Bhagya Lakshmi ; ತಾಂಡವ ಆಟಕ್ಕೆ ಫುಲ್ ಸ್ಟಾಪ್ ಹಾಕಿದ ಬಾಸ್, ಇನ್ನೇನಿದ್ದರೂ ಭಾಗ್ಯ ಆಟ ಶುರು !

By ಪೂರ್ವ

ಭಾಗ್ಯಳನ್ನು ತಾಂಡವ ಬಹಳಷ್ಟು ಅಲ್ಲಗಳೆದಿದ್ದ. ಆಕೆಗೆ ತಾನಿದ್ದರೆ ಮಾತ್ರ ಬೆಳೆಯಲು ಸಾಧ್ಯ ಇಲ್ಲವಾದರೆ ಒಂದು ಹೊತ್ತಿನ ಊಟಕ್ಕೂ ಪರದಾಟ ಮಾಡಬೇಕಾದ ಸ್ಥಿತಿ ಬರಬಹುದು ಎಂದು ತಾಂಡವ ಅಂದುಕೊಂಡಿದ್ದ.ಆದರೆ ತಾಂಡವ ಅಂದುಕೊಡಿದ್ದೆ ಒಂದು ಅಲ್ಲಿ ಆಗಿದ್ದೆ ಇನ್ನೊಂದು. ತಾಂಡವನ ಕಂಪನಿಗೆ ಲಗ್ಗೆ ಭಾಗ್ಯ ಇಟ್ಟಿದ್ದಾಳೆ. ಭಾಗ್ಯಳನ್ನು ನೋಡಿದ ತಾಂಡವ್ ಗೆ ಬಹಳಷ್ಟು ಕೋಪ ಬರುತ್ತದೆ. ಹಾಗೆಯೇ ಆಕೆಯ ಜೊತೆಗೆ ಬಹಳ ಜೋರಾಗಿ ಮಾತನಾಡುತ್ತಾನೆ. ಇದನ್ನು ನೋಡಿದ ತಾಂಡವನ ಬಾಸ್ ಆಕೆಯನ್ನ ನಾನೇ ಬರಲು ಹೇಳಿದೆ ಎಂದು ಹೇಳುತ್ತಾರೆ.

ಈ ಮಾತನ್ನು ಕೇಳಿದ ತಾಂಡವ ಹಾಗೂ ಶ್ರೇಷ್ಠ ಗೆ ಬಹಳ ಕೋಪ ಬರುತ್ತದೆ. ಶಾಕ್ ಆಗುತ್ತದೆ. ಭಾಗ್ಯ ಆಫೀಸ್ ಗೆ ಹೋಟೆಲ್ ವ್ಯವಸ್ಥೆಯನ್ನು ನೋಡಿಕೊಳ್ಳಲು ಹಾಗೆಯೇ ಅಲ್ಲಿ ಉತ್ತಮ ರೀತಿಯ ಅಡುಗೆ ಮಾಡುವ ಕೆಲಸಕ್ಕೆ ನೇಮಿಸಲಾಗುತ್ತದೆ. ಇದನ್ನು ಕೇಳಿದ ತಾಂಡವ ಗೆ ಇಲ್ಲಿಯೂ ಅಡುಗೆ ಕೆಲಸ ಮಾಡಲು ಬಂದಿದ್ದ ಎಂದು ಜೋರಾಗಿ ವ್ಯಂಗ್ಯವಾಡುತ್ತಾನೆ. ತಾಂಡವ ನ ಮಾತು ಕೇಳಿದ ಬಾಸ್ ಬಹಳ ಜೋರಾಗಿ ಇನ್ನು ಮೇಲೆ ನೀನು ಮತ್ತು ಶ್ರೇಷ್ಠ ಈ ಆಫೀಸಿಗೆ ಬರು ಅಗತ್ಯವಿಲ್ಲ ನಿಮ್ಮನ್ನು ನಾವು ಕೆಲಸದಿಂದ ತೆಗೆದು ಹಾಕಿದ್ದೇವೆ ಎಂದು ಹೇಳುತ್ತಾರೆ.

kannada-serial-bhagya-lakshmi-written-28th-april

ಈ ಮಾತು ಕೇಳಿದ ತಾಂಡವ ಗೆ ಶಾಕ್ ಆಗುತ್ತದೆ. ಹೀಗೆಲ್ಲ ಆಗುತ್ತದೆ ಎಂದು ಆತ ಅಂದುಕೊಂಡಿರಲಿಲ್ಲ. ತಾಂಡವ್ ಎಷ್ಟೇ ವಾದ ಮಾಡಿದರೂ ಆತನ ಬಾಸ್ ಕೇಳಲಿಲ್ಲ. ತಾಂಡವ ಅಲ್ಲಿಂದ ಹೊರಡದೆ ಇದ್ದಾಗ ಕೋಪಗೊಂಡ ಬಾಸ್ ಸೆಕ್ಯೂರಿಟಿಯನ್ನು ಕರೆಸಿ ಮನೆಯಿಂದ ಹೊರಗೆ ಹಾಕುವುದಾಗಿ ಹೇಳುತ್ತಾರೆ. ಈ ಮಾತು ಕೇಳಿ ತಾಂಡವ ಹಾಗೂ ಶ್ರೇಷ್ಠ ಅಲ್ಲಿಂದ ಹೊರಟು ಹೋಗುತ್ತಾರೆ. ಕುಸುಮ ಗೆ ಮಗನ ಬಗ್ಗೆ ಯೋಚನೆ ಮಾಡಿ ಬಹಳ ನೋವು ಆಗುತ್ತದೆ. ತಾಂಡವ ಗೆ ಇಂತಹ ಸ್ಥಿತಿ ಬಂತು ಎಂದು ಬಹಳ ಬೇಸರಗೊಳ್ಳುತ್ತಾರೆ. ಮನೆಗೆ ಎಲ್ಲರೂ ಬರುತ್ತಾರೆ . ತಾಂಡವನನ್ನು ನೆನೆದು ಬಹಳ ಬೇಸರ ಪಡುತ್ತಿರುವಾಗ ಸುಂದರಿ ಹಾಗೂ ಪೂಜಾ ಬಹಳ ಖುಷಿ ಪಡುತ್ತಾರೆ. ಇದನ್ನು ನೋಡಿದ ಭಾಗ್ಯಗೆ ಕೊಂಚ ಬೇಸರವಾಗುತ್ತದೆ.

ಖುಷಿಯಲ್ಲಿರುವ ಪೂಜಾ ಗೆ ಬುದ್ದಿ ಹೇಳಿದ ಅಕ್ಕ

ಆಕೆ ಪೂಜಾ ಹಾಗೂ ಸುಂದರಿ ಗೆ ಬುದ್ದಿ ಹೇಳುತ್ತಾಳೆ. ಆದರೆ ಪೂಜಾ ಮಾತ್ರ ಅಕ್ಕನ ಮಾತನ್ನು ಕೇಳುವುದಿಲ್ಲ. ಪೂಜಾ ಗೆ ಬಹಳ ಕೋಪ ತನ್ನ ಅಕ್ಕನ ಜೀವನ ಹಾಳು ಮಾಡಿದ ಪಾಪಿಯನ್ನು ನಾನು ಸುಮ್ಮನೆ ಬಿಡುವ ಮಾತೆ ಇಲ್ಲ.ಭಾವ ಮಾಡಿದ ತಪ್ಪನ್ನು ಈ ಜನ್ಮದಲ್ಲಿ ಬಡ್ಡಿ ಸಮೇತ ತೀರಿಸಬೇಕು ಎಂದು ಪೂಜಾ ಹೇಳುತ್ತಾಳೆ. ತಾಂಡವಗೆ ಭಂಡ ಭ್ರಮೆ. ಎಲ್ಲಾದರೂ ಒಳ್ಳೆಯ ಕೆಲಸ ಸಿಗುತ್ತೆ. ಏನು ಇದೊಂದೇ ದೊಡ್ಡ ಕಂಪನಿ ಇರೋದ ಎಂದು ಯೋಚನೆ ಮಾಡುತ್ತಿರುತ್ತಾನೆ ಹಾಗೆಯೇ ಯಾವುದೆಲ್ಲ ಕಂಪನಿಗೆ ಸೇರಬಹುದು ಎನ್ನುವ ಆಲೋಚನೆ ಮಾಡುತ್ತಿರುತ್ತಾನೆ.

ತಾಂಡವನ ಅಹಂಕಾರದ ಮಾತಿಗೆ ಫುಲ್ ಸ್ಟಾಪ್ ಯಾವಾಗ

ಆಗ ಅಲ್ಲಿಗೆ ಬಂದ ಶ್ರೇಷ್ಠ ನಯವಾಗಿ ಗಂಡನ ಜೊತೆಗೆ ಮಾತನಾಡುತ್ತಾಳೆ. ನನಗೆ ಖಂಡಿತವಾಗಿಯೂ ಕೆಲಸ ಸಿಗುತ್ತದೆ ಅಲ್ವಾ. ನನ್ನ ಮನದಲ್ಲಿ ಬಹಳಷ್ಟು ಅಳುಕು ನನ್ನನ್ನು ಕಾಡುತ್ತಿದೆ ಎಂದು ಬಹಳ ಭಯದಲ್ಲಿ ತಾಂಡವ ಜೊತೆ ಹೇಳುತ್ತಾಳೆ. ಆಕೆಯ ಮಾತನ್ನು ಕೇಳಿದ ತಾಂಡವ ನನಗೆ ಒಳ್ಳೆಯ ಕೆಲಸ ಸಿಕ್ಕೇ ಸಿಗುತ್ತದೆ. ನಾನು ಭಾಗ್ಯಗಿಂತ ಖಂಡಿತ ಒಳ್ಳೆಯ ಸ್ಥಿತಿಯಲ್ಲಿದ್ದೇವೆ ಆಕೆಗಿಂತ ಒಂದು ಸ್ಟೆಪ್ ಮೇಲೆ ಹೋಗಬೇಕೆೆನ್ನುವ ಆಲೋಚನೆ ಆತನ ಮಣದಲ್ಲಿರುತ್ತದೆ. ಈ ವಿಚಾರ ಸ್ನೇಹಾ ಗೆ ಅರ್ಥ ಆಗುತ್ತದೆ ಆದರೆ ಒಳ್ಳೆಯ ಕೆಲಸ ಸಿಕ್ಕರೆ ಉತ್ತಮ ಸಿಗಲಿಲ್ಲ ಎಂದಾದರೆ ಖಂಡಿತವಾಗಿಯೂ ನಮಗೆ ಕಷ್ಟವಿದೆ ಎಂದು ಆಲೋಚನೆ ಮಾಡುತ್ತಿರುತ್ತಾಳೆ.

More from Filmibeat

English summary
kannada serial Bhagya Lakshmi written 28th april
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X