Bhagya Lakshmi ;ತಾಯಿಗೆ ಸುಳ್ಳು ಹೇಳಿ ರೆಸಾರ್ಟ್‌ಗೆ ಹೋದ ತನ್ವಿ, ಭಾಗ್ಯ ಕೈ ರುಚಿಗೆ ಫಿದಾ ಆದ ತಾಂಡವ್ !
ತನ್ವಿ ತನ್ನ ತಾಯಿಯ ಕೈಯಿಂದ ಆದಷ್ಟು ತಪ್ಪಿಸಿಕೊಳ್ಳಲು ಟ್ರೈ ಮಾಡುತ್ತಿದ್ದಾಳೆ. ಆದರೆ ತನ್ವಿಯ ವರ್ತನೆ ಭಾಗ್ಯಗೆ ಕೊಂಚ ಬದಲಾವಣೆ ಕಾಣುತ್ತದೆ. ತನ್ವಿ ಕನ್ನಡ ತಾಯಿ ಹಾಗೂ ಅಜ್ಜಿಯ ಜೊತೆ ಸುಳ್ಳುಗಳ ಮೇಲೆ ಸುಳ್ಳನ್ನ ಹೇಳುತ್ತಲೇ ಇರುತ್ತಾಳೆ. ತನ್ವಿ ಮೈನ್ ಆಗಿ ಆಕೆಗೆ ಗೆಳೆಯರ ಜೊತೆ ರೆಸಾರ್ಟ್ ಗೆ ಹೋಗಬೇಕು. ಎಂದು ಎಂದುಕೊಳ್ಳುತ್ತಾಳೇ . ಆಕೆಗೆ ಬಹಳಷ್ಟು ಖುಷಿ. ಆದರೆ ಅಜ್ಜಿ ಹಾಗೂ ತಾಯಿಯ ಕಣ್ಣು ತಪ್ಪಿಸುವುದು ಹೇಗೆ ಎನ್ನುವ ಆಲೋಚನೆ ಆಕೆಗೆ ಮೂಡುತ್ತದೆ. ತನ್ವಿ ರಜಾ ದಿನದಂದು ಕೂಡ ಮನೆಯಲ್ಲಿ ಸ್ಪೆಷಲ್ ಕ್ಲಾಸ್ ಇದೆ ಎಂದು ಹೇಳಿ ಸುಳ್ಳು ಹೇಳುತ್ತಾಳೆ.
ಮೊದಲಿಗೆ ಕುಸುಮ ಬಹಳ ಜೋರಾಗಿ ರಜಾ ದಿನದಂದು ಏನದು ಸ್ಪೆಷಲ್ ಕ್ಲಾಸ್ ಎಲ್ಲ ನಿನ್ನ ಟೀಚರ್ ಗೆ ಫೋನ್ ಮಾಡು ನಾನು ಅವರ ಜೊತೆ ಮಾತನಾಡುತ್ತೇನೆ ಎಂದು ಹೇಳುತ್ತಾಳೆ. ಇದನ್ನು ಕೇಳಿದ ತನ್ವಿಗೆ ಬಹಳಷ್ಟು ಭಯವಾಗುತ್ತದೆ. ನಾನು ಶಾಲೆಗೆ ಹೋಗದಿದ್ದರೆ ನನಗೆ ತಾನೇ ಲಾಸ್ ಎಂದು ಹೇಳುತ್ತಾರೆ. ಈ ಮಾತನ್ನು ಕೇಳಿದ ಕುಸುಮಾ, ಸರಿ ಹಾಗಾದರೆ ನಾಳೆ ಸ್ಪೆಶಲ್ ಕ್ಲಾಸ್ ಆಗು. ಯಾವತ್ತು ನಾವು ಯುಗಾದಿ ಹಬ್ಬವನ್ನು ಆಚರಣೆ ಮಾಡಬಹುದು ಆದರೆ ಮತ್ತೆ ಕಳೆದು ಹೋದದ್ದನ್ನು ಪಡೆದುಕೊಳ್ಳಲು ಸಾಧ್ಯವಿಲ್ಲ ಆದ್ದರಿಂದ ನೀನು ನಾಳೆ ಸ್ಪೆಷಲ್ ಕ್ಲಾಸ್ ಗೆ ಹೋಗು ಹಬ್ಬ ಇನ್ನೊಂದು ದಿವಸ ಮಾಡಿದರೆ ಆಯ್ತು ಎಂದು ಹೇಳುತ್ತಾಳೆ.

