Bhagya Lakshmi ; ಮಾಡಿದ ತಪ್ಪಿಗೆ ತಾಂಡವ ನ ಕಾಲಿಗೆ ಬಿದ್ದ ಶ್ರೇಷ್ಠಾ, ಕ್ಷಮಿಸುತ್ತಾನಾ ತಾಂಡವ ?

By ಪೂರ್ವ

ತನ್ವಿ ರೆಸಾರ್ಟ್ ನಲ್ಲಿ ಸಿಕ್ಕಿ ಬಿದ್ದ ವಿಚಾರ ಮನೆಯಲ್ಲಿ ಬಹಳ ದೊಡ್ಡ ಕೋಲಾಹಲವನ್ನು ಸೃಷ್ಟಿ ಮಾಡಿತ್ತು. ಎಲ್ಲರಿಗೂ ಪರ್ಮಿಷನ್ ಯಾರು ನೀಡಿದ್ದು ಎನ್ನುವ ಬಹುದೊಡ್ಡ ಪ್ರಶ್ನೆ ಕಾಡುತ್ತದೆ. ತನ್ವಿಗೆ ಮನೆಯವರ ಪರ್ಮಿಷನ್ ಸಿಕ್ಕಿಲ್ಲ.ಅಂತಾದರೆ ಮತ್ತೆ ಯಾರು ಪರ್ಮಿಷನ್ ನೀಡಿದ್ದು ಎನ್ನುವುದೇ ಎಲ್ಲರಿಗೂ ಇರುವ ಪ್ರಶ್ನೆ. ಅದಕ್ಕೆ ತನ್ವಿ ಉತ್ತರವನ್ನು ನೀಡಿದ್ದಾಳೆ. ತನ್ವಿ ಗೆ ಬಹಳಷ್ಟು ಭಯ ಕಾಡುತ್ತದೆ. ಜೋರಾಗಿಯೇ ಶ್ರೇಷ್ಠ ಹೆಸರನ್ನು ಕೂಗಿ ಹೇಳುತ್ತಾಳೆ. ತನಗೆ ರೆಸಾರ್ಟ್ ಗೆ ಹೋಗಲು ಪರ್ಮಿಷನ್ ಕೊಟ್ಟಿದ್ದು ಬೇರೆ ಯಾರು ಅಲ್ಲ ಶ್ರೇಷ್ಠ ಆಂಟಿ ಎಂದಾಗ ಎಲ್ಲರಿಗೂ ಶ್ರೇಷ್ಠ ಮೇಲೆ ಕೋಪ ಬರುತ್ತದೆ. ಶ್ರೇಷ್ಠ ಗೆ ತಾಂಡವ ಸಿಕ್ಕಾಪಟ್ಟೆ ಬೈದು ಆಕೆಗೆ ಕಪಾಳ ಮೋಕ್ಷ ಕೂಡ ಮಾಡುತ್ತಾನೆ.

ಕೊನೆಗೆ ತಾಂಡವ ಶ್ರೇಷ್ಠರೊಂದಿಗೆ ಆತನ ಮನೆಗೆ ಹೊರಡುತ್ತಾನೆ. ತನ್ನ ಮಗಳ ಬಗೆಗಿನ ನಿರ್ಧಾರ ತೆಗೆದುಕೊಳ್ಳಲು ಮೂರನೇ ವ್ಯಕ್ತಿ ಶ್ರೇಷ್ಠ ಯಾರು ಏನುವುದು ಎಲ್ಲರ ಪ್ರಶ್ನೆ. ಈ ವಿಚಾರದಲ್ಲಿ ತಾಂಡವ,ಶ್ರೇಷ್ಠಗೆ ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದಾನೆ. ಆದರೂ ಆತನಿಗೆ ಕೋಪ ಮನೆಗೆ ಬಂದರು ಇಳಿದಿರುವುದಿಲ್ಲ. ಕಾರು ಪಾರ್ಕಿಂಗ್ ಮಾಡಿ ಅಲ್ಲಿಯೇ ಇಬ್ಬರು ಜಗಳಕ್ಕೆ ಶುರು ಮಾಡುತ್ತಾರೆ.ಶ್ರೇಷ್ಠ ಗೆ ಮುಜುಗರವಾಗುತ್ತದೆ. ತಾಂಡವ ಇದನ್ನು ಇಲ್ಲಿ ಡಿಸ್ಕಸ್ ಮಾಡುವುದಕ್ಕಿಂತ ಮನೆಯಲ್ಲಿ ಡಿಸ್ಕಸ್ ಮಾಡಬಹುದು ದಯವಿಟ್ಟು ಅರ್ಥ ಮಾಡ್ಕೋ ಎಂದು ಶ್ರೇಷ್ಠ ಪರಿ ಪರಿಯಾಗಿ ಬೇಡಿಕೊಳ್ಳುತ್ತಾಳೆ. ಮುಖ ಗಂಟಿಕ್ಕಿ ಅಲ್ಲಿಂದ ತಾಂಡವ ಹೊರಟು ಹೋಗುತ್ತಾನೆ.

