Bhagya Lakshmi ; ಕಿಶನ್ ಜೊತೆ ಪೂಜಾ ಮದುವೆ ಮಾಡಿಸಲು ಮುಂದಾದ ಭಾಗ್ಯ, ಉರಿದು ಬಿದ್ದ ತಾಂಡವ್-ಶ್ರೇಷ್ಠಾ ..!

'ಭಾಗ್ಯಲಕ್ಷ್ಮಿ' ಧಾರಾವಾಹಿ ಮತ್ತೊಂದು ಮಹತ್ತರ ತಿರುವು ಪಡೆದಿದೆ. ಕಿಶನ್ ಕಂಡರೆ ಕೆಂಡ ಕಾರುತ್ತಿದ್ದ ಪೂಜಾ ಮದುವೆಯನ್ನು ಕಿಶನ್ ಜೊತೆಯಲ್ಲಿಯೇ ಮಾಡಿಸಲು ಭಾಗ್ಯ ಮತ್ತು ಕುಸುಮಾ ಮುಂದಾಗಿದ್ದಾರೆ. ಇನ್ನು ಕಿಶನ್ ವ್ಯಕ್ತಿತ್ವ ಹೇಗಿದೆ ಎಂದು ತಿಳಿಯಲು ಕುಸುಮಾ ಖುದ್ದು ಕಿಶನ್ ನಡೆಸುವ ಜಿಮ್‌ಗೆ ಹೋಗಿದ್ದಾಳೆ. ಸೀರೆಯಲ್ಲಿಯೇ ಜಿಮ್‌ಗೆ ಬಂದಿರುವ ಕುಸುಮಾ ಜಿಮ್ ಸೇರಬೇಕಿತ್ತು ಎಂದು ಕಿಶನ್ ಬಳಿ ಹೇಳಿದ್ಧಾಳೆ.

ಕೆಳಗೆ ಬಿದ್ದು ಗಾಯ ಮಾಡಿಕೊಂಡ ಕುಸುಮಾ

ಇನ್ನು, ಇದೇ ಸಮಯದಲ್ಲಿ ಕಿಶನ್ ನಡೆ ಮತ್ತು ನುಡಿಗೆ ಮನ ಸೋತಿರುವ ಕುಸುಮಾ ಜಿಮ್‌ನಲ್ಲಿ ಭಾರ ಎತ್ತುವ ಭರದಲ್ಲಿ ಕೆಳಗೆ ಬಿದ್ದು ಪೆಟ್ಟು ಮಾಡಿಕೊಳ್ಳುತ್ತಾಳೆ. ಈ ಸಮಯದಲ್ಲಿ ಕಿಶನ್ ತುಂಬಾನೇ ಕಾಳಜಿಯನ್ನು ತೋರಿಸುತ್ತಾನೆ. ಇದರಿಂದ ಖುಷಿಯಾಗುವ ಕುಸುಮಾ ಮನೆಗೆ ಬಂದ ತಕ್ಷಣವೇ ಭಾಗ್ಯ ಎದುರು ಕಿಶನ್‌ನ ಹೊಗಳುತ್ತಾಳೆ.

kannada-serial-bhagya-lakshmi-written-update-16th-may

ಭಾಗ್ಯ -ಕುಸುಮಾ ಮಾತಿಗೆ ಖುಷಿಯಾದ ಪೂಜಾ

ಕುಸುಮಾ ಹೊಗಳಿಕೆಯ ಮಾತುಗಳನ್ನು ಕೇಳಿ ಭಾಗ್ಯ ಕೂಡ ಖುಷಿಯಾಗುತ್ತಾಳೆ. ಆ ನಂತರ ಪೂಜಾ ಮುಂದೆ ಭಾಗ್ಯ ಮತ್ತು ಕುಸುಮಾ ಮದುವೆ ವಿಚಾರವನ್ನು ಪ್ರಸ್ತಾಪ ಮಾಡಿದ್ದು ಪೂಜಾ ನೀವು ಹೇಳಿದಂತೆಯೇ ಆಗಲಿ ಎಂದಿದ್ದಾಳೆ. ಕಿಶನ್ ಮತ್ತು ನಿನ್ನದು ಒಳ್ಳೆಯ ಜೋಡಿಯಾಗುತ್ತೆ ಎಂದು ಇಬ್ಬರು ಹೇಳಿದಾಗ ಪೂಜಾ ಕೂಡ ಖುಷಿಯಾಗಿದ್ದಾಳೆ.

