Bhagya Lakshmi ; ಮಿತಿ ಮೀರಿದ ತಾಂಡವ್ ಕೋಪ,ಗಂಡನೆದುರು ಗೆದ್ದು ಬೀಗಿದ ಭಾಗ್ಯ..!

By ಪೂರ್ವ

ತಾಂಡವ ಏನೇ ಮಾಡಿದರು ಭಾಗ್ಯ ಅದನ್ನೆಲ್ಲ ಗೆಲುವಿನ ಮೆಟ್ಟಿಲ ಹಾಗೆ ಮಾಡಿಕೊಂಡು ಮುನ್ನುಗ್ಗುತ್ತಲೇ ಇರುತ್ತಾಳೆ. ಆಕೆಗೆ ತನ್ನ ಗಂಡನ ಬಗ್ಗೆ ಬಹಳಷ್ಟು ಕಾಳಜಿ ಆತ ಎರಡನೇ ಮದುವೆ ಯಾವಾಗ ಆದ್ನೋ ಅವತ್ತಿನಿಂದ ಭಾಗ್ಯಗೆ ತನ್ನ ಗಂಡ ಇದ್ದು ಇಲ್ಲದ ಹಾಗೆ ಎಂದು ಹೇಳಿ ತನ್ನ ಕೊರಳಲ್ಲಿದ್ದ ತಾಳಿಯನ್ನು ಕಿತ್ತು ಬಿಸಾಕುತ್ತಾಳೆ. ಆಕೆಗೆ ತನ್ನ ಕುಟುಂಬವನ್ನು ಒಳ್ಳೆಯ ರೀತಿಯಲ್ಲಿ ಪಾಲನೆ ಪೋಷಣೆ ಮಾಡಬೇಕಾಗಿತ್ತು. ಹೊಸ ಬ್ಯುಸಿನೆಸ್ ಭಾಗ್ಯಳನ್ನು ಕೈ ಹಿಡಿಯುತ್ತದೆ ಎಂದು ಹೇಳಿದರೆ ತಪ್ಪಾಗದು.

ಭಾಗ್ಯ ಗೆ ಇದೀಗ ಶ್ರೇಷ್ಠ ಸಿಕ್ಕಾ ಪಟ್ಟೆ ತೊಂದರೆ ಕೊಡುತ್ತಿದ್ದಾಳೆ. ಭಾಗ್ಯ ಏನೇ ಕೆಲಸ ಮಾಡಲು ಹೋದರು ಕೂಡ ಶ್ರೇಷ್ಠ ಅಡ್ಡ ಬರುತ್ತಲೇ ಇದ್ದಾಳೆ. ಶ್ರೇಷ್ಠ ಗೆ ಭಾಗ್ಯಗಳನ್ನು ಹೇಗಾದರೂ ಮಾಡಿ ಸೋಲಿಸಬೇಕು, ಹಾಗೆ ನಮ್ಮಿಬ್ಬರಿಗೆ ಸರಿಸಮವಾಗಿ ನಿಲ್ಲಬಾರದು ಎಂದೆಲ್ಲ ಅಂದುಕೊಂಡು ಗೆಳತಿಯ ಜೊತೆ ಸೇರಿ ಭಾಗ್ಯ ಅಡುಗೆ ತಯಾರಿ ಮಾಡಿಕೊಂಡು ಬರುವ ಹಾಗೆ ಮಾಡುತ್ತಾಳೆ. ಆದರೆ ಶ್ರೇಷ್ಠ ಪ್ಲಾನ್ ಠುಸ್ ಪಟಾಕಿಯಾಗುತ್ತದೆ. ಭಾಗ್ಯ ಗೆ ನಿಜ ಗೊತ್ತಾಗಿ ಬಹಳ ಕೋಪಗೊಂಡು ಶ್ರೇಷ್ಠ ಮನೆಗೆ ಹೋಗಿ ಆಕೆಗೆ ಸರಿಯಾದ ಪಾಠ ಕಲಿಸಿ ಸ್ಕೂಲ್ ಗೆ ಬಂದು ತನ್ಮಯನ ಫೀಸ್ ಕಟ್ಟಿ ಬಿಡುತ್ತಾಳೆ. ತಾಂಡವ ಗೆ ಇದರಿಂದ ಬಹಳ ಕೋಪ ಬರುತ್ತದೆ ಎಲ್ಲಿ ಹೋದರು ಈ ಭಾಗ್ಯ ನನ್ನ ಎದುರು ಗೆದ್ದು ಬೀಗುತ್ತಿದ್ದಾಳಲ್ಲ ಎಂದು ಬಹಳ ಸಿಟ್ಟು ಮಾಡಿಕೊಳ್ಳುತ್ತಾನೆ.

