Bhagya Lakshmi ; ಶ್ರೇಷ್ಠ ಗೆ ಕಪಾಳಮೋಕ್ಷ ಮಾಡಿದ ತಾಂಡವ, ಗಂಡನ ಹೊಡೆತಕ್ಕೆ ನಲುಗಿದ ಹೆಂಡತಿ

By ಪೂರ್ವ

ಭಾಗ್ಯ ತನ್ನ ಮಗಳಿಗೆ ಬುದ್ಧಿವಾದವನ್ನು ಹೇಳುತ್ತಾಳೆ. ಹಾಗೆಯೇ ತನ್ವಿ ನೀನು ಈ ರೀತಿ ಮಾಡುತ್ತೀಯಾ ಎಂದು ನಾನು ಅಂದುಕೊಂಡಿರಲಿಲ್ಲ . ನನಗೆ ಬಹಳಷ್ಟು ಬೇಸರವಾಗಿದೆ. ನೀನು ಟ್ಯೂಶನ್ ಗೆ ಎಂದು ಸುಳ್ಳು ಹೇಳಿ ಹೋದಾಗ ನನಗೆ ನಿನ್ನ ಮೇಲೆ ಸ್ವಲ್ಪ ಡೌಟ್ ಬಂತು, ಆದರೆ ನೀನು ನನಗೆ ಸುಳ್ಳು ಹೇಳಿ ರೆಸಾರ್ಟ್ ಗೆ ಹೋಗುತ್ತೀಯಾ ಎಂದು ನಾನು ಅಂದುಕೊಂಡಿರಲಿಲ್ಲ ನನ್ನ ಮಗಳು ನನ್ನ ಜೊತೆ ಸುಳ್ಳು ಹೇಳುತ್ತಾಳೆ ಎಂದು ನನಗೆ ಈಗ ಕೂಡ ಅದನ್ನು ಅರಗಿಸಿಕೊಳ್ಳಲು ಆಗುತ್ತಿಲ್ಲ. ತನ್ವಿ ತಾಯಿಯ ಮಾತು ಕೇಳಿ ಬಹಳಷ್ಟು ನೋವು ಪಟ್ಟುಕೊಳ್ಳುತ್ತಾಳೆ.

ಅಮ್ಮ ನನ್ನದು ತಪ್ಪಾಯಿತು. ನಾನು ಆತರ ಮಾಡಬಾರದಾಗಿತ್ತು ಆದರೆ ಇನ್ನು ಮುಂದೆ ನೀನು ಹಾಗೂ ಅಜ್ಜಿ ಹೇಗೆ ನಡೆಸುತ್ತಿರೋ ಅದೇ ಹಾದಿಯಲ್ಲಿ ನಾನು ನಡೆಯುತ್ತೇನೆ ದಯವಿಟ್ಟು ನನ್ನನ್ನ ಕ್ಷಮಿಸಿಬಿಡು ಎಂದು ತಾಯಿಯ ಬಳಿ ಪರಿಪರಿಯಾಗಿ ಬೇಡಿಕೊಳ್ಳುತ್ತಾಳೆ. ಇತ್ತ ತಾಂಡವ ಮಾತ್ರ ಉಗ್ರ ರೂಪವನ್ನು ತಾಳಿರುತ್ತಾನೆ. ಭಾಗ್ಯಗೆ ತನ್ನಿಬ್ಬರು ಮಕ್ಕಳನ್ನು ನೋಡಿಕೊಳ್ಳಲು ಆಗುತ್ತಿಲ್ಲವಾ, ರೆಸಾರ್ಟ್ ಗೆ ಹೋಗುವುದು ಬೇಡ ಎಂದು ಅದೆಷ್ಟು ಬಾರಿ ಹೇಳಿದರೂ ಕೂಡ ಭಾಗ್ಯ ಮಾತು ಕೇಳಿಕೊಂಡು ತನ್ವಿ ರೆಸಾರ್ಟಿಗೆ ಹೋಗಿದ್ದಾಳೆ. ಅಲ್ಲಿ ಪೊಲೀಸರ ಎದುರು ಸಿಕ್ಕಿ ಹಾಕಿಕೊಂಡಿದ್ದಾಳೆ. ಇಷ್ಟೆಲ್ಲಾ ಆದರೂ ಏನು ಆಗಿಲ್ಲ ಎಂದು ಶ್ರೇಷ್ಠ ಬಳಿ ತಾಂಡವ ಹೇಳುತ್ತಾನೆ. ತಾಂಡವನ ಮಾತು ಕೇಳಿ ಶ್ರೇಷ್ಠ ಗೆ ಶಾಕ್ ಆಗುತ್ತದೆ ಇದೇನಪ್ಪಾ ತಾಂಡವ ಹೇಗೆ ಈ ವಿಚಾರ ತಿಳಿಯಿತು ಎಂದು ಆಲೋಚನೆ ಮಾಡುತ್ತಾರೆ.

