Bhagya Lakshmi ; ಭಾಗ್ಯ-ತಾಂಡವ್ ಗೆ ಇನ್ನೊಂದು ಮದುವೆ, ಮಕ್ಕಳ ದೆಸೆಯಿಂದಾದರು ಒಂದಾಗುತ್ತಾರಾ ಹೆತ್ತವರು?
ಭಾಗ್ಯ ಹಾಗೂ ತಾಂಡವ್ ಮಕ್ಕಳ ದೆಸೆಯಿಂದಾಗಿ ಇಬ್ಬರು ಒಂದಾಗಿ ಜೀವನ ನಡೆಸುವಂತೆ ಆಗಿದೆ. ವಿಚ್ಛೇದನ ತನಕ ತಾಂಡವ್ ಮುಂದುವರೆದು ಇರುತ್ತಾನೆ. ತಾಂಡವ್ ಗೆ ತನ್ನ ಹೆಂಡತಿ ಗಿಂತ ಆತನಿಗೆ ಶ್ರೇಷ್ಠ ನೆ ಮುಖ್ಯ ಆಗಿ ಬಿಟ್ಟಳು. ಶ್ರೇಷ್ಠ ಇಲ್ಲದೆ ನಾನು ಇಲ್ಲ ಎನ್ನುವ ಹಾಗೆ ಶ್ರೇಷ್ಠ ನನ್ನು ಬಿಟ್ಟಿರಲು ಆತನಿಂದ ಸಾಧ್ಯ ಆಗ್ತಿರಲಿಲ್ಲ. ಇದೀಗ ಮಕ್ಕಳಿಗೋಸ್ಕರ ಶ್ರೇಷ್ಠ ನಿಂದಾ ತಾಂಡವ್ ಕೊಂಚ ದೂರ ಉಳಿದಿದ್ದಾರೆ. ಆದರೆ ತಾಂಡವ್ ಎಲ್ಲೆಲ್ಲ ಹೋಗುತ್ತಾನೆ, ಅಲ್ಲಿಗೆ ಆತನನ್ನು ಹುಡುಕಿಕೊಂಡು ಶ್ರೇಷ್ಠ ಬರುತ್ತಾಳೆ. ಈ ವಿಚಾರ ಸುನಂದಾ ಗೆ ಮಾತ್ರ ಬಹಳ ಕೋಪ ಬರುತ್ತದೆ. ಈಗಾಗಲೇ ಅನೇಕ ಸಾರಿ ತಾಂಡವ್ ಜೊತೆಯಲ್ಲಿ ಇರಬಾರದೆಂದು ತಾಕೀತು ಬೇರೆ ಮಾಡಿದ್ದಳು,
ಆದರೆ ಆಕೆಗೆ ಅದೆಲ್ಲ ನಾಟುತ್ತನೆ ಇರಲಿಲ್ಲ. ಆಕೆಯ ಗುರಿ ಒಂದೇ ತಾಂಡವ್ ನನ್ನು ಹೇಗಾದರೂ ನಾನು ಪಡೆದುಕೊಳ್ಳಲೆಬೇಕು. ಆತ ಏನೇ ಮಾಡಿದರು ಮಾತ್ರ ಪಡೆದುಕೊಳ್ಳಲೆ ಬೇಕು ಆಲೋಚನೆಯಲ್ಲಿ ಮಗ್ನ ಆಗಿರುತ್ತಾಳೆ. ತಾಂಡವ ಹಾಗೂ ಭಾಗ್ಯ ಮಕ್ಕಳ ಜೊತೆ ಇದೀಗ ಖುಷಿಯಲ್ಲಿ ಕಾಲ ಕಳೆಯುತ್ತಾ ಇರುತ್ತಾರೆ ತಾಂಡವ್, ಶ್ರೇಷ್ಠ ಮಾತು ಕೇಳಿ ಮಕ್ಕಳಿಗೆ ಕೊಂಚ ನಿರಾಸೆ ಮಾಡಲು ಹೊರಟಿರುತ್ತಾನೆ. ಆದರೆ ಆತನ ಮಕ್ಕಳು ಮಾತ್ರ ಅದಕ್ಕೆಲ್ಲ ಅವಕಾಶ ಕೊಡುವುದೇ ಇಲ್ಲ. ತಾಂಡವ ಏನೇ ನೆಪ ಹೇಳಿದರು ಅದಕ್ಕೆಲ್ಲ ಒಂದಲ್ಲ ಒಂದು ಪರಿಹಾರ ಹುಡುಕಿಕೊಂಡು ಗುಂಡಣ್ಣ ತಂದೆಯ ಬಾಯಿಯನ್ನೇ ಮುಚ್ಚಿಸಿ ಬಿಡುತ್ತಾನೆ .

