Bhagya Lakshmi ; ಭಾಗ್ಯ ಮೇಲೆ ಮುನಿಸಿಕೊಂಡ ತಾಂಡವ, ಇನ್ನಾದರೂ ಬುದ್ದಿ ಬರುತ್ತಾ?
ತಾಂಡವ ರೆಸ್ಟೋರೆಂಟ್ ನಲ್ಲಿ ಕುಳಿತು ಇಂಟರ್ ವ್ಯೂ ಫೇಸ್ ಮಾಡುತ್ತಿರುವುದನ್ನು ತನ್ವಿ ಹಾಗೂ ಆಕೆಯ ಕುಟುಂಬದವರು ನೋಡುತ್ತಿರುತ್ತಾರೆ. ತಾಂಡವಗೆ ಒಳ್ಳೆಯ ಕೆಲಸ ಸಿಗಲಿ ಎನ್ನುವುದು ಮನೆ ಮಂದಿಯ ಹಾರೈಕೆ. ತಾಂಡವನನ್ನು ಆತನ ಮಕ್ಕಳು ಬಹಳಷ್ಟು ಪ್ರೀತಿ ಮಾಡುತ್ತಿರುತ್ತಾರೆ. ಆತನಿಗೆ ತನ್ನ ಮಕ್ಕಳ ಮೇಲೆ ಇತ್ತೀಚಿಗೆ ಪ್ರೀತಿ ಕಡಿಮೆಯಾಗಿದೆ. ಮಕ್ಕಳೆಂದರೆ ತಾಂಡವ್ ಬಹಳ ಖುಷಿಪಡುತ್ತಿರುತ್ತಾನೆ. ಅದರಲ್ಲೂ ತನ್ವಿ ಎಂದರೆ ತಾಂಡವಗೆ ಬಹಳ ಇಷ್ಟ ಆದರೆ ಇತ್ತೀಚಿನ ದಿನಗಳಲ್ಲಿ ತಾಂಡವ್ ಗೆ ಮನೆಯವರ ಮೇಲೆ ಪ್ರೀತಿ ಕಿಂಚಿತ್ತು ಕೂಡ ಇಲ್ಲ. ತಾಂಡವ ಆಯಿತು ಆತನ ಎರಡನೇ ಹೆಂಡತಿ ಶ್ರೇಷ್ಠ ಆಯಿತು ಇವರಿಬ್ಬರ ಜೊತೆಗೆ ಬಹಳ ಖುಷಿಯಾಗಿ ಕಾಲ ಕಳೆಯುತ್ತಿರುತ್ತಾನೇ.
ರೆಸ್ಟೋರೆಂಟ್ ನಲ್ಲಿ ತಾಂಡವ ಗೆ ಬಹಳ ಆವಮಾನವಾಗುತ್ತದೆ. ಆತ ಜೋರು ಜೋರಾಗಿ ಕಂಪನಿ ಸಿಬ್ಬಂದಿಯ ಜೊತೆಗೆ ಮಾತನಾಡುತ್ತಾನೆ. ಕೇವಲ ತಾಂಡವಗೆ ಕೆಲಸ ಕೊಡಲಿಲ್ಲ ಎನ್ನುವ ಕಾರಣಕ್ಕಾಗಿ ಬಹಳ ಕೋಪ ಮಾಡಿಕೊಳ್ಳುತ್ತಾನೆ. ಆದರೆ ತಾಂಡವ ನ ಕೋಪ , ಒಣ ಜಂಭ ಕಂಡು ಕಂಪನಿಯವರು ಕೆಲಸ ಕೊಡದೆ ಅಲ್ಲಿಂದ ಹೊರಟು ಹೋಗುತ್ತಾನೆ. ತಾಂಡವ ಗೆ ಬಹಳ ಸಿಟ್ಟು ಬಂದು ಆತನ ಮೇಲೆ ರೇಗಾಡುತ್ತಾನೆ.

ಇದೆಲ್ಲವನ್ನೂ ನೋಡಿದ ಮನೆ ಮಂದಿ ಬಹಳ ಬೇಸರ ಪಟ್ಟುಕೊಳ್ಳುತ್ತಾರೆ. ತಾಂಡವ ಗೆ ನೋವಾಗುತ್ತಿರುವುದನು ನೋಡಿ ಭಾಗ್ಯ ಗೆ ಬಹಳ ಬೇಸರವಾಗುತ್ತದೆ.ಹಾಗೆಯೇ ಕುಸುಮ ಗೆ ಕೂಡ ಮಗನ ಬಗ್ಗೆ ಬೇಸರವಾಗುತ್ತದೆ. ಆದರೆ ತಾಂಡವಗೆ ತನ್ನ ಮನೆಯವರು ಇದ್ದಾರೆ ಎಂದು ತಿಳಿದು ನಾಚಿಕೆಯಾಗುತ್ತದೆ. ತಾಂಡವನ ಬಳಿಗೆ ತನ್ವಿ ಓಡೋಡಿ ಬರುತ್ತಾಳೆ. ಮಗಳ ಬಳಿ ಏನು ಎಂದು ಕೇಳದ ತಾಂಡವ ಮೌನವಾಗಿ ಇರುತ್ತಾನೆ. ತನ್ವಿ ತನಗೆ ಬಂದಿರುವ ಅಂಕದ ಬಗ್ಗೆ ತಾಂಡವನ ಬಳಿ ಹೇಳಿದಾಗ ತಾಂಡವಗೆ ಬಹಳ ಖುಷಿಯಾಗುತ್ತದೆ.
ಮುಂಚೆಲ್ಲ ತಾಂಡವ ತನ್ವಿ ಒಳ್ಳೆಯ ಅಂಕ ತೆಗೆದರೆ ಎಗ್ಸೈಟ್ ಆಗುತ್ತಿದ್ದ. ಆದರೆ ಇದೀಗ ಆತನಿಗೆ ಕೆಲಸ ಸಿಗುತ್ತಿಲ್ಲ ಎನ್ನುವ ಟೆನ್ಶನ್ ನಲ್ಲಿ ಯಾವ ರೀತಿ ರಿಯಾಕ್ಟ್ ಮಾಡಬೇಕು ಎನ್ನುವ ಆಲೋಚನೆ ಆತನಿಗೆ ಮೂಡುತ್ತದೆ. ಇತ್ತ ಶ್ರೇಷ್ಠ ತಾಂಡವ ಗೆ ಕರೆ ಮಾಡಿ ಸಮಾಧಾನ ಹೇಳುತ್ತಾಳೆ ಹಾಗೆಯೇ ಇನ್ನೊಂದು ಇಂಟರ್ವ್ಯೂ ಕೊಡುವಂತೆ ಹೇಳುತ್ತಾಳೆ.ಅದೇ ರೀತಿ ತಾಂಡವ ತನಗೆ ಮೊದಲು ಬಂದಿದ್ದ ಆಫರ್ ತಿರಸ್ಕರಿಸಿದ ನೆನಪು ಬರುತ್ತದೆ. ಆ ಕಂಪನಿ ಗೆ ಸೇರೋಣ ಎಂದು ಅಂದುಕೊಳ್ಳುತ್ತಾನೆ.
ತಾಂಡವನ ಮಾತಿಗೆ ಕೋಪಗೊಂಡ ಕಂಪನಿ ಬಾಸ್
ಆದರೆ ಮೊದಲು ತಾಂಡವ ಆ ಕಂಪನಿ ಬಗ್ಗೆ ಬಹಳ ಚೀಪ್ ಆಗಿ ಮಾತನಾಡಿರುತ್ತಾನೆ. ಇದರಿಂದ ಕಂಪನಿ ಬಾಸ್ ಗೆ ಬಹಳ ಕೋಪ ಬಂದಿರುತ್ತದೆ. ತಾಂಡವ ಆ ಕಂಪನಿ ಗೆ ಕೆಲಸ ಕೇಳಿಕೊಂಡು ಬಂದಾಗ ಆ ಕಂಪನಿ ಬಾಸ್ ಹೇಳುತ್ತಾರೆ. ನಿಮ್ಮಂತವರು ನಮ್ಮ ಕಂಪನಿಗೆ ಸೆಟ್ ಆಗುವುದಿಲ್ಲ. ನಿಮಗೆ ಏನೇ ಇದ್ದರೂ ದೊಡ್ಡ ಕಂಪನಿ ಬೆಸ್ಟ್ ನನ್ನಂತಹ ಸಣ್ಣ ಕಂಪನಿ ಎಲ್ಲಾ ಆಗುವುದಿಲ್ಲ ಎಂದು ಹೇಳುತ್ತಾರೆ. ಈ ಮಾತು ಕೇಳಿಸಿಕೊಂಡ ತಾಂಡವ ನಾನು ಆ ಅರ್ಥದಲ್ಲಿ ಹೇಳಿಲ್ಲ. ನೀವು ನನ್ನನ್ನು ತಪ್ಪಾಗಿ ಅರ್ಥ ಮಾಡಿಕೊಂಡಿರುವುದು ಎಂದು ಹೇಳುತ್ತಾನೆ.
ಸಪ್ಪೆ ಮುಖ ಹಾಕಿ ಆಫೀಸ್ ನಿಂದಾ ಹೊರಟ ತಾಂಡವ
ಆದರೂ ಆ ಕಂಪನಿ ಬಾಸ್ ಸಾರಿ ಸರ್ ನಿಮಗೆ ಇಲ್ಲಿ ಕೆಲಸ ಇಲ್ಲ, ನೀವು ಇಲ್ಲಿಂದ ದಯವಿಟ್ಟು ಹೊರಟು ಹೋಗಿ ಎಂದು ಹೇಳುತ್ತಾರೆ. ಈ ಮಾತು ಕೇಳಿದ ತಾಂಡವಗೆ ಬಹಳ ಅವಮಾನವಾಗುತ್ತದೆ. ಆತನಿಗೆ ಬಹಳ ನೋವಾಗುತ್ತದೆ. ಹಾಗೆಯೇ ಭಾಗ್ಯ ಮೇಲೆ ವಿಪರೀತ ಸಿಟ್ಟು ಬರುತ್ತದೆ. ಇತ್ತ ಭಾಗ್ಯ ಆಫೀಸ್ ನಿಂದಾ ಬರುವಾಗ ಬಹಳ ಸಪ್ಪೆ ಮುಖ ಹಾಕಿಕೊಂಡು ಬರುತ್ತಾಳೆ.
ಆಕೆಯ ಮುಖ ನೋಡಿದ ಕುಸುಮ ಯಾಕಮ್ಮ ಬೇಸರ ಮಾಡಿಕೊಂಡು ಇದ್ದಿಯಾ ಏನಾದರು ಆಯಿತಾ ಎಂದಾಗ ನಿನ್ನೆಯ ದಿನದಲ್ಲಿ ನಡೆದ ಘಟನೆ ನನಗೆ ಬಹಳ ನೋವು ತಂದಿದೆ ಅತ್ತೆ, ತನ್ವಿ ಅವರ ಅಪ್ಪನಿಗೆ ಮಕ್ಕಳ ಮುಂದೆ ಅವಮಾನ ಆಗಬಾರದಿತ್ತು. ಮಕ್ಕಳಿಗೆ ಅಪ್ಪ ಅಲ್ವಾ ಹೀರೋ ಎಂದು ಭಾಗ್ಯ ಹೇಳಿದಾಗ ಕುಸುಮ ಭಾಗ್ಯ ಗೆ ಸಮಾಧಾನ ಮಾಡುತ್ತಾಳೆ. ಹಾಗೆಯೇ ಆತರ ಏನು ಇಲ್ಲ. ನೀನು ತಲೆ ಕೆಡಿಸಿಕೊಳ್ಳಬೇಡ ಎಂದು ಸಮಾಧಾನ ಮಾಡುತ್ತಾಳೆ.


Click it and Unblock the Notifications