ಈ ಮಾತನ್ನು ಕೇಳಿದ ಭಾಗ್ಯಗೆ ಕೊಂಚ ಸಮಾಧಾನವಾಗುತ್ತದೆ. ಇನ್ನು ಮರುದಿವಸ ತನ್ವಿ ಸ್ಕೂಲಿಗೆ ಹೋಗುವ ರೀತಿ ತಯಾರಾಗುತ್ತಾಳೆ. ಆದರೆ ಆಕೆಯ ಡ್ರೆಸ್ ನ್ನು ಭಾಗ್ಯ ನೋಡಿರುವುದಿಲ್ಲ. ಈ ಬಟ್ಟೆ ನಾನು ತೆಗೆದುಕೊಟ್ಟಿದ್ದು ಅಲ್ಲ ಎನ್ನುವ ಹಾಗೆ ಯೋಚನೆ ಮಾಡುತ್ತಿರುತ್ತಾಳೆ. ತನ್ವಿ ಜೊತೆ ಹೇಳುತ್ತಾಳೆ. ಇದ್ಯಾವುದು ಬಟ್ಟೆ. ಹೊಸ ಬಟ್ಟೆ ಯಾವಾಗ ತೆಗೆದುಕೊಂಡೆ ಎಂದಾಗ ತನ್ವಿ ಕೊಂಚ ಭಯಗೊಂಡು ಪಪ್ಪಾ ಕೊಡಿಸಿದರು ಎಂದು ಸುಳ್ಳು ಹೇಳುತ್ತಾಳೆ. ಆಕೆಯ ಮಾತನ್ನು ಕೇಳಿದ ಭಾಗ್ಯ ಸುಮ್ಮನಾಗುತ್ತಾರೆ. ಹಾಗೆಯೇ ಸ್ಕೂಲಿಗೆ ಹೋಗುತ್ತಾಳಲ್ಲ ಎಂದು ಮನದಲ್ಲಿ. ಅಂದುಕೊಳ್ಳುತ್ತಾಳೆ. ತನ್ವಿ ಸ್ಕೂಲಿಗೆ ಹೋಗುವ ನೆಪದಲ್ಲಿ ರೆಸಾರ್ಟ್ ನತ್ತ ಗೆಳೆಯರ ಜೊತೆ ಮುಖ ಮಾಡುತ್ತಾಳೆ
ಭಾಗ್ಯ ಕಣ್ಣು ತಪ್ಪಿಸಿ ರೆಸಾರ್ಟ್ ಗೆ ಹೋದ ತನ್ವಿ
ಆಕೆಗೆ ಗೆಳೆಯರ ಜೊತೆ ಕಾಲ ಹರಣ ಮಾಡುವುದೆಂದರೆ ಬಹಳಷ್ಟು ಇಷ್ಟ ಆದ್ದರಿಂದ ತಾಂಡವ ಹಾಗೂ ಭಾಗ್ಯ ಕಣ್ಣು ತಪ್ಪಿಸಿ ರೆಸಾರ್ಟ್ ಗೆ ಹೋಗುತ್ತಾಳೆ. ಆದರೆ ಈ ವಿಚಾರ ಶ್ರೇಷ್ಠವಾಗಿ ತಿಳಿದಿರುತ್ತದೆ ಹಾಗೆ ಯಾರ ಜೊತೆಯೂ ಈ ಬಗ್ಗೆ ಮಾತನಾಡಿರುವುದಿಲ್ಲ. ಭಾಗ್ಯ ಮನೆಯ ಊಟ ಬ್ಯುಸಿನೆಸ್ ಮಾಡುತ್ತಿರುತ್ತಾಳೆ. ಭಾಗಿಯಾಗಿ ತಾಂಡವನ ಆಫೀಸ್ ನಿಂದಲೇ ಒಂದು ಆರ್ಡರ್ ಬರುತ್ತದೆ ಇದನ್ನು ಗಮನಿಸಿದ ಭಾಗ್ಯಗೆ ಕೊಂಚ ಭಯವಾದರೂ ಕೂಡ ನನ್ನ ಕೆಲಸವನ್ನು ನಾನು ಮಾಡುವುದರಲ್ಲಿ ತಪ್ಪೇನೂ ಎಂದು ಅನಿಸಿತು ಆದಕಾರಣ ಭಾಗ್ಯ ತಾಂಡವನ ಆಫೀಸಿಗೆ ಮನೆಯ ಊಟವನ್ನು ಟಿಫನ್ ಕ್ಯಾರಿಯರ್‌ನಲ್ಲಿ ಕಳುಹಿಸಿ ಕೊಡುತ್ತಾಳೆ. ಶ್ರೇಷ್ಠಗೆ ಈ ಬಗ್ಗೆ ಯಾವುದು ಕೂಡ ತಿಳಿದಿರುವುದಿಲ್ಲ.