kannada-serial-bhagya-lakshmi-written-09th-april

ತಾಂಡವ ಮನೆಗೆ ಹೋಗಿ ತನ್ನ ಸಿಟ್ಟನೆಲ್ಲಾ ಹೊರ ಹಾಕುತ್ತಾನೆ. ಇದೆಲ್ಲವನ್ನು ನೋಡಿದ ಶ್ರೇಷ್ಠಗೆ ಬಹಳ ಆತಂಕವಾಗುತ್ತದೆ ಹಾಗೆಯೇ ತನ್ನ ಗಂಡನಿಗೆ ಸಮಾಧಾನ ಹೇಳುತ್ತಾಳೆ. ಶ್ರೇಷ್ಠ ಮಾತು ಕೇಳಿದ ತಾಂಡವ ಕೊಂಚ ಸಮಾಧಾನ ಪಡುತ್ತಾನೆ. ಹೇಗಾದರೂ ಮಾಡಿ ಭಾಗ್ಯ ಮಾಡುತ್ತಿರುವ ಹೊಸ ಬ್ಯುಸಿನೆಸ್ ಗೆ ಕಲ್ಲು ಹಾಕಬೇಕು ಎನ್ನುವ ಯೋಚನೆ ಮಾಡುತ್ತಾಳೆ.

ಇತ್ತ ಗುಂಡಣ್ಣ ಮನೆಗೆ ಬಂದು ಎಲ್ಲ ವಿಚಾರವನ್ನು ತನ್ನ ಅಜ್ಜ ಅಜ್ಜಿಯ ಬಳಿ ಹೇಳುತ್ತಾನೆ. ಇದೆಲ್ಲವನ್ನ ಕೇಳಿದ ಕುಸುಮನಿಗೆ ಬಹಳ ಸಿಟ್ಟು ಬರುತ್ತದೆ. ತಾಂಡವ ಯಾಕೆ ಅಷ್ಟೊಂದು ಹಾರಾಟ ಮಾಡುತ್ತಿದ್ದಾನೆ ಎಂದು ತಿಳಿಯುತ್ತಿಲ್ಲ ಎಂದು ಹೇಳುತ್ತಾಳೆ. ತಾಂಡವನ ತಂದೆ ಕೂಡ ಆತನ ವರ್ತನೆಗೆ ಬೇಸರ ಮಾಡಿಕೊಳ್ಳುತ್ತಾರೆ. ಇತ್ತ ಪೂಜಾಗೆ ಹೊಸ ಕೆಲಸವೂ ಸಿಕ್ಕಿದೆ. ಆದರೆ ಆಕೆಗೆ ಬಾಸ್ ಯಾರು ಎನ್ನುವುದು ತಿಳಿಯುತ್ತಿಲ್ಲ. ಇದರಿಂದಾಗಿ ಪೂಜಾ ಸ್ವಲ್ಪ ಮಟ್ಟಿಗೆ ಕನ್ಫ್ಯೂಷನ್ ಆಗುತ್ತದೆ.