kannada-serial-bhagya-lakshmi-written-03th-march

ಎಲ್ಲಾದರೂ ಸತ್ಯ ವಿಚಾರ ಹೇಳಿದರೆ ನನ್ನ ಗತಿ ಗೋವಿಂದ ಎಂದು ಶ್ರೇಷ್ಠ ಮನದಲ್ಲಿ ಅಂದುಕೊಳ್ಳುತ್ತಾಳೆ. ತಾಂಡವ ನನ್ನ ಶ್ರೇಷ್ಠ ಬಹಳಷ್ಟು ತಡೆಯಲು ಪ್ರಯತ್ನ ಪಡುತ್ತಾಳೆ. ಆದರೆ ತಾಂಡವ ಮಾತ್ರ ಶ್ರೇಷ್ಠ ಮಾತನಾ ಕೇಳುವುದಿಲ್ಲ ನನ್ನ ಹಾಗೂ ನನ್ನ ಮಕ್ಕಳ ವಿಚಾರಕ್ಕೆ ಹಾಗೂ ನನ್ನ ತಂದೆ ತಾಯಿ ವಿಚಾರಕ್ಕೆ ಬರಬೇಡ ಎಂದು ಬಹಳ ಸಲ ಹೇಳಿದ್ದೇನೆ ಶ್ರೇಷ್ಠ ಆದರೆ ನೀನು ಪದೇಪದೇ ನನ್ನ ಮಕ್ಕಳ ವಿಚಾರದಲ್ಲಿ ಮೂಗು ತೂರಿಸುತ್ತಿದ್ದೀಯ ನಿಂದು ಎಷ್ಟು ಇದೆಯೋ ಅಷ್ಟು ನೋಡಿಕೊಂಡು ಹೋಗು ಎಂದು ಶ್ರೇಷ್ಠ ಗೆ ಖಡಕ್ ವಾರ್ನಿಂಗ್ ನೀಡುತ್ತಾರೆ ಆದರೆ ಶ್ರೇಷ್ಠ ಮಾತ್ರ ಬಹಳಷ್ಟು ಭಯಪಟ್ಟುಕೊಳ್ಳುತ್ತಾರೆ ಆಕೆಗೆ ತಾನೇಲ್ಲಿ ಸಿಕ್ಕಿ ಬೀಳುತ್ತೇನೋ ಎನ್ನುವುದು ಆಕೆಯನ್ನು ಕಾಡುತ್ತದೆ. ತಾಂಡವ ಬಹಳ ಬಿರುಸಾಗಿ ಭಾಗ್ಯ ಮನೆಯೊಳಗೆ ಹೋಗುತ್ತಾನೆ.

