ಮಾಡುತ್ತಿದ್ದಾರೆ. ಅಷ್ಟಕ್ಕೂ ಆಕೆಗೆ ರೆಸಾರ್ಟ್ಗೆ ಹೋಗಲು ಪರ್ಮಿಷನ್ ಕೊಟ್ಟಿರುವುದು ಯಾರು ಎನ್ನುವುದು ಭಾಗ್ಯಗೆ ಮೂಡಿದ ಬಹಳ ದೊಡ್ಡ ಪ್ರಶ್ನೆಯಾಗಿದೆ. ಪೊಲೀಸರ ಪ್ರಶ್ನೆ ಗೆ ಭಾಗ್ಯ ಉತ್ತರಿಸ ಬೇಕಾದ ಅನಿವಾರ್ಯತೆ ಮೂಡುತ್ತದೆ. ಇತ್ತ ಶ್ರೇಷ್ಠ ತನ್ನ ಗಂಡನೇ ಜೊತೆಗೆ ಹಲ್ ಚಲ್ ಮಾತನಾಡುತ್ತಿದ್ದಾರೆ. ತಾಂಡವಗೆ ಜೋರಾಗಿ ಹೊಟ್ಟೆ ಹಸಿಯುತ್ತದೆ. ತಾಂಡವನಿಗಾಗಿ ಶ್ರೇಷ್ಠ ಸ್ಪೆಶಲ್ ಅಡುಗೆ ತಯಾರಿ ಮಾಡಿರುತ್ತಾಳೇ. ಆದರೆ ಆಕೆ ಮಾಡಿರುವ ಅಡುಗೆಯನ್ನು ನೋಡಿದಾಗಲೇ ತಾಂಡವ ಗೆ ಏನೋ ಡೌಟ್ ಬರುತ್ತದೆ. ಆದರೂ ಕೊಂಚ ಧೈರ್ಯ ಮಾಡಿ ಟೇಸ್ಟ್ ಮಾಡುತ್ತಾನೆ. ಆಕೆ ಮಾಡಿದ ಅಡುಗೆಯನ್ನು ಸವಿದ ತಾಂಡವ ಒಮ್ಮಿಂದೊಮ್ಮೆಲೆ ವಾಂತಿ ಮಾಡುತ್ತಾನೆ.
ಶ್ರೇಷ್ಠ ಮೇಲೆ ಮುನಿಸಿಕೊಂಡ ತಾಂಡವ
ತಾಂಡವ ವಾಂತಿ ಮಾಡುತ್ತಿರುವುದನ್ನು ಕಂಡ ಶ್ರೇಷ್ಠ ಗೆ ಶಾಕ್ ಆಗುತ್ತದೆ. ಏನಾಯಿತು ಎಂದು ಪ್ರಶ್ನೆ ಮೇಲೆ ಪ್ರಶ್ನೆ ಮಾಡುತ್ತಾಳೆ. ಕೋಪಗೊಂಡ ತಾಂಡವ ಶ್ರೇಷ್ಠ ಬಳಿ ಪ್ರಶ್ನೆ ಮಾಡುತ್ತಾನೆ. ಮೊನ್ನೆ ನೀನು ಆಫೀಸ್ ಗೆ ತೆಗೆದುಕೊಂಡು ಬಂದ ಊಟವನ್ನು ನೀನೇ ತಯಾರಿ ಮಾಡಿರುವುದಾ? ಎಂದು ಕೇಳಿದಾಗ ಗಲಿಬಿಲಿಗೊಂಡ ಶ್ರೇಷ್ಠ ನಾನೇ ಮಾಡಿದ್ದು ಎಂದು ತನ್ನ ಗಂಡನ ಬಳಿ ಹೇಳುತ್ತಾಳೆ. ಆದರೆ ತಾಂಡವ ಮಾತ್ರ ನಂಬುವುದೇ ಇಲ್ಲ. ಶ್ರೇಷ್ಠ ಮಾಡಿದ ಅಡುಗೆ ಸವಿದ ತಾಂಡವ ಮಾತ್ರ ಬಹಳ ಕೋಪದಲ್ಲಿರುತ್ತಾನೇ. ಖಂಡಿತವಾಗಿಯೂ ಅಷ್ಟು ರುಚಿಯಾದ ಅಡುಗೆ ಶ್ರೇಷ್ಠ ಮಾಡಿರಲು ಸಾಧ್ಯವೇ ಇಲ್ಲ ಎಂದು ತಾಂಡವಗೆ ತಿಳಿದಿರುತ್ತದೆ. ಆತ ಮತ್ತೊಮ್ಮೆ ಶ್ರೇಷ್ಠ ಬಳಿ ಪ್ರಶ್ನೆ ಮಾಡುತ್ತಾನೆ. ನಮ್ಮ ಪ್ರೀತಿ ಮೇಲೆ ಆಣೆ ಮಾಡಿ ಹೇಳು ನೀನು ನಿನ್ನೆ ಅಡುಗೆ ಮಾಡಿದ್ಯ ಎಂದು ಕೇಳುತ್ತಾನೆ. ಶ್ರೇಷ್ಠ ತೊದಲುತ್ತಾ ಇಲ್ಲ ನಾನು ಮಾಡಿಲ್ಲ ಎಂದು ಹೇಳುತ್ತಾಳೆ. ತಾಂಡವ ಗೆ ಶ್ರೇಷ್ಠ ಯೋಗ್ಯತೆ ಎನು ಎಂಬುವುದು ಅರ್ಥವಾಗತೊಡಗಿದೆ.


Click it and Unblock the Notifications











