Bhagya Lakshmi ;ಭಾಗ್ಯ ಮೇಲೆ ಕಿಡಿ ಕಾರುತ್ತಿರುವ ತಾಂಡವ, ಎಲ್ಲರಿಗೂ ಊಟ ಹಂಚಿ ಖುಷಿ ಪಟ್ಟ ಕುಸುಮ

By ಪೂರ್ವ

ತಾಂಡವ ಅದೆಷ್ಟೇ ಎತ್ತರದ ಪೋಸ್ಟ್ ಗೆ ಹೋದರೂ ಭಾಗ್ಯ ಮೇಲೆ ಕಿಡಿ ಕಾರುವುದು ಬಿಟ್ಟಿಲ್ಲ . ಭಾಗ್ಯಗೆ ಬಹಳ ಬೇಸರವಾಗುತ್ತದೆ ತನ್ನ ಗಂಡ ತನ್ನ ಜೊತೆ ಇಷ್ಟೊಂದು ವರ್ಷ ಸಂಸಾರ ಮಾಡಿ ಇದೀಗ ಆತನಿಗೆ ತಾನು ಬೇಡವಾಗಿ ಬಿಟ್ಟೆನಲ್ಲ ಎನ್ನುವ ಆಲೋಚನೆ ಮೂಡುತ್ತದೆ. ಭಾಗ್ಯ ಯಾರ ಸಪೋರ್ಟ್ ಇಲ್ಲದೆ ತುಂಬಾ ಎತ್ತರ ಜಾಗಕ್ಕೆ ಕಾಲಿಡುತ್ತಿದ್ದಾಳೆ. ಇದು ತಾಂಡವ್ ಹಾಗೂ ಶ್ರೇಷ್ಠ ಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ಭಾಗ್ಯ ಯಾವತ್ತೂ ತನ್ನ ಕೈ ಕೆಳಗೆ ಇರಬೇಕೆಂದು ಅವರಿಬ್ಬರು ಅಂದುಕೊಳ್ಳುತ್ತಾರೆ. ಆದರೆ ಅದು ಯಾವತ್ತೂ ಕೂಡ ಸಾಧ್ಯವಿಲ್ಲ ಎನ್ನುವುದನ್ನು ಭಾಗ್ಯ ಈಗಾಗಲೇ ಪ್ರೂವ್ ಮಾಡಿ ತೋರಿಸಿದ್ದಾಳೆ.

ಭಾಗ್ಯ ಫುಡ್ ಡೆಲಿವರಿ ವೇಳೆ ಇನ್ಸ್ಪೆಕ್ಟರ್ ಒಬ್ಬರು ಬಂದು ಫುಡ್ ಎಲ್ಲ ಪರಿಶೀಲನೆಗೆ ತೆಗೆದುಕೊಂಡು ಹೋಗುತ್ತಾರೆ. ಹಾಗೆಯೇ ಈ ಫುಡ್ ಚೆನ್ನಾಗಿಲ್ಲ, ಕಳಪೆ ಮಟ್ಟಿದ್ದಾಗಿದೆ ಎಂದು ಸಾಕಷ್ಟು ತೆಗಳುತ್ತಾರೆ. ಆದರೆ ಭಾಗ್ಯ ಸುಮ್ಮನಿರುವವಳೆ ಅಲ್ಲ. ಆಕೆ ಹೈಯರ್ ಆಫೀಸರ್ ಹತ್ರ ಹೋಗಿ ತಾನು ಮಾಡಿದ ಅಡುಗೆಯ ಸ್ಯಾಂಪಲ್ ನೀಡುತ್ತಾಳೆ. ಹಾಗೆಯೇ ಆಕೆಗೆ ಸರ್ಟಿಫಿಕೆಟ್ ಸಿಗುತ್ತದೆ. ಇದನ್ನೆಲ್ಲ ನೋಡಿದ ಕುಸುಮಗೆ ಬಹಳ ಖುಷಿ. ತನ್ನ ಸೊಸೆ ಬಹಳ ಜಾಣೆ ಎಲ್ಲರ ಹಾಗೆ ಅಲ್ಲವೇ ಅಲ್ಲ ಎಂದು ಹೆಮ್ಮೆ ಪಡುತ್ತಾಳೆ. ಹಾಗೆಯೇ ಭಾಗ್ಯ ಬಳಿ 30 ಜನರಿಗಾಗಿ ಊಟ ರೆಡಿ ಮಾಡು ಎಂದು ಕುಸುಮ ಹೇಳುತ್ತಾಳೆ.

