Bhagya Lakshmi;ತಾಂಡವನ ದುರಂಹಂಕಾರಕ್ಕೆ ಬಿತ್ತು ಕೊಡಲಿಯೇಟು, ಖುಷಿಪಟ್ಟ ಪ್ರೇಕ್ಷಕರು..!
ಭಾಗ್ಯ ತನ್ನ ತಂಗಿಗೆ ಬುದ್ದಿ ಮಾತು ಹೇಳುತ್ತಾಳೆ. ಹಾಗೆಯೇ ಪೂಜಾ ಇನ್ನೂ ಮೇಲೆ ಇಂತಹ ಕೆಟ್ಟ ಮಾತುಗಳಿಗೆ ಆಸ್ಪದ ಕೊಡಬಾರದು ಎನ್ನುವ ಅರ್ಥದಲ್ಲಿ ಭಾಗ್ಯ ತನ್ನ ತಂಗಿಗೆ ತಾಕೀತು ಮಾಡುತ್ತಾಳೆ. ಆಕೆಗೆ ಬಹಳ ಬೇಸರ ಕಾಡುತ್ತದೆ. ಎಷ್ಟೇ ಆದರೂ ತನ್ನ ಗಂಡ. ಆತನಿಗೆ ಇಂತಹ ಸ್ಥಿತಿ ಬರಬಾರದು ಎನ್ನುವ ಯೋಚನೆ ಮೂಡದೇ ಇರದು.
ಇತ್ತ ಸುನಂದಾ ಮಾತ್ರ ಪೂಜಾ ಮದುವೆಯ ಬಗ್ಗೆಯೇ ಚಿಂತೆ ಮಾಡುತ್ತಿರುತ್ತಾಳೆ. ಸುನಂದಗೆ ಮಗಳ ಚಿಂತೆಯೇ ಬಹಳ ದೊಡ್ಡದಾಗಿ ಕಾಡುತ್ತದೆ. ಭಾಗ್ಯ ಅದೆಷ್ಟೇ ಬಾರಿ ಹೇಳಿದರು ಸುನಂದಾ ಕಿವಿಗೆ ಈ ವಿಚಾರ ಬೀಳುವುದೇ ಇಲ್ಲ.

ಆದರೆ ಇದೀಗ ಸ್ವತಃ ಕುಸುಮನೇ ಸುನಂದಾ ಬಳಿ ನಾನೇ ಆಕೆಗೆ ಹುಡುಗನನ್ನು ಹುಡುಕಿದ್ದೇನೆ ನಾನು ಮಾತು ಕೊಟ್ಟ ಬಳಿಕ ಮುಗಿಯಿತು ನೀವು ಅದರ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ ಎನ್ನುವ ಮಾತನ್ನು ಹೇಳುತ್ತಾಳೆ.
ಈ ಮಾತು ಕೇಳಿದ ಸುನಂದಾ ಗೆ ಹಾಲು ಕುಡಿದಷ್ಟು ಸಂತೋಷವಾಗುತ್ತದೆ. ಅಬ್ಬಾ ಹೇಗಾದರೂ ಮಾಡಿ ನನ್ನ ಮಗಳಿಗೆ ಒಳ್ಳೆಯ ಗಂಡು ಬಂದರೆ ಸಾಕು ಎನ್ನುವ ರೀತಿಯಲ್ಲಿ ಮಾತನಾಡುತ್ತಾಳೆ ಸುನಂದಾ. ಲಕ್ಷ್ಮೀ ಗೆ ಒಳ್ಳೆಯ ಹುಡುಗನನ್ನು ನೋಡಿ ಮದುವೆ ಮಾಡಿದ್ದೇನೆ. ನನಗೆ ಇದೇನು ದೊಡ್ಡ ವಿಚಾರವೇ ಅಲ್ಲ. ನೀವು ಇದರ ಬಗ್ಗೆ ಚಿಂತೆ ಮಾಡಬೇಡಿ ಎನ್ನುವ ಮಾತನ್ನು ಕುಸುಮ ಹೇಳುತ್ತಾಳೆ.
ಇನ್ನು ತನ್ವಿ ರಿಸಲ್ಟ್ ಬಗ್ಗೆಯೇ ಎಲ್ಲರಿಗೂ ಕೊಂಚ ಆಲೋಚನೆ. ತನ್ವಿ ರಿಸಲ್ಟ್ ಹೇಗಾಗುತ್ತೆ ಎನ್ನುವ ಆಲೋಚನೆ ಮೂಡದೇ ಇರದು. ಭಾಗ್ಯ ಗೆ ಬಹಳ ಟೆನ್ಶನ್ ಶುರುವಾಗುತ್ತದೆ. ಮಗಳು ಯಾವ ರೀತಿ ಪರೀಕ್ಷೆಗೆ ತಯಾರಿ ನಡೆಸಿದ್ದಾಳೆ ಎನ್ನುವ ಆಲೋಚನೆ ಆಕೆಗೆ ಮೂಡದೇ ಇರದು.
ಕೂಡಲೇ ತನ್ವಿ ರಿಸಲ್ಟ್ ಬರುತ್ತದೆ ಶೇಕಡಾ 91 ಮಾರ್ಕ್ಸ್ ಪಡೆದುಕೊಳ್ಳುತ್ತಾಳೆ.ಆಕೆಗೆ ಬಹಳ ಖುಷಿಯಾಗುತ್ತದೆ. ಮನೆಯವರ ಮುಖದಲ್ಲಿ ಮಂದಹಾಸ ಮೂಡುತ್ತದೆ.ಭಾಗ್ಯ ಗೆ ಬಹಳ ಖುಷಿ ಆಗುತ್ತದೆ. ಈ ಖುಷಿಯಲ್ಲಿ ತನ್ವಿ ತನ್ನ ತಂದೆಯ ಬಳಿ ಈ ವಿಚಾರ ಹೇಳಬೇಕು ಎನ್ನುವ ಆಲೋಚಣೆಯಲ್ಲಿರುತ್ತಾಳೆ.
