Bhagya Lakshmi ;ಪೂಜಾ ಹಿಂದೆ ಬಿದ್ದ ಕಿಶನ್, ಭಾಗ್ಯ ಮನೆಗೆ ಬಂದು ಕೆಂಡ ಕಾರಿದ ತಾಂಡವ್, ಮುಂದೇನು ?
'ಭಾಗ್ಯ ಲಕ್ಷ್ಮಿ'ದಲ್ಲಿ, ಭಾಗ್ಯ ತನ್ನ ಸಹೋದರಿ ಪೂಜಾಳಿಗೆ ಸೂಕ್ತವಾದ ಜೋಡಿಯನ್ನು ಹುಡುಕಲು ದೃಢನಿ ಶ್ಚಯ ಮಾಡಿದ್ದಾಳೆ. ಅವಳ ಪ್ರಯತ್ನಗಳ ಹೊರತಾಗಿಯೂ, ಸಂಬಂಧವು ಈಗಾಗಲೇ ಮುರಿದುಹೋಗಿದೆ. ಏತನ್ಮಧ್ಯೆ, ಪೂಜಾ ಮದುವೆಯಾಗಬಾರದು ಎಂದು ತಾಂಡವ್ ದೃಢ ನಿಶ್ಚಯ ಮಾಡಿದ್ದಾಳೆ. ಉದ್ಯಾನವನದಲ್ಲಿ ಕಿಶನ್ ಜೊತೆ ಪೂಜಾಳ ಮಾತು ಕೇಳಿ ತಾಂಡವ್ ಮದುವೆ ವಿಚಾರದಲ್ಲಿ ಹುಳಿ ಹಿಂಡುತ್ತಿದ್ದಾನೆ. ಭಾಗ್ಯ ನಿನಗೆ ಒಳ್ಳೆಯ ಹುಡುಗನ ಹುಡುಕಿ ನಾನೇ ಮದುವೆ ಮಾಡಿಸುತ್ತೇನೆ ಎಂದು ಪೂಜಾಗೆ ಮಾತು ಕೊಟ್ಟಿದ್ದಾಳೆ. ಅತ್ತ ತಾಂಡವ್ ಪೂಜಾಳ ಮದುವೆ ಆಗಲು ನಾನು ಬಿಡೋದೆ ಇಲ್ಲ ಎಂದು ಪಟ್ಟು ಹಿಡಿದಿದ್ದಾನೆ.
ಕೆಲಸದ ಸ್ಥಳದಲ್ಲಿ ಕಿಶನ್ ಮಾಡಿದ ಪ್ರಪೋಸಲ್ ನಿಂದ ಬೇಸರಗೊಂಡ ಪೂಜಾ, ಕಚೇರಿಯಿಂದ ಹೊರಡುತ್ತಾಳೆ. ಪೂಜಾ ಕೆಲಸ ಮಾಡುವ ಸ್ಥಳದಲ್ಲಿ ಎಂಡಿ ಆಗಿರುವ ಕಿಶನ್, ಅವಳನ್ನು ಹಿಂಬಾಲಿಸುತ್ತಾನೆ. ಮಾತನಾಡುವಂತೆ ಒತ್ತಾಯಿಸುತ್ತಾನೆ. ತಾಂಡವ್ ರಸ್ತೆಯಲ್ಲಿ ನಿಂತುಕೊಂಡು ಏನಾಗುತ್ತಿದೆ ಎಂದು ನೋಡುತ್ತಾನೆ. ಒಳ್ಳೆ ಟೈಮ್‌ನಲ್ಲಿ ಸಿಕ್ಕಿಕೊಂಡಳು ಎಂದು ಮನದಲ್ಲಿ ಅಂದುಕೊಳ್ಳುತ್ತಾನೆ.

