Bhagyalakshmi: ಗಂಡನ ಮನೆಯಿಂದ ಒಂದು ವಾರ ದೂರ ಇರಲು ಭಾಗ್ಯ ನಿರ್ಧಾರ
ಗಂಡನನ್ನು ಉಳಿಸಿಕೊಳ್ಳಲು ಭಾಗ್ಯ ಗಂಡನ ಮನೆಯನ್ನೇ ಬಿಟ್ಟು ಹೋಗಲು ರೆಡಿ ಆಗಿದ್ದಾಳೆ. ಗಂಡ, ಮಗ, ಮಗಳು, ದೇವರ ಹಾಗೆ ಇರುವ ಅತ್ತೆ- ಮಾವನನ್ನು ಬಿಟ್ಟು ಹೋಗುತ್ತಿದ್ದಾಳೆ ಭಾಗ್ಯ. ಆಕೆ ಅಂದ್ರೆ ಎಲ್ಲರಿಗೂ ಬಹಳ ಇಷ್ಟ. ಆದರೆ ತಾಂಡವ್‌ನನ್ನು ಬಿಟ್ಟು.
ಶ್ರೇಷ್ಠ, ತಾಂಡವ್ ಜೀವನಕ್ಕೆ ಬಂದ ಬಳಿಕ ಭಾಗ್ಯ ಸಂಪೂರ್ಣವಾಗಿ ತಾಂಡವ್ ಜೀವನದಿಂದ ದೂರ ಸರಿದಿದ್ದಾಳೆ. ಆತನಿಗೆ ಶ್ರೇಷ್ಠಳನ್ನು ಹೇಗಾದರೂ ಮಾಡಿ ಪಡೆದುಕೊಳ್ಳಬೇಕು ಎನ್ನುವ ಬಯಕೆ. ಅದಕ್ಕಾಗಿ ಆತ ಆಡುತ್ತಿರುವ ನಾಟಕ ಅಷ್ಟಿಷ್ಟಲ್ಲ.

ಆಕೆಗೆ ತಾಂಡವನ ಜೊತೆ ಬದುಕಬೇಕು. ಆತ ಸಂಪಾದಿಸಿದ ಹಣ ಎಲ್ಲಾ ನನ್ನದಾಗ ಬೇಕು ಎನ್ನುವ ಹುಚ್ಚು ದುರಾಸೆ. ಆದರೆ ಅದೆಲ್ಲವು ತಾಂಡವ್‌ಗೆ ಸ್ವಲ್ಪವೂ ಅರ್ಥ ಆಗದೇ ಆತ ಮಾತ್ರ ನೀನು ನನಗೆ ಬೇಕು ಎಂದು ಹೇಳುತ್ತ ಇರುತ್ತಾನೆ. ನಾನು ಮನೆಗೆ ಹೋಗ್ತಿದ್ದೀನಿ ಬೆಟ್ಟದಂತ ತಲೆಬಿಸಿ ಎಲ್ಲಾ ಕಳೆದು ಹೋಯಿತು. ನಾನು ಭಾಗ್ಯ ಇಲ್ಲದ ಮನೆಯಲ್ಲಿ ಇರಬಹುದು. ನನ್ನವರ ಜೊತೆ ಬದುಕಬಹುದು ಎಂದು ಶ್ರೇಷ್ಠಾಗೆ ಹೇಳುತ್ತಾನೆ. ಇದನ್ನು ಕೇಳಿದ ಭಾಗ್ಯ ಮಾತ್ರ ಬಹಳ ಕೋಪದಲ್ಲಿ ಇರುತ್ತಾಳೆ.
ಯಾಕೆ ಹೀಗೆ ಆಗುತ್ತಿದೆ ಎಂದು ಯೋಚನೆ ಮಾಡುತ್ತಾಳೆ ಶ್ರೇಷ್ಠ. ತಾಂಡವ್ ನನ್ನ ಜೊತೆ ಇರಬೇಕು ಎಂದು ಎಷ್ಟೆಲ್ಲ ಪ್ಲಾನ್ ಮಾಡಿದೆ. ಮದುವೆ ಗೊತ್ತು ಮಾಡಿದೆ. ಆದರೆ ಇದೀಗ ವಾಪಸ್ ಆತ ಮನೆಗೆ ಹೋಗುತ್ತಾ ಇರುವುದು ಶ್ರೇಷ್ಠಗೆ ತಡೆದುಕೊಳ್ಳಲು ಆಗುತ್ತಿಲ್ಲ. ಇನ್ನು ಶ್ರೇಷ್ಠಗೆ ತಾಂಡವ್‌ನನ್ನು ತಡೆಯಲು ಸಾಧ್ಯವಾಗದೇ ಸುಮ್ಮನಿರುತ್ತಾಳೆ. ಇನ್ನು ಭಾಗ್ಯ ಬಹಳ ಜೋರಾಗಿ ಅಳುತ್ತಾ ಇರುತ್ತಾಳೆ .
ದೇವರಲ್ಲಿ ಬೇಡಿಕೊಂಡ ಭಾಗ್ಯ
ದೇವರ ಬಳಿ ಮಾತ್ರ ಆದಷ್ಟು ಬೇಗ ನನ್ನನ್ನು ಇಲ್ಲಿಗೆ ಕರೆದುಕೊಂಡು ಬರುವ ಹಾಗೆ ಮಾಡು ದೇವರೇ. ಈ ಒಂದು ವಾರದಲ್ಲಿ ನನ್ನ ಗಂಡ ಮನೆ ಹೇಗೆ ನಿಭಾಯಿಸುತ್ತಾರೆ? ಎಂಬುವುದನ್ನು ನಾನು ನೋಡಬೇಕು ಎಂದು ದೇವರ ಬಳಿ ಬೇಡಿಕೊಳ್ಳುತ್ತಾಳೆ. ಹಾಗೆಯೇ ಗಂಡನ ಮನೆ ಬಿಟ್ಟು ಹೋಗಬೇಡ ಎಂದು ಹೇಳಿದ ತಾಯಿಗೆ ಕೂಡ ಬುದ್ದಿ ಮಾತು ಹೇಳುತ್ತಾಳೆ ಭಾಗ್ಯ.