ಪೂಜಾಗೆ ಸಿಕ್ಕೆಬಿಟ್ಟ ಕಾಲೇಜ್ ಗೆಳೆಯ

ನಾನು ಹೇಳಿದ ಸ್ಯಾಲರಿಗೆ ಹೇಗೆ ಒಪ್ಪಿಕೊಂಡು ಬಿಟ್ಟರು ಎನ್ನುವ ಯೋಚನೆ ಪೂಜಾಗೆ ಕಾಡುತ್ತದೆ. ನಾಳೆ ಈ ಬಗ್ಗೆ ಎಲ್ಲಾ ಕ್ಲಾರಿಟಿ ತೆಗೆದುಕೊಳ್ಳಬೇಕು ಎಂದು ಯೋಚನೆ ಮಾಡುತ್ತಿರುತ್ತಾಳೆ. ಮರುದಿನ ಆಫೀಸ್ ಗೆ ಹೋದಾಗ ಎಲ್ಲಾ ಅಯೋಮಯ ಆದರೆ ಬಾಸ್ ನೋಡದೆ ನಾನು ಆಫೀಸ್ ನಲ್ಲಿ ಕೆಲಸ ಮಾಡುವುದಿಲ್ಲ ಎಂದು ಖಡಕ್ ಆಗಿ ಹೇಳಿ ಹೊರಡಲು ಅನುವಾದಗ ಪೂಜಾ ಬಳಿಗೆ ಆಕೆಯ ಬಾಸ್ ಬರುತ್ತಾನೆ. ಆತನನ್ನು ನೋಡಿ ಪೂಜಾಗೆ ಶಾಕ್ ಆಗುತ್ತದೆ. ಯಾಕೆಂದರೆ ಆತ ಆಕೆಯ ಗೆಳೆಯ ಆಗಿರುತ್ತಾನೆ. ಇತ್ತ ಭಾಗ್ಯ ಒಂದಲ್ಲ ಒಂದು ಕೆಲಸವನ್ನು ಮಾಡುತ್ತಿರುತ್ತಾಳೆ. ಹಾಗೆಯೇ ಸಾಕಷ್ಟು ಫುಡ್ ಆರ್ಡರ್ ಗಳು ಭಾಗ್ಯಳನ್ನು ಅರಸಿ ಬರುತ್ತಿದೆ. ಬಹಳ ಖುಷಿಯಿಂದ ಭಾಗ್ಯ ಎಲ್ಲವನ್ನೂ ಒಪ್ಪಿಕೊಂಡು ಸಕಾಲದಲ್ಲಿ ಅದೆಲ್ಲವನ್ನೂ ತಲುಪಿಸುವ ಕೆಲಸ ಮಾಡುತ್ತಿರುತ್ತಾಳೆ.

ಕಸ್ಟಮರ್ ಗಳಿಗೆ ಹಬ್ಬದೂಟ ಬಡಿಸುತ್ತಿರುವ ಭಾಗ್ಯ

ಭಾಗ್ಯ ತನ್ನ ಅತ್ತೆಯ ಬಳಿ ಯಾವುದೆ ಅಡುಗೆಯ ಕಾಂಟ್ರಾಕ್ಟ್ ಬಂದರು ತೆಗೆದುಕೊಳ್ಳಿ ಇಲ್ಲ ಎಂದು ಯಾರ ಜೊತೆಯೂ ಹೇಳಬೇಡಿ ಎಂದು ಹೇಳುತ್ತಾಳೆ. ಬಳಿಕ ತನ್ನ ಪಾಡಿಗೆ ಆರ್ಡರ್ ಕೊಡಲು ಅಲ್ಲಿಂದ ಹೊರಟು ಹೋಗುತ್ತಾಳೆ. ಭಾಗ್ಯ ಮಾಡುತ್ತಿರುವ ಕೆಲಸವನ್ನು ನೋಡಿ ಅತ್ತೆ ಮಾವ ಮೆಚ್ಚುಗೆ ಸೂಚಿಸುತ್ತಾರೆ. ಹಾಗೆಯೇ ಸಾಕಷ್ಟು ಬಡವರಿಗೆ ಭಾಗ್ಯ ಅನ್ನದಾನವನ್ನು ಮಾಡಿದ್ದಾಳೆ. ಭಾಗ್ಯ ಕೈ ರುಚಿಗೆ ಮಾರು ಹೋಗದವರೇ ಇಲ್ಲ. ಹಾಗೆಯೇ ಆಕೆಯ ಕೈ ಅಡುಗೆ ತಿಂದವರೆಲ್ಲ ಬಹಳಷ್ಟು ಹೊಗಳುತ್ತಿರುತ್ತಾರೆ. ಅನೇಕ ಜನರು ಭಾಗ್ಯಗೆ ಬಹಳ ಖುಷಿಯಿಂದ ಆರ್ಡರ್ ನೀಡುತ್ತಿದ್ದಾರೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X