Bhagya Lakshmi ; ತಾಂಡವನ ದುರಹಂಕಾರಕ್ಕೆ ಮಾತಿನೇಟು, ಮನೆಯವರ ಮುಂದೆಯೇ ಮರ್ಯಾದೆ ಹರಾಜು !
ತಾಂಡವ ಬಹಳ ಓವರ್ ಕಾನ್ಫಿಡೆಂಟ್ ನಿಂದಾಗಿ ಹಾಗೆಯೇ ಆತನ ದುರಹಂಕಾರದ ವರ್ತನೆಯಿಂದ ಜಾಬ್ ಆಫರ್ ಗಳನ್ನು ಕಳೆದುಕೊಳ್ಳುತ್ತಿದ್ದಾನೆ. ಮನೆ ಮಂದಿಯ ಜೊತೆಗೆ ಮಡದಿಯ ಜೊತೆಗೆ ಪ್ರೀತಿಯಿಂದ ಇರುವುದು ಬಿಟ್ಟು ಮಡದಿ ಬೇಡ ಮನೆಯವರು ಬೇಡ ಎಂದು ಪ್ರೀತಿಸಿದಾಕೆಯ ಜೊತೆಗೆ ಮನೆ ಬಿಟ್ಟು ಹೋಗಿದ್ದಾನೆ. ಇದರಿಂದಾಗಿ ಮನ ನೊಂದ ತಂದೆ ತಾಯಿ ಸೊಸೆಯ ಜೊತೆ ಗೆ ಕಾಲ ಕಳೆಯುತ್ತಿದ್ದಾರೆ. ತಾಂಡವ ಸೂರ್ಯವಂಶಿ ಕೆಲಸಕ್ಕಾಗಿ ಅಲೆದಾಟ ಶುರು ಮಾಡಿಕೊಂಡಿದ್ದಾನೆ.ಆತನಿಗೆ ಸಾಮಾನ್ಯದ ಕೆಲಸ ಯಾವುದು ಆಗುತ್ತಿಲ್ಲ.
ಆತನಿಗೆ ಸಂಬಳವೂ ಹೆಚ್ಚು ಬೇಕು ಹಾಗೆಯೇ ಕೆಲಸವೂ ಕಡಿಮೆ ಇರಬೇಕು.ಅದರ ಜೊತೆಗೆ ಶ್ರೇಷ್ಠ ಕೂಡ ಆತನ ಜೊತೆಗೆ ಇರಬೇಕು. ಇಷ್ಟೆಲ್ಲ ಆತನ ಬೇಡಿಕೆ ಇದ್ದು ಜೊತೆಗೆ ದುರಂಕಾರದ ನಡತೆ ಬೇರೆ. ಬಾಸ್ ಜೊತೆಗೆ ಹೇಗೆ ಮಾತನಾಡಬೇಕು ಎನ್ನುವುದು ತಾಂಡವನಿಗೆ ಅರಿವಿಲ್ಲ. ಕೆಲಸ ಕೊಡುವವರ ಜೊತೆಗೆ ಬಹಳ ಕೋಪದಿಂದ ನಡೆದುಕೊಂಡರೆ ಯಾರು ತಾನೇ ಕೆಲಸ ಕೊಡುತ್ತಾರೆ. ಇದೀಗ ತಾಂಡವಗೆ ಆಗಿದ್ದು ಕೂಡ ಅದೇ. ತಾಂಡವ ಒಂದು ಕಂಪನಿಗೆ ಹೋಗಿ. ಫುಲ್ ಶೇಪ್ ಔಟ್ ಮಾಡಿಸಿಕೊಂಡಿದ್ದಾನೆ. ಹಾಗೆಯೇ ಬಹಳ ಕೋಪ ಮಾಡಿಕೊಂಡಿದ್ದಾನೆ.

ತಾನು ಯಾರು ಗೊತ್ತಾ ಎಂದು ಪದೇ ಪದೇ ತಾಂಡವ ಹೇಳುತ್ತಿರುವಾಗ ಅಲ್ಲಿರುವವರಿಗೆ ಕಿರಿ ಕಿರಿ ಉಂಟಾಗುತ್ತಿತ್ತು. ಇದರಿಂದ ಆತನಿಗೆ ಕೆಲಸ ಕೊಡಲು ಅನೇಕ ಜನರು ಹಿಂದೇಟು ಹಾಕುತ್ತಿದ್ದಾರೆ. ಶ್ರೇಷ್ಠ ತಾಂಡವ ಗೆ ಕರೆ ಮಾಡುತ್ತಾಳೆ. ಏನಾಯಿತು ತಾಂಡವ ಯಾಕೆ ನೀನು ಇಷ್ಟು ಕೋಪ ಮಾಡಿಕೊಂಡಿದ್ದಿ ಏನಾದರು ಪ್ರಾಬ್ಲಂ ಇದೆಯಾ ಎಂದು ಕೇಳುತ್ತಾಳೆ. ಈ ಮಾತನ್ನು ಕೇಳಿದ ತಾಂಡವ ಮಾತ್ರ ಏನು ಇಲ್ಲವೆಂಬಂತೆ ಮಾತನಾಡುತ್ತಾನೆ. ಹಾಗೆಯೇ ತನಾಗದ ಅವಮಾನದ ಬಗ್ಗೆ ಶ್ರೇಷ್ಠ ಬಳಿ ಹೇಳುತ್ತಾನೆ.ಶ್ರೇಷ್ಠ ಮೆತ್ತಗೆ ತಾಂಡವ ನ ಬಳಿ ತಾಂಡವ ನೀನು ಇಷ್ಟೊಂದು ಕೋಪ ಮಾಡಿಕೊಂಡರೆ ಹೇಗೆ.? ನೀನು ಇಷ್ಟೆಲ್ಲ ಕೋಪ ಮಾಡಿಕೊಳ್ಳುವ ಅಗತ್ಯ ಖಂಡಿತವಾಗಿಯೂ ಇಲ್ಲ ನೀನು ಸಮಾಧಾನವಾಗಿ ಇಂಟರ್ ವ್ಯೂ ಫೇಸ್ ಮಾಡಬಹುದು ಎಂದು ಹೇಳುತ್ತಾಳೆ.
ಶ್ರೇಷ್ಠ ಮಾತಿಗೆ ಸಮಾಧಾನಗೊಂಡ ತಾಂಡವ
ಆಕೆಯ ಮಾತು ಕೇಳಿದ ತಾಂಡವ ಕೊಂಚ ಸಮಾಧಾನ ಮಾಡಿಕೊಂಡು ಮತ್ತೊಂದು ಇಂಟರ್ ವ್ಯೂ ಅಟೆಂಡ್ ಮಾಡಲು ಬರುತ್ತಾನೆ. ಇನ್ನು ಅದೇ ಹೋಟೆಲ್ ನಲ್ಲಿ ಭಾಗ್ಯ ಸಂಸಾರ ಇರುತ್ತದೆ.ಆದರೆ ಈ ವಿಚಾರ ತಾಂಡವಗೆ ತಿಳಿದಿರುವುದಿಲ್ಲ. ಭಾಗ್ಯ ಹಾಗೂ ತನ್ವಿ ಮನೆಯವರಿಗೆ ಬಹಳ ಖುಷಿ ಅದರಲ್ಲಿ ತನ್ವಿ ಬಹಳಷ್ಟು ಖುಷಿಯಾಗಿರುತ್ತಾಳೆ . ಆಕೆಗೆ ಮನೆಯವರ ಜೊತೆಗೆ ಹೊರಗಡೆ ಊಟಕ್ಕೆ ಹೋಗುವುದು ಎಂದರೆ ಬಹಳ ಇಷ್ಟ. ಮಗಳ ಇಷ್ಟಕ್ಕೆ ಯಾವುದೇ ದಕ್ಕೆ ಬಾರದ ರೀತಿಯಲ್ಲಿ ನೋಡಿಕೊಳ್ಳುತ್ತಾರೆ. ಹಾಗೆಯೇ ಸಾಕಷ್ಟು ಡಿಫರೆಂಟ್ ಆದ ಫುಡ್ ಆರ್ಡರ್ ಮಾಡಿದ ತನ್ವಿ ಗೆ ಖುಷಿಯೋ ಖುಷಿ, ಆದರೆ ಇದೆಲ್ಲವೂ ಕುಸುಮ ಗೆ ಸ್ವಲ್ಪವೂ ಇಷ್ಟ ಆಗುವುದಿಲ್ಲ.
ಕುಸುಮ ಮಾತಿಗೆ ಕುಪಿತಗೊಂಡ ವೈಟರ್
ಸುಮ್ಮ ಸುಮ್ಮನೆ ಹಣ ಹಾಳಾಗುತ್ತಿದೆ.ಯಾಕೆ ಇದೆಲ್ಲ ಅಮ್ಮ ಮಾಡಿದ ಅಡುಗೆಯೇ ಬಹಳ ಚೆನ್ನಾಗಿತ್ತು ಇದ್ಯಾವುದೂ ಹಾಳುಮೋಳು ತಿಂದು ಹೊಟ್ಟೆ ಕೆಟ್ಟು ಹೋಗುವುದು ಮಾತ್ರ ಖಚಿತ ಎಂದು ಜೋರಾಗಿ ಹೇಳುತ್ತಾಳೆ. ಹಾಗೆಯೇ ವೈಟರ್ ಬಳಿ ಜೋರು ಜೋರಾಗಿಯೇ ಮಾತನಾಡುತ್ತಾಳೆ ಕುಸುಮ. ಕುಸುಮ ಮಾತಿಗೆ ವೈಟರ್ ತಮ್ಮದೇನು ತಪ್ಪಿಲ್ಲ. ತಪ್ಪಲ್ಲ ನಿಮ್ಮದೇ .ಇಷ್ಟೆಲ್ಲ ಹಣ ಖರ್ಚು ಆಗುತ್ತೆ ಎಂದರೆ ಫುಡ್ ಯಾಕೆ ನೀವು ತೆಗೆದುಕೊಂಡಿದ್ದು ಅದರಲ್ಲಿ ರೇಟ್ ಬೇರೆ ಬರೆದಿತ್ತಲ್ಲ ಎಂದು ಹೇಳುತ್ತಾನೆ. ಈ ಮಾತು ಕೇಳಿದ ಕುಸುಮಗೆ ಕೋಪ ಹೆಚ್ಚಾಗುತ್ತದೆ. ವೈಟರ್ ಹೋಗಿ ಓನರ್ ನನ್ನು ಕರೆದುಕೊಂಡು ಬರುತ್ತಾರೆ. ಒನರ್ ಬಳಿ ಕುಸುಮ ಬಹಳ ಜೋರಾಗಿಯೇ ಮಾತನಾಡುತ್ತಾಳೆ. ಹಾಗೆಯೇ ಆತನಿಗೆ ಅವಳ ಮಾತು ಕೇಳಿ ಬಹಳ ಕೋಪ ಬರುತ್ತದೆ. ಕೂಡಲೇ ಓನರ್ ನಿಮ್ಮಿಂದ ಆದರೆ ಇದನ್ನು ತಿನ್ನಿ. ಇಲ್ಲವಾದರೆ ದಯವಿಟ್ಟು ಇಲ್ಲಿಂದ ಹೊರಡಿ ಎಂದು ಹೇಳುತ್ತಾರೆ.ಈ ಮಾತು ಕೇಳಿದ ಕುಸುಮ ಗಂಡ ತಮ್ಮದು ತಪ್ಪಾಯಿತು ಸರ್ ಕ್ಷಮಿಸಿ ಎಂದು ಹೇಳಿದಾಗ ಓನರ್ ಅಲ್ಲಿಂದ ಹೊರಟು ಹೋಗುತ್ತಾನೇ. ತನ್ವಿ ಆ ಹೋಟೆಲ್ ನಲ್ಲಿ ತನ್ನ ಅಪ್ಪನನ್ನು ನೋಡಿ ಖುಷಿಯಾಗುತ್ತದೆ. ಕೂಡಲೇ ಅಮ್ಮನನ್ನು ಕರೆದ ತನ್ವಿ, ಅಮ್ಮ ನೋಡು ಅಪ್ಪ ಎಂದು ಹೇಳುತ್ತಾಳೆ. ಮುಂದೇನು ಕಾದು ನೋಡಬೇಕಿದೆ.


Click it and Unblock the Notifications