ತಾಂಡವ ನ ಬಳಿ ಸುಳ್ಳು ಹೇಳಿದ ಶ್ರೇಷ್ಠ
ಶ್ರೇಷ್ಠಗೆ ತನ್ನ ಗಂಡ ತಾಂಡವನನ್ನ ಹೇಗಾದರೂ ಮಾಡಿ ಉಳಿಸಿಕೊಳ್ಳಬೇಕು ಎನ್ನುವ ಭರದಲ್ಲಿ ಭಾಗ್ಯ ಮಾಡುತ್ತಿದ್ದ ಮನೆ ಊಟದ ಪಾರ್ಸಲ್ ತಾಂಡವನ ಆಫೀಸ್ಗೆ ತರಿಸಿಕೊಳ್ಳುತ್ತಾರೆ. ಶ್ರೇಷ್ಠ ಆ ಊಟವನ್ನು ತಾಂಡವ ಬಳಿಗೆ ತೆಗೆದುಕೊಂಡು ಬರುತ್ತಾಳೆ. ಬಳಿಕ ಹೇಳುತ್ತಾಳೆ, ತಾನು ಇವತ್ತು ಬಹಳ ಚೆನ್ನಾಗಿಯೇ ಅಡುಗೆ ಮಾಡಿದ್ದೇನೆ. ನೀನು ಇವತ್ತು ಬೆಳಿಗ್ಗೆ ಕೂಡ ಊಟ ಮಾಡಿಲ್ಲ ಅದಕ್ಕಾಗಿ ನಾನು ಈ ಊಟದ ಕ್ಯಾರಿಯರ್ ಅನ್ನ ಹಿಡಿದುಕೊಂಡು ಆಫೀಸಿಗೆ ಬಂದೆ ಎಂದು ಶ್ರೇಷ್ಠ ಹೇಳುತ್ತಾಳೆ. ಶ್ರೇಷ್ಠ ಮಾತಿಗೆ ತಾಂಡವ ಒಮ್ಮೆ ಭಯಗೊಳ್ಳುತ್ತಾನೆ. ತಾಂಡವ ಮಾತ್ರ ಕೊಂಚ ಭಯದಿಂದಲೇ ಶ್ರೇಷ್ಠ ತಂದಿದ್ದ ಊಟ ಮಾಡುತ್ತಾನೆ ಆತನಿಗೆ ಬಹಳ ಖುಷಿಯಾಗುತ್ತದೆ. ಊಟ ಮಾತ್ರ ಬಹಳ ಅದ್ಭುತವಾಗಿರುತ್ತದೆ. ತಾಂಡವ ಗೆ ಆ ಊಟ ತಯಾರು ಮಾಡಿರುವುದು ಭಾಗ್ಯ ಎನ್ನುವ ವಿಚಾರ ಆತನಿಗೆ ತಿಳಿಯಲಿಲ್ಲ. ಶ್ರೇಷ್ಠ ಇಷ್ಟು ಚೆನ್ನಾಗಿ ಅಡುಗೆ ಮಾಡುತ್ತಾಳೆ ಎನ್ನುವ ಅನುಮಾನ ತಾಂಡವನನ್ನು ಕಾಡದೇ ಇರದು.


Click it and Unblock the Notifications