ಕೊತ ಕೊತ ಕುದಿಯುತ್ತಿರುವ ತಾಂಡವ್-ಶ್ರೇಷ್ಠಾ

ಈ ಕಡೆ ಪೂಜಾ ಮದುವೆಯನ್ನು ಕಿಶನ್ ಜೊತೆ ಮಾಡಿಸಬೇಕೆಂದು ಕುಸುಮಾ ಮತ್ತು ಭಾಗ್ಯ ಅಂದುಕೊಂಡಿದ್ದರೆ ಮತ್ತೊಂದು ಕಡೆ ಭಾಗ್ಯಾಗೆ ಬುದ್ದಿ ಕಲಿಸಲು ತಾಂಡವ್ ಮತ್ತು ಶ್ರೇಷ್ಠಾ ಕತ್ತಿ ಮಸೆಯುತ್ತಿದ್ಧಾರೆ. ನನ್ನ ನೆಮ್ಮದಿಯನ್ನೇ ಆಕೆ ಕಿತ್ತುಕೊಂಡಿದ್ಧಾಳೆ ಎಂದು ಶ್ರೇಷ್ಠಾ ಮುಂದೆ ತಾಂಡವ್ ಹೇಳುತ್ತಾನೆ. ಭಾಗ್ಯ ವಿಲ ವಿಲ ಒದ್ದಾಡಿದಾಗಲೇ ನನಗೆ ಸಮಾಧಾನ ಆಗುವುದು ಎಂದು ತಾಂಡವ್ ಹೇಳಿದಾಗ ಶ್ರೇ‍ಷ್ಠಾ ಆಕೆಯ ನೆಮ್ಮದಿಯನ್ನು ನಾನೇ ಹಾಳು ಮಾಡುತ್ತೇನೆ ಎಂದು ಸೀದಾ ಭಾಗ್ಯಾಗೆ ಫೋನ್ ಮಾಡಿದ್ದಾಳೆ.

ಶ್ರೇಷ್ಠಾಗೆ ತಪರಾಕಿ ಹಾಕಿದ ಭಾಗ್ಯ

ಶ್ರೇ‍ಷ್ಠಾ ಕರೆಯನ್ನು ಭಾಗ್ಯಾ ಸ್ವೀಕರಿಸಿದ್ದೇ ತಡ ಪೂಜಾ ಕುರಿತು ಕಂಪ್ಲೇಟ್ ಮಾಡಲು ಶುರು ಮಾಡುವ ಶ್ರೇಷ್ಠಾ ಪೂಜಾ ಕಂಡ ಕಂಡವರ ಜೊತೆ ಸುತ್ತಾಡುತ್ತಿದ್ದಾಳಂತೆ, ಅವಳಿಗೆ ಬುದ್ದಿ ಹೇಳು ಇಲ್ಲ ಅಂದರೆ ಮನೆಯ ಮಾನ ಮರ್ಯಾದೆ ಹಾಳು ಎನ್ನುತ್ತಾಳೆ. ಶ್ರೇಷ್ಠಾ ಆಡದ ಈ ಮಾತುಗಳಿಗೆ ತಲೆ ಕೆಡಿಸಿಕೊಳ್ಳದ ಭಾಗ್ಯ ಅವಳಿಗೆ ತಪರಾಕಿಯನ್ನು ಹಾಕುತ್ತಾಳೆ.

ಮನೆಯ ಮಾನ ಮರ್ಯಾದೆಯನ್ನು ಬೀದಿಯಲ್ಲಿ ಹರಾಜು ಹಾಕೋಕೆ ನನ್ನ ತಂಗಿಯನ್ನೇನು ನೀನು ಅಂದುಕೊಂಡಿದ್ದೀಯಾ, ನಾಚಿಕೆ ಮಾನ ಮರ್ಯಾದೆ ಇಲ್ಲದೆ ಇನ್ನೊಬ್ಬರ ಮನೆ ಹಾಳು ಮಾಡುವವಳು ನೀನು ಎಂದು ಕಿಡಿ ಕಾರುತ್ತಾಳೆ. ನಿನ್ನಿಂದ ಬುದ್ದಿ ಹೇಳಿಸಿಕೊಳ್ಳುವ ದರ್ದು ನನಗೆ ಇಲ್ಲ, ನೀನ್ಯಾರೋ ನಡತೆ ಸರಿ ಇಲ್ಲವನನ್ನು ಒಪ್ಪಿಕೊಂಡಿದ್ದೀಯಾ ಎಂದರೆ ನಮ್ಮ ಪೂಜಾ ಕೂಡ ಹಾಗೇ ಮಾಡ್ತಾಳೆ ಅಂದುಕೊಂಡಿದ್ದೀಯಾ ಎಂದು ಬ್ಯೆಯುತ್ತಾಳೆ. ಭಾಗ್ಯಾ ಆಡಿದ ಈ ಮಾತುಗಳಿಂದ ಶ್ರೇಷ್ಠಾ ಈಗ ನಿಗಿ ನಿಗಿ ಕೆಂಡದಂತಾಗಿದ್ದಾಳೆ.

ಸದ್ಯ ಭಾಗ್ಯ ಮನೆಯಲ್ಲಿ ಮದುವೆ ಸಂಭ್ರಮ ಮನೆ ಮಾಡಿದ್ದು ಉರಿದು ಬಿದ್ದಿರುವ ತಾಂಡವ್ ಮತ್ತು ಶ್ರೇಷ್ಠಾ ಹೇಗಾದರೂ ಮಾಡಿ ಮದುವೆ ನಿಲ್ಲಿಸಬೇಕೆಂದು ಮುಂದಿನ ದಿನಗಳಲ್ಲಿ ಪ್ಲ್ಯಾನ್ ಮಾಡುತ್ತಾರಾ ? ಕಿಶನ್ ಮತ್ತು ಪೂಜಾ ಮದುವೆ ನೆರವೇರುತ್ತಾ ? ಅಥವಾ ಭಾಗ್ಯಾ ಮರ್ಯಾದೆಯನ್ನು ತಾಂಡವ್ ಮತ್ತೆ ಹರಾಜು ಹಾಕುತ್ತಾನಾ ಎನ್ನುವುದನ್ನು ಈಗ ಕಾದು ನೋಡಬೇಕಿದೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X