BhagyaLakshmi ; ತಾಂಡವ್ ಮಾತಿಗೆ ಸಿಡಿದೆದ್ದ ಶ್ರೇಷ್ಠ, ಭಾಗ್ಯ ನಡೆಸುತ್ತಿದ್ದ ಕೈ ತುತ್ತು ಸರ್ವಿಸ್ ಬಂದಾಗುತ್ತಾ?
ತಾಂಡವ ಹಾಗೂ ಶ್ರೇಷ್ಠ ತಿನ್ನುತ್ತಿರುವ ಮನೆಯ ಊಟ, ಭಾಗ್ಯ ನಡೆಸುತ್ತಿದ್ದ ಕೈ ತುತ್ತು ಸೆಂಟರ್ ನಿಂದಾ ಬರುತ್ತಿತ್ತು.ಈ ವಿಚಾರ ತಿಳಿಯದ ತಾಂಡವ ಮಾತ್ರ ಊಟವನ್ನು ಸವಿಯುತ್ತಾ ಬಹಳ ಚೆನ್ನಾಗಿದೆ ಇಂತಹ ಊಟವನ್ನು ಮಾಡಿದರೆ ಖಂಡಿತವಾಗಿಯೂ ನನಗೆ ಇದ್ದ ಸ್ಟ್ರೆಸ್ ಹೋಗುತ್ತದೆ. ಬಹಳ ಅದ್ಭುತವಾದ ಊಟ ಎಂದು ಶ್ರೇಷ್ಠ ಜೊತೆಗೆ ಹೊಗಳಿ ಮಾತನಾಡುತ್ತಾಳೆ. ಶ್ರೇಷ್ಠ ಕೂಡ ಊಟ ಮಾಡಿರುತ್ತಾಳೆ ನಿಜಕ್ಕೂ ತಾವು ಆರ್ಡರ್ ಮಾಡಿದ ಊಟ ಬಹಳ ಅದ್ಬುತವಾಗಿ ಇದೆ ಎಂದು ಶ್ರೇಷ್ಠ ಕೂಡ ಮನದಲ್ಲಿ ಆಂದುಕೊಳ್ಳುತ್ತಾಳೆ.
ಆದರೆ ಶ್ರೇಷ್ಠ ಅಂದುಕೊಂಡದ್ದೆ ಒಂದು ಅಲ್ಲಿ ಆದದ್ದೇ ಇನ್ನೊಂದು.ತಾಂಡವ ರಾತ್ರಿಯ ಊಟಕ್ಕೆ ಕೂಡ ಇದೆ ಊಟವನ್ನು ಆರ್ಡರ್ ಮಾಡಿಸು ಶ್ರೇಷ್ಠ ಎಂದು ಹೇಳುತ್ತಾನೆ ಶ್ರೇಷ್ಠ, ಬಹಳ ಖುಷಿಯಿಂದ ಆಯಿತು ಎಂದು ಒಪ್ಪಿಕೊಳ್ಳುತ್ತಾಳೆ. ಹಾಗೆಯೇ ದಿನ ಆಫೀಸಿನ ಹುಡುಗನೊಬ್ಬ ಫುಡ್ ಆರ್ಡರ್ ಮಾಡುತ್ತಿರುತ್ತಾನೆ ಅವನ ಬಳಿ ಮೊದಲಿಗೆ ಶ್ರೇಷ್ಠ ನಮಗೆ ರಾತ್ರಿ ಕೂಡ ಫುಡ್ ಬೇಕು ಆರ್ಡರ್ ಮಾಡ್ತೀರಾ ಎಂದು ಕೇಳಿದಾಗ ಆ ಹುಡುಗ ಕೊಂಚ ಬ್ಯುಸಿ ಇದ್ದ . ಭಾಗ್ಯ ಫೋನ್ ನಂಬರ್ ಅನ್ನು ಆತ ಶ್ರೇಷ್ಠಗೆ ನೀಡುತ್ತಾನೆ. ಶ್ರೇಷ್ಠ ಫುಡ್ ಆರ್ಡರ್ ಮಾಡಲೆಂದು ಫೋನ್ ಮಾಡುತ್ತಾಳೆ.