kannada-serial-bhagya-lakshmi-written-4th-april

ತಾಂಡವನನ್ನು ಹೇಗಪ್ಪಾ ಒಲಿಸಿಕೊಳ್ಳುವುದು ಎನ್ನುವ ಆಲೋಚನೆಯಲ್ಲಿ ಶ್ರೇಷ್ಠ ಗೆ ಬಹಳ ದೊಡ್ಡ ಟೆನ್ಶನ್ ಆಗುತ್ತದೆ. ಶ್ರೇಷ್ಠ ಬಳಿಗೆ ಬಂದ ಆಕೆಯ ಗೆಳೆಯ ಬಹಳ ಜೋರಾಗಿ ನಗುತ್ತಾ ಹೇಳುತ್ತಾನೆ ಶ್ರೇಷ್ಠ ಇದೆಲ್ಲ ನಿನಗೆ ಆಗಲೇ ಬೇಕಾಗಿದ್ದು ಬಡಪಾಯಿ ಆಗಿದ್ದ ಭಾಗ್ಯನ ನೀನು ಹಾಳು ಮಾಡಿಬಿಟ್ಟೆ ಅದಕ್ಕೆ ನಿನಗೆ ಈ ಶಿಕ್ಷೆ ತಾಂಡವನ ಜೊತೆ ಬದುಕುವುದು ಅಷ್ಟು ಸುಲಭದ ಮಾತಲ್ಲ ಹಾಗೆಯೇ ಆತನ ಜೀವನದ ಬಗ್ಗೆ ಕೆಣಕಿ ಮಾತನಾಡುವುದು ಕೂಡ ನಿನಗೆ ಒಳಿತಲ್ಲ. ಹಾಗೆಯೇ ಆತನ ಇನ್ನೊಂದು ಕುಟುಂಬದಲ್ಲಿ ನೀನು ಸೇರಿಕೊಂಡು ನಿರ್ಧಾರ ತೆಗೆದುಕೊಳ್ಳಲು ಹೋದರೆ ನಿನಗೆ ಇದೆ ಗತಿ. ಇಷ್ಟು ಮಾತ್ರ ಅಲ್ಲ.ನೀನು ಅನುಭವಿಸಬೇಕಾದದ್ದು ಬಹಳಷ್ಟಿದೆ. ನಿನಗೆ ಒಂದಲ್ಲ ಒಂದು ದಿನ ಅರ್ಥ ಆಗಿಯೇ ಆಗುತ್ತದೆ ಎಂದು ಶ್ರೇಷ್ಠ ಗೆಳೆಯ ಶೌರ್ಯ ಜೋರಾಗಿಯೇ ಹೇಳುತ್ತಾನೆ. ಇದನ್ನು ಕೇಳಿಸಿಕೊಂಡ ಶ್ರೇಷ್ಠ ಗೆ ಕಿರಿ ಕಿರಿ ಆಗುತ್ತದೆ ಅಲ್ಲಿಂದ ನೇರವಾಗಿ ಮನೆಗೆ ಹೋಗುತ್ತಾಳೆ. ತಾಂಡವನ ಕೋಪದಿಂದ ಕಿಡಿ ಕಾರುತ್ತಿರುತ್ತಾನೆ.

ತಾಂಡವ ನ ಕೋಪಕ್ಕೆ ನಲುಗಿದ ಶ್ರೇಷ್ಠ

ಆತನಿಗೆ ಬಹಳ ಸಿಟ್ಟು ಬಂದಿರುತ್ತದೆ. ಶ್ರೇಷ್ಠ ತಾಂಡವ ನ ಬಳಿಗೆ ಬಂದು ಇಲ್ಲಸಲ್ಲದ್ದನ್ನು ಹೇಳುತ್ತಾಳೆ. ಆದರೆ ತಾಂಡವ ಮಾತ್ರ ಅದ್ಯಾವುದಕ್ಕೂ ಸೊಪ್ಪು ಹಾಕುವುದಿಲ್ಲ. ಆತ ಬಹಳ ಜೋರಾಗಿಯೇ ಶ್ರೇಷ್ಠ ಗೆ ಬೈಯಲು ಶುರು ಮಾಡುತ್ತಾನೆ. ಶ್ರೇಷ್ಠ ಗೆ ಎನು ಮಾಡಬೇಕು ತಿಳಿಯದೇ ತಾಂಡವ ನ ಕಾಲು ಹಿಡಿದು ಬೇಡುತ್ತಾಳೆ. ನನ್ನನ್ನು ಕ್ಷಮಿಸಿ ನೀನು ಇನ್ನುಮುಂದೆ ಈ ತಪ್ಪು ಮಾಡುವುದಿಲ್ಲ ಎಂದು ಬೇಡಿಕೊಳ್ಳುತ್ತಾಳೆ. ಇತ್ತ ಭಾಗ್ಯ ಮನೆಯಲ್ಲಿ ಎಲ್ಲರಿಗೂ ಬಹಳ ಬೇಸರವಾಗುತ್ತದೆ.

