Bhagya Lakshmi ;ತಾಂಡವನಿಗೆ ಮತ್ತೆ ಕೆಲಸ ಸಿಕ್ತು, ಅಸಲಿ ಆಟ ಶುರು ಎಂದ ಶ್ರೇಷ್ಠ !
ಭಾಗ್ಯಗೆ ಬಹಳ ಬೇಸರ ಕಾಡುತ್ತದೆ. ಎಲ್ಲಾ ತನ್ನಿಂದಲೇ ಆಗುತ್ತಿದೆ ಎನ್ನುವ ಭಾವನೆ ಆಕೆಗೆ ಮೂಡುತ್ತದೆ. ಹಾಗೆಯೇ ಅತ್ತೆ ಹಾಗೂ ಮಕ್ಕಳಿಗೆ ಸಮಾಧಾನ ಮಾಡುತ್ತಾಳೆ ಭಾಗ್ಯ. ಭಾಗ್ಯ ಬಳಿ ಮಗ ಕೇಳಿದ ಪ್ರಶ್ನೆಗಳಿಗೆ ಉತ್ತರವೇ ಇರುವುದಿಲ್ಲ. ತನ್ನ ತಂದೆಗೆ ಯಾಕೆ ಅಷ್ಟು ಅವಮಾನ ಆಗುತ್ತಿದೆ. ಯಾವತ್ತೂ ತನ್ನ ತಂದೆಗೆ ಕಷ್ಟ ಆಗಬಾರದು. ಅಮ್ಮ ನಿನಗೆ ಕೆಲಸ ಸಿಗದಿರುವಾಗ
ನೀನು ಅದೆಷ್ಟು ಕಷ್ಟ ಪಟ್ಟೆ ಆದರೆ ಈಗ ಅದೇ ಸ್ಥಿತಿ ಅಪ್ಪನಿಗೆ ಬಂದಿದೆ. ಅಪ್ಪನನ್ನು ಈ ಸ್ಥಿತಿಯಲ್ಲಿ ನೋಡಲು ಆಗುತ್ತಿಲ್ಲ ಎಂದು ಭಾಗ್ಯ ಬಳಿ ಗುಂಡಣ್ಣ ಹೇಳಿದಾಗ ಭಾಗ್ಯಗೆ ಬಹಳ ಬೇಸರವಾಗುತ್ತದೆ. ಹಾಗೆಯೇ ಕುಸುಮ ಬಳಿಗೆ ಬಂದ ಭಾಗ್ಯ ಅತ್ತೆ ನನಗೆ ನಿಮ್ಮ ಮನದಲ್ಲಾಗುತ್ತಿರುವ ಯುದ್ಧ ಅರ್ಥ ಆಗುತ್ತಿದೆ ಎಂದು ಹೇಳುತ್ತಾಳೆ.

ಆದರೆ ನಾನು ಒಂದು ಭರವಸೆಯನ್ನು ನಿಮಗೆ ನೀಡುತ್ತೇನೆ. ಅವರಿಗೆ ಪುನಃ ಕೆಲಸ ಸಿಗುವ ಹಾಗೆ ಮಾಡುತ್ತೇನೆ. ನನಗೆ ಬಹಳ ಬೇಸರ ಆಗುತ್ತಿದೆ ಎಂದು ಭಾಗ್ಯ ಹೇಳಿದಾಗ, ಕುಸುಮ ನನಗೆ ನನ್ನ ಮಗನ ದುರಹಂಕಾರದ ಬಗ್ಗೆ ಚೆನ್ನಾಗಿ ತಿಳಿದಿದೆ ಆದರೆ ಆತ ಜೀವನದಲ್ಲಿ ಯಾವತ್ತೂ ಸೋಲನ್ನ ಒಪ್ಪಿಕೊಳ್ಳುವುದಿಲ್ಲ ಎಂದು ಹೇಳುತ್ತಾಳೆ.
ಮುಂದುವರೆದು ಅದರಿಂದಾಗಿ ನನಗೆ ಕೊಂಚ ಭಯ ಕಾಡುತ್ತಿದೆ ತಾಂಡವ ಯಾವತ್ತೂ ಕೂಡ ಯಾರನ್ನು ಡಿಪೆಂಡ್ ಆದವನಲ್ಲ, ಆದರೆ ಆತನ ಜೊತೆಗೆ ಇರುವ ಶ್ರೇಷ್ಠ ಬಗ್ಗೆ ನನಗೆ ಕೊಂಚ ಅನುಮಾನ ಕಾಡುತ್ತಿದೆ ಕೆಲಸ ಇಲ್ಲದೆ ಖಾಲಿ ಕುಳಿತಿರುವ ತಾಂಡವನ ಬಗ್ಗೆ ಶ್ರೇಷ್ಠ ಖಂಡಿತವಾಗಿಯೂ ಸುಮ್ಮನಿರುವ ಮಾತೆ ಇಲ್ಲ ಎನ್ನುವ ಮಾತನ್ನು ಕುಸುಮ ಹೇಳುತ್ತಾಳೆ.
ಇಷ್ಟೇ ಅಲ್ಲದೇ ತಾಂಡವ ಗೆ ಶ್ರೇಷ್ಠ ಖಂಡಿತವಾಗಿಯೂ ಏನಾದರು ಮಾಡಿಯೇ ಮಾಡುತ್ತಾಳೆ. ತಾಂಡವ ನ ಆರೋಗ್ಯ ಚೆನ್ನಾಗಿಲ್ಲ.ಇನ್ನೂ ಹೇಗೆ ಶ್ರೇಷ್ಠ ತಾಂಡವನನ್ನು ನೋಡಿಕೊಳ್ಳುತ್ತಾಳೆ. ಆಕೆಗೆ ತಾಂಡವನ ಮೇಲೆ ಅಷ್ಟೊಂದು ಪ್ರೀತಿ ಇಲ್ಲ ಆತ ಸಂಪಾದಿಸುವ ಹಣದ ಮೇಲೆಯೇ ಶ್ರೇಷ್ಠ ಕಣ್ಣು ಇದೆ ಎಂದು ಕುಸುಮ ಹೇಳುತ್ತಾಳೆ.
ಇತ್ತ ತಲೆ ಕೆಡಿಸಿಕೊಂಡಿರುವ ಭಾಗ್ಯ ಏನಾದರು ಮಾಡಲೇಬೇಕು ತನ್ನ ಗಂಡನಿಗೆ ಹೇಗಾದರೂ ಒಂದು ಕೆಲಸವನ್ನು ಕೊಡಲೇಬೇಕು ಇಲ್ಲವಾದರೆ ಖಂಡಿತವಾಗಿಯೂ ತನ್ನ ಮಕ್ಕಳು ತನ್ನ ತಂದೆಯನ್ನು ಬಹಳ ಕೀಳಾಗಿ ನೋಡುತ್ತಾರೆ ಎಂದು ಮನದಲ್ಲಿ ಅಂದುಕೊಳ್ಳುತ್ತಾಳೆ. ಆತಂಕಕ್ಕೆ ಒಳಗಾಗುತ್ತಾಳೆ.
ಮತ್ತೊಂದೆಡೆ ತಾಂಡವ ಮನೆಯಲ್ಲಿ ಕುಳಿತು ಬಹಳ ತಲೆ ಬಿಸಿ ಮಾಡಿಕೊಂಡಿರುತ್ತಾನೆ. ಎಲ್ಲ ರೀತಿಯ ಇಂಟರ್‌ವ್ಯೂವ್‌ನಲ್ಲಿ ನನಗೆ ಕೆಲಸವೇ ಸಿಗಲಿಲ್ಲ ದೊಡ್ಡ ದೊಡ್ಡ ಕಂಪನಿಗಳಲ್ಲಿ ಕೂಡ ಕೆಲಸವನ್ನು ಕೇಳಿ ಆಯ್ತು ಆದರೆ ಯಾವುದೇ ಪ್ರಯೋಜನ ಇಲ್ಲ ಇನ್ನೇನು ಮಾಡುವುದು ಎನ್ನುವ ಯೋಚನೆಯನ್ನು ತಾಂಡವ್ ಮಾಡುತ್ತಿರುತ್ತಾನೆ.
ಕೆಲಸ ಸಿಗದೇ ಕುಗ್ಗಿ ಹೋದ ತಾಂಡವ
ಇದರಿಂದ ತಾಂಡವ ಬಹಳ ಮನನೊಂದು ಮನೆಯಲ್ಲಿ ಕುಳಿತಿರುವಾಗ ಶ್ರೇಷ್ಠ ಸಮಾಧಾನ ಮಾಡುತ್ತಾಳೆ. ಈ ಕೆಲಸ ಇಲ್ಲದಿದ್ದರೆ ಇನ್ನೊಂದು ಕೆಲಸ ಖಂಡಿತವಾಗಿಯೂ ನಿಮಗೆ ಸಿಕ್ಕೆ ಸಿಗುತ್ತದೆ ನೀವು ಈ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ ಎಂದು ಸಮಾಧಾನ ಮಾಡುತ್ತಿರುವಾಗ ಮುಂಚೆ ಕೆಲಸ ಮಾಡುತ್ತಿದ್ದ ಆಫೀಸಿನಿಂದ ತಾಂಡವ ಗೆ ಕರೆ ಬರುತ್ತದೆ.
ಕರೆ ಬಂದ ಕೂಡಲೇ ಫೋನ್ ಸ್ವೀಕರಿಸಿ ಮಾತನಾಡಿದ ತಾಂಡವಗೆ ಬಹಳ ಆಶ್ಚರ್ಯವಾಗುತ್ತದೆ. ಯಾಕೆಂದರೆ ಆ ಕಡೆಯಿಂದ ನಾಳೆ ತಾಂಡವ ಅವರೇ ಆಫೀಸಿಗೆ ಬನ್ನಿ ನಾಳೆ ನಿಮ್ಮ ಜೊತೆ ಸ್ವಲ್ಪ ಮಾತನಾಡಬೇಕಿದೆ ಎಂದು ಹೇಳುತ್ತಾರೆ. ಈ ಮಾತು ಕೇಳಿದ ತಾಂಡವಗೆ ತುಂಬಾನೇ ಖುಷಿಯಾಗುತ್ತೆ. ಖುಷಿ ಖುಷಿಯಾಗಿಯೇ ಖಂಡಿತವಾಗಿಯೂ ತಪ್ಪದೇ ನಾಳೆ ಬಂದೆ ಬರುತ್ತೇನೆ ಎಂದು ಹೇಳುತ್ತಾನೆ.
ಬಾಸ್ ಮಾತು ಕೇಳಿ ಖುಷಿಪಟ್ಟ ತಾಂಡವ
ತಾಂಡವ ಒಂದು ಫ್ಲಾಟ್ ತೆಗೆದುಕೊಳ್ಳುವ ಯೋಜನೆಯಲ್ಲಿ ಅಡ್ವಾನ್ಸ್ ಕೂಡ ಕೊಟ್ಟಿರುತ್ತಾನೆ. ಆದರೆ ಅದರ ಸೆಟಲ್ಮೆಂಟನ್ನು ನಾಳೆಯೇ ಮಾಡಬೇಕು ಎಂದು ಫ್ಲಾಟ್ ಓನರ್ ಕರೆ ಮಾಡಿ ತಾಂಡವಗೆ ಹೇಳುತ್ತಾರೆ. ಆ ತಲೆನೋವು ಕೂಡ ತಾಂಡವ ನನ್ನ ಭಾದಿಸುತ್ತದೆ.
ಮರುದಿವಸ ತಾಂಡವ ಹಾಗೂ ಶ್ರೇಷ್ಠ ಮುಂಚೆ ಕೆಲಸ ಮಾಡುತ್ತಿದ್ದ ಕಂಪನಿಗೆ ಹೋಗುತ್ತಾರೆ. ತಾಂಡವ ಹಾಗೂ ಶ್ರೇಷ್ಠ ಇವರಿಬ್ಬರೂ ಕಂಪನಿ ಒಳಗೆ ನಿಂತು ಕೊಂಡಿರಬೇಕಾದರೆ ಭಾಗ್ಯ ಆಫೀಸ್‌ನ ಒಳಗೆ ಬರುತ್ತಾಳೆ.
ಭಾಗ್ಯಳನ್ನು ನೋಡಿ ತಾಂಡವ್ ಬಹಳಷ್ಟು ಅಣಕ ಮಾಡುತ್ತಾನೆ. ತಾಂಡವ್‌ನ ಈ ವರ್ತನೆಗೆ ಭಾಗ್ಯ ಏನೆಂದರೆ ಏನು ಹೇಳುವುದಿಲ್ಲ. ಬದಲಿಗೆ ಹಾಗೆಯೇ ಕೊಂಚ ಮುಗುಳು ನಕ್ಕು ಮುಂದೆ ಹೊರಟು ಹೋಗುತ್ತಾಳೆ.
ಭಾಗ್ಯ ಮುಖ ನೋಡಿದಾಗಲೇ ತಾಂಡವ ಹಾಗೂ ಶ್ರೇಷ್ಠ ಗೆ ಬಹಳ ಕೋಪ ಬರುತ್ತದೆ. ಆದರೆ ಭಾಗ್ಯ ಅದ್ಯಾವುದಕ್ಕೂ ಕ್ಯಾರೆ ನದೆ ಅಲ್ಲಿಂದ ಹೊರಟು ಹೋಗುತ್ತಾಳೆ. ಇನ್ನು ತಾಂಡವ್‌ನನ್ನು ಬಾಸ್ ಚೇಂಬರಿಗೆ ಕರೆಯುತ್ತಾರೆ. ತಾಂಡವನ ಜೊತೆ ಶ್ರೇಷ್ಠ ಕೂಡ ಚೇಂಬರ್ ಒಳಗೆ ಬರುತ್ತಾಳೆ.
ಆಗ ಬಾಸ್ ತಾಂಡವನ ಬಳಿ ನಿಮಗೆ ಬೇರೆ ಕಂಪನಿಯಲ್ಲಿ ಕೆಲಸವಾಯಿತಾ ಎಂದು ಕೇಳಿದಾಗ ತಾಂಡವ್‌ಗೆ ಕೊಂಚ ಇರಿಸು ಮುರಿಸು ಆಗುತ್ತದೆ. ಯಾವುದೇ ಕಂಪನಿಯಲ್ಲಿ ಕೆಲಸವಾಗಿಲ್ಲ ಎಂದು ತಾಂಡವ ಮೆತ್ತಗೆ ಹೇಳುತ್ತಾನೆ. ಇದೆಲ್ಲವನ್ನ ಕೇಳಿದ ಕಂಪನಿಯ ಬಾಸ್ ನಿಮಗೇನು ಅನಿಸುವುದಿಲ್ಲ ಎಂದಾದರೆ ಇಲ್ಲಿ ಮತ್ತೆ ಕೆಲಸವನ್ನ ಮುಂದುವರಿಸಬಹುದು ಎಂದು ಹೇಳುತ್ತಾರೆ.
ಈ ಮಾತು ಕೇಳಿದ ತಾಂಡವ ಸೊಕ್ಕಿನಲ್ಲಿ ಮಾತನಾಡುತ್ತಾನೆ. ಆದರೆ ತಾಂಡವನ ಜಂಬದ ಮಾತುಗಳನ್ನು ಕೇಳಿದ ಬಾಸ್ ನೀವು ಈ ರೀತಿ ಜಂಬ ತೋರಿಸುವುದಾದರೆ ಖಂಡಿತವಾಗಿಯೂ ಕೆಲಸ ಮಾಡುವ ಅವಶ್ಯಕತೆ ಇಲ್ಲ, ಈಗಲೇ ಕೆಲಸದಿಂದ ಹೊರಟು ಹೋಗಬಹುದು, ಇಲ್ಲಿ ಇರಬೇಕಾದರೆ ನೀವು ಸರಿಯಾಗಿ ಕೆಲಸವನ್ನ ಮಾಡಬೇಕು ಎಂದು ಹೇಳಿದಾಗ ತಾಂಡವ ಸರಿ ಆಯ್ತು ಸರಿ ಎಂದು ಒಪ್ಪಿಕೊಳ್ಳುತ್ತಾನೆ.
ಭಾಗ್ಯ ಮೇಲೆ ಹಲ್ಲು ಮಸೆಯುತ್ತಿರುವ ತಾಂಡವ
ಸದ್ಯದ ಪರಿಸ್ಥಿತಿಯಲ್ಲಿ ಭಾಗ್ಯಗೆ ತಾಂಡವ್‌ಗೆ ಒಂದು ಒಳ್ಳೆಯ ಕೆಲಸ ಸಿಕ್ಕರೆ ಸಾಕು ಎನ್ನುವ ಆಲೋಚನೆ ಇರುತ್ತೆ. ಯಾಕೆಂದರೆ ತಿಂಗಳಾದರೆ ತನ್ನ ಕಮಿಟ್ಮೆಂಟ್‌ಗಳನ್ನು ತೀರಿಸಲು ಹಣ ಕಟ್ಟಲು ಒಂದು ಬಿಡಿ ಗಾಸು ಕೂಡ ತಾಂಡವ್ ಬಳಿ ಇರುವುದಿಲ್ಲ. ಆದರೆ ತಾಂಡವನ ಅಹಂಕಾರ ಮಾತ್ರ ಇನ್ನು ಹೋಗಿಲ್ಲ ಆತನಿಗೆ ತನ್ನಿಂದಲೇ ಈ ಆಫೀಸ್ ನಡೆಯುತ್ತಿರುವುದು ಎನ್ನುವ ದುರಹಂಕಾರ ಇದೆ.


Click it and Unblock the Notifications