ತಂದೆಯ ಬಳಿ ಖುಷಿ ಹಂಚಿಕೊಳ್ಳಲು ಕರೆ ಮಾಡಿದ ತನ್ವಿ
ತಂದೆಯ ಬಳಿ ಈ ವಿಚಾರವನ್ನು ಹೇಳಿದರೆ ಖಂಡಿತವಾಗಿಯೂ ತಂದೆಗೆ ಖುಷಿ ಆಗುತ್ತದೆ ಎಂದುಕೊಂಡು ಎಲ್ಲಾ ವಿಚಾರ ಹೇಳಬೇಕು ಎಂದು ತುದಿಗಾಲಲ್ಲಿ ಇರುತ್ತಾಳೆ. ಆದರೆ ತಾಂಡವ ತನ್ವಿ ಕಾಲ್ ತೆಗೆಯುವುದಿಲ್ಲ. ತಾಂಡವ ಮಾಡಿದ ರೀತಿಯನ್ನು ನೋಡಿ ಆಕೆಗೆ ಬಹಳ ಬೇಸರವಾಗುತ್ತದೆ .
ತನ್ವಿ ಹಾಗೂ ಮನೆಯವರು ಒಂದು ದಿನ ಹೊರಗಡೆ ಊಟ ಮಾಡಿಕೊಂಡು ಬರುವ ಯೋಚನೆ ಮಾಡುತ್ತಾರೆ ಸುನಂದಾ ಹಾಗೂ ಕುಸುಮಗೆ ಈ ವಿಚಾರ ಇಷ್ಟವೇ ಇರುವುದಿಲ್ಲ ಆದರೂ ಮಕ್ಕಳ ಒತ್ತಾಯದ ಮೇರೆಗೆ ಹೊರಗಡೆ ಹೊರಡುತ್ತಾರೆ.
ಬಾಸ್ ಎದುರು ಮೊಂಡಾಟ ತೋರಿಸಿದ ತಾಂಡವ ಗೆ ತಕ್ಕ ಶಾಸ್ತಿ
ಇತ್ತ ತಾಂಡವ ಗೆ ಬಹಳಷ್ಟು ಸೊಕ್ಕು. ತಾನು ಏನೇ ಮಾಡಿದರು ನಡೆಯುತ್ತೆ ಎನ್ನುವ ಧಿಮಾಕು.ಕೆಲವು ಕಂಪನಿಗೆ ರೆಡಿಯಾಗಿ ಹೊರಡುತ್ತಾನೆ. ಶ್ರೇಷ್ಠ ಗೆ ಕೂಡ ತಾನು ಸೇರಿದ ಕಂಪನಿಯಲ್ಲಿಯೇ ಕೆಲಸ ಕೊಡಿಸುವುದಾಗಿ ಭರವಸೆ ನೀಡುತ್ತಾನೆ. ಇನ್ನು ಕಂಪನಿಯ ಒಳಗೆ ಪ್ರವೇಶಿಸಿದ ತಾಂಡವ ನ್ಸ್ ರೀತಿ ನೀತಿಯನ್ನು ನೋಡಿಯೇ ಅಲ್ಲಿರುವ ಬಾಸ್ ಗೆ ಎಲ್ಲವೂ ಅರ್ಥವಾಗುತ್ತದೆ.
ತಾನು ಒಂದು ಕಂಪನಿಯಲ್ಲಿ ಮ್ಯಾನೇಜರ್ ಆಗಿ ದುಡಿಯುತ್ತಿದ್ದ. ನನಗೆ ಆ ಕಂಪನಿ ಕೊಡುತ್ತಿದ್ದ ಹಣಕ್ಕಿಂತ ಶೇಕಡಾ ಅರವತ್ತರಷ್ಟು ಹೆಚ್ಚು ಹಣ ಬೇಕು ಹಾಗೆಯೇ ನನಗೆ ಒಬ್ಬಳು ಅನುಭವಿ ಪಿಎ ಇದ್ದರೆ ಇನ್ನೂ ಚೆನ್ನ ಎಂದು ಹೇಳುತ್ತಾನೆ.
ಈ ಮಾತು ಕೇಳಿದ ಅಲ್ಲಿದ್ದ ಬಾಸ್ ಗೆ ಕೊಂಚ ಕೋಪ ಬರುತ್ತದೆ. ಕೂಡಲೇ ತಾಂಡವನನ್ನು ಎದ್ದು ನಿಲ್ಲಲು ಹೇಳುತ್ತಾರೆ. ಆತನ ಮಾತು ಕೇಳಿಯೇ ಆ ಕಂಪನಿಯ ಬಾಸ್ ಸಿಕ್ಕ ಪಟ್ಟೆ ಕ್ಲಾಸ್ ತೆಗೆದುಕೊಳ್ಳುತ್ತಾರೆ.ಕೆಲಸ ಕಳೆದುಕೊಂಡ ಒಬ್ಬ ಕೆಲಸಗಾರ ಹೀಗೆಲ್ಲ ಮಾತನಾಡಬಹುದು ಎನ್ನುವ ರೀತಿ ತಾಂಡವ್ ಇರುವುದಿಲ್ಲ. ಆತನಿಗೆ ಆತನ ದುರಹಂಕಾರ ಹೆಚ್ಚಾಗಿರುತ್ತದೆ.


Click it and Unblock the Notifications