ಆಗ ಭಾಗ್ಯ ಫೋನ್ ರಿಸೀವ್ ಮಾಡಿ ಹಲೋ, ಕೈ ತುತ್ತು ಸರ್ವಿಸ್ ಯಾರು ಫೋನ್ ಮಾಡಿದ್ದು ಎಂದು ಕೇಳಿದಾಗ ಶ್ರೇಷ್ಠ ಗೆ ನಿಜಕ್ಕೂ ಶಾಕ್ ಆಗುತ್ತದೆ. ಅತ್ತ ಕಡೆಯಿಂದ ಭಾಗ್ಯಗೆ ಕೇಳುತ್ತದೆ ಶ್ರೇಷ್ಠ ಕೂಡಲೇ ಭಾಗ್ಯ ಎಂದು ಅರಿತುಕೊಂಡು ಇಷ್ಟರವರೆಗೆ ಇವಳ ಕೈತುತ್ತು ಸರ್ವಿಸ್ ಇಂದ ನಾವು ಊಟ ಮಾಡುತ್ತಿದ್ದ ಎಂದು ಯೋಚನೆ ಮಾಡುತ್ತಾಳೆ ಹಾಗೆಯೇ ತಾಂಡವ ಇವಳು ಮಾಡಿದ ಅಡುಗೆಯನ್ನು ಇಷ್ಟು ಹೋಗಳುತ್ತಿದ್ದಿದ್ದು ಎಂದು ಹೇಳುತ್ತಾಳೆ.ಇತ್ತ ತಾಂಡವ ನ ಬಳಿಗೆ ಬಂದ ಒಬ್ಬ ಹುಡುಗ ನಾವು ಡೈಲಿ ಆರ್ಡರ್ ಮಾಡುತ್ತಿದ್ದ ಊಟದ ಸರ್ವಿಸ್ ಇದೀಗ ಇಲ್ಲ, ಯಾರೋ ಏನೋ ಕೈವಾಡ ಮಾಡಿ ಅವರು ಕೊಡುತ್ತಿದ್ದ ಊಟದ ಬಗ್ಗೆ ಕಂಪ್ಲೇಂಟ್ ಮಾಡುತ್ತಿದ್ದಾರಂತೆ ಅದಕ್ಕೆ ಸ್ವಲ್ಪ ದಿನಗಳವರೆಗೆ ಊಟದ ಸರ್ವಿಸ್ ಇಲ್ಲ ಎಂದು ಹೇಳುತ್ತಾನೆ.
ಕೆಟ್ಟದು ಮಾಡಿದವರಿಗೆ ಹಿಡಿ ಶಾಪ ಹಾಕುತ್ತಿದ್ದ ತಾಂಡವ
ಇದನ್ನು ಕೇಳಿದ ತಾಂಡವ ಯಾರಪ್ಪ ಅಷ್ಟು ಒಳ್ಳೆ ಅಡುಗೆ ಮಾಡುವವರಿಗೆ ತೊಂದರೆ ಮಾಡಿದ್ದು ಎಂದು ಹಿಡಿ ಶಾಪ ಹಾಕುತ್ತಾನೆ, ಇದನ್ನು ನೋಡಿದ ಶ್ರೇಷ್ಠಗೆ ಬಹಳ ಕೋಪ ಬರುತ್ತದೆ. ಕೂಡಲೇ ತಾಂಡವನನ್ನ ತರಾಟೇ ತೆಗೆದುಕೊಳ್ಳುತ್ತಾಳೆ. ಶೇಷ್ಠ ಕೋಪ ಮಾಡಿರುವುದು ಯಾಕೆ ಎನ್ನುವುದು ತಾಂಡವ ಗೆ ತಿಳಿಯದಾಗಿದೆ.ಇತ್ತ ಭಾಗ್ಯ ಗೆ ಮನೆಯಲ್ಲಿ ಸುನಂದಾ ಕಿರಿ ಕಿರಿ ಬೇರೆ. ಆಗಾಗ ಏನಾದರು ಒಂದು ಕ್ಯಾತೆ ತೆಗೆದು ಭಾಗ್ಯಗೆ ಬೈಯುತ್ತಿರುತ್ತಾಳೆ. ಭಾಗ್ಯ ಮಾತ್ರ ಎನು ಮಾತನಾಡದೆ ಎಲ್ಲಾ ಮಾತನ್ನು ಕೇಳಿಸಿಕೊಳ್ಳುತ್ತಿರುತ್ತಾಳೆ.
ಭಾಗ್ಯ ಕನಸಿಗೆ ಕೊಡಲಿ ಏಟು ಕೊಟ್ಟ ಕನ್ನಿಕಾ
ಆಕೆಗೆ ಬಹಳಷ್ಟು ನೋವು ಆದರೂ ಕೂಡಾ ಏನು ಮಾತನಾಡದೆ ಸುಮ್ಮನಿರುತ್ತಾಳೆ. ಫುಡ್ ಲೈಸೆನ್ಸ್ ಮಾಡಿಸಲು ಒಂದಷ್ಟು ಊಟವನ್ನು ಕ್ಯಾರಿಯರ್ ನಲ್ಲಿ ಹಾಕಿಕೊಂಡು ಬರುತ್ತಾಳೆ ಹಾಗೆಯೇ ತಾನು ಯಾವುದೇ ಕೆಮಿಕಲ್ ಅನ್ನು ಹಾಕದೆ ಇಂತಹ ಊಟ ಮಾಡಿ ಸರ್ವಿಸ್ ಕೊಡುತ್ತೇನೆ ಎಂದು ಹೇಳುತ್ತಾಳೆ. ಆದರೆ ಕನ್ನಿಕಾ ಶ್ರೇಷ್ಠ ಮಾಡಿದ ಮಸಲತ್ತಿಗೆ ಭಾಗ್ಯ ಬಲಿಯಾಗುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿದೆ. ಇತ್ತ ಮನೆಗೆ ಬಂದ ಭಾಗ್ಯ ಅತ್ತೆಯ ಸಮಾಧಾನದ ಮಾತಿಗೆ ಖುಷಿ ಪಡುತ್ತಾಳೆ. ಹಾಗೆಯೇ ಭಾಗ್ಯ ಗೆ ಇನ್ನಷ್ಟು ಧೈರ್ಯ ಬರುತ್ತದೆ. ಹೇಗಾದರೂ ಮಾಡಿ ಲೈಸೆನ್ಸ್ ತೆಗೆದುಕೊಂಡು ನಾನು ಕೈ ತುತ್ತು ಸರ್ವಿಸ್ ಅನ್ನು ಹೆಚ್ಚಾಗಿಯೇ ಅಭಿವೃದ್ಧಿ ಮಾಡುತ್ತೇನೆ ಎಂದು ಮನದಲ್ಲಿ ಆಂದುಕೊಳ್ಳುತ್ತಾಳೆ.ಪೂಜಾ ಆತನ ಗೆಳೆಯನ ಕಂಪನಿಯಲ್ಲಿ ಕೆಲಸ ಮಾಡುತ್ತಿರುತ್ತಾಳೆ. ಇದೀಗ ಅವರಿಬ್ಬರೂ ಹಾವು ಮುಂಗುಸಿ ಹಾಗೆ ಕಿತ್ತಾಟ ಆಡುತ್ತಿರುತ್ತಾರೆ.ಇವರಿಬ್ಬರ ನಡುವೆ ಪಕ್ಕ ಪ್ರೀತಿಯಾಗುತ್ತದೆ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ.


Click it and Unblock the Notifications