kannada-serial-bhagya-lakshmi-written-3rd-may

ಆ ಮಾತಿನ ಪ್ರಕಾರ 30 ಜನರಿಗೆ ಹಬ್ಬದ ಊಟವನ್ನು ಬಡಿಸುತ್ತಾಳೆ. ಇನ್ನು ಶ್ರೇಷ್ಠಗೆ ಬಹಳ ಕೋಪ ಬರುತ್ತದೆ ಭಾಗ್ಯ ಗೆ ಲೈಸೆನ್ಸ್ ಸಿಗಬಾರದು ಎಂದು ಬಹಳಷ್ಟು ಕಷ್ಟಪಡುತ್ತಿದ್ದಳು. ಶ್ರೇಷ್ಠ ಹಾಗೆಯೇ ಕನ್ನಿಕಾ ಸಹಾಯವನ್ನು ತೆಗೆದುಕೊಂಡಿದ್ದಳು ಆದರೆ ಅಲ್ಲಿ ಆಗಿದ್ದೇ ಬೇರೆ ಭಾಗ್ಯಗೆ ಇದೀಗ ಲೈಸೆನ್ಸ್ ಸಿಗುತ್ತದೆ ಇದನ್ನು ಕೇಳಿಸಿಕೊಂಡ ಶ್ರೇಷ್ಠ ಗೆ ಬಹಳ ಕೋಪ ಬರುತ್ತದೆ ಹಾಗೆಯೇ ತಾಂಡವನ ಬಳಿ ಬಂದು ತಾಂಡವಗೆ ಮೊದಲೇ ಆಕೆಯನ್ನು ಕಂಡರೆ ಆಗುವುದಿಲ್ಲ ಅಂತದ್ದರಲ್ಲಿ ಇದೀಗ ಲೈಸೆನ್ಸ್ ಸಿಕ್ಕಿತು ಎಂದು ತಿಳಿದ ಕೂಡಲೇ ಆತನಿಗೆ ಒಂದು ಬಹಳ ಕೋಪ ಬರುತ್ತದೆ. ಇತ್ತೀಚಿನ ದಿನಗಳಲ್ಲಿ ಭಾಗ್ಯಗೆ ಉತ್ತಮ ಆಫರ್ಗಳು ಬರುತ್ತಿದೆ ಆಕೆಯ ಲಕ್ ತುಂಬಾ ಚೆನ್ನಾಗಿದೆ ಎಂದು ಕೋಪದಿಂದ ಹೇಳುತ್ತಾನೆ.

ಗಂಡನ ಜೊತೆಗೆ ಕಾರಲ್ಲಿ ಹೊರಟ ಕುಸುಮ

ಭಾಗ್ಯ 30 ಜನರಿಗೆ ಅಡುಗೆ ಮಾಡಿ ಪಾರ್ಸಲ್ ಮಾಡಿ ಅತ್ತೆಯ ಬಳಿ ಕೊಡುತ್ತಾಳೆ. ಕುಸುಮ ಆ ಕೂಡಲೇ ಎಲ್ಲಾ ಊಟವನ್ನು ಕಾರ್ ನಲ್ಲಿ ತೆಗೆದುಕೊಂಡು ಹೋಗುವ ಏರ್ಪಾಡು ಮಾಡುತ್ತಾಳೆ. ಆಕೆಗೆ ಬಹಳ ಖುಷಿ ತನ್ನ ಸೊಸೆಗೆ ಲೈಸೆನ್ಸ್ ಸಿಕ್ಕಿ ಬಿಟ್ಟಿತಲ್ಲ ಎನ್ನುವ ಖುಷಿ ಆಕೆಗೆ ಮೂಡುತ್ತದೆ. ಹಾಗೆ ನೇರವಾಗಿ ಭಾಗ್ಯ ಕೆಲಸ ಮಾಡುತ್ತಿರುವ ಆಫೀಸ್ ಗೆ ಬರುತ್ತಾಳೆ ಹಾಗೆಯೇ ಆಫೀಸ್ ನಲ್ಲಿ ಎಲ್ಲಾ ಕೆಲಸ ಮಾಡುತ್ತಿದೆ ಸಿಬ್ಬಂದಿಗೆ ಊಟವನ್ನು ಹಂಚುತ್ತಾರೆ. ಇನ್ನು ಪೂಜಾಗೆ ಮದುವೆ ಹುಡುಗ ನೋಡಲು ಬರುತ್ತಾನೆ ಎಂದು ಗೊತ್ತಾದ ಕೂಡಲೇ ಪೂಜಾನ ಗೆಳೆಯನಿಗೆ ಬಹಳಷ್ಟು ನೋವಾಗುತ್ತದೆ ಆತನಿಗೆ ಮನದಲ್ಲಿ ಏನೋ ಒಂದು ತಳಮಳ ಪೂಜಾ ನನ್ನ ಬಿಟ್ಟು ಬೇರೆ ಯಾರನ್ನು ಮದುವೆಯಾಗಬಾರದು ಎನ್ನುವ ಆಸೆ. ಆದರೆ ಪೂಜಾ ನನ್ನ ನೋಡಲು ಗಂಡಿನ ಕಡೆಯವರು ಬರುವುದು ಬೇಡ ಎಂದು ಸ್ವತಃ ಭಾಗ್ಯನೇ ಹೇಳಿದ್ದಾಳೆ.

ಗಂಡಿನ ಕಡೆಯವರು ಬಾರದಂತೆ ತಡೆದ ಭಾಗ್ಯ

ಆದ ಕಾರಣ ಪೂಜನನ್ನು ನೋಡಲು ಗಂಡಿನ ಕಡೆಯವರು ಬರುವುದಿಲ್ಲ. ಇದರಿಂದ ಕಿಶನ್ ಗೆ ಕೊಂಚ ಸಮಾಧನವಾಗುತ್ತದೆ. ಕಿಶನ್ ಪೂಜಾ ನನ್ನ ಜೀವಕ್ಕಿಂತ ಹೆಚ್ಚಾಗಿ ಪ್ರೀತಿ ಮಾಡುತ್ತಾನೆ. ಆದರೆ ಪೂಜಾಗೆ ಬೇರೆಯವರ ಜೊತೆ ಮದುವೆ ಫಿಕ್ಸ್ ಆಯಿತು ಎಂದು ತಿಳಿದ ಕೂಡಲೇ ಆತನಿಗೆ ಬಹಳ ಬೇಸರವಾಗುತ್ತದೆ. ಆದರೆ ಇದೀಗ ಪೂಜಾ ಸಂಬಂಧ ತಪ್ಪಿ ಹೋಯಿತು ಎನ್ನುವ ಖುಷಿಯಲ್ಲಿ ಕಿಶನ್ ಇದ್ದಾನೆ.

More from Filmibeat

English summary
kannada serial Bhagya Lakshmi written 3rd may
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X