ಪೂಜಾ ಕೆಲಸ ಮಾಡುವ ಆಫೀಸ್ ನ ಎಂಡಿ, ಕಾಲೇಜು ಸೀನಿಯರ್ ಕಿಶನ್ ಪ್ರಪೋಸ್ ಮಾಡಿದ್ದಕ್ಕೆ ಬೇಸರಗೊಂಡು ಪೂಜಾ ಆಫೀಸ್ ತೊರೆದು ಹೊರಬಂದಿದ್ದಾಳೆ. ಬಳಿಕ ದಾರಿಯಲ್ಲಿ ಪೂಜಾ ಹೋಗುತ್ತಿರುವಾಗ ಕಿಶನ್ ಬಂದು ಪೂಜಾ ನಿನ್ನ ಜೊತೆ ಮಾತನಾಡಬೇಕು ಎಂದು ಹೇಳುತ್ತಾನೆ. ರೋಡ್ನಲ್ಲಿ ಕಿಶನ್ ಹೀಗೆ ಹೇಳುತ್ತಿರುವಾಗ ಇದನ್ನು ತಾಂಡವ್ ಗಮನಿಸಿದ್ದಾನೆ.
ಭಾಗ್ಯ ಮನೆಗೆ ನುಗ್ಗಿದ ತಾಂಡವ್
ಇದೆಲ್ಲ ಆದ ನಂತರ ಮನೆಗೆ ಬಂದ ತಕ್ಷಣ ಭಾಗ್ಯ ಮೇಲೆ ತಾಂಡವ್ ಮನಬಂದಂತೆ ರೇಗಾಡಿದ್ದಾನೆ. ಪೂಜಾ ನಿಮ್ಮ ಮನೆಯ ಮರಿಯಾದೆಯನ್ನು ಹರಾಜು ಹಾಕ್ತಾ ಇದ್ದಾಳೆ. ನೀವು ನೋಡಿದ್ರೆ ಪೂಜಾಗೆ ಮದುವೆ ಮಾಡಿಸಬೇಕೆಂದು ಪುರೋಹಿತರಿಗೆ, ಬ್ರೋಕರ್ಗೆ ಕಾಲ್ ಮೇಲೆ ಕಾಲ್ ಮಾಡ್ತಾ ಇದ್ದೀರ.. ಆದ್ರೆ ಅವಳು ಪಾರ್ಕ್ನಲ್ಲಿ ಯಾರ ಜೊತೆನೋ ಸುತ್ತಾಡ್ತಾ ಇದ್ದಾಳೆ. ಯಾರಿಗೊತ್ತು ಭಾಗ್ಯನೇ ಪೂಜಾಳ ಬಳಿ ನಂಗೆ ಒಳ್ಳೆ ಸಂಬಂಧ ಹುಡುಕೋಕೆ ಆಗ್ತಾ ಇಲ್ಲ ಹೋಗಮ್ಮ ನೀನೇ ಯಾರ ಜೊತೆನಾದ್ರು ಸುತ್ತಾಡು ಅಂತ ಕಳಿಸಿರಬೇಕು. ನನ್ನ ಮಾತನ್ನ ತಡಿಯೋಕೆ ಬರಬೇಡ, ಸಾಧ್ಯ ಆದ್ರೆ ನಿನ್ ತಂಗಿ ಯಾವನ್ ಜೊತೆನೋ ಸುತ್ತಾಡ್ತಾ ಇದ್ದಾಳೆ ಅಲ್ವಾ.. ಅವಳನ್ನು ತಡಿ ಎಂದು ಹೇಳಿದ್ದಾನೆ.
ತಾಂಡವ್‌ನ ಈ ಮಾತುಗಳನ್ನು ಕೇಳಿ ಭಾಗ್ಯಾಗೆ ಎಲ್ಲಿಲ್ಲದ ಕೋಪ ಬಂದಿದೆ. ಸದ್ಯ ಪೂಜಾ ಮನೆಗೆ ಬಂದ ಕೂಡಲೇ ಏನೇನು ಮಾತುಕತೆ ಆಗುತ್ತದೆ.. ಜಗಳವಾಗುತ್ತ ಅಥವಾ ಸಮಾಧಾನದಿಂದ ಯಾರು ಆತ?, ಏನು ಮಾಡುತ್ತಿದ್ದಾನೆ ಎಂದು ಕೇಳಿ ಮದುವೆ ಮಾತುಕತೆ ಮುಂದುವರೆಸುತ್ತಾರ ಎಂಬುದು ನೋಡಬೇಕಿದೆ.


Click it and Unblock the Notifications











