Bhagyalakshmi ;ಕ್ಯಾಂಟೀನ್‌ನಲ್ಲೇ ತಾಂಡವ್ ಗ್ರಹಚಾರ ಬಿಡಿಸಿದ ಕುಸುಮಾ, ಪೂಜಾ-ಕಿಶನ್ ಕಥೆ ಏನಾಯ್ತು ?

ಭಾಗ್ಯ ಲಕ್ಷ್ಮಿ ಧಾರಾವಾಹಿಯಲ್ಲಿ , ಭಾಗ್ಯ ತನ್ನ ಮಾಜಿ ಪತಿಗೆ ತಿಳಿಯದಂತೆ ಅವನ ಹಿಂದಿನ ಕಂಪನಿಯಲ್ಲಿ ಕೆಲಸ ಗಿಟ್ಟಿಸುವ ಮೂಲಕ ಅವನನ್ನು ಬೆಂಬಲಿಸುತ್ತಾಳೆ. ಅದಾಗ್ಯೂ, ತಾಂಡವ್ ಗೆ ಖುಷಿಯಾಗುವುದಿಲ್ಲ. ಬದಲಿಗೆ ಭಾಗ್ಯಳ ಮೇಲೆ ಇನ್ನಷ್ಟು ಕೆಂಡ ಕಾರುತ್ತಾನೆ. ಪದೇ ಪದೇ ಎಡವಿದರೂ ಕೂಡ ತಾಂಡವ್ ಭಾಗ್ಯಾಗೆ ಅಡೆತಡೆಗಳನ್ನು ಸೃಷ್ಟಿಸುತ್ತಲೇ ಇರುತ್ತಾನೆ. ಭಾಗ್ಯಳನ್ನು ಅವಮಾನಿಸಲು ಅವನು ಮಾಡಿದ ಇತ್ತೀಚಿನ ಪ್ರಯತ್ನ ಕಂಡು ಅವನ ತಾಯಿ ಕುಸುಮಾ ಕೆರಳಿ ಕೆಂಡವಾಗುತ್ತಾಳೆ.

ಈ ಹಿಂದೆ, ತಾಂಡವ್ ಕೆಲಸ ಮಾಡುತ್ತಿದ್ದ ಅದೇ ಕಂಪನಿಯಲ್ಲಿ ಭಾಗ್ಯಳಿಗೆ ಕ್ಯಾಂಟೀನ್ ನಡೆಸಲು ಅವಕಾಶ ನೀಡಲಾಗಿತ್ತು. ಆದರೆ ಆ ದಿನ, ಭಾಗ್ಯಳನ್ನು ಅವಮಾನಿಸಿದ್ದಕ್ಕಾಗಿ ತಾಂಡವ್ ಶ್ರೇಷ್ಠಾಳನ್ನು ಕಂಪನಿಯಿಂದ ತೆಗೆದು ಹಾಕಿದ್ದ. ಅಂದಿನಿಂದ ತಾಂಡವ್ ನಿರುದ್ಯೋಗಿಯಾಗಿದ್ದು, ತನಗೆ ಕಡಿಮೆ ಎಂದು ಪರಿಗಣಿಸಲಾದ ಕೆಲಸದ ಕೊಡುಗೆಗಳನ್ನು ತಿರಸ್ಕರಿಸುತ್ತಿದ್ದಾನೆ. ತನ್ನ ಮಗನ ಪರಿಸ್ಥಿತಿಯ ಬಗ್ಗೆ ಚಿಂತಿತಳಾದ ತಾಂಡವ್‌ನ ತಾಯಿ ಕುಸುಮಾ ಒದ್ದಾಡುತ್ತಾಳೆ.

kannada-serial-bhagya-lakshmi-written-09th-may

ಮಗನಿಗೆ ಕೆಲಸ ಸಿಗದ ಹಿನ್ನೆಲೆ ಕುಸುಮಾ ಒಳಗೊಳಗೇ ಸಂಕಟ ಪಡುತ್ತಾಳೆ. ಇದೆಲ್ಲವನ್ನೂ ನೋಡಿ ಆ ನಂತರ ಭಾಗ್ಯ ಬಾಸ್ ಬಳಿ ಹೋಗಿ ತಾಂಡವ್​ಗೆ ಕೆಲಸ ಮತ್ತೆ ಕೊಡಿ ಎಂದು ಮನವಿ ಮಾಡಿದ್ದಾಳೆ. ಭಾಗ್ಯಾಳ ಮಾತಿಗೆ ಬೆಲೆ ಕೊಟ್ಟು ಅವರು ತಾಂಡವ್-ಶ್ರೇಷ್ಠಾರನ್ನು ಪುನಃ ಕೆಲಸಕ್ಕೆ ಕರೆದಿದ್ದಾರೆ.

ಭಾಗ್ಯ, ತಾಂಡವ್ ನ ಮತ್ತೆ ಕೆಲಸಕ್ಕೆ ಕರೆದುಕೊಳ್ಳುವಂತೆ ಬಾಸ್ ಬಳಿ ಮಾಡಿದ ಮನವಿಗೆ ಒಪ್ಪಿಗೆ ದೊರೆತಿದೆ. ಆದರೆ, ತನ್ನ ಕೆಲಸ ಮರಳಿ ಪಡೆದಿದ್ದಕ್ಕಾಗಿ ಕೃತಜ್ಞರಾಗಿರುವ ಬದಲು ತಾಂಡವ್-ಶ್ರೇಷ್ಠ ತಮ್ಮ ಹಳೆಯ ನಡವಳಿಕೆಯನ್ನು ಮತ್ತೆ ಮುಂದುವರಿಸಿದ್ದಾರೆ. ತನಗೆ ಕೆಲಸ ಮತ್ತೆ ಸಿಗಲು ಭಾಗ್ಯ ಕಾರಣ ಎಂದು ತಿಳಿದ ನಂತರ, ತಾಂಡವ್ ನ ಕೋಪ ಹೆಚ್ಚಾಗುತ್ತೆ. ಆದರೂ ತಾಂಡವನ್ ಈ ನಡೆಯಿಂದ ತಲೆ ಕೆಡಿಸಿಕೊಳ್ಳುವುದಿಲ್ಲ.

ಕ್ಯಾಂಟೀನ್‌ನಲ್ಲಿ ತಾಂಡವ್ ಮತ್ತು ಭಾಗ್ಯ ಮುಖಾಮುಖಿ

ಕ್ಯಾಂಟೀನ್‌ನಲ್ಲಿ ತಾಂಡವ್ ಮತ್ತು ಭಾಗ್ಯ ಮುಖಾಮುಖಿಯಾಗುತ್ತಾರೆ.ಆದರೆ ಈ ಸಮಯದಲ್ಲಿ ಭಾಗ್ಯಾಳಿಂದನೇ ತನಗೆ ಮತ್ತೆ ಈ ಕೆಲಸ ಸಿಕ್ಕಿದ್ದು ಎಂದು ತಿಳಿದ ತಾಂಡವ್ ಇನ್ನೂ ಕೋಪ ಮಾಡಿಕೊಳ್ಳುತ್ತಾನೆ. ಆದರೆ ಭಾಗ್ಯ ಇದ್ಯಾವುದಕ್ಕೂ ಕೇರ್ ಮಾಡುವುದಿಲ್ಲ. ಹೀಗಾಗಿ ಆ ನಂತರ ಬೇಕಂತಲೇ ಭಾಗ್ಯಳನ್ನು ತಾಂಡವ್ ಕೆಣಕುತ್ತಾನೆ. ನನ್ನ ಜೊತೆ ಆರಾಮಾಗಿದ್ದೆ ಇಲ್ಲಿ ಬಂದು ಇಷ್ಟೆಲ್ಲ ಕಷ್ಟ ಪಡ್ತಿದ್ದೀಯಾ ಎಂದು ಹೇಳುತ್ತಾನೆ.

ಇದು ಸಾಲದೆಂಬಂತೆ 500 ರೂಪಾಯಿಯನ್ನು ನೀಡಿ ನನಗೆ ಸಿಗೋದೇ 500 ರೂಪಾಯಿ ಈ ಬಿಡಿಗಾಸು ನೀನೆ ಇಟ್ಕೋ ಎಂದು ಹೇಳುತ್ತಾನೆ. ಆಗ ಕೆರಳುವ ಕುಸುಮಾ ಅಲ್ಲಿಯೇ ತಾಂಡವ್‌ನ ಮೈಚಳಿ ಬಿಡಿಸುತ್ತಾಳೆ. ನಿನಗೆ ಕೆಲಸ ಮತ್ತೆ ಕೊಡಿಸಿರುವುದೇ ಭಾಗ್ಯ ಎನ್ನುವುದನ್ನು ಮರಿಯಬೇಡ ನಿನ್ನಂತ ಚಿಲ್ರೆಗಳಿಗೆ ಈ ತರ ಚಿಲ್ರೆಗಳನ್ನು ಕೊಡುವುದೇ ಚೆಂದ ಎಂದು ಚೇಂಜ್ ವಾಪಸು ಕೊಡುತ್ತಾಳೆ. ಇದರಿಂದ ತಾಂಡವ್‌ಗೆ ಭಾರೀ ಮುಖಭಂಗವಾಗುತ್ತೆ.

ಪೂಜಾ-ಕಿಶನ್ ಕಥೆ ಏನಾಯ್ತು ?

ಮತ್ತೊಂದೆಡೆ ಭಾಗ್ಯ ತಂಗಿ ಪೂಜಾ ಕಣ್ಣೀರು ಹಾಕುತ್ತಿದ್ದಾಳೆ. ಅಕ್ಕನನ್ನು ಗಂಡ ಬಿಟ್ಟವಳು ಎಂದು ಹೇಳಿ ಹುಡುಗನ ಮನೆಯವರು ಸಂಬಂಧ ಮುರಿದುಕೊಂಡಿದ್ದಕ್ಕೆ ಪೂಜಾ ಬೇಸರ ಮಾಡಿಕೊಂಡಿದ್ದಾಳೆ. ಇದೇ ನೋವಲ್ಲಿ ಆಫೀಸ್‌ಗೆ ಬಂದ ಪೂಜಾಗೆ ಆಫೀಸ್‌ನ ಎಂಡಿ ಕಿಶನ್ ಪ್ರಪೋಸ್ ಮಾಡಿದ್ದಾನೆ. ನನಗೆ ನೀವು ಅಂದರೆ ತುಂಬಾ ಇಷ್ಟ ಎಂದು ತಬ್ಬಿಕೊಂಡಿದ್ದಾನೆ. ಕಿಶನ್‌ನ ಈ ನಡೆಯಿಂದ ಏನು ಮಾಡಬೇಕೆಂದು ತಿಳಿಯದೇ ಪೂಜಾ ಅವಕ್ಕಾಗಿ ನಿಂತಿದ್ದಾಳೆ.

More from Filmibeat

English summary
kannada serial bhagya lakshmi written 09th may
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X