BhagyaLakshmi ; ತಾಂಡವ್ ಸೊಕ್ಕು ಅಡಗಿಸಿದ ಭಾಗ್ಯಲಕ್ಷ್ಮಿ ಹೇಗೋ ಮನೆ ಉಳಿಸಿಕೊಂಡಳು..!
ಭಾಗ್ಯಗೆ ತನ್ನ ಮಕ್ಕಳು ಮನೆಯವರೆಂದರೆ ಬಹಳಷ್ಟು ಇಷ್ಟ. ಮನೆಯವರೆಲ್ಲರ ಜೊತೆ ಕಾಲ ಕಳೆಯುವುದು ಎಂದರೆ ಮತ್ತಷ್ಟು ಖುಷಿ. ಜೀವನದಲ್ಲಿ ಗಂಡನನ್ನು ತ್ಯಜಿಸಿದ ಮಹಾನ್ ತ್ಯಾಗಿ ಭಾಗ್ಯ ಎಂದು ಹೇಳಿದರೆ ತಪ್ಪಾಗದು. ಭಾಗ್ಯಗೆ ತನ್ನ ಮನೆಯವರಿಗೆ ಏನಾದರು ಆಗುತ್ತೆ ಎಂದರೆ ಅದನ್ನು ಸಹಿಸಲು ಆಕೆ ಸಿದ್ಧಳಿಲ್ಲ. ಮನಸಿಗೆ ಬಹಳಷ್ಟು ನೋವು ಆಗುತ್ತದೆ. ತಾಂಡವ ಶ್ರೇಷ್ಠಳನ್ನು ಮದುವೆಯಾಗಿ ಬಹಳ ಖುಷಿಯಾಗಿರುತ್ತಾಳೆ. ಇದರಿಂದ ಭಾಗ್ಯಗೆ ಬಹಳ ನೋವಾಗುತ್ತದೆ. ಆದರೆ ತನ್ನ ಗಂಡನ ಖುಷಿಯಿಂದ ಯಾವುದು ನನಗೆ ಹೆಚ್ಚಲ್ಲ ಎಂದು ಆಕೆ ಅಂದುಕೊಳ್ಳುತ್ತಾಳೆ.
ಆದ ಕಾರಣ ತನ್ನ ಗಂಡನನ್ನು ಶ್ರೇಷ್ಠ ಗೆ ಬಿಟ್ಟುಕೊಟ್ಟು ತಾನು ಒಂಟಿಯಾಗಿ ಬದುಕುತ್ತೇನೆ ಎಂದು ಬಹಳ ಆತ್ಮಸ್ಥೈರ್ಯದಿಂದ ಇರುತ್ತಾಳೆ.ಇದುವೇ ಆಕೆಗೆ ಮುಳುವಾಗಿದೆ. ತಾಂಡವ ಇನ್ನಷ್ಟು ಆಕೆಯ ಮೇಲೆ ಮುನಿಸಿಕೊಂಡಿದ್ದಾನೆ. ಭಾಗ್ಯ ಗೆ ದುರಹಂಕಾರ ಬಹಳಷ್ಟು ಹೆಚ್ಚಾಗಿದೆ. ಆಕೆಯ ಅಹಂಕಾರವನ್ನು ಹೇಗಾದರೂ ಮಾಡಿ ಇಳಿಸಲೇಬೇಕು ಎಂದುಕೊಂಡು ಶ್ರೇಷ್ಠ ಜೊತೆ ಪ್ಲಾನ್ ಮಾಡಲು ಶುರು ಮಾಡುತ್ತಾನೆ.ಮೊದಲಿಗೆ ಶ್ರೇಷ್ಠಗೆ ಬಹಳ ಕೋಪ ಮಾಡಿಕೊಳ್ಳುತ್ತಾಳೆ. ಆದರೆ ದಿನ ಕಳೆದ ಹಾಗೆ ಶ್ರೇಷ್ಠ ಗೆ ತಾಂಡವನ ಮಾತು ಅರ್ಥ ಆಗುತ್ತದೆ. ಭಾಗ್ಯಗೆ ಹೇಗಾದರೂ ಮಾಡಿ ಪಾಠ ಕಲಿಸಲೇಬೇಕು ಇಲ್ಲವಾದರೆ ನಮಗೆ ಉಳಿಗಾಲವಿಲ್ಲ.

ಭಾಗ್ಯ ಬಹಳ ಛಲಗಾತಿ ಹೆಣ್ಣುಮಗಳು. ಆದ್ರೆ ಆಕೆಯನ್ನು ಹೇಗಾದರೂ ಮಾಡಿ ಮಟ್ಟ ಹಾಕಬೇಕು ಹಾಗೆಯೇ ಭಾಗ್ಯ ತಮ್ಮಿಬ್ಬರ ಮುಂದೆ ಸೋಲು ಒಪ್ಪಿಕೊಳ್ಳಬೇಕು ಎಂದು ಇಬ್ಬರು ಆಲೋಚನೆ ಮಾಡುತ್ತಾರೆ. ಭಾಗ್ಯ ಬಹಳಷ್ಟು ಕಾಟ ಕೊಡುತ್ತಾರೆ. ಆದರೆ ಭಾಗ್ಯ ಅದೆಲ್ಲವನ್ನೂ ಸಹಿಸಿಕೊಂಡು ಎನು ಮಾತನಾಡದೆ ಸುಮ್ಮನಿರುತ್ತಾಳೆ. ಭಾಗ್ಯ ಜೀವನದುದ್ದಕ್ಕೂ ಕಷ್ಟಗಳನ್ನು ಅನುಭವಿಸುತ್ತಾ ಬಂದವಳು. ಆಕೆಗೆ ಇದೀಗ ಗಂಡನಿಂದ ಬಹಳಷ್ಟು ಕಷ್ಟಗಳು ಎದುರಾಗುತ್ತಿದೆ. ಆದರೆ ಅದೆಲ್ಲವನ್ನೂ ಸಹಿಸಿಕೊಂಡ ಭಾಗ್ಯ ಸುಮ್ಮನಿರುತ್ತಾಳೆ. ಯಾರ ಬಳಿಯೂ ಎನು ಹೇಳದೆ ಆಕೆಯ ಪಾಡಿಗಿರುತ್ತಾಳೆ ಭಾಗ್ಯಗೆ ಸಹಾಯ ಮಾಡಲು ಕುಸುಮ ಯಾವತ್ತೂ ಕೂಡ ಒಂಟಿ ಕಾಲಿನಲ್ಲಿ ನಿಂತಿರುತ್ತಾಳೆ.
ಮನೆಯ ಲೋನ್ ತೀರಿಸುವ ಹೊಣೆ ಹೊತ್ತ ಭಾಗ್ಯ
ಭಾಗ್ಯಗೆ ಕುಸುಮ ಎಂದರೆ ಬಹಳಷ್ಟು ಪ್ರೀತಿ. ತಾಯಿಯ ಹಾಗೆಯೇ ತನ್ನ ಅತ್ತೆಯನ್ನು ಭಾಗ್ಯ ನೋಡಿಕೊಂಡು ತಾನೆ ಇದೀಗ ಮನೆಯ ಲೋನ್ ತೀರಿಸುವ ಹೊಣೆಯನ್ನ ಭಾಗ್ಯ ಹೊತ್ತುಕೊಂಡಿದ್ದಾಳೆ ಆಕೆಗೆ ತನ್ನ ಮನೆಯವರೆಂದರೆ ಬಹಳ ಪ್ರೀತಿ, ತನ್ನ ಮನೆಯವರಿಗೆ ಯಾವುದೇ ನೋವು ಬಂದರೂ ಅದೆಲ್ಲವನ್ನ ಭಾಗ್ಯ ತನ್ನದೇ ನೋವು ಎಂದುಕೊಂಡು ಅವರೆಲ್ಲರನ್ನು ನೋವಿಗೆ ಸ್ಪಂದಿಸುತ್ತಾಳೆ ಹಾಗೆಯೇ ಜೀವನ ಮಾಡುವುದು ಹೇಗೆ ಅನ್ನೋದು ಭಾಗ್ಯ ಮಹಿಳಾ ಮಣಿಯರಿಗೆ ಕಲಿಸಿಕೊಟ್ಟಿದ್ದಾಳೆ. ಭಾಗ್ಯ ಗೆದ್ದು ಬೀಗುತ್ತಿದ್ದರೆ ತಾಂಡವ ಮಾತ್ರ ಹೊಟ್ಟೆ ಉರಿದುಕೊಂಡು ಬಹಳಷ್ಟು ಕೋಪ ಮಾಡಿಕೊಂಡು ಇರುತ್ತಾನೆ.
ಭಾಗ್ಯ ಗೆಲುವು ತಾಂಡವ್‌ಗೆ ಹೊಟ್ಟೆಯುರಿ
ಶ್ರೇಷ್ಠ ಹಾಗೂ ತಾಂಡವ ಭಾಗ್ಯ ಗೆಲುವಿಗೆ ಬಹಳಷ್ಟು ಕೋಪ ಮಾಡಿಕೊಂಡು ಇರುತ್ತಾರೆ. ಹಾಗೆಯೇ ಭಾಗ್ಯಗೆ ಇಷ್ಟೆಲ್ಲ ಹಣ ಸಂಪಾದನೆ ಆಗಲು ಹೇಗೆ ಕಾರಣ ಎನ್ನುವುದನ್ನು ಅವರಿಬ್ಬರೂ ಪತ್ತೆ ಹಚ್ಚಲು ಹೋಗುತ್ತಾರೆ. ಭಾಗ್ಯ ಕೆಲಸಕ್ಕೆ ಅದೆಷ್ಟೇ ಕುತ್ತು ತಂದರು ಭಾಗ್ಯ ತನ್ನ ಕೆಲಸವನ್ನು ತನ್ನ ಪಾಡಿಗೆ ಮಾಡಿ ಮುಗಿಸುತ್ತಿದ್ದಾಳೆ ಎನ್ನುವ ಕೋಪ ಅವರಿಬ್ಬರಿಗೂ ಬರುತ್ತದೆ. ಅವರಿಬ್ಬರ ಮುಖ ನೋಡಿಯೇ ಭಾಗ್ಯಗೆ ಅರ್ಥವಾಗುತ್ತದೆ. ತನ್ನ ಹಿಂದೆಯೇ ಮಸಲತ್ತು ಮಾಡುತ್ತಿದ್ದಾರೆ ಎನ್ನುವುದು ಶ್ರೇಷ್ಠ ಗೆ ಈ ಮುಂಚೆಯೇ ಇಬ್ಬರು ಸೇರಿ ಬಹಳಷ್ಟು ಹಿಂಸೆಯನ್ನು ನೀಡಿರುತ್ತಾರೆ. ಆದರೆ ಆ ಬಗ್ಗೆ ಎಲ್ಲಿಯೂ ಚಕಾರ ಎತ್ತದೆ ತನಾಯಿತು ತನ್ನ ಪಾಡಾಯಿತು ಎಂದು ಇದ್ದು ಬಿಡುತ್ತಾಳೆ. ಆದರೆ ಇನ್ನೂ ಮೇಲೆ ತಾಂಡವ ಹಾಗೂ ಶೇಷ್ಟ ಆಟಕ್ಕೆ ಭಾಗ್ಯ ಫುಲ್ ಸ್ಟಾಪ್ ಇಡುವುದು ಮಾತ್ರ ಪಕ್ಕ .


Click it and Unblock the Notifications