ಏನೇ ಮಾಡಿದರೂ ಮಕ್ಕಳ ಕೈಯಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ ಎನ್ನುವ ಅರಿವು ಗುಂಡಣ್ಣನೀಗೆ ಆಗಿದೆ. ಆದರೂ ಮಾತಿಗೆ ಮಾತು ಬೆಳೆಸದೆ ಮಕ್ಕಳ ಆಸೆಗೆ ತಣ್ಣೀರು ಎರಚದೆ, ಆಯಿತು ಎಂದು ಒಪ್ಪಿಗೆ ಕೊಟ್ಟು ಹೊರಗಡೆ ಕರೆದುಕೊಂಡು ಹೋಗಿ ಸುತ್ತಾಡಿಸುತ್ತನೆ. ಆ ದಿನ ತನ್ನ ತಂದೆ ತಾಯಿ ಇಬ್ಬರೂ ವಿಚ್ಛೇದನ ತನಕ ಹೋಗಿದ್ದರು ಆದರೆ ಇದೀಗ ಎಲ್ಲಾ ಸರಿ ಹೋಯಿತಲ್ಲ ಎಂದು ಮಕ್ಕಳ ಮೊಗದಲ್ಲಿ ಬಹಳ ಖುಷಿ ಇರುತ್ತೆ.
ತಾಂಡವನ ಮನದಲ್ಲಿ ನೂರೆಂಟು ಪ್ರಶ್ನೆ
ಆದರೆ ತಾಂಡವ್ ಮನದಲ್ಲಿ ಮಾತ್ರ ಏನೇನೋ ಪ್ರಶ್ನೆಗಳು , ಆತ ಕೂಡ ಎನು ಮಾಡಬೇಕು ಎಂದು ತೋಚದೇ ಸುಮ್ಮನೆ ಇರುತ್ತಾನೆ. ಇದನ್ನೆಲ್ಲ ನೋಡಿದ ಶ್ರೇಷ್ಠ ಗೆ ಮಾತ್ರ ಬಹಳ ಕೋಪ ಬರುತ್ತದೆ . ತಾಂಡವ ನನ್ನ ಜೊತೆ ನನ್ನ ಮನೆಯಲ್ಲಿ ಇರುತ್ತಾನೆ ಎಂದುಕೊಂಡರೆ ಈ ರೀತಿ ಭಾಗ್ಯ ಹಾಗೂ ಆಕೆಯ ಮಕ್ಕಳನ್ನು ಕರೆದುಕೊಂಡು ಎಲ್ಲೆಲ್ಲೂ ಸುತ್ತುತ್ತಾ ಇದ್ದಾನಲ್ಲ ಎಂದು ಕೋಪದಲ್ಲಿ ಇರುತ್ತಾಳೆ.

ಮಕ್ಕಳ ನಿರ್ಧಾರ ಕೇಳಿ ದಂಗಾದ ತಾಂಡವ್
ಗುಂಡಣ್ಣ ಹಾಗೂ ತನ್ವಿ ತಂದೆ ತಾಯಿ ಗೆ ಇನ್ನೊಮ್ಮೆ ಮದುವೆ ಮಾಡಬೇಕು ಎಂದು ಆಲೋಚನೆ ಮಾಡುತ್ತಾರೆ ಇದನ್ನು ತೆಂದೆ ತಾಯಿ ಬಳಿ ಪ್ರಸ್ತಾಪ ಮಾಡುತ್ತಾರೆ. ಆಗ ತಾಂಡವ್ ಗೆ ಎನು ಮಾಡಬೇಕು ಎಂದು ತಿಳಿಯದೇ ಆಗುತ್ತದೆ. ಕೊನೆಗೆ ಒಪ್ಪಿಕೊಳ್ಳುತ್ತಾನೆ. ಇದನ್ನೆಲ್ಲ ನೋಡಿದ ಸುನಂದಾ ಮಾತ್ರ ಕುಸುಮ ಜೊತೆ ಬಹಳ ಜೋರಾಗಿ ಅಳುತ್ತಾಳೆ. ನನ್ನ ಮಗಳ ಜೀವನ ನೋಡಿ ನಾನು ಅದೆಷ್ಟೋ ಕಣ್ಣೀರು ಹಾಕಿಬಿಟ್ಟೆ, ನಾನು ಎಷ್ಟೇ ಕೆಟ್ಟವಳು ಇದ್ದರೂ ಮಗಳ ವಿಚಾರದಲ್ಲಿ ಮಾತ್ರ ನಾನು ಯಾವತ್ತೂ ಕೆಟ್ಟದನ್ನು ಬಯಸಿ ಇರಲಿಲ್ಲ.

ಮನದ ನೋವು ಹೊರ ಹಾಕಿದ ಸುನಂದಾ
ಆಕೆ ಚೆನ್ನಾಗಿರಬೇಕು ಎನ್ನುವುದು ನನ್ನ ಆಸೆ. ಆದರೆ ಇದೀಗ ನನ್ನ ಮಗಳ ಜೀವನ ಸರಿ ಹೋಗುತ್ತಿದೆ. ನನಗೆ ಅದೇ ಖುಷಿ ಎಂದು ಹೇಳುತ್ತ ಇರುವಾಗಲೇ ಮೆಟ್ಟಿಲ ಬಳಿ ಬಂದು ನಿಂತ ಶ್ರೇಷ್ಠಗೆ ಬಹಳ ಕೋಪ ಬರುತ್ತದೆ. ಹಾಗೆಯೇ ತೋರಣ ಹಾಗೂ ಹೂವನ್ನು ಕಿತ್ತು ಹಾಕುತ್ತಾಳೆ. ಇದನ್ನು ನೋಡಿದ ಸುನಂದಾ ಬಹಳ ಕೋಪದಿಂದ ಇರುತ್ತಾಳೆ. ಹಾಗೆಯೇ ಆಕೆಯ ಜೊತೆ ಬಹಳ ಕಠೋರವಾಗಿ ನಡೆದುಕೊಳ್ಳುತ್ತಾರೆ..ಆದರೆ ಕುಸುಮ ಮಾತ್ರ ಶ್ರೇಷ್ಠ ಬಳಿಗೆ ಬಂದು ಆಕೆಗೆ ಹೂವು ಹಾಗೂ ಮಾವಿನ ಮರದ ಎಲೆ ಕೊಟ್ಟು ಇದನ್ನು ಜೋಡಿಸಿ ಮೇಲೆ ಕಟ್ಟಿ ಬಲಗಾಲಿಟ್ಟು ಒಳಗಡೆ ಬರಬಹುದು ಅಲ್ಲಿ ತನಕ ಮನೆಯ ಹೊರಗೆ ಇದನ್ನು ಮಾಡುತ್ತಿರು ಎಂದು ಮನೆಯ ಹೊರಗಡೆ ಕಳುಹಿಸುತ್ತಾರೆ.


Click it and Unblock the Notifications