ಭಾಗ್ಯ ಮೇಲೆ ಮುನಿಸಿಕೊಂಡ ತಾಂಡವ

ಭಾಗ್ಯಳನ್ನು ಭಾಗ್ಯ ಎಂದು ಕರೆಯುವುದಕ್ಕಿಂತ ಹೆಚ್ಚು ಎಮ್ಮೆ ಎಂದೇ ಕರೆದುಕೊಂಡು ತಾಂಡವ ಮನೆಗೆ ಕಳಿಸುತ್ತಾನೆ . ತಾಂಡವ ನ ಧ್ವನಿ ಕೇಳಿ ಮನೆಮಂದಿ ಹೊರಗೆ ಬರುತ್ತಾರೆ. ಶ್ರೇಷ್ಠ ಓಡಿಕೊಂಡು ಆತನ ಹಿಂದೆಯೇ ಬರುತ್ತಾಳೆ. ತಾಂಡವನ ಬಳಿ ಏನು ಎತ್ತಾ ಎಂದು ಕುಸುಮ ಕೇಳುವ ಮೊದಲೇ ಭಾಗ್ಯ ಹಾಗೂ ಆಕೆಯ ಮಗಳು ಅಲ್ಲಿಗೆ ಬರುತ್ತಾರೆ. ಭಾಗ್ಯ ಬರುವುದನ್ನು ನೋಡಿ ತಾಂಡವ ಕುಹಕವಾಡುತ್ತಾನೆ. ತಂದೆಯ ಮಾತು ಕೇಳಿ ತನ್ವಿಗೆ ಬಹಳಷ್ಟು ನೋವಾಗುತ್ತದೆ ಆದರೂ ಸುಮ್ಮನಿರುತ್ತಾಳೆ. ಭಾಗ್ಯ ಏನು ತಪ್ಪು ಮಾಡಿಲ್ಲ ಎನ್ನುವುದು ತಾಂಡವನಿಗೆ ತಿಳಿಯುತ್ತದೆ. ತಪ್ಪು ಮಾಡಿದ್ದು ಬೇರೆ ಯಾರು ಅಲ್ಲ ಅದು ಭಾಗ್ಯ ಎಂದುಕೊಂಡ ತಾಂಡವ ಗೆ ಶಾಕ್ ಆಗುತ್ತದೆ.

ತನ್ವಿ ಮಾತು ಕೇಳಿ ಕೋಪಗೊಂಡ ತಾಂಡವ

ಶ್ರೇಷ್ಠ ಮಾಡಿದ ಕೆಲಸವನ್ನು ತನ್ವಿ ಬಾಯಿಂದ ಕೇಳಿದ ತಾಂಡವ ಗೆ ಎಲ್ಲಿಲ್ಲದ ಕೋಪ ಬರುತ್ತದೆ. ಅದರಲ್ಲೂ ಶ್ರೇಷ್ಠ ಮಾತು ತಾಂಡವ ನನ್ನ ಬಹಳಷ್ಟು ಕೆರಳಿಸುತ್ತದೆ ಭಾಗ್ಯ ಹಾಗೂ ನಿಮಗೆ ತನ್ವಿ ಆಸೆ ಫುಲ್ ಫಿಲ್ ಮಾಡಲು ನಿಮ್ಮಿಂದ ಆಗಲಿಲ್ಲ ಅದಕ್ಕೆ ಅವಳನ್ನು ನಾನು ಸಹಿ ಹಾಕಿ ಕಳುಹಿಸಿದೆ ಎಂದೇ ಹೇಳುತ್ತಾಳೆ ಆಕೆಯ ಮಾತು ಕೇಳಿದ ತಾಂಡವ ಗೆ ಕೋಪ ಇರುತ್ತದೆ. ಮನೆಯವರ ಎದುರು ತಾಂಡವ ಶ್ರೇಷ್ಠ ಕೆನ್ನೆಗೆ ಹೊಡೆಯುತ್ತಾನೆ. ಅಷ್ಟಾದರೂ ಶ್ರೇಷ್ಠ ಮಾತು ಮುಂದುವರೆಸುತ್ತಿರುತ್ತಾಳೆ. ತಾಂಡವ ಮತ್ತೊಮ್ಮೆ ಶ್ರೇಷ್ಠ ಕೆನ್ನೆಗೆ ಹೊಡೆದು ಇನ್ನೊಂದು ಸಲ ಈ ರೀತಿ ಆದರೆ ಖಂಡಿತವಾಗಿಯೂ ನಾನು ಸುಮ್ಮನೆ ಇರುವ ಮಾತೇ ಇಲ್ಲ ಎಂದು ತಾಂಡವ ಖಡಕ್ ಆಗಿ ಹೇಳುತ್ತಾನೆ. ತಾಂಡವ ಮಾತಿಗೆ ಶ್ರೇಷ್ಠ ಗಪ್ ಚುಪ್ ಆಗುತ್ತಾಳೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X