Bhagya Lakshmi ;ಭಾಗ್ಯಗೆ ಅವಮಾನ ಮಾಡಿದ ನಿರ್ಮಲಾ, ಮುಂದಿನ ಸವಾಲುಗಳೇನು?
ಭಾಗ್ಯ ಹೋದಲೆಲ್ಲಾ ಆಕೆಗೆ ಅವಮಾನ ಕಟ್ಟಿಟ್ಟ ಬುತ್ತಿ ಎಂದು ಹೇಳಿದರೆ ತಪ್ಪಾಗದು. ಸುನಂದ ಮಾತನಾಡುವ ರೀತಿಗೂ ಜನರು ಸುನಂದಗೆ ನಿಂದನೆ ಮಾಡುವುದು ಕೂಡ ಸರಿ ಎನ್ನಿಸುತ್ತದೆ.ಬೇರೆಯವರ ಮಕ್ಕಳಿಗೆ ತಾವು ಬುದ್ದಿ ಹೇಳುವ ಅಗತ್ಯ ಇರುವುದಿಲ್ಲ. ಅವರವರ ಮಕ್ಕಳು ಅವರಿಷ್ಟ. ಆದರೆ ಪೂಜೆ ಮುಗಿಸಿ ನಿರ್ಮಲ ಮನೆಯಿಂದ ಸುನಂದಾ ಮದುಮಗಳಿಗೆ ಆಶೀರ್ವಾದ ಮಾಡಿ ಊಟ ಮಾಡಿ ಬರಬಹುದಿತ್ತು. ಆದರೆ ಸುನಂದಾ ಆಶೀರ್ವಾದ ಮಾಡುವ ಭರದಲ್ಲಿ ಎಲ್ಲರ ಟೀಕೆ ಗೆ ಗುರಿ ಆಗುತ್ತಾರೆ.
ಎಲ್ಲರೂ ಮದುವೆ ಹೆಣ್ಣಿಗೆ ಒಳ್ಳೆಯದಾಗಲಿ ಎಂದು ಆಶಿಸಿದರೆ ಸುನಂದಾ ಮಾತ್ರ ಹೋದ ಮನೆಯಲ್ಲಿ ನಿನಗೆ ಒಳ್ಳೆಯದಾಗಲಿ ಇಲ್ಲಿಯೆಲ್ಲ ನಿನ್ನ ಅಮ್ಮ ಕೇಳಿದಾಗ ಎಲ್ಲವನ್ನೂ ತೆಗೆದುಕೊಡುತ್ತಿದ್ದಳು . ಆದರೆ ಮದುವೆ ಆದ ಮೇಲೆ ಅದೆಲ್ಲ ನಡೆಯುವುದಿಲ್ಲ.ನೀನು ಇದಕ್ಕೆಲ್ಲ ಸಿದ್ದಳಾಗು ಎಂದಾಗ ನಿರ್ಮಲಗೆ ಸಿಟ್ಟು ಬರುತ್ತದೆ. ಹಾಗೆಯೇ ಸುನಂದಾಗೆ ಬಾಯಿಗೆ ಬಂದ ಹಾಗೆ ಬೈಯುತ್ತಾಳೆ. ಸುನಂದ ಅವರೇ ನೀವು ನಿಮ್ಮ ಮಗಳ ಬಗ್ಗೆ ಯೋಚನೆ ಮಾಡಿ. ತಾಳಿ ಇಲ್ಲದೆ ನಿಮ್ಮ ಮಗಳು ಒದ್ದಾಡುತ್ತಿದ್ದಾಳೆ ಹಾಗೆಯೇ ಆಕೆಗೆ ಮೊದಲು ಬುದ್ದಿ ಹೇಳಿ, ನಿಮ್ಮ ದೊಡ್ಡ ಮಗಳ ಜೀವನ ಹೀಗಾದ ಮೇಲೆ ಪೂಜಾ ಗೆ ಹೇಗೆ ಗಂಡು ಬರುತ್ತದೆ. ನೀವು ಆ ಬಗ್ಗೆ ಯೋಚನೆ ಮಾಡಿ.ಎಲ್ಲರೂ ಬಾಯಿ ಮುಚ್ಚಿ ಆಶೀರ್ವಾದ ಮಾಡಿದ್ದಾರೆ ಅಲ್ವಾ. ನೀವು ಆಶೀರ್ವಾದ ಮಾಡುವುದಿಲ್ಲ. ಏನಾದರು ಒಂದು ಕೊಂಕು ಮಾತುಗಳನ್ನು ಹೇಳುತ್ತಿರುತ್ತಿರಾ ಎಂದು ಕೊಂಚ ಜೋರಾಗಿಯೇ ಹೇಳುತ್ತಾಳೆ.

ಆಕೆಯ ಮಾತು ಕೇಳಿದ ಭಾಗ್ಯ ಮನೆಯ ಒಳಗಿನಿಂದ ಬರುತ್ತಾಳೆ. ಹಾಗೆಯೇ ಮದುಮಗಳಿಗೆ ಪ್ರೀತಿಯಿಂದ ಆಶೀರ್ವಾದ ಮಾಡುತ್ತಾಳೆ. ಭಾಗ್ಯ ಮದುಮಗಳ ಬಳಿ ಹೇಳುತ್ತಾಳೆ ಎಲ್ಲಾದರೂ ನಿನಗೆ ನನ್ನ ರೀತಿ ಕಷ್ಟವಾದರೆ ಖಂಡಿತವಾಗಿಯೂ ನೀನು ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳಬಹುದು ಯಾರ ಮಾತಿಗೂ ತಲೆ ಕೆಡಿಸಿಕೊಳ್ಳುವ ಅಗತ್ಯ ಇಲ್ಲ. ಹೇಳುವವರು ನೂರು ಮಾತು ಹೇಳುತ್ತಿರುತ್ತಾರೆ ಆದರೆ ಅದೆಲ್ಲವನ್ನೂ ನಾವು ಮನದಿಂದ ಕಿತ್ತು ಬಿಸಾಡಬೇಕು ಎಂದು ಹೇಳುತ್ತಾಳೆ. ಆಕೆಯ ಮಾತು ಕೇಳಿದ ಮದುಮಗಳು ಆಯಿತು ಎಂದು ತಲೆ ಅಲ್ಲಾಡಿಸುತ್ತಾಳೆ. ಕೂಡಲೇ ಭಾಗ್ಯ ನಿರ್ಮಲನ ಬಳಿ ಹೇಳುತ್ತಾಳೆ ಅಕ್ಕ ನೀವು ಮಾಡಲು ಹೇಳಿದ ಅಡುಗೆ ಎಲ್ಲಾ ಆಗಿದೆ ಎಂದು ಹೇಳಿ ಅಲ್ಲಿಂದ ಹೊರಟು ಹೋಗುತ್ತಾಳೆ. ಸುನಂದ ಭಾಗ್ಯ ಹಿಂದೆಯೇ ಓಡಿಕೊಂಡು ಬರುತ್ತಾಳೆ.
ಅಮ್ಮನಿಗೆ ಸಾಂತ್ವನ ಹೇಳಿದ ಭಾಗ್ಯ
ಹಾಗೆಯೇ ಭಾಗ್ಯಾಳನ್ನೂ ತಡೆದು ಏನೇ ಭಾಗ್ಯ ಅವರೆಲ್ಲ ಅಷ್ಟೆಲ್ಲ ಮಾತನಾಡಿದರು ನೀನು ಏನು ಹೇಳುವುದೇ ಇಲ್ಲ. ಅವರೆಲ್ಲರೂ ಪೂಜಾ ಮದುವೆ ಬಗ್ಗೆ ಮಾತನಾಡಿದರು ನೀನು ಸುಮ್ಮನೆ ಇದ್ದೆ ಎಂದು ಅಳಲು ತೋಡಿಕೊಂಡಾಗ ಭಾಗ್ಯ ತಾಯಿಯ ಬಳಿ ಹೇಳುತ್ತಾಳೆ ಪೂಜಾ ಮದುವೆ ಮಾಡುವ ಜವಾಬ್ದಾರಿ ನನ್ನದು. ನಾನೇ ಮುಂದೆ ನಿಂತು ಆಕೆಗೆ ಮದುವೆ ಮಾಡುತ್ತೇನೆ ನೀನು ಎನು ತಲೆ ಕೆಡಿಸಿಕೊಳ್ಳಬೇಡ ಎಂದು ತಾಯಿಗೆ ಹೇಳುತ್ತಾರೆ. ಆಕೆಯ ಮಾತುಗಳನ್ನು ಸುನಂದಾ ಸುಮ್ಮನಗುತ್ತಾಳೆ. ಭಾಗ್ಯ ತರಾತುರಿಯಲ್ಲಿ ಮನೆಗೆ ಬರುತ್ತಾಳೆ. ಹಾಗೆಯೇ ಮನೆಗೆ ತಕ್ಷಣ ಆಕೆಯ ಮಾವ ಭಾಗ್ಯ ಬಳಿಗೆ ಬಂದು ತಗೋ ಅಮ್ಮ ಇವತ್ತು ಇಷ್ಟು ಫೋನ್ ಬಂದಿದೇ. ಪುಸ್ತಕದಲ್ಲಿ ಬರೆದಿಟ್ಟಿದ್ದೇನೆ ಎಂದು ಡಿಟೆಲ್ಸ್ ಕೊಡುತ್ತಾರೆ.
ಕುಸುಮ ಮೇಲೆ ಕೋಪಗೊಂಡ ಸುನಂದಾ
ಭಾಗ್ಯ ಮಾವ ಸುನಂದಾಳನ್ನು ನೋಡಿ ಭಾಗ್ಯ ನಿನ್ನ ತಾಯಿಗೆ ಏನಾಯಿತು ಬೇಸರಾದಲ್ಲಿದ್ದಾರೆ ಎಂದಾಗ ಕುಸುಮ ಕೊಂಚ ಜೋರಾಗಿಯೇ ಹೇಳುತ್ತಾಳೆ. ನಾವು ಎನು ಕೇಳುವುದು ಬೇಡ ಅವರದ್ದು ಇಷ್ಟೇ ಡೈಲಾಗ್ ನನ್ನ ಮಗಳ ಜೀವನ ಹಾಳಾಯಿತು ಎಂಬುವುದು. ನಾವು ನಿಮ್ಮ ಆರೋಗ್ಯ ತಪಾಸಣೆ ಮಾಡಲು ಆಸ್ಪತ್ರೆಗೆ ಹೋಗೋಣ ಎಂದು ಹೇಳಿ ಭಾಗ್ಯ ಅತ್ತೆ ಮಾವ ಹೊರಗಡೆ ಹೋಗುತ್ತಾರೆ. ಆದರೆ ಸುನಂದಾ ಮಾತ್ರ ಕುಸುಮ ಮಾತಿಗೆ ಕಿಡಿಕಾರುತ್ತಾರೆ.


Click it and Unblock the Notifications