ಬೇಸರ ಮಾಡಿಕೊಂಡ ಕುಸುಮಾ
ಭಾಗ್ಯ ಇನ್ನೇನು ಮನೆಯಿಂದ ಹೊರಗಡೆ ಹೋಗಬೇಕು ಎಂದು ಇರಬೇಕಾದರೆ ಶಾಲೆಯಿಂದ ಮಕ್ಕಳು ಮನೆಗೆ ಬರುತ್ತಾರೆ. ಅಮ್ಮ ಮನೆಯಿಂದ ಹೊರಟು ನಿಂತಿರುವುದನ್ನು ನೋಡಿದ ಗುಂಡಣ್ಣ ಮಾತ್ರ ನೂರೆಂಟು ಪ್ರಶ್ನೆ ಮಾಡುತ್ತಾ ಇರುತ್ತಾನೆ. ಆದರೆ ಇದನ್ನು ಕೇಳಿಸಿಕೊಂಡ ಭಾಗ್ಯ ಮಾತ್ರ ಬಹಳ ಸಮಾಧಾನದಿಂದ ನಾನು ತಾತನ ಮನೆಗೆ ಹೋಗಿ ಬರುತ್ತೇನೆ. ಒಂದು ವಾರ ನಾನು ಅಲ್ಲೇ ಇರುತ್ತೇನೆ ಎಂದು ಹೇಳಿದಾಗ ಗುಂಡಣ್ಣ, ಸರಿ ಹಾಗಾದರೆ ನಮ್ಮ ಬಟ್ಟೆಯನ್ನು ಪ್ಯಾಕ್ ಮಾಡಿಕೋ ನಾನು ಬರುತ್ತೇನೆ ಎಂದು ಹೇಳುತ್ತಾನೆ.
ಗಂಡನ ಮಾತು ಕೇಳಿ ಭಾಗ್ಯ ತತ್ತರ
ಭಾಗ್ಯ ಮಗನನ್ನು ಹೇಗಾದರೂ ಮಾಡಿ ತಡೆದು ಹೇಳುತ್ತಾಳೆ. ಬೇಡ ಗುಂಡಣ್ಣ, ಇವತ್ತು ಬೇಡ . ನಾನು ಒಂದು ವಾರದಲ್ಲಿ ಬರುತ್ತೇನೆ ಎಂದೆಲ್ಲ ಹೇಳಿ ಗುಂಡಣ್ಣನ ಮನವೊಲಿಸುತ್ತಾಳೆ. ಹಾಗೆಯೇ ಭಾಗ್ಯ ಮಗಳು ತನ್ವಿ ಹೇಳುತ್ತಾಳೆ. ಅಮ್ಮ ನಾಳೆಯಿಂದ ಶಾಲೆ ಗೆ ಬಾ. ಅಮ್ಮ ಎಲ್ಲರೂ ನಿನ್ನನ್ನು ಶಾಲೆಯಲ್ಲಿ ಕೇಳುತ್ತಾ ಇರುತ್ತಾರೆ. ದಯವಿಟ್ಟು ನೀನು ಬಾ. ಇಲ್ಲವಾದರೆ ನನ್ನ ತಲೆ ತಿನ್ನುತ್ತಾರೆ ಎಂದು ತಾಯಿ ಬಳಿ ಹೇಳುತ್ತಾಳೆ. ಬಳಿಕ ಭಾಗ್ಯ ತನ್ನ ತವರು ಮನೆಗೆ ಹೋಗುತ್ತಾಳೆ. ಕುಸುಮಾ ಹಾಗೂ ಆಕೆಯ ಗಂಡ ಮಾತ್ರ ತಮ್ಮ ಸೊಸೆ ಮನೆ ಬಿಟ್ಟು ಹೋಗುತ್ತಾ ಇರುವುದು ನೋಡಿ ಬಹಳ ನೊಂದುಕೊಳ್ಳುತ್ತಾರೆ.


Click it and Unblock the Notifications