ತನ್ವಿ ಬಗ್ಗೆ ಬೇಸರ ಪಟ್ಟುಕೊಂಡ ಕುಸುಮ

ತನ್ವಿ ನಿನ್ನ ನಡವಳಿಕೆ ನನಗೆ ಸರಿ ಕಾಣಿಸುತ್ತಿಲ್ಲ ಯಾವುದು ಕೆಲಸ ಮಾಡಬೇಡ ಎಂದು ಹೇಳುತ್ತೇವೆಯೋ ಆದೆ ಕೆಲಸ ನೀನು ಮಾಡುತ್ತೀಯಾ ಎಂದು ಕುಸುಮ ಬೇಸರದಲ್ಲಿ ಹೇಳುತ್ತಾಳೆ. ಭಾಗ್ಯ ಆಗಲಿ ನಾನಾಗಲಿ ನಿನಗೆ ಒಳಿತನ್ನೇ ಬಯಸುತ್ತೇವೆ ಹೊರತು ಕೆಟ್ಟದ್ದಾಗಲಿ ಎಂದು ಯಾವತ್ತೂ ಅಂದುಕೊಳ್ಳುವುದಿಲ್ಲ ಎಂದು ಕುಸುಮ ಹೇಳುತ್ತಾಳೆ. ಆಕೆಯ ಮಾತು ಕೇಳಿದ ತನ್ವಿಗೆ ಬಹಳಷ್ಟು ಬೇಸರವಾಗುತ್ತದೆ. ಎಲ್ಲರೆದುರು ತನ್ವಿ ಕ್ಷಮಿಸಿ ಎಂದು ಬೇಡಿಕೊಳ್ಳುತ್ತಾಳೆ. ಭಾಗ್ಯ ಮಗಳ ತಪ್ಪನ್ನು ಮನ್ನಿಸುತ್ತಾಳೆ. ಹಾಗೆಯೇ ಮಾತ್ಯವತ್ತು ಈ ತರದ ತಪ್ಪು ಆಗಬಾರದು ಎಂದು ಹೇಳುತ್ತಾಳೆ. ಭಾಗ್ಯಗೆ ಬಹಳಷ್ಟು ಆರ್ಡರ್ ಬರುತ್ತದೆ. ಬಗೆ ಬಗೆಯ ಅಡುಗೆ ಮಾಡಿ ಕ್ಯಾರಿಯರ್ ನಲ್ಲಿ ಬಹಳ ಲಘು ಬಗೆಯಿಂದ ತುಂಬಿಸಿಕೊಂಡು ಬಿಡುತ್ತಾಳೆ. ಸುನಂದಾಗೆ ಮಾತ್ರ ಭಾಗ್ಯ ಈ ರೀತಿಯ ಕೆಲಸ ಮಾಡುವುದು ಸ್ವಲ್ಪವೂ ಇಷ್ಟ ಇರುವುದಿಲ್ಲ.

ಸೈಕಲ್ ಏರಿ ಹೊರಟ ಭಾಗ್ಯ

ಆದರೂ ಭಾಗ್ಯ ಜೊತೆಗೆ ಅದೆಷ್ಟೋ ಬಾರಿ ಹೇಳಿದರು ಭಾಗ್ಯ ಮಾತ್ರ ಯಾರ ಮಾತು ಕೇಳುತ್ತಿಲ್ಲ. ತಾನು ಮಾಡಿದ ಕೆಲಸದ ಬಗ್ಗೆ ಆಕೆಗೆ ಹೆಮ್ಮೆ ಇದೆ. ಆಕೆ ತನ್ನ ಮಾವನ ಜೊತೆ ಕ್ಯಾರಿಯರ್ ಹಿಡಿದು ಹೊರಟಾಗ ಪೂಜಾ ಬಂದು ಅಕ್ಕ ಕಸ್ಟಮರ್ ಕಳುಹಿಸಿದ ರೂಟ್ ನಲ್ಲಿ ಬಹಳಷ್ಟು ಟ್ರಾಫಿಕ್ ಕಾಣಿಸುತ್ತಿದೆ. ನೀನು ಕಾರಲ್ಲಿ ಹೋದರೆ ಖಂಡಿತ ಲೇಟ್ ಆಗುತ್ತದೆ ಎಂದಾಗ ಭಾಗ್ಯ ಮನೆಯಲ್ಲಿ ಇದ್ದ ಸೈಕಲ್ ಎತ್ತಿಕೊಂಡು ಹೋಗುತ್ತಾಳೆ. ಭಾಗ್ಯ ಮಾಡುತ್ತಿರುವ ಕೆಲಸಕ್ಕೆ ಎಲ್ಲರೂ ಬಹಳ ಖುಷಿ ವ್ಯಕ್ತ ಪಡಿಸುತ್ತಾರೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X