Bhagya Lakshmi ; ಗಂಡ ಬೇಡವೆಂದು ತಾಳಿ ಕಳಚಿಟ್ಟ ಭಾಗ್ಯ..!
ಭಾಗ್ಯಗೆ ತಾಂಡವ ಎಂದರೆ ಬಹಳಷ್ಟು ಪ್ರೀತಿ. ಪ್ರೀತಿಗಿಂತ ತಾಳಿ ಕಟ್ಟಿದ ಗಂಡ ಎನ್ನುವ ಪವಿತ್ರವಾದ ಭಾವನೆ. ಆದರೆ ಆ ಭಾವನೆ ಇದೀಗ ಮನದಿಂದ ಅಳಿಸಲು ಹೊರಟಿದ್ದಾಳೆ ಭಾಗ್ಯ. ಭಾಗ್ಯ ತಾಳಿ ಕಟ್ಟಿಸಿಕೊಂಡ ಕ್ಷಣದಿಂದ ಬಹಳಷ್ಟು ನೋವು ಅನುಭವಿಸುತ್ತಾಳೆ. ತನ್ನ ಗಂಡ ಹೆಸರಿಗಷ್ಟೇ ಗಂಡ ಎನ್ನುವುದು ಆಕೆಗೆ ಅರಿವಾಗತೊಡಗುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಭಾಗ್ಯ ಜೊತೆ ತಾಂಡವ ನಡೆದುಕೊಳ್ಳುವ ರೀತಿಯನ್ನು ಮಾತ್ರ ಭಾಗ್ಯಗೆ ತಡೆದುಕೊಳ್ಳಲು ಆಗುತ್ತಿಲ್ಲ. ಗಂಡ ಎನ್ನುವ ಮಾತ್ರಕ್ಕೆ ಎಲ್ಲವನ್ನೂ ತಡೆದುಕೊಂಡು ಬಾಳಲು ಸಾಧ್ಯವೇ ಇಲ್ಲ.
ಹೀಗಾಗಿ ನೊಂದ ಭಾಗ್ಯ ಕೊರಳಲ್ಲಿ ಇದ್ದ ಮಾಂಗಲ್ಯದ ಚೈನ್ ಬಿಚ್ಚಿಡಲು ಮುಂದಾಗಿದ್ದಾಳೆ. ಕೊರಳಲ್ಲಿ ಮಾಂಗಲ್ಯವಿದ್ದ ಕಾರಣ ನನಗೆ ಬಹಳ ಕಷ್ಟವಾಗುತ್ತಿದೆ. ಆದ ಕಾರಣ ನಾನು ಮಾಂಗಲ್ಯದ ಸರವನ್ನು ಬಿಚ್ಚಿಡುತ್ತೇನೆ ಎಂದು ತನ್ನ ಗಂಡನ ಎದುರಲ್ಲೇ ಹೇಳುತ್ತಾಳೆ. ಭಾಗ್ಯ ಮಾತಿಗೆ ತಾಂಡವ ಗರ ಬಡಿದವನ ಹಾಗೆ ನಿಂತು ಬಿಡುತ್ತಾನೆ. ಭಾಗ್ಯ ಅದೆಷ್ಟೋ ಬಾರಿ ತನ್ನನ್ನು ತಾನು ಬದಲಾವಣೆ ಮಾಡಿಕೊಂಡರು ತಾಂಡವಗೆ ಇಷ್ಟವೇ ಆಗುತ್ತಿಲ್ಲ

ತನ್ನನ್ನು ತಾನು ಬದಲಾವಣೆ ಮಾಡಿಕೊಂಡ ಭಾಗ್ಯ ತನ್ನ ತನವನ್ನೇ ಮರೆತು ಬಿಟ್ಟಿದ್ದಾಳೆ. ಆದರೆ ಇದರಿಂದಾಗಿ ಸಾಕಷ್ಟು ನೋವು ಅನುಭವಿಸಿದ ಭಾಗ್ಯಗೆ ಇದೀಗ ಮತ್ತೊಂದು ಬರ ಸಿಡಿಲು ಎದುರಾಗಿದೆ. ತಾಳಿ ಕಟ್ಟಿದ ಗಂಡ ಮತ್ತೊಂದು ಹುಡುಗಿಯ ಜೊತೆಗೆ ಮದುವೆಗೆ ಸಿದ್ದವಾಗಿ ಕುಳಿತಿದ್ದಾನೆ. ಹೌದು ತಾಂಡವ ಶ್ರೇಷ್ಠ ಜೊತೆ ಮದುವೆಯಾಗಲು ಸಿದ್ದವಾಗಿದ್ದಾನೆ. ಭಾಗ್ಯಳನ್ನು ತಾಂಡವ ಕಾಲ ಕಸದಂತೆ ಕಂಡಿರುತ್ತಾನೆ. ಬಹಳ ನಿಕೃಷ್ಟವಾಗಿ ನಡೆಸಿಕೊಳ್ಳುತ್ತಾನೆ. ಆದರೆ ಅದೆಲ್ಲವನ್ನೂ ಕಂಡ ಭಾಗ್ಯ ಎನು ಅನ್ನಿಸಲೇ ಇಲ್ಲ. ಆದರೆ ತನ್ನ ಜಾಗಕ್ಕೆ ಮತ್ತೊಬ್ಬ ಹುಡುಗಿ ಬರುತ್ತಾಳೆ ಎಂದಾಗ ಯಾವ ಹುಡುಗಿಗೂ ಆ ನೋವನ್ನು ತಡೆದುಕೊಳ್ಳಲು ಸಾಧ್ಯ ಆಗುವುದೇ ಇಲ್ಲ. ಅಗತ್ಯಕ್ಕಿಂತ ಹೆಚ್ಚಾಗಿ ನೋವು ಅನುಭವಿಸುತ್ತಾರೆ.
ಶ್ರೇಷ್ಠ ಗೆ ತಾಳಿ ಕಟ್ಟಲು ಮುಂದಾದ ತಾಂಡವ
ಇತ್ತ ತಾಂಡವ ಶ್ರೇಷ್ಠ ಗೆ ತಾಳಿ ಕಟ್ಟಲು ಮುಂದಾದರೆ ಭಾಗ್ಯ ಮಾತ್ರ ತನಗೆ ಈ ತಾಳಿ ಬಹಳ ಭಾರ ಎನ್ನಿಸುತ್ತಿದೆ ಹಾಗೆಯೇ ಬಹಳಷ್ಟು ನೋವು ನನಗಾಗುತ್ತಿದೆ. ನನ್ನಿಂದ ಇದೆಲ್ಲವನ್ನೂ ತಡೆದುಕೊಳ್ಳಲು ಸಾಧ್ಯ ಆಗುತ್ತಿಲ್ಲ ಎಂದು ಬಹಳ ನೋವಲ್ಲಿ ಅತ್ತೆಯ ಬಳಿ ಹೇಳುತ್ತಾಳೆ. ನನ್ನನ್ನು ಇವರು ಒಪ್ಪಿಕೊಳ್ಳಲಿ ಎಂದು ನಾನು ಬದಲಾಗಿ ಬದಲಾಗಿ ನನ್ನ ತನವೇ ಕಳೆದು ಹೋಗಿ ಬಿಟ್ಟಿದೆ. ತಾಳಿ ಸರಪಳಿ ಆಗುತ್ತಿದೆ ಎಂದು ನನಗೆ ಅನ್ನಿಸುತ್ತಿದೆ. ಕಟ್ಟಿರುವ ತಾಳಿಗೆ ಗಂಡನೇ ಬೆಲೆ ಕೊಡಲಿಲ್ಲ ಎಂದ ಮೇಲೆ ತಾಳಿ ನನ್ನ ಕುತ್ತಿಗೆಯಲ್ಲಿದ್ದು ಎನು ಪ್ರಯೋಜನ ಎಂದು ಅಳುತ್ತಾ ತನ್ನ ಅತ್ತೆಯ ಬಳಿ ಅಳಲು ತೊಡಿಕೊಳ್ಳುತ್ತಾಳೆ. ತಾಳಿ ಎಂದರೆ ಬಹಳ ಪವಿತ್ರವಾದ ಬಂದ. ರಕ್ಷಾ ಕವಚ ಇದ್ದ ಹಾಗೆಯೇ ಇಂಥ ತಾಳಿ ನನಗೆ ಇದೀಗ ಬಹಳ ಭಾರವಾಗುತ್ತಿದೆ ಎಂದು ಬಹಳ ನೋವಿನಿಂದ ಅಳಲನ್ನು ತೋಡಿಕೊಳ್ಳುತ್ತಾಳೆ.
ಭಾಗ್ಯ ಸ್ಥಿತಿ ನೋಡಿ ನೊಂದುಕೊಂಡ ಕುಸುಮ
ಆಕೆಗೆ ಬಹಳಷ್ಟು ಬೇಸರ ಯಾಕೆಂದರೆ ತಾಂಡವ ಇನ್ನೊಂದು ಮದುವೆ ಆಗಲು ಹೊರಟಿದ್ದಾನೆ. ಇನ್ನು ಮುಂದೆ ತನ್ನ ಕೊರಳಲ್ಲಿ ತಾಂಡವ ಕಟ್ಟಿರುವ ತಾಳಿ ಇದ್ದರೂ ವೇಸ್ಟ್ ಎಂದು ಅತ್ತೆಯ ಬಳಿ ಹೇಳಿದಾಗ ಕುಸುಮ ಗೆ ಭಾಗ್ಯ ನೋವು ಏನೆಂಬುವುದು ಅರ್ಥ ಆಗುತ್ತದೆ. ಆಕೆಗೆ ಬಹಳಷ್ಟು ಸಂಕಟವಾಗುತ್ತದೆ. ಮುತ್ತಿನಂತಹ ಹೆಂಡತಿ ಮನೆಯಲ್ಲಿ ಇರಬೇಕಾದರೆ ಹೇಗಪ್ಪಾ ನಾನು ಆಕೆಯನ್ನು ಬಿಟ್ಟು ಕೊಡಲಿ ಎನ್ನುವ ಆಲೋಚನೆ. ಕುಸುಮಗೆ ಮಗನ ಮೇಲೆ ಅತಿಯಾದ ಪ್ರೀತಿ ಕಾಳಜಿ ಎಲ್ಲವೂ ಇದೆ ಆದರೆ ಆತ ಮಾಡುತ್ತಿರುವ ಯಾವ ಕೆಲಸವೂ ನೆಟ್ಟಗೆ ಇಲ್ಲ. ಅದನ್ನು ಆತನ ಬಳಿ ಕುಸುಮ ಅದೆಷ್ಟೇ ಬಾರಿ ತಿಳಿ ಹೇಳಿದರು ಆತ ಅರ್ಥ ಮಾಡಿಕೊಳ್ಳುತ್ತಿಲ್ಲ.
ಭಾಗ್ಯ ನಿರ್ಧಾರಕ್ಕೆ ದಂಗಾದ ತಾಂಡವ
ಇದೀಗ ಭಾಗ್ಯ ತೆಗೆದುಕೊಂಡ ಮಹಾ ನಿರ್ಧಾರದ ಬಗ್ಗೆ ತಾಂಡವ್ ಮಾತ್ರ ಶಾಕ್ ಆಗಿ ನೋಡುತ್ತಿದ್ದಾನೆ. ತಾಂಡವ ಗೆ ಮಾತೆ ಹೊರಡದಾಗಿದೆ. ಭಾಗ್ಯ ಕತ್ತಿನಲ್ಲಿದ್ದ ತಾಳಿಯನ್ನು ತೆಗೆದಿದ್ದಾಳೆ. ಇನ್ನು ಮೇಲೆ ತಾಳಿ ನನಗೆ ಬೇಡ. ತಾಳಿಯನ್ನು ನಾನು ಹಾಕಿಕೊಂಡು ಇರುವಷ್ಟು ದಿನ ನೋವಲ್ಲಿಯೇ ಇರಬೇಕಾಗುತ್ತದೆ ಎಂದು ಬಹಳ ನೊಂದುಕೊಂಡು ಹೇಳುತ್ತಾಳೆ. ಭಾಗ್ಯ ಮಾತಿಗೆ ಕುಸುಮ ನೊಂದುಕೊಂಡರು ಆಕೆಯ ನಿರ್ಧಾರಕ್ಕೆ ಸಾಥ್ ನೀಡುತ್ತಾಳೆ. ಮಗಳೇ ನೀನು ಯಾವ ನಿರ್ಧಾರ ತೆಗೆದುಕೊಂಡರೂ ಅದು ಸರಿಯಾಗಿಯೇ ಇರುತ್ತದೆ ಎಂದು ಭಾಗ್ಯ ಹೆಗಲ ಮೇಲೆ ಕೈ ಇಡುತ್ತಾಳೆ. ಇದೆಲ್ಲವನ್ನೂ ನೋಡಿದ ತಾಂಡವ ದಂಗಾಗುತ್ತಾನೆ. ಅಕ್ಕನ ದೃಢ ನಿರ್ಧಾರ ಕಂಡು ಪೂಜಾ ಗೆ ಬಹಳ ನೋವಾಗುತ್ತದೆ.


Click it and Unblock the Notifications











