Bhagyalakshmi ; ಭಾಗ್ಯ ಬ್ಯುಸಿನೆಸ್ ಮೇಲೆ ತಾಂಡವ ವಕ್ರದೃಷ್ಟಿ, ತನ್ಮಯ ನ ಶಾಲೆಯಲ್ಲಿ ಭಾರೀ ಮುಖಭಂಗ!

By ಪೂರ್ವ

ಭಾಗ್ಯಗೆ ಅದೆಷ್ಟೇ ಕಷ್ಟವಾದರೂ ತನ್ನ ಮನೆಯವರು ಎಂದರೆ ಜೀವ ಕೊಡಲು ಕೂಡ ಸನ್ನದ್ದಳಾಗಿರುತ್ತಾಳೆ. ಭಾಗ್ಯಗೆ ತನ್ಮಯ ನ ಫೀಸ್ ಕಟ್ಟುವುದು ಕಷ್ಟವಾದ ವಿಚಾರವೇ ಅಲ್ಲ ಅದೆಲ್ಲವನ್ನ ಬಹಳ ಸುಲಭವಾಗಿ ನಿಭಾಯಿಸಬಲ್ಲ ಚತುರೆ ಭಾಗ್ಯ. ಆದರೆ ಭಾಗ್ಯ ಏನು ಎನ್ನುವುದು ಆಕೆಯ ಗಂಡನಿಗೆ ತಿಳಿದಿಲ್ಲ ಭಾಗ್ಯ ಮನೆಯಲ್ಲಿ ಕೆಲಸ ಮಾಡಿಕೊಂಡು ಬಿದ್ದಿರುತ್ತಾಳೆ. ಆಕೆಗೆ ತನ್ನ ಕಷ್ಟಗಳು ಏನೆಂದು ಗೊತ್ತಾಗುವುದಿಲ್ಲ ಎಂದೆಲ್ಲ ಹೇಳುತ್ತಾ ಆಕೆಯನ್ನ ಮೂದಲಿಸುತ್ತಾ ಇರುತ್ತಿದ್ದ ತಾಂಡವ ಬೇರೆ ಹುಡುಗಿಯನ್ನ ಮೋಹಿಸುತ್ತಾನೆ. ಆದರೆ ಭಾಗ್ಯ ಪತಿಯೇ ಪರದೈವ ಎಂದು ಆತನ ಜೊತೆಗೆ ಬಾಳ್ವೆಯನ್ನು ನಡೆಸುತ್ತಾಳೆ.

ಆದರೆ ಇದೀಗ ಗಂಡನಿಂದ ಬೇರ್ಪಟ್ಟು ಸುಖವಾದ ಸಂಸಾರವನ್ನು ನಡೆಸುತ್ತಿದ್ದಾಳೆ. ಅತ್ತೆ ಮಾವ ತಾಯಿ ತಂಗಿಯರ ಜೊತೆಗೆ ಬಹಳಷ್ಟು ಖುಷಿಯಿಂದ ಕಾಲ ಕಳೆಯುತ್ತಿದ್ದಾಳೆ. ಭಾಗ್ಯಗೆ ತನ್ನ ಗಂಡನಿಂದ ಹಾಗೂ ಶ್ರೇಷ್ಠಳಿಂದ ಬಹಳಷ್ಟು ಕಷ್ಟವಾಗಿದೆ ಜೀವನದಲ್ಲಿ ಬಹಳ ಏರುಪೇರುಗಳನ್ನು ಕಂಡವಳು ಭಾಗ್ಯ. ಬಹಳ ಚೆನ್ನಾಗಿಯೇ ಇದ್ದ ಕೆಲಸವನ್ನು ಬಿಟ್ಟ ಭಾಗ್ಯ ಹಲವಾರು ಬ್ಯುಸಿನೆಸ್ ಮಾಡಲು ತೊಡಗುತ್ತಾಳೆ. ಆದರೆ ಅದಕ್ಕೆ ಅನೇಕ ಜನರು ಕಲ್ಲು ಹಾಕುತ್ತಾರೆ. ಆದರೆ ಇದೀಗ ಕೈ ತುತ್ತು ಎನ್ನುವ ಹೊಸದಾದ ಬ್ಯುಸಿನೆಸ್ ಶುರು ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಭಾಗ್ಯ ಅಡುಗೆ ರುಚಿ ಕಂಡವರು ಮತ್ತೆ ಮತ್ತೆ ಆಕೆಗೆ ಆರ್ಡರ್ ಗಳನ್ನು ನೀಡುತ್ತಿರುತ್ತಾರೆ.ತನ್ಮಯನ ಸ್ಕೂಲ್ ಫೀಸ್ ಕೂಡ ಕಟ್ಟಿ ಬಿಡುತ್ತಾಳೆ ಭಾಗ್ಯ.

kannada serial Bhagya Lakshmi written 07th april

ಭಾಗ್ಯ ಖಂಡಿತವಾಗಿಯೂ ಕೂಡ ಫೀಸ್ ಕಟ್ಟುವುದಿಲ್ಲ ಎಂದು ತಾಂಡವ ಯೋಚನೆ ಮಾಡಿ ತನ್ಮಯ್ ಇರುವ ಸ್ಕೂಲಿಗೆ ಹೋಗುತ್ತಾನೆ. ಅಲ್ಲಿ ಟೀಚರ್ಸ್ ಜೊತೆ ಎಲ್ಲ ಮಾತನಾಡಿದಾಗ ಈ ಮೊದಲೇ ತನ್ಮಯ್ ಸ್ಕೂಲ್ ಪೀಸ್ ಅನ್ನ ಕಟ್ಟಿಯಾಗಿದೆ ಎನ್ನುವುದು ತಾಂಡವನಿಗೆ ತಿಳಿಯುತ್ತದೆ.ಗುಂಡಣ್ಣನ ಸ್ಕೂಲ್ ಫೀಸ್ ಕಟ್ಟುವುದು ಬೇರೆ ಯಾರು ಅಲ್ಲ ಭಾಗ್ಯ ಎಂದು ಮನದಟ್ಟಾಗುತ್ತೆ.ತನ್ಮಯ್ ಸ್ಕೂಲ್ ಫೀಸ್ ಕಟ್ಟಲು ಭಾಗ್ಯಳಿಂದ ಹೇಗೆ ಸಾಧ್ಯ ಎನ್ನುವ ಅನುಮಾನ ಕೂಡ ಅವನಿಗೆ ಕಾಡುತ್ತದೆ. ಭಾಗ್ಯ ಏನು ಕೆಲಸ ಮಾಡುತ್ತಿದ್ದಾಳೆ ಎನ್ನುವುದು ತಾಂಡವನ ಮನದಲ್ಲಿ ಮೂಡಿದ ಬಹಳ ದೊಡ್ಡ ಪ್ರಶ್ನೆಯಾಗಿದ್ದು, ಭಾಗ್ಯ ತಾಂಡವ ನಿಂತಿರುವುದನ್ನು ನೋಡಿ ಮನದಲ್ಲಿಯೇ ನಗುತ್ತಾಳೆ. ಆಕೆಗೆ ಬಹಳ ಜೋರಾಗಿಯೇ ನಗು ಬರುತ್ತದೆ. ಆದರೆ ಯಾರ ಜೊತೆಯೂ ಏನು ಹೇಳದೆ ಸುಮ್ಮನಿರುತ್ತಾಳೆ.

ಇಂಟರ್ವ್ಯೂ ಗೆ ಹೊರಟ ಪೂಜಾ

ಇತ್ತ ಪೂಜಾ ಹೊಸ ಕೆಲಸದ ಇಂಟರ್ ವ್ಯೂ ಗೆ ಹೋಗಲು ಸಜ್ಜಾಗಿ ನಿಲ್ಲುತ್ತಾಳೆ. ಪೂಜಾ ಮಾತು ಕೇಳಿದ ಮನೆ ಮಂದಿ ಖುಷಿ ಪಡುತ್ತಾರೆ. ಅಬ್ಬಾ ಪೂಜಾ ಈಗಲಾದರೂ ಕೆಲಸಕ್ಕೆ ಹೋಗಲು ಮುಂದಾಗಿದ್ದಾಳೆ ಎಂದು ಖುಷಿಪಟ್ಟರು. ಹಾಗೆಯೇ ಪೂಜಾ ಅತ್ತೆ ಮಾವನ ಆಶೀರ್ವಾದ ಪಡೆದುಕೊಳ್ಳುತ್ತಾಳೆ. ಹಾಗೂ ಬಹಳಷ್ಟು ಖುಷಿ ಪಡುತ್ತಾಳೆ. ಪೂಜಾ ಕೆಲಸಕ್ಕೆ ಹೋಗುವ ಮನಸ್ಸು ಮಾಡಿದ್ದಾಳೆ ಎನ್ನುವ ವಿಚಾರ ತಿಳಿದು ಭಾಗ್ಯ ಕೂಡ ಬಹಳ ಖುಷಿ ಪಡುತ್ತಾಳೆ . ತನ್ನ ತಂಗಿ ಒಳ್ಳೆಯ ಉದ್ಯೋಗಕ್ಕೆ ಹೋಗಲು ಆಕೆ ಚೆನ್ನಾಗಿರಬೇಕು ಎಂದು ಹಾರೈಸುತ್ತಾ ನಿಂತಿರುತ್ತಾರೆ. ಇತ್ತ ಶ್ರೇಷ್ಠ ಹಾಗೂ ತಾಂಡವ ಇಬ್ಬರು ಭಾಗ್ಯ ಬಗ್ಗೆಯೇ ಆಲೋಚಿಸುತ್ತಾರೆ.

ಭಾಗ್ಯ ನ ಇನ್ ಕಮ್ ಬಗ್ಗೆ ತಲೆ ಕೆಡಿಸಿಕೊಂಡ ತಾಂಡವ

ಇದೇನಪ್ಪ ಭಾಗ್ಯ ತನ್ಮಯನ ಫೀಸ್ ಕಟ್ಟಿದ್ದಾರೆ ಅಲ್ವಾ. ಅಷ್ಟು ಹಣ ಭಾಗ್ಯಗೆ ಹೇಗೆ ಸಿಕ್ಕಿತು. ಭಾಗ್ಯ ಅಷ್ಟೊಂದು ಹಣ ಇದ್ದವಳ ಎಂದು ಆಲೋಚನೆ ಮಾಡುತ್ತಿರುತ್ತಾರೆ. ಭಾಗ್ಯ ಮಾಡುತ್ತಿದ್ದ ಎಲ್ಲಾ ಕೆಲಸಕ್ಕೆ ಕಡಿವಾಣ ಹಾಕಿದ್ದಾಯಿತು. ಆದರೆ ಇದೀಗ ಮತ್ತೆ ಯಾವ ಕೆಲಸಕ್ಕೆ ಮುಂದಾಗಿದ್ದಾಳೆ ಎನ್ನುವ ಆಲೋಚನೆ ತಾಂಡವ ಶೇಷ್ಠಗೆ ಕಾಡಿದೆ. ಶ್ರೇಷ್ಠಗೆ ಭಾಗ್ಯನನ್ನು ಕಂಡರೆ ಅಷ್ಟಕಷ್ಟೇ. ಆಕೆಗೆ ಬಹಳಷ್ಟು ಕೋಪ ಬರುತ್ತದೆ. ಮುಂದೇನು ಮಾಡಬೇಕು ಎನ್ನುವ ಆಲೋಚನೆ ಮಾಡುತ್ತಿರುತ್ತಾಳೆ ಹೇಗಾದರೂ ಮಾಡಿ ಭಾಗ್ಯ ಹೇಗೆ ಹಣ ಸಂಪಾದನೆ ಮಾಡುತ್ತಿದ್ದಾಳೆ ಎನ್ನುವುದನ್ನು ನೋಡಬೇಕು ಎಂದು ಆಲೋಚನೆ ಮಾಡುತ್ತಿರುತ್ತಾಳೆ. ಹೇಗಾದರೂ ಭಾಗ್ಯ ಮಾಡುತ್ತಿರುವ ಬ್ಯುಸಿನೆಸ್ ಗೆ ಕಲ್ಲು ಹಾಕಬೇಕು ಎಂದು ಯೋಚನೆ ಮಾಡುತ್ತಿರುತ್ತಾಳೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